ಆರ್ ಸಿ ಬಿ ಮ್ಯಾಚ್ನಲ್ಲಿ ಆರ್ ಆರ್ ನಗರದ ಅಭ್ಯರ್ಥಿ ಕುಸುಮಕ್ಕನ ಜಪ..!
Kusuma Hanumantharayappa : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಬಿಡುಗಡೆಯಾಗಿದೆ. ಇದರ ಜೊತೆ ಜೊತೆಗೆ ಐಪಿಎಲ್ 2023 ಆವೃತ್ತಿ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿವೆ. ಸದ್ಯ ರಾಜಕೀಯ ಹಾಗೂ ಕ್ರಿಕೆಟ್ ಪ್ರೇಮಿಗಳು ಸಖತ್ ಬ್ಯೂಸಿಯಾಗಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
Karnataka Assembly Election 2023 : ಕ್ರಿಕೆಟ್ ಮನೈದಾನದಲ್ಲಿ ಕ್ರಿಕೆಟ್ ಪ್ರೇಮಿಗಳ ಕೂಗಿನ ಜೊತೆಗೆ ರಾಜಕೀಯ ಕಲರವಗಳು ಕೇಳಿ ಬರುತ್ತಿವೆ. ಹೌದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ರಾಜಕೀಯ ಸಂಭಂದಿತ ವಿಷಯಗಳು ಕೇಳಿಬಂದಿವೆ. ಆರ್‌ಸಿಬಿ ಮತ್ತು ಕೋಲ್ಕತ್ತಾ ತಂಡಗಳ ನಡುವಿನ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ಜೆಡಿಎಸ್ ಬಾವುಟ ಕಾಣಿಸಿಕೊಂಡಿತ್ತು. ಈ ಮೂಲಕ ಜೆಡಿಎಸ್ ಪಕ್ಷದ ಅಭಿಮಾನಿಗಳು ಕಲರವ ಎಬ್ಬಸಿದ್ದರು.
ಇದನ್ನೂ ಓದಿ-Election 2023: ಪ್ರಚಾರಕ್ಕೆ ತೆರಳಿದ್ದ BJP ಅಭ್ಯರ್ಥಿ ಅವಿನಾಶ್ ಜಾಧವ್ ಕಾರಿನ ಮೇಲೆ ಕಲ್ಲು ತೂರಾಟ!
ಶನಿವಾರ ನಡೆದ ಆರ್‌ಸಿಬಿ ಮತ್ತು ದೆಹಲಿ ಪಂದ್ಯದಲ್ಲಿ ಕಾಂಗ್ರೆಸ್ ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ. ಅವರು ಬೆಂಗಳೂರಿನ ಆರ್ ಆರ್ ನಗರದ ಕಾಂಗ್ರೇಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಫಲಕವನ್ನು ಎತ್ತಿ ಹಿಡಿದಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಈ ಪೋಟೋವನ್ನು ಕುಸುಮಾ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡು "ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು" ಎಂದು ಬರೆದಿದ್ದಾರೆ.
ಪ್ರದರ್ಶನ ಮಾಡಲಾದ ಫಲಕದಲ್ಲಿ RR ನಗರ 100% WIN ಕುಸುಮಕ್ಕ ಎಂದು ಬರೆದಿದ್ದಾರೆ. ಇದಕ್ಕೆ ಕುಸುಮಾ ಹನುಮಂತರಾಯಪ್ಪ ತಮ್ಮ ಖಾಸಗಿ ಫೇಸ್‌ಬುಕ್ ಪೇಜ್ ನಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ-Karnataka Election 2023 : ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.