ಸಿದ್ದರಾಮಯ್ಯ ಪ್ರಮಾಣ ವಚನಕ್ಕೆ ವೇದಿಕೆ ಸಜ್ಜು : ಕಾರ್ಯಕ್ರಮದಲ್ಲಿ ಸೇರಲಿದೆ ಗಣ್ಯರ ದಂಡು, ಭದ್ರತೆಗೆ ಹೆಚ್ಚಿನ ಒತ್ತು
ನಿಯೋಜಿತ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಡಿಸಿಎಂ ಆಗಿ ಡಿ.ಕೆಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ಬೆಂಗಳೂರು : ಸಿದ್ದರಾಮಯ್ಯ ಎಂಬ ಹೆಸರಿನವನಾದ ನಾನು ಹೇಳಿ ಅಧಿಕೃತವಾಗಿ ಸಿದ್ದರಾಮಯ್ಯ ಸಿಎಂ ಆಗೋಕೆ ಕ್ಷಣಗಣನೆ ಶುರುವಾಗಿದೆ. ಕಂಠೀರವ ಸ್ಟೇಡಿಯಂನಲ್ಲಿ ಜೋಡೆತ್ತು ಪ್ರಮಾಣ ವಚನಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ನಡೆಯಲಿರುವ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಬಂದೋಬಸ್ತ್ ಮತ್ತು ಟ್ರಾಫಿಕ್ ಕಂಟ್ರೋಲ್ ಗೆ ಬಿಗ್ ಪ್ಲಾನ್ ಮಾಡಿಕೊಂಡಿದೆ..
ನಿಯೋಜಿತ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಡಿಸಿಎಂ ಆಗಿ ಡಿ.ಕೆಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ಇದನ್ನೂ ಓದಿ : ಸಚಿವ ಸ್ಥಾನಕ್ಕೆ ಶಾಸಕರ ನಡುವೆ ಭಾರಿ ಪೈಪೋಟಿ: ಸಿದ್ದು ಬಣಕ್ಕೆ ಎಷ್ಟು..? ಡಿಕೆ ಬಣಕ್ಕೆ ಎಷ್ಟು..?
ನಾಳೆ ನ ನಡೆಯಲಿರುವ ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕೇಂದ್ರದ ಘಟಾನುಘಟಿ ನಾಯಕರ ದಂಡೇ ಇರಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಜರಾಗಲಿದ್ದಾರೆ. ಇನ್ನು ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದ್ದು, ಪಶ್ಚಿಮ ಬಂಗಾಳ, ರಾಜಸ್ಥಾನ, ಪಾಂಡಿಚೆರಿ, ತಮಿಳುನಾಡು, ಸೇರಿದಂತೆ ಒಂಭತ್ತು ರಾಜ್ಯಗಳ ಸಿಎಂಗಳು ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಒಗ್ಗಟ್ಟಿನಿಂದ ಶಕ್ತಿ ಪ್ರದರ್ಶಣ ಕೂಡಾ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಲ್ಲಾ ವಿವಿಐಪಿಗಳಿಗೂ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಸೋನಿಯಾ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿಗೆ Z+ ಜೊತೆಗೆ CRPF, ASL ಭದ್ರತೆ ಇರಲಿದೆ. ಬೇರೆ ರಾಜ್ಯಗಳ ಸಿಎಂಗಳಿಗೆ Z+ ಮತ್ತು Z ಕೆಟಗರಿ ಸೆಕ್ಯೂರಿಟಿ ಇರಲಿದೆ.
ಈ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಪ್ಲಾನ್ ಮಾಡಿಕೊಂಡಿರುವ ಡಿಕೆ ಶಿವಕುಮಾರ್ ಜನಗಳಿಗೆ ಅಭಿನಂದನಾ ಕಾರ್ಯಕ್ರಮ ಎಂದು ಮುಂದೆ ನಿಂತು ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ಕಂಠೀರವ ಸ್ಟೇಡಿಯಂ ನಲ್ಲಿ ಸ್ಟೇಜ್, ವಿವಿಐಪಿಗಳ ಆಸನ, ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : Karanataka State Ministers: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಯಾರ ಕೈ ಹಿಡಿಯಲಿದೆ ಮಂತ್ರಿಗಿರಿ..?
ಗಣ್ಯ ಮತ್ತು ಅತಿಗಣ್ಯರು ಭಾಗವಹಿಸುವ ಕಾರ್ಯಕ್ರಮಕ್ಕೆ ಬೆಂಗಳೂರು ಪ್ರಭಾರ ಆಯುಕ್ತ ಎಂಎ ಸಲೀಂ ನೇತೃತ್ವದಲ್ಲಿ ಈಗಾಗಲೇ ಬಂದೋಬಸ್ತ್ ಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಎಂಟು ಡಿಸಿಪಿಗಳ ನೇತೃತ್ವದಲ್ಲಿ ಸುಮಾರು ಒಂದು ಸಾವಿರದ ಐನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂ ನ ಎಂಟೂ ಗೇಟ್ ಗಳಿಗೂ ಓರ್ವ ಎಸಿಪಿ ರ‍್ಯಾಂಕಿಂಗ್ ಅಧಿಕಾರಿ, ಇನ್ಸ್ಪೆಕ್ಟರ್ ರ‍್ಯಾಂಕಿಂಗ್ ಅಧಿಕಾರಿ ನೇತೃತ್ವದಲ್ಲಿ ಬಂದೋಬಸ್ತ್ ನೋಡಿಕೊಳ್ಳೋಕೆ ಸೂಚನೆ ನೀಡಲಾಗಿದೆ.
ಇನ್ನು ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಿನ್ನೆಲೆ ನಾಳೆ ಸುತ್ತಮುತ್ತ ಹೆಚ್ಚು ಟ್ರಾಫಿಕ್ ಜಾಂ ಆಗಲಿದೆ. ಇದರ ನಡುವೆ ಸಿಇಟಿ ಪರೀಕ್ಷೆ ಸಹ ಇದೆ. ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಉತ್ತರ ಕರ್ನಾಟಕದಿಂದ ಲಕ್ಷಾಂತರ ಜನ ಬರೋ ಸಾಧ್ಯತೆ ಇದ್ದು ಸ್ಟೇಡಿಯಂ ಗೆ ಕನೆಕ್ಟ್ ಆಗೋ ರಸ್ತೆಗಳನ್ನ ಬಳಸದಂತೆ ಸಂಚಾರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರೋ ವಿವಿಐಪಿಗಳ ವಾಹನಗಳಿಗೆ ಮಾತ್ರ ಸ್ಟೇಡಿಯಂ ಒಳಗಡೆ ಎಂಟ್ರಿ ಇರಲಿದೆ.
ಇದನ್ನೂ ಓದಿ : ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ