ಎಲ್ಲಾ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ..! ಆದರೆ..
2013-2018 ರಲ್ಲಿ ಕೊಟ್ಟ ಮಾತು ಈಡೇರಿಸಿದ್ದೇವೆ. ಈ ಚುನಾವಣೆಯಲ್ಲಿಯೂ ಸಹ ನಮ್ಮ ಪ್ರಣಾಳಿಕೆ ಮೂಲಕ ಅನೇಕ ಭರವಸೆ ನೀಡಿದ್ದೇವೆ. ಎಲ್ಲಾ ಭರವಸೆ ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಭಾಗ್ಯಗಳ ಬಗ್ಗೆ ಮಾತನಾಡಿದರು.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ರಚನೆ ನಂತರ ಇಂದು ಮೊದಲನೆಯ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ನಾಡಿನ ಜನತೆಗೆ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ, ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ, ಎಲ್ಲಾ ಭರವಸೆ ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ ಅದಕ್ಕಾಗಿ ಹಂತ ಹಂತವಾಗಿ ಈಡೇರಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಿಎಂ, ಸಚಿವರು, ಡಿಸಿಎಂ, ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಆಗಿದೆ. ನಾಡಿನ ಜನತೆಗೆ, ಮತದಾರರಿಗೆ ಧನ್ಯವಾದಗಳು. ರಾಷ್ಟ್ರೀಯ ನಾಯಕರು, ಇತರೆ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿ ನಾಯಕರು ಶುಭಾಶಯಗಳು ಕೊರಿದ್ದಾರೆ ಅವರಿಗಗೆ ನನ್ನ ಧನ್ಯವಾದಗಳು. ಪ್ರಣಾಳಿಕೆ ಮೂಲಕ ಹಲವಾರು ಭರವಸೆ ನೀಡಿದ್ದೇವೆ. 5 ಗ್ಯಾರಂಟಿಗಳನ್ನು ವಾಗ್ದಾನದ ರೂಪದಲ್ಲಿ ನೀಡಿದ್ದೆವು. ಎಲ್ಲಾ ಗ್ಯಾರಂಟಿಗಳಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಲು ಹೇಳಿದ್ದೇವೆ ಎಂದರು.
ಇದನ್ನೂ ಓದಿ: "ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ"
ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ 2013-2018 ರಲ್ಲಿ ಕೊಟ್ಟ ಮಾತು ಈಡೇರಿಸಿದ್ದೇವೆ. ಭರವಸೆಗಳ ಜೊತೆಗೆ 30 ಭರವಸೆಗಳನ್ನು ಹೆಚ್ಚುವರಿಯಾಗಿ ಈಡೇರಿಸಿದ್ದೆವು. ಸರ್ಕಾರ ರಚನೆ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಪ್ರಮುಖವಾಗಿ ನಮ್ಮ ಪ್ರಣಾಳಿಕೆ ಮೂಲಕ ಅನೇಕ ಭರವಸೆ ನೀಡಿದ್ದೇವೆ. ಎಲ್ಲಾ ಭರವಸೆ ಒಂದೇ ವರ್ಷದಲ್ಲಿ ಈಡೇರಿಸಲು ಸಾಧ್ಯವಿಲ್ಲ. ಐದು ಗ್ಯಾರೆಂಟಿ ಮಾತ್ರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವುದಾಗಿ ಹೇಳಿದ್ವಿ. ಇದನ್ನ ಅನೇಕ ಜಾಗದಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಜನರಿಗೆ ನಮ್ಮ ಬಗ್ಗೆ ನಂಬಿಕೆಯಿದೆ. ವಿರೋಧ ಪಕ್ಷದವರಿಗೆ ಜನರ ಧಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಲ್ಲಾ ಭರವಸೆ ಈಡೇರಿಸಲು ತಕ್ಷಣದಂತೆ 50 ಸಾವಿರ ಕೋಟಿ ಆಗಬಹುದು. ರಾಜ್ಯದ ಬಜೆಟ್ 3.10 ಲಕ್ಷ ಕೋಟಿ ರೂ. ಇದೆ. ದೇಶದ ಪ್ರದಾನ ಮಂತ್ರಿ ಅವರೇ ಮನ್ ಕೀ ಭಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ವಾಸ್ತವದಲ್ಲಿ ಆಗದ ವಿಷಯ ಎಂದು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಹೇಳಿದ್ದರು. ಈ ಎಲ್ಲಾ ಕಾರ್ಯಕ್ರಮಕ್ಕೆ 50 ಸಾವಿರ ಕೋಟಿ ಆಗಬಹುದು. ವರ್ಷದಿಂದ ವರ್ಷಕ್ಕೆ 10% ಬಜೆಟ್ ಗಾತ್ರ ಹೆಚ್ಚಾಗುತ್ತದೆ. ತೆರಿಗೆ ವಸೂಲಾತಿ ಮಾಡಿದರೆ ಹೆಚ್ಚಳಕ್ಕೆ ಅವಕಾಶವಿದೆ. ಜಿಎಸ್‌ಟಿ ತರಿಗೆ ಬಿಟ್ಟು ಉಳಿದ ತೆರಿಗೆ ಹಾಕಬಹುದು. ಜುಲೈನಲ್ಲಿ ಹೊಸ ಬಜೆಟ್ 3.15 ಲಕ್ಷ ಕೋಟಿ ಬಜೆಟ್ ಮಂಡಿಸುತ್ತೇನೆ ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ