Davangere Election Result 2023: ದಾವಣಗೆರೆ ಜಿಲ್ಲೆಯ 5 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ!
Davangere District Assembly Election Result 2023: ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿರುವ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯತೆ ಕೊಂಚ ಹೆಚ್ಚಿದೆ. ಇನ್ನು ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಚನ್ನಗಿರಿ, ಮಾಯಕೊಂಡ ಹಾಗೂ ಹೊನ್ನಾಳಿ ವಿಧಾನಸಭೆ ಕ್ಷೇತ್ರಗಳಿದ್ದು, ಈ ಕ್ಷೇತ್ರದಲ್ಲಿ ಗೆಲುವು ಕಂಡ ಮತ್ತು ಸೋಲನ್ನು ಅನುಭವಿಸಿದ ಅಭ್ಯರ್ಥಿಗಳ ಪಿನ್ ಟು ಪಿನ್ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ನೀಡಲಿದೆ.
Davangere Vidhan Sabha Chunav Result 2023: ಬಿಜೆಪಿಯ ಭದ್ರಕೋಟೆಯಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಬಿಜೆಪಿ ಐದು ಸ್ಥಾನ ಗೆದ್ದು ವಿಜಯಮಾಲೆ ಧರಿಸಿತ್ತು.
ಈ ಬಾರಿ ಹೀಗಿದೆ ಸೋಲು-ಗೆಲುವಿನ ಲೆಕ್ಕಾಚಾರ:
ದಾವಣಗೆರೆ ಉತ್ತರ - ಕಾಂಗ್ರೆಸ್ ಎಸ್ ಎಸ್ ಮಲ್ಲಿಕಾರ್ಜುನ ಗೆಲುವು.
ದಾ.ದಕ್ಷಿಣ- ಶಾಮನೂರು ಶಿವಶಂಕರಪ್ಪ ಗೆಲುವು.
ಮಾಯಕೊಂಡ- ಕಾಂಗ್ರೆಸ್ ನ ಬಸವಂತಪ್ಪ ಗೆಲುವು.
ಹೊನ್ನಾಳಿ- ಕಾಂಗ್ರೆಸ್ ನ ಶಾಂತನಗೌಡ ಗೆಲುವು.
ಚನ್ನಗಿರಿ- ಕಾಂಗ್ರೆಸ್ ನ ಶಿವಗಂಗ ಬಸವರಾಜ್ ಬಹುತೇಕ ಗೆಲುವು.
ಹೊನ್ನಾಳಿ- ಬಿಜೆಪಿಯ ರೇಣುಕಾಚಾರ್ಯ ಗೆ ಸೋಲು.
ಚನ್ನಗಿರಿ- ಬಿಜೆಪಿಯ ಎಚ್ ಎಸ್ ಶಿವಕುಮಾರ್ ಸೋಲು.
ದಾ.ಉತ್ತರ- ಬಿಜೆಪಿ ಲೋಕಿಕೆರೆ ನಾಗರಾಜ್ ಸೋಲು.
ದಾ.ದಕ್ಷಿಣ- ಬಿಜೆಪಿ ಅಜಯಕುಮಾರ್ ಸೋಲು.
ಮಾಯಕೊಂಡ- ಬಿಜೆಪಿ ಬಸವರಾಜ್ ನಾಯ್ಕ್ ಸೋಲು.