ಚಿಕ್ಕಮಗಳೂರು:  ಈಗಾಗಲೇ ವಿಧಾನ ಸಭೆ  ಚುನಾವಣೆಗೆ ರಾಜ್ಯವು ಸಜ್ಜಾಗಿದೆ. ಚುನಾವಣೆ ಹಿನ್ನಲೆ ಎಲ್ಲೆಡೆ ಪ್ರಚಾರದ ಅಬ್ಬರ ಜೋರಾಗಿದೆ. ಈ ನಿಟ್ಟಿನಲ್ಲಿ ಮಲೆನಾಡ ತವರೂರುರಾದ ಮೂಡಿಗೆರೆಯಲ್ಲಿ ಸಿಪಿಐ ಪಕ್ಷದಿಂದ ಅದ್ದೂರಿ ಸಮಾವೇಶ ಏರ್ಪಾಡಿಸಲಾಗಿತ್ತು..


COMMERCIAL BREAK
SCROLL TO CONTINUE READING

ಕಮ್ಯೂನಿಷ್ಟ್‌ ಪಾರ್ಟಿಯಿಂದ ವಿಧಾನ ಸಭೆ ಚುನಾವಣೆಗೆ  ರಮೇಶ್‌ ಕೆಳಗೂರು ಎಂಬುವವರು ಸ್ಪರ್ಧಿಸಿದ್ದಾರೆ. ಹಿನ್ನಲೆ ಮೂಡಿಗೆರೆಯ  ಅಡ್ಯಂತಾಯ ರಂಗಮಂದಿರದಲ್ಲಿ ಸಮಾವೇಶ ನಡೆಸಲಾಯಿತು.


ಇದನ್ನೂ ಓದಿ: ಯುವಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಬಿಬಿಎಂಪಿ & ಚುನಾವಣಾ ಆಯೋಗ


ವಿಧಾನ ಸಭೆ ಸ್ವರ್ಧಿಯಾಗಿರುವ ರಮೇಶ್‌ ಕೆಳಗೂರು ಪರವಾಗಿ ಕಮ್ಯೂನಿಸ್ಟ್ ಮುಖಂಡ ಸಿದ್ಧನಗೌಡ ಪಾಟೀಲ್, ಸಾತಿ ಸುಂದ್ರೇಶ್‌ ಸೇರಿದಂತೆಯೇ ಪಕ್ಷದ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.


ಪ್ರಚಾರ ಹಿನ್ನಲೆ ಮೂಡಿಗೆರೆ ಪಟ್ಟಣದ ಹಲವೆಡೆ ಪ್ರಚಾರ ಮಾಡಲಾಯಿತು. ಮೂಡಿಗೆರೆ ಕ್ಷೇತ್ರದಿಂದ ನಿಂತಿರುವ ಅಭ್ಯರ್ಥಿಗಳು ವಿವರ ಹೀಗಿದೆ.. ಬಿಜೆಪಿಯಿಂದ ದೀಪಕ್‌ ದೊಡ್ಡಯ್ಯ,ಸಿಪಿಐ ರಮೇಶ್‌ ಕೆಳಗೂರು, ಕಾಂಗ್ರೇಸ್‌ ಇಂದ ನಯನಾ ಮೋಟಮ್ಮ, ಹಾಗೆಯೇ ಜೆಡಿಎಸ್ ಎಂ. ಪಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. 


ಇದನ್ನೂ ಓದಿ: ರಾಜಧಾನಿಯಲ್ಲಿ ಮೋದಿ ರೋಡ್ ಶೋ - 65ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಭಾರಿ ಪೆಟ್ಟು


ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿಗಳು ಇತ್ತಿಚೇಗಷ್ಟೆ ಚುನಾವಣೆಯಲ್ಲಿ ಗೆದ್ದರೆ ಒಂದಿಷ್ಟು ಭರವಸೆ ಗುರಿಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ರಮೇಶ್‌ ಕೆಳಗೂರುರವರು  ಹೈಟೆಕ್‌ ಆಸ್ಪತ್ರೆ ನಿರ್ಮಾಣ, ಎಂಪಿ ಕುಮಾರಸ್ವಾಮಿ ವಸತಿ ನಿವೇಶನದ ಗುರಿ, ದೀಪಕ್‌ ದೊಡ್ಡಯ್ಯ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಂಕಲ್ಪ, ನಯನಾ ಮೋಟಮ್ಮ ಮಾದರಿ ಕ್ಷೇತ್ರವಾಗಿಸುವ ಗುರಿ ಎಂದು ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ನಿಲುವನ್ನು ಹೊಂದಿದ್ದಾರೆ. ಮಲೆನಾಡ ಅಧಿಕಾರದ ಚುಕ್ಕಾಯಿ ಯಾರು ಹಿಡಿಯುತ್ತಾರೆಂದು ಚುನಾವಣೆ ಬಳಿಕ ಫಲಿತಾಂಶದವರೆಗೂ ಕಾಯಬೇಕಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.