Shivamogga Assembly Election Result 2023: ಶಿಕಾರಿಪುರ-ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಮುನ್ನಡೆ!
Tumkur Karnataka Election Result 2023: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತ ಕ್ಷೇತ್ರಗಳಿವೆ. ಅವುಗಳೆಂದರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಟಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ. ಈ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲುವು ಮತ್ತು ಸೋಲುಂಡ ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ನೀಡಲಿದೆ.
Tumkur Vidhan Sabha Chunav Result 2023: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ಮತಕ್ಷೇತ್ರಗಳಿವೆ. ಅವುಗಳೆಂದರೆ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಟಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ. ಈ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪು ಪ್ರಾಭಲ್ಯ ಸಾಧಿಸಿತ್ತು. ಅಂದರೆ ಮೂವರು ಕಾಂಗ್ರೆಸ್, ಐದು ಮಂದಿ ಬಿಜೆಪಿ ಮತ್ತು ಮೂವರು ಜೆಡಿಎಸ್ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಈ ಬಾರಿ ಯಾವ ಪಕ್ಷಕ್ಕೆ ಮತದಾರ ಒಲವು ತೋರಿಸಲಿದ್ದಾನೆ ಎಂದು ಕಾದುನೋಡಬೇಕಿದೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರ (Chikkanayakanahalli Assembly Election Result 2023): ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜೆ.ಸಿ ಮಾಧುಸ್ವಾಮಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಈ ಬಾರಿಯೂ ಕೂಡ ಮುನ್ನಡೆ ಸಾಧಿಸಿದ್ದಾರೆ.
2018ರ ಫಲಿತಾಂಶ:
ಬಿಜೆಪಿಯ ಜೆ.ಸಿ ಮಾಧುಸ್ವಾಮಿ ಪಡೆದ ಮತಗಳು 69, 612
ಜೆಡಿಎಸ್ ಪಕ್ಷದ ಸಿ. ಬಿ ಸುರೇಶ್ ಬಾಬು ಪಡೆದ ಮತಗಳು 59,335
ಕಾಂಗ್ರೆಸ್ ಪಕ್ಷದ ಸಂತೋಷ್ ಜಯಚಂದ್ರ ಪಡೆದ ಮತಗಳು 45,893
2023ರ ಅಖಾಡದಲ್ಲಿ ಇರುವವರು:
ಕಾಂಗ್ರೆಸ್ – ಕೆ.ಎಸ್.ಕಿರಣ್ ಕುಮಾರ್
ಬಿಜೆಪಿ – ಜೆ.ಸಿ.ಮಾಧುಸ್ವಾಮಿ
ಜೆಡಿಎಸ್ – ಸಿಬಿ. ಸುರೇಶ್ ಬಾಬು
ಆಮ್ ಆದ್ಮಿ- ನಿಂಗರಾಜು ಸಿ
======
ತಿಪಟೂರು ವಿಧಾನಸಭಾ ಕ್ಷೇತ್ರ (Tipatur Assembly Election Result 2023): 2018ರ ಚುನಾವಣೆಯಲ್ಲಿ ಬಿಜೆಪಿಯ ಬಿ. ಸಿ ನಾಗೇಶ್ ಮುನ್ನಡೆ ಸಾಧಿಸಿದ್ದಾರೆ.
2018ರ ಫಲಿತಾಂಶ
ಬಿಜೆಪಿ ಪಕ್ಷದ ಬಿಸಿ ನಾಗೇಶ್ ಪಡೆದ ಮತಗಳು 61,383
ಕಾಂಗ್ರೆಸ್ ಪಕ್ಷದ ಕೆ.ಷಡಾಕ್ಷರಿ ಪಡೆದ ಮತಗಳು 35,820
ಜೆಡಿಎಸ್ ಪಕ್ಷದ ಲೋಕೇಶ್ವರ್ ಪಡೆದ ಮತಗಳು 17,027
2023ರ ಅಖಾಡ
ಕಾಂಗ್ರೆಸ್ – ಕೆ.ಷಡಾಕ್ಷರಿ
ಬಿಜೆಪಿ – ಬಿ.ಸಿ.ನಾಗೇಶ್
ಜೆಡಿಎಸ್ – ಶಾಂತಕುಮಾರ್
=====
ತುರುವೇಕೆರೆ ವಿಧಾನಸಭಾ ಕ್ಷೇತ್ರ (Turuvekere Assembly Election Result 2023): ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಆಂತರಿಕ ಗಲಾಟೆಯಿಂದ ಬಿಜೆಪಿಗೆ ಹೆಚ್ಚಿನ ಮತಗಳು ಬಿಜೆಪಿ ಬಂದವು. ಇನ್ನು ಆ ಸಂದರ್ಭದಲ್ಲಿ ಬಿಜೆಪಿಯ ಎ. ಎಸ್ ಜಯರಾಮ್ 60,710 ಮತಗಳನ್ನು ಪಡೆದು, 2,049 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದ 35 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಲಿಂಗಾಯಿತರು ಬಿಜೆಪಿಗೆ ಓಟು ಹಾಕಿದ್ದರು. ಇಲ್ಲಿ ಒಕ್ಕಲಿಗ ಮತಗಳು ಹಾಗೂ ತುರುವೇಕೆರೆ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಚಾರ ಗೆಲುವಿಗೆ ನಿರ್ಣಾಯಕವಾಗಲಿದೆ.
2018ರ ಫಲಿತಾಂಶ:
ಬಿಜೆಪಿ ಪಕ್ಷದ ಮಸಾಲ ಜಯರಾಂ ಪಡೆದ ಮತಗಳು 60,710
ಜೆಡಿಎಸ್ ಪಕ್ಷದ ಎಂಟಿ ಕೃಷ್ಣಪ್ಪ ಪಡೆದ ಮತಗಳು 58,661
ಕಾಂಗ್ರೆಸ್ ಪಕ್ಷದ ರಂಗಪ್ಪ ಚೌದರಿ ಪಡೆದ ಮತಗಳು 24,584
2023ರ ಅಖಾಡ
ಕಾಂಗ್ರೆಸ್ – ಬಿಎಂ ಕಾಂತರಾಜು
ಬಿಜೆಪಿ – ಮಸಾಲ ಜಯರಾಂ
ಜೆಡಿಎಸ್ – ಎಂ.ಟಿ.ಕೃಷ್ಣಪ್ಪ
ಆಮ್ ಆದ್ಮಿ- ಟೆನ್ನಿಸ್ ಕೃಷ್ಣ
=======
ಕುಣಿಗಲ್ ವಿಧಾನಸಭಾ ಕ್ಷೇತ್ರ (Kunigal Assembly Election Result 2023): ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷದ ಡಾ. ಎಚ್. ಡಿ ರಂಗನಾಥ್ ಅವರನ್ನು 6500 ಮತಗಳ ಅಂತರದಿಂದ ಗೆಲ್ಲಿಸಿದ್ದರು. ಡಿ.ನಾಗರಾಜಯ್ಯ ಕುಟುಂಬ ರಾಜಕೀಯಕದಿಂದ ಬೇಸತ್ತಿದ್ದ ಜನ ಹೊಸ ಮುಖಕ್ಕೆ ಅವಕಾಶ ನೀಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ ಮಾಜಿ ಸಂಸದ ಮುದ್ದಹನುಮೇಗೌಡರ ಪ್ರಭಾವದಿಂದಾಗಿ ಒಕ್ಕಲಿಗ ಮತ ಸೆಳೆಯುವುದು ಕಾಂಗ್ರೆಸ್’ನತ್ತ ಮುಖ ಮಾಡಿತ್ತು.
2018ರ ಫಲಿತಾಂಶ
ಕಾಂಗ್ರೆಸ್ ಪಕ್ಷದ ಡಾ.ಎಚ್ ಡಿ ರಂಗನಾಥ್ ಪಡೆದ ಮತಗಳು 58,697
ಜೆಡಿಎಸ್ ಪಕ್ಷದ ಡಿ ನಾಗರಾಜಯ್ಯ ಪಡೆದ ಮತಗಳು 53,097
2023ರ ಅಖಾಡ
ಕಾಂಗ್ರೆಸ್ – ಡಾ.ಕೆ.ರಂಗನಾಥ್
ಬಿಜೆಪಿ – ಡಿ.ಕೃಷ್ಣ ಕುಮಾರ್
ಜೆಡಿಎಸ್ – ಡಾ.ರವಿ
ಆಮ್ ಆದ್ಮಿ- ಜಯರಾಮಯ್ಯ
======
ತುಮಕೂರು ನಗರ ವಿಧಾನಸಭಾ ಕ್ಷೇತ್ರ (Tumkur Assembly Election Result 2023): 2018ರ ಚುನಾವಣೆಯಲ್ಲಿ ಬಿಜೆಪಿಯ ಜಿ. ಬಿ ಜ್ಯೋತಿ ಗಣೇಶ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ 60,421 ಮತಗಳನ್ನು ಪಡೆದು, 5,293 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಸಂಪ್ರದಾಯಿಕ ಮತಗಳಾದ ಮುಸ್ಲಿಂ ವೋಟ್ ಗಳು ಚಲಾವಣೆಯಾಗದೆ ಹೊರಗುಳಿದ ಕಾರಣ, ಜೊತೆಗೆ ಹಿಂದೂಗಳ ಮತ ಒಗ್ಗೂಡಿಕೆಯಿಂದ ಜಾತಿ ಮರೆತು ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದು ಜ್ಯೋತಿ ಗಣೇಶ್ ಗೆಲುವಿಗೆ ಕಾರಣವಾಗಿತ್ತು.
2018ರ ಫಲಿತಾಂಶ:
ಬಿಜೆಪಿ ಪಕ್ಷದ ಜಿ. ಬಿ ಜ್ಯೋತಿ ಗಣೇಶ್ ಪಡೆದ ಮತಗಳು 60,421
ಜೆಡಿಎಸ್ ಪಕ್ಷದ ಗೋವಿಂದ ರಾಜು ಪಡೆದ ಮತಗಳು 55,128
ಕಾಂಗ್ರೆಸ್ ಪಕ್ಷದ ಡಾ. ರಫೀಕ್ ಅಹ್ಮದ್ ಎಸ್ ಪಡೆದ ಮತಗಳು 51,219
2023ರ ಅಖಾಡ
ಜೆಪಿಪಿ -ಜಿ.ಬಿ ಜ್ಯೋತಿಗಣೇಶ್
ಜೆಡಿಎಸ್ -ಎನ್.ಗೋವಿಂದರಾಜು
ಕಾಂಗ್ರೆಸ್-ಇಕ್ಬಾಲ್ ಅಹಮದ್
ಪಕ್ಷೇತರ-ಸೊಗಡು ಶಿವಣ್ಣ (BJP ಬಂಡಾಯ)
ಆಮ್ ಆದ್ಮಿ- ಮೊಹಮ್ಮದ್ ಗೌಸ್
------
ತುಮಕೂರು ಗ್ರಾಮೀಣ ಕ್ಷೇತ್ರ (Tumkur Rural Election Result 2023): 2018ರಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್ ನ ಡಿ. ಸಿ ಗೌರಿಶಂಕರ್ 5,640 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಸತತ ಎರಡು ಬಾರಿ ಗೆಲುವು ಸಾಧಿಸಿದ ಸುರೇಶ್ ಗೌಡರ ಬಗ್ಗೆ ಕ್ಷೇತ್ರದಲ್ಲಿ ಅಸಮಧಾನವಿದ್ದ ಕಾರಣ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಇದು ಪ್ಲಸ್ ಪಾಯಿಂಟ್ ಆಯಿತು.
2018 ರ ಫಲಿತಾಂಶ:
ಜೆಡಿಎಸ್ ಪಕ್ಷದ ಡಿ. ಸಿ ಗೌರಿಶಂಕರ್ ಪಡೆದ ಮತಗಳು 82,740
ಬಿಜೆಪಿ ಪಕ್ಷದ ಬಿ ಸುರೇಶ್ ಗೌಡ ಪಡೆದ ಮತಗಳು 77,100
ಕಾಂಗ್ರೆಸ್ ಪಕ್ಷದ ಆರ್ ಎಸ್ ರವಿಕುಮಾರ್ ಪಡೆದ ಮತಗಳು 7,633
2023ರ ಅಖಾಡ
ಜೆಡಿಎಸ್-ಡಿಸಿ ಗೌರಿಶಂಕರ್
ಕಾಂಗ್ರೆಸ್-ಜಿ ಎಚ್ ಷಣ್ಮುಖಪ್ಪ ಯಾದವ್
ಬಿಜೆಪಿ-ಬಿ. ಸುರೇಶ್‌ಗೌಡ
ಆಮ್ ಆದ್ಮಿ- ದಿನೇಶ್ ಕುಮಾರ್
======
ಕೊರಟಗೆರೆ ಕುರುಕ್ಷೇತ್ರ (Koratagere Assembly Election Result 2023): ಮಾಜಿ ಡಿಸಿಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಮುನ್ನಡೆ ಸಾಧಿಸಿದ್ದಾರೆ.
2018ರ ಫಲಿತಾಂಶ:
ಕಾಂಗ್ರೆಸ್ ಪಕ್ಷದ ಡಾ. ಜಿ. ಪರಮೇಶ್ವರ್ ಪಡೆದ ಮತಗಳು 81,598
ಜೆಡಿಎಸ್ ಪಕ್ಷದ ಸುಧಾಕರ್ ಲಾಲ್ ಪಡೆದ ಮತಗಳು 73,979
ಬಿಜೆಪಿ ಪಕ್ಷದ ವೈ ಹುಚ್ಚಯ್ಯ ಪಡೆದ ಮತಗಳು 12,190
2023ರ ಅಖಾಡ :
ಕಾಂಗ್ರೆಸ್-ಡಾ.ಜಿ.ಪರಮೇಶ್ವರ್
ಬಿಜೆಪಿ-ಅನಿಲ್ ಕುಮಾರ್
ಜೆಡಿಎಸ್-ಸುಧಾಕರ್ ಲಾಲ್
=======
ಗುಬ್ಬಿ ವಿಧಾನಸಭಾ ಕ್ಷೇತ್ರ (Gubbi Assembly Election Result 2023) : ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಲಿಂಗಾಯತ ಸಮುದಾಯದ ದಿಲೀಪ್ ಕುಮಾರ್ ಈ ಕ್ಷೇತ್ರದಲ್ಲಿ ಬಂಡಾಯ ಎದ್ದಿದ್ದರು. ಇದೀಗ ಅಂಚೆ ಮತ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿಯ ದಿಲೀಪ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ.
2018ರ ಫಲಿತಾಂಶ:
ಜೆಡಿಎಸ್ ಪಕ್ಷದ ಎಸ್ ಆರ್ ಶ್ರೀನಿವಾಸ್ ಪಡೆದ ಮತಗಳು 55,572
ಬಿಜೆಪಿ ಪಕ್ಷದ ಬೆಟ್ಟಸ್ವಾಮಿ ಪಡೆದ ಮತಗಳು 46,491
ಪಕ್ಷೇತರ (ಬಿಜೆಪಿ ಬಂಡಾಯ) ದಿಲೀಪ್ ಕುಮಾರ್ ಪಡೆದ ಮತಗಳು 30,528
2023ರ ಅಖಾಡ
ಕಾಂಗ್ರೆಸ್ – ಎಸ್.ಆರ್.ಶ್ರೀನಿವಾಸ್
ಬಿಜೆಪಿ – ಎಸ್ ಡಿ ದಿಲೀಪ್ ಕುಮಾರ್
ಜೆಡಿಎಸ್ – ಬಿ.ಎಸ್.ನಾಗರಾಜು
ಆಮ್ ಆದ್ಮಿ- ಪ್ರಭುಸ್ವಾಮಿ
======
ಶಿರಾ ಕುರುಕ್ಷೇತ್ರ (Sira Assembly Election Result 2023): ಶಿರಾ ವಿಧಾನಸಭಾ ಕ್ಷೇತ್ರದ ಸತತ ಹತ್ತು ಚುನಾವಣೆಯಲ್ಲಿ ಜಯಚಂದ್ರ ಸ್ಪರ್ಧೆ ಮಾಡಿದ್ದರು. ಇದೀಗ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
2018ರ ಫಲಿತಾಂಶ:
ಬಿಜೆಪಿ ಪಕ್ಷದ ಡಾ.ಸಿಎಂ ರಾಜೇಶ್ ಗೌಡ ಮತಗಳು 76,564
ಕಾಂಗ್ರೆಸ್ ಪಕ್ಷದ ಟಿ.ಬಿ ಜಯಚಂದ್ರ ಪಡೆದ ಮತಗಳು 63,150
ಜೆಡಿಎಸ್ ಪಕ್ಷದ ಎ.ಬಿ ಸತ್ಯನಾರಾಯಣ ಪಡೆದ ಮತಗಳು 30,783
2023ರ ಅಖಾಡ :
ಕಾಂಗ್ರೆಸ್-ಟಿ.ಬಿ.ಜಯಚಂದ್ರ
ಬಿಜೆಪಿ- ಡಾ.ರಾಜೇಶ್‌ಗೌಡ
ಜೆಡಿಎಸ್-ಆರ್.ಉಗ್ರೇಶ್
ಆಮ್ ಆದ್ಮಿ- ಶಶಿಕುಮಾರ್
=====
ಪಾವಗಡ ಕುರುಕ್ಷೇತ್ರ (Pavagada Assembly Election Result 2023): ಕಳೆದ ಚುನಾವಣೆಯಲ್ಲಿ ಪಾವಗಡ ಕುರುಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ವೆಂಕಟರಮಣಪ್ಪ ಕೈ ಹಿಡಿದಿದ್ದರು. ಆದರೆ ಗೆದ್ದಿದ್ದು ಕೇವಲ 409 ಮತಗಳ ಅಂತರದಿಂದ. ಇನ್ನು ಕ್ಷೇತ್ರದ ಮತದಾರ ಒಂದು ಬಾರಿ ಗೆಲ್ಲಿಸಿದವನನ್ನು ಮತ್ತೊಮ್ಮೆ ಗೆಲ್ಲಿಸುವುದಿಲ್ಲ. ಒಮ್ಮೆ ಜೆಡಿಎಸ್ ಬಂದರೆ, ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುತ್ತದೆ. ಎಸ್.ಸಿ ಮೀಸಲು ಕ್ಷೇತ್ರ, ದಲಿತರು, ಯಾದವರು, ಎಸ್ಟಿ ಸಮುದಾಯದ ಮತಗಳೇ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿದೆ. ಪ್ಲೋರೈಡ್ ನೀರು ಸಮಸ್ಯೆ, ಭದ್ರಾಮೇಲ್ದಂಡೆ ನೀರಾವರಿ ಯೋಜನೆ ಈ ವಿಚಾರಗಳು ಕ್ಷೇತ್ರದ ನಿರ್ಣಾಯಕವಾಗಲಿದೆ.
2018ರ ಫಲಿತಾಂಶ:
ಕಾಂಗ್ರೆಸ್ ಪಕ್ಷದ ವೆಂಕಟರಮಣಪ್ಪ ಪಡೆದ ಮತಗಳು 72,974
ಜೆಡಿಎಸ್ ಪಕ್ಷದ ತಿಮ್ಮರಾಯಪ್ಪ ಪಡೆದ ಮತಗಳು 72,565
ಬಿಜೆಪಿ ಪಕ್ಷದ ಜಿವಿ ಬಲರಾಮ್ ಮತಗಳು 14,074
2023ರ ಅಖಾಡ
ಕಾಂಗ್ರೆಸ್- ಎಚ್ ವಿ.ವೆಂಕಟೇಶ್
ಬಿಜೆಪಿ-ಕೃಷ್ಣ ನಾಯಕ್
ಜೆಡಿಎಸ್-ತಿಮ್ಮರಾಯಪ್ಪ
ಆಮ್ ಆದ್ಮಿ- ರಾಮಾಂಜನಪ್ಪ ಎನ್
=======
ಮಧುಗಿರಿ ವಿಧಾನಸಭಾ ಕ್ಷೇತ್ರ (Madhugiri Assembly Election Result 2023): ಈ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಎಂ. ವಿ ವೀರಭದ್ರಯ್ಯ 18,574 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದರು. ಇಲ್ಲಿ ಎದುರಾಳಿ ರಾಜಣ್ಣನನ್ನ ಸೋಲಿಸಲು ದೇವೇಗೌಡ ಕುಟುಂಬ ಜಿದ್ದಿಗೆ ಬಿದ್ದಿದೆ. ಮತ್ತೊಂದೆಡೆ ಬಿಜೆಪಿಯಿಂದ ನಾಯಕ ಸಮುದಾಯದ ಎಲ್.ಸಿ.ನಾಗರಾಜ್ ಗೆ ಟಿಕೆಟ್ ನೀಡಲಾಗಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ, ಕುರುಬಾ, ದಲಿತ ಮತಗಳೇ ನಿರ್ಣಾಯಕವಾಗಲಿವೆ.
2018ರ ಫಲಿತಾಂಶ:
ಜೆಡಿಎಸ್ ಪಕ್ಷದ ಎಂವಿ ವೀರಭದ್ರಯ್ಯ ಪಡೆದ ಮತಗಳು 88,521
ಕಾಂಗ್ರೆಸ್ ಪಕ್ಷದ ಕ್ಯಾತಸಂದ್ರ ರಾಜಣ್ಣ ಪಡೆದ ಮತಗಳು 69,947
ಬಿಜೆಪಿ ಪಕ್ಷದ ಹುಲಿನಾಯ್ಕರ್ ಪಡೆದ ಮತಗಳು 2,911
2023ರ ಅಖಾಡ
ಜೆಡಿಎಸ್ -ಎಂ.ವೀರಭದ್ರಯ್ಯ
ಕಾಂಗ್ರೆಸ್-ಕೆ.ಎನ್.ರಾಜಣ್ಣ
ಬಿಜೆಪಿ - ಎಲ್.ಸಿ.ನಾಗರಾಜ್
ಆಮ್ ಆದ್ಮಿ- ಸಯ್ಯದ್ ಮುಜಾಮಿಲ್ ಪಾಷಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ