ಕಾಂಗ್ರೆಸ್ ಗ್ಯಾರಂಟಿ ನಂ.4: ನಿರುದ್ಯೋಗಿ ಪದವೀಧರರಿಗೆ ₹3000 & ₹1500 ನಿರುದ್ಯೋಗ ಭತ್ಯೆ!
ಬೆಳಗಾವಿಯಲ್ಲಿ ಆಯೋಜಿಸಿರುವ ಕಾಂಗ್ರೆಸ್ ಯುವಧ್ವನಿ ಸಮಾವೇಶ ಮತ್ತು ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಮೂಲಕ ರಾಜ್ಯ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಬೆಂಗಳೂರು: ಬೆಳಗಾವಿಯಲ್ಲಿ ಆಯೋಜಿಸಿರುವ ಕಾಂಗ್ರೆಸ್ ಯುವಧ್ವನಿ ಸಮಾವೇಶ ಮತ್ತು ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಮೂಲಕ ರಾಜ್ಯ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
‘ಭಾರತ್ ಜೋಡೊ’ ಯಾತ್ರೆಯ ಬಳಿಕ ಮೊದಲ ಬಾರಿಗೆ ರಾಹುಲ್ ರಾಜ್ಯಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ರಾಜ್ಯದ ಯುವಕರನ್ನು ಸೆಳೆಯುವ ಉದ್ದೇಶದಿಂದ ಸಮಾವೇಶದಲ್ಲಿ ಕಾಂಗ್ರೆಸ್ ತನ್ನ ‘ಗ್ಯಾರಂಟಿ ನಂ.4’ಅನ್ನು ಘೋಷಿಸಿದೆ.
ಇದನ್ನೂ ಓದಿ: ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಿಸ್ತಾರೆ : ಸಚಿವ ಸೋಮಣ್ಣ
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಾಂಗ್ರೆಸ್ ಪಕ್ಷ ಯುವ ಸಭಲೀಕರಣಕ್ಕೆ ಮಹತ್ವದ ಗ್ಯಾರಂಟಿ ನಂ.4 ಘೋಷಿಸುತ್ತಿದೆ. 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ₹3000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ ₹1500 ನಿರುದ್ಯೋಗ ಭತ್ಯೆ ನೀಡುವ #YuvaNidhi ಯೋಜನೆಯನ್ನ ಘೋಷಿಸುತ್ತಿದ್ದೇವೆ. ಯುವ ಶಕ್ತಿಗೆ ಶಕ್ತಿ ತುಂಬುವುದೇ ನಮ್ಮ ಧ್ಯೇಯ’ವೆಂದು ಹೇಳಿದೆ.
ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ.
ಇದನ್ನೂ ಓದಿ: ಎಕ್ಸ್‌ಪ್ರೆಸ್ ಹೆದ್ದಾರಿಯೋ, ಹೆಮ್ಮಾರಿಯೋ..?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.