ಬೆಳಗಾವಿ:  ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ನಲ್ಲಿ ಸುಮಾರು ಮುಂಜಾನೆ 3.30 ರ ಸುಮಾರಿಗೆ ಎಫ್‌ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ವೇಳೆ ದಾಖಲೆರಹಿತ ಎರಡು ಕೋಟಿ ನಗದು  ಪತ್ತೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ 


ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸಲಾಗುತ್ತಿದ್ದ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ಈ ಪ್ರಕರಣ ಕಂಡುಬಂದಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹೆದ್ದಾರಿ ಚೆಕ್ ಪೊಸ್ಟ್ ನಲ್ಲಿ ಪೊಲೀಸರು ವಾಹನ ತಡೆದು ವಿಚಾರಣೆ ನಡೆಸುವ ವೇಳೆ ಬಸ್ಸಿನ ಮೇಲೆ  ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ: ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರಿಂದ ಅಧಿಕಾರ ದುರುಪಯೋಗ: ಸಿದ್ದರಾಮಯ್ಯ


ಪರಿಶೀಲನೆ  ವೇಳೆ ಬಸ್ಸು ಒಳಗೆ  ದಾಖಲೆರಹಿತ ಎರಡು ಕೋಟಿ ನಗದು  ಚೀಲ ಪತ್ತೆಯಾಗಿದೆ.  ಈ ವಿಚಾರಣೆ ಸಂಬಂಧ ಕಾರ್ಯಚಾರಣೆ ನಡೆಸಿದಾಗ ಬಸ್ಸು ಚಾಲಕ ಈ ಹಣದ ಬಗ್ಗೆ ದಾಖಲಾತಿ ಹಾಗೂ ಮಾಹಿತಿ ನೀಡಲು ಪೇಚಾಡಿದ್ದಾನೆ. ಈ ಹಿನ್ನೆಲೆ  ಬಸ್ಸು ಚಾಲಕನನ್ನು ಬಂಧಿಸಿ ಘಟನೆ  ಸಂಬಂಧಿಸಿದ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸಲು ಬಿಜೆಪಿಯ ಕಿರುಕುಳವೇ ಕಾರಣ: ಕಾಂಗ್ರೆಸ್https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.