ಬೆಂಗಳೂರು: "ಸಿ" ಓಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದು ಕೊಡೋದು ಬೇಡ. ಪಾಪ, ಡಅವರಿಗೆ ರಕ್ತದ ಕೊರತೆ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.


COMMERCIAL BREAK
SCROLL TO CONTINUE READING

ಯಡಿಯೂರಪ್ಪ ಅವರು ನೋಡಿದರೆ ಜಗದೀಶ್ ಶೆಟ್ಟರ್ ಸೋಲುತ್ತಾರೆ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ನೀವು ರಕ್ತದ ಕೊರತೆ ಮಾಡಿಕೊಳ್ಳೋದು ಅಗತ್ಯ ಇಲ್ಲ. ಯಾರೂ ರಕ್ತದಲ್ಲಿ ಬರೆದು ಕೊಡೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನರು ಮತ ಕೊಡೋದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಅಂತಾರೆ ಹೇಳಲಿ ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: Karnataka Election 2023 : ಜಗಳೂರಿನಲ್ಲಿ ಬಾದ್ ಶಾ ಸುದೀಪ್ ಭರ್ಜರಿ ರೋಡ್ ಶೋ, ಬಿಜೆಪಿ ಪರ ಮತಬೇಟೆ


ನೀವು ನನ್ನನ್ನು ಕೇಳಬಹುದು, 123 ಕ್ಷೇತ್ರ ಹೇಗೆ ಬರುತ್ತದೆ  ಅಂತ. ನಾನು 106 ಕ್ಷೇತ್ರಗಳಲ್ಲಿ ನೇರವಾಗಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಮಾಡಿದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಾತ್ರೆಗಳು ಯಶಸ್ವಿಯಾಗಿವೆ. ನನ್ನ ರೋಡ್ ಶೋಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಅಂತ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡ್ತಾರೆ.


ಸೋಮಣ್ಣ ವಿರುದ್ಧ ಕಿಡಿ:


ಜೆಡಿಎಸ್ ಅಭ್ಯರ್ಥಿಗೆ ಆಮಿಷ ಇದ್ದಿರುವ ಸಚಿವ ಸೋಮಣ್ಣ ವೈಖರಿ ಬಗ್ಗೆ ಕಟುವಾಗಿ ಟೀಕಿಸಿರುವ ಮಾಜಿ ಮುಖ್ಯಮಂತ್ರಿಗಳು; ಸೋಮಣ್ಣ ಅವರ ಭಾಷೆ ನಮಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.


ಗೂಟದ ಕಾರು ಅಂದರೆ ಏನು? ಪ್ರವೈಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ? ಕಾಂಗ್ರೆಸ್ ನಾಯಕರು ನೋಡಿದರೆ  ಬಿಜೆಪಿ ಶವಯಾತ್ರೆ ಅಂತಾರೆ. ಇವರು ನೋಡಿದ್ರೆ ಗೂಟದ ಕಾರ್ ಅಂತಾರೆ. ಇವರು ಯಾವ ಗೂಟದ ಕಾರ್ ಕೊಡ್ತಾರೆ ಅಂತ ಗೊತ್ತಿಲ್ಲ. ಇವೆಲ್ಲ ಈಗ ವರ್ಕ್ ಆಗೊಲ್ಲ. ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ. ಅವರ ಇವತ್ತಿನ ಸ್ಥಿತಿ ನೋಡಿದರೆ ನಮಗೆ ಅರ್ಥ ಆಗುತ್ತದೆ. ಜೆಡಿಎಸ್ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಇದನ್ನೂ ಓದಿ: Praveen Nettaru: ನಾಳೆ ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ


ಸಮೀಕ್ಷೆಗಳಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ:


ಬಹುಮತದ ಗುರಿ ಮುಟ್ಟಲು ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಆದರೂ ನಮಗೆ ಜನತೆ ಬೆಂಬಲ ದಲ್ಲಿ ‌ನಂಬಿಕೆ ಇದೆ. 123 ಗುರಿ ನಾವು ತಲುಪುತ್ತೇವೆ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತೆ ಅಂತ ಹೇಳ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 23- 24 ಅಂತ ತೋರಿಸ್ತಿದ್ದಾರೆ. ಪಾಪ ಅವರು 1 ಅಂಕಿ ಮುಂದೆ ಹಾಕೋದು ಮರೆತು ಹೋಗಿದ್ದಾರೆ. ಜೆಡಿಎಸ್ ಗೆ 123 ಸ್ಥಾನ ಈ ಬಾರಿ ಬರಲಿದೆ.


ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅವರು ಎಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದರು.ಇದೇ ವೇಳೆ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಆಲ್ಕೊಡ್ ಹನುಮಂತಪ್ಪ ಅವರನ್ನು ನೇಮಕ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಘೋಷಣೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು; ನಮ್ಮ‌ಪಕ್ಷದ ಹಿರಿಯ ಮುಖಂಡರು ಮತ್ತೆ ತಮ್ಮ ಸ್ವಂತ ಮನೆಗೆ ಹನುಮಂತಪ್ಪ ಬರುತ್ತಿದ್ದಾರೆ. ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಜೆಡಿಎಸ್ ಗೆ ಮನೆಗೆ ಬರಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಅವರ ಶಕ್ತಿ ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.


ಹನುಮಂತಪ್ಪ ಅವರ ದೇಹ ಕಾಂಗ್ರೆಸ್ ನಲ್ಲಿ ಇತ್ತು, ಮನಸ್ಸು ಜೆಡಿಎಸ್ ನಲ್ಲಿ ಇತ್ತು. ನಮ್ಮ ಸಂಪರ್ಕದಲ್ಲೇ ಅಲ್ಕೊಡ್ ಹನುಮಂತಪ್ಪ ಇದ್ದರು. ಕಾಂಗ್ರೆಸ್ ನಡವಳಿಕೆಯಿಂದ ಬೇಸತ್ತು ಅವರು ಜೆಡಿಎಸ್ ಗೆ ಬಂದಿದ್ದಾರೆ. ಅವರಿಗೆ ಜೆಡಿಎಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನಮಾನ ಕೊಡಲು ಸಿಎಂ ಇಬ್ರಾಹಿಂ ನಿರ್ಧಾರ ಮಾಡಿದ್ದಾರೆ. ಅವರ ಜತೆ ಉತ್ತರ ಕರ್ನಾಟಕ ಭಾಗದ ಹಲವಾರು ಜನ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.