Karnataka Assembly election 2023: 27 ಕೋಟಿ ನಗದು, 10 ಕೋಟಿ ಮೌಲ್ಯದ ಚಿನ್ನ ವಶ!
Karnataka Assembly election 2023: ಚುನಾವಣಾ ಆಯೋಗದ ಅಧಿಕಾರಿಗಳು ಕಳೆದ 1 ವಾರದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ, ದಾಖಲೆಯಿಲ್ಲದ 27 ಕೋಟಿ ರೂ. ನಗದು ಹಾಗೂ 10 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ತೆಗೆದಕೊಂಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ಏರತೊಡಗಿದ್ದು, ಮತದಾರನ ಓಲೈಸಿಲು ಒಂದು ಕಡೆ ಪಕ್ಷಗಳು ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳು, ಮತ್ತೊಂದೆಡೆ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಮಿಕ್ಸಿ, ಕುಕ್ಕರ್, ಟೀವಿ ಹಾಗೂ ಹಣದ ಆಮಿಷದ ಮೂಲಕ ಮತದಾರನ ಮನ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತದಾರನಿಗೆ ಒಡ್ಡುತ್ತಿರುವ ಆಮಿಷಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಆಡಳಿತ ಪೊಲೀಸ್ ಇಲಾಖೆಗಳು ಮುಂದಾಗಿವೆ.
ಮತದಾರನ ಮತದ ಮೇಲೆ ರಾಜಕಾರಣಿಗಳ ವಕ್ರ ದೃಷ್ಟಿ ಬಿದ್ದಿದ್ದು, ಏನಾದರೂ ಮಾಡಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ರಾಜಕಾರಣಿಗಳು ವಾಮಮಾರ್ಗದಲ್ಲಿ ಮತದಾರರನ್ನು ಸೆಳೆಯಲು ವಿವಿಧ ರೀತಿಯಲ್ಲಿ ಆಮೀಷ ಒಡ್ಡುತ್ತಿದ್ದಾರೆ. ಈ ಆಮೀಷಗಳಿಗೆ ಬ್ರೇಕ್ ಹಾಕಲು ಪೊಲೀಸರು ಅಲರ್ಟ್ ಆಗಿದ್ದಾರೆ. ನಗರ ಮತ್ತು ಹೊರವಲಯದಲ್ಲಿ ಪೊಲೀಸ್ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ಬೈಕ್, ಆಟೋ, ಲಾರಿ ಮತ್ತು ಕಾರು ಸೇರಿದಂತೆ ಎಲ್ಲಾ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ಭಾಗಿ,ವಾರ್ಡನ್ ಅಮಾನತು
ಅಕ್ರಮವಾಗಿ ಹಣ, ಮದ್ಯ ಮತ್ತು ಬೆಲೆಬಾಳುವ ಗಿಫ್ಟ್ ಸೇರಿದಂತೆ ಅನುಮಾನಾಸ್ಪದ ವಾಹನಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಹೆಚ್ಚಿನ ನಗದು ಹಣ, ಮದ್ಯ, ಕುಕ್ಕರ್, ಸೀರೆ, ಪಂಚೆ, ಮಿಕ್ಸಿ ಸೇರಿದಂತೆ ದಾಖಲೆಯಿಲ್ಲದೆ ಸಾಗಿಸುವ ವಸ್ತುಗಳ ಮೇಲೆ ಕಣ್ಣಿಡಲಾಗಿದೆ. ಬೆಲೆ ಬಾಳುವ ವಸ್ತುಗಳನ್ನು ಸಾಗಾಟ ಮಾಡಿದರೆ ಸೂಕ್ತ ದಾಖಲೆ ನೀಡಬೇಕು, ಇಲ್ಲದಿದ್ದರೆ ಪೊಲೀಸರು ಜಪ್ತಿ ಮಾಡುತ್ತಾರೆ.
ಚುನಾವಣಾಧಿಕಾರಿಗಳ ಭರ್ಜರಿ ಬೇಟೆ!
ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ದಾಖಲೆ ಇಲ್ಲದೆ, ಅಕ್ರಮವಾಗಿ ಸಾಗಾಟ ಮಾಡುವ ಬೆಲೆ ಬಾಳುವ ವಸ್ತುಗಳು, ಕೋಟ್ಯಂತರ ನಗದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಕಳೆದ 1 ವಾರದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ, ದಾಖಲೆಯಿಲ್ಲದ 27 ಕೋಟಿ ರೂ. ನಗದು ಹಾಗೂ 10 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ತೆಗೆದಕೊಂಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ 15 ಲಕ್ಷ ಮೌಲ್ಯದ ಮದ್ಯ, 12 ಲಕ್ಷ ಹಣ ಸೀಜ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.