Haveri District Assembly Election Result 2023: ಹಾವೇರಿ ಜಿಲ್ಲೆಯು ಬಹುತೇಕ ಕರ್ನಾಟಕದ ಮಧ್ಯಭಾಗದಲ್ಲಿದೆ. ಉತ್ತರದ ಬೀದರ್‌ನಿಂದ ಮತ್ತು ದಕ್ಷಿಣದ ಚಾಮರಾಜನಗರದಿಂದ ಸಮಾನ ಅಂತರದಲ್ಲಿದೆ. ಇದರ ಸುತ್ತಲೂ ಉತ್ತರದಲ್ಲಿ ಧಾರವಾಡ ಮತ್ತು ಗದಗ, ಪೂರ್ವದಲ್ಲಿ ಬಳ್ಳಾರಿ ಮತ್ತು ದಾವಣಗರೆ, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಪಶ್ಚಿಮದಲ್ಲಿ ಉತ್ತರ ಕನ್ನಡ ಇವೆ. ಹಾವೇರಿ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಹಾವೇರಿಯು ಸಂತ ಶಿಶುನಾಳ ಷರೀಫ್, ಕನಕದಾಸ ಮತ್ತು ಸರ್ವಜ್ಞರಂತಹ ಹಲವಾರು ಪ್ರಮುಖ ವ್ಯಕ್ತಿಗಳ ಜನ್ಮಸ್ಥಳವಾಗಿದೆ. ಹಾವೇರಿಯು ಹಲವಾರು ಪ್ರಸಿದ್ಧ ಬರಹಗಾರರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕ್, ಸ್ವಾತಂತ್ರ್ಯ ಹೋರಾಟಗಾರ ಗುದ್ಲಪ್ಪ ಹಳ್ಳಿಕೇರಿಯವರ ತವರೂರು. ಏಲಕ್ಕಿ ನಾಡು ಹಾವೇರಿಯಲ್ಲಿ ಇದೀಗ ಚುನಾವಣಾ ರಣಕಣ ರಂಗೇರಿದೆ. ಯಾರಿಗೆ ಇಲ್ಲಿನ ಮತದಾರ ವಿಜಯಮಾಲೆ ಹಾಕುತ್ತಾನೆಂಬ ಕುತೂಹಲ ಮೂಡಿದೆ.


ಹಾವೇರಿ ವಿಧಾನಸಭಾ ಕ್ಷೇತ್ರ:  


Haveri Vidhan Aabha Chunav Result 2023: ಹಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ ಹಾಗೂ ಜಾತಿ ಇಲ್ಲಿ ನಿರ್ಣಾಯಕವಾಗುತ್ತದೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತ, ದಲಿತ ಮತಗಳನ್ನು ಸೆಳೆಯುವಲ್ಲಿ ಸಫಲರಾದವರಿಗೆ ವಿಜಯ ಮಾಲೆ ದೊರೆಯಲಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹಾವೇರಿ ಮೀಸಲು ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ಕುರಿತು ಯಾರು ಜನರ ವಿಶ್ವಾಸ ಹಾಗೂ ನಿರೀಕ್ಷೆ ಹೆಚ್ಚಿಸುತ್ತಾರೋ ಅವರೇ ಗೆಲ್ಲುವ ಸಾಧ್ಯತೆ ಇದೆ. ಹಾವೇರಿ ಎಸ್‍ಸಿ ಮೀಸಲು ಕ್ಷೇತ್ರವಾದ್ದರಿಂದ ಜಾತಿ ಲೆಕ್ಕಾಚಾರ ‘ಕೈ’ ಹಿಡಿಯೋ‌ ಸಾಧ್ಯತೆಯಿದೆ. ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪ ವರ್ಕ್ ಆಗೋ ಸಾಧ್ಯತೆ ಇದ್ದು, ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರೋಧಿ ಅಲೆ ನೀತಿಯಿಂದ ರುದ್ರಪ್ಪ ಲಮಾಣಿಗೆ ಸುಲಭ ಸಿಗುತ್ತದೆ ಎಂದು ಹೇಳಲಾಗುತ್ತಿದೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯ ನೆಹರೂ ಓಲೆಕಾರ್ ‌86,565 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ರುದ್ರಪ್ಪ ಲಮಾಣಿ 75,261 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 11,304 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ರುದ್ರಪ್ಪ ಲಮಾಣಿ - ಕಾಂಗ್ರೆಸ್


ಜಿ.ದ್ಯಾಮಣ್ಣನವರ - ಬಿಜೆಪಿ


ತುಕಾರಾಂ ಮಾಳವಿ - ಜೆಡಿಎಸ್


ಹಾನಗಲ್ ವಿಧಾನಸಭಾ ಕ್ಷೇತ್ರ:


Hangal Vidhan Aabha Chunav Result 2023: ಹಾನಗಲ್ ಕ್ಷೇತ್ರದ ಶಾಸಕರಾಗಿರುವ ಶ್ರೀನಿವಾಸ್ ಮಾನೆ ಈಗಲೂ ಆಕ್ಟಿವ್ ಆಗಿ ಓಡಾಡ್ತಿದ್ದಾರೆ. ಆದರೆ ಮೊದಲಿನಿಂದಲೂ ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಮಾನೆಯವರನ್ನು ಸಹಿಸೋದಿಲ್ಲ. ಈ ಬಾರಿ  ಮನೋಹರ್ ತಹಶಿಲ್ದಾರ್ ಮತ್ತವರ ಬೆಂಬಲಿಗರು ಮಾನೆಗೆ ಒಳಹೊಡೆತ ನೀಡುವ ತಯಾರಿಯಲ್ಲಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಸೇರಿದ ಮನೋಹರ್ ತಹಶಿಲ್ದಾರ್ ಅವರಿಂದ ಮಾನೆಗೆ ನಷ್ಟ ಉಂಟಾಗುತ್ತದೆ. ಕೊರೊನಾ ಕಾಲದ ಕೆಲಸ ಮಾನೆಗೆ ವರ್ಕೌಟ್ ಆದ್ರು, ಕೆಲ ‘ಕೈ’ ಮತ ಮನೋಹರ್ ತಹಶಿಲ್ದಾರ್ ಪಡೆಯುವದು ಪಕ್ಕಾ. ಈ ಹಿನ್ನೆಲೆ ಈ ಬಾರಿ ಶ್ರೀನಿವಾಸ್ ಮಾನೆಗೆ ಹಿನ್ನಡೆಯಾಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


2018ರ ಫಲಿತಾಂಶ


2018ರ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಉದಾಸಿ 80,529 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಶ್ರೀನಿವಾಸ ಮಾನೆ 74,015 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 6,514 ಮತಗಳಾಗಿದ್ದವು. ಮಾಜಿ ಸಚಿವ, ಹಾನಗಲ್ ಶಾಸಕರೂ ಆಗಿದ್ದ ಸಿಎಂ ಉದಾಸಿ ಅನಾರೋಗ್ಯದಿಂದ ನಿಧನರಾದ ಕಾರಣ ಹಾನಗಲ್ ಕ್ಷೇತ್ರ ತೆರವಾದ ಕಾರಣ ಉಪಚುನಾವಣೆ ನಡೆಯಿತು


2021ರ ಹಾನಗಲ್ ಉಪಚುನಾವಣೆ ಫಲಿತಾಂಶ


ಕಾಂಗ್ರೆಸ್‍ನ ಶ್ರೀನಿವಾಸ್ ಮಾನೆ 86,490 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಬಿಜೆಪಿಯ ಶಿವರಾಜ್ ಸಜ್ಜನರ 80,117 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದರು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಶ್ರೀನಿವಾಸ ಮಾನೆ - ಕಾಂಗ್ರೆಸ್


ಶಿವರಾಜ್‌ ಸಜ್ಜನರ - ಬಿಜೆಪಿ


ಮನೋಹರ್‌ ತಹಶೀಲ್ದಾರ್‌ - ಜೆಡಿಎಸ್


ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ:


Shiggaon Vidhan Aabha Chunav Result 2023: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಸವರಾಜ್ ಬೊಮ್ಮಾಯಿಯವರೇ ಗೆಲುವು ಸಾಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಜನಪ್ರಿಯತೆ ಗಳಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಗುರುತಿಸಿಕೊಂಡಿರುವ ಬೊಮ್ಮಾಯಿಗೆ ಶಿಗ್ಗಾವಿಯಲ್ಲಿ ಟಫ್ ಫೈಟೋ ನೀಡುವ ಎದುರಾಳಿಯಿಲ್ಲ. ಶಿಗ್ಗಾವಿ-ಸವಣೂರು ಮತದಾರರ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಾ ಬಂದಿದ್ದು ಪ್ಲಸ್ ಪಾಯಿಂಟ್. ಶಾಸಕ, ಸಚಿವ, ಮುಖ್ಯಮಂತ್ರಿಯಾದರೂ ದೌಲತ್ತು ತೋರಿಸದೇ ಮತದಾರರಿಗೆ ಸ್ಪಂದಿಸಿದ್ದು ಬೊಮ್ಮಾಯಿ ಕೈ ಹಿಡಿಯೋ ಸಾಧ್ಯತೆಯಿದೆ. ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಜಾತಿಯವರ ವಿಶ್ವಾಸ ಗಳಿಸಿದ್ದು ಬೊಮ್ಮಾಯಿಗೆ ಸರಳ ಗೆಲುವು ಸಿಗಲಿದೆ ಎಂದು ಹೇಳಲಾಗುತ್ತಿದೆ.


2018ರ ಫಲಿತಾಂಶ


2018ರ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು 83,868 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದರು. ಕಾಂಗ್ರೆಸ್‍ನ ಸಯದ್ ಅಜೀಂಪರ್ ಖಾದರಿ 74,603 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 9,265 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಬಸವರಾಜ ಬೊಮ್ಮಾಯಿ - ಬಿಜೆಪಿ


ಯಾಸಿನ್‌ ಖಾನ್‌ ಪಠಾಣ್‌ - ಕಾಂಗ್ರೆಸ್


ಶಶಿಧರ ಯಲಿಗಾರ್‌ – ಜೆಡಿಎಸ್


ಇದನ್ನೂ ಓದಿ: ʼಬಿಜೆಪಿʼ ತಂತ್ರಗಾರಿಕೆಗೆ ಬಲಿಯಾಗದಂತೆ ತಡೆಯಲು ಅಭ್ಯರ್ಥಿಗಳ ಸಭೆ ಕರೆದ ʼಕಾಂಗ್ರೆಸ್‌ʼ..!


ಬ್ಯಾಡಗಿ ವಿಧಾನಸಭಾ ಕ್ಷೇತ್ರ:


Byadagi Vidhan Aabha Chunav Result 2023: ಬ್ಯಾಡಗಿಯಲ್ಲಿ ಲಿಂಗಾಯತ ಮತ್ತು ಕುರುಬ ಜನಾಂಗದ ಪ್ರಾಬಲ್ಯವಿದೆ. ಬ್ಯಾಡಗಿ ವಿದಾನಸಭಾ ಕ್ಷೇತ್ರಕ್ಕೆ ಹಾವೇರಿ ತಾಲೂಕಿನ ಕೆಲವು ಗ್ರಾಮಗಳು ಹಾಗೂ ರಾಣೆಬೆನ್ನೂರು ತಾಲೂಕಿನ ಕೆಲ ಗ್ರಾಮಗಳು ಸೇರಿಕೊಂಡಿದೆ. ಈ ಭಾಗದಲ್ಲಿ ಕುರುಬರ ಮತಗಳೇ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ 91,721 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಎಸ್.ಆರ್.ಪಾಟೀಲ್ 70,450 ಮತ ಗಳಿಸುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 2,1271 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ವಿರೂಪಾಕ್ಷಪ್ಪ ಬಳ್ಳಾರಿ - ಬಿಜೆಪಿ


ಬಸವರಾಜ್‌ ಶಿವಣ್ಣನವರ್‌ - ಕಾಂಗ್ರೆಸ್ 


ಹಿರೇಕೆರೂರು ವಿಧಾನಸಭಾ ಕ್ಷೇತ್ರ:


Hirekerur Vidhan Aabha Chunav Result 2023: ‘ಆಪರೇಷನ್ ಕಮಲ’ದಿಂದ ಬಿಜೆಪಿಗೆ ಬಂದು ಸಚಿವರಾಗಿರುವ ಬಿ.ಸಿ.ಪಾಟೀಲ್‍ಗೆ ಕ್ಷೇತ್ರದಲ್ಲಿ ಈ ಬಾರಿ ಜನರ ಒಲವು ಕಡಿಮೆಯಾಗಿದೆ. ಜನರ ಬಳಿ ಒಡನಾಟ ಮತ್ತು ಅಭಿವೃದ್ಧಿ ಕೆಲಸವಾಗಿಲ್ಲವೆಂದು ಆರೋಪ ಸಹ ಕೇಳಿಬಂದಿದೆ. ತಮ್ಮ ಬೆಂಬಲಿಗರಿಗೆ ಹೆಚ್ಚು ಕೆಲಸ ನೀಡಿದ್ದಾರೆಂಬ ಆರೋಪವೂ ಇದೆ. ಇನ್ನು 40% ಕಮಿಷನ್ ಬಿಜೆಪಿ ಸರ್ಕಾರದ ಮೇಲೆ ಆರೋಪ ತುಂಬಾ ಪ್ರಭಾವ ಬಿರಲಿದೆ. ಕ್ಷೇತ್ರದಲ್ಲಿ ಈ ಬಾರಿ ಜನರ ಜೊತೆಗೆ ಬಿ.ಸಿ.ಪಾಟೀಲ್ ಬೇರೆತಿಲ್ಲ. ಈ ಹಿನ್ನೆಲೆ ಈ ಬಾರಿ ಬಿ.ಸಿ.ಪಾಟೀಲ್ ಗೆಲುವು ಸಿಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿದ್ದ ಬಿ.ಸಿ.ಪಾಟೀಲ್ 72,461 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದರು. ಅಂದು ಬಿಜೆಪಿಯಲ್ಲಿದ್ದ ಯು.ಬಿ.ಬಣಕಾರ್  71,906 ಮತ ಗಳಿಸುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 555 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಬಿ.ಸಿ.ಪಾಟೀಲ್‌ - ಬಿಜೆಪಿ


ಯು.ಬಿ.ಬಣಕಾರ್‌ - ಕಾಂಗ್ರೆಸ್


ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ:


Ranebennur Vidhan Aabha Chunav Result 2023: ಮೂಲ ರಾಣೆಬೆನ್ನೂರಿನವರಲ್ಲದಿದ್ದರೂ ಆರ್.ಶಂಕರ್ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡು ಮತದಾರರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಕುರುಬ ಜಾತಿಯ ಶಂಕರ್‍ಗೆ ಕುರುಬ ಜಾತಿಯ ಮತದಾರರು ಕೈ ಹಿಡಿದಿದ್ದರು. ಶ್ರೀಮಂತರಾಗಿರೋ ಆರ್.ಶಂಕರ್ ಕ್ಷೇತ್ರದಲ್ಲಿ ವಯಕ್ತಿಕವಾಗಿ ಖರ್ಚು ಮಾಡಿ ಜನ ಸೇವೆ ಮಾಡಿದ್ದು ಪ್ಲಸ್ ಪಾಯಿಂಟ್ ಆಗಿತ್ತು. ಕಾಂಗ್ರೆಸ್ ಶಾಸಕ ಕೆ.ಬಿಕೋಳಿವಾಡ ವರ್ಚಸ್ಸು ಕುಂದುತ್ತಾ ಬಂದಿತ್ತು. ಕೋಳಿವಾಡರ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಬಿಜೆಪಿಯಿಂದಲೂ ಪ್ರಬಲ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಹೊಸ ಮುಖಕ್ಕೆ ಅವಕಾಶ ನೀಡುವ ದೃಷ್ಟಿಯಿಂದ ರಾಣೆಬೆನ್ನೂರಿನ ಮತದಾರರು ಆರ್.ಶಂಕರ್‍ಗೆ ವಿಜಯಮಾಲೆ ಹಾಕಿದರು.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್.ಶಂಕರ್ 63,910 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಕೆ.ಬಿ.ಕೋಲಿವಾಡ 59,572 ಮತ್ತು ಬಿಜೆಪಿಯ ಬಸವರಾಜ ಕೇಲಗಾರ 48,973 ಮತಗಳನ್ನು ಪಡೆದುಕೊಂಡಿದ್ದರು.  


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಪ್ರಕಾಶ್‌ ಕೋಳಿವಾಡ - ಕಾಂಗ್ರೆಸ್


ಅರುಣ್‌ ಕುಮಾರ್‌ ಪೂಜಾರ್‌ - ಬಿಜೆಪಿ


ಮಂಜುನಾಥ ಗೌಡ ಶಿವಣ್ಣವರ್‌ - ಜೆಡಿಎಸ್


ಆರ್.ಶಂಕರ್ - NCP 


ಸಂತೋಷ್‌ ಕುಮಾರ್‌ ಪಾಟೀಲ್‌ - ಪಕ್ಷೇತರ  


ಇದನ್ನೂ ಓದಿ: ಬಿಜೆಪಿ ಪರ 1 ಕೋಟಿ ರೂ. ಬೆಟ್...! ʼ‌ಕೈʼ ಪಡೆಗೆ ಸವಾಲ್‌ ಹಾಕಿದ ಪುರಸಭಾ ಸದಸ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.