`ನನ್ನನ್ನು ಸೋಲಿಸಿದವರನ್ನು ಕಣ್ಣೀರು ಹಾಕಿಸಿದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ`
H. D. Deve Gowda : ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿಯಿವೆ. ಗೆಲ್ಲುವ ಹುಮ್ಮಸ್ಸಿನಲ್ಲಿ ಚುನಾವಣೆ ಅಖಾಡಕ್ಕೆ ಇಳಿದಿರುವ ಕದನ ಕಲಿಗಳು, ಜನರ ಮನ ತಲುಪಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ.
Karnataka Assembly Election 2023 : ಇದೀಗ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಚುನಾವಣಾ ರಣರಂಗಕ್ಕಿಳಿದಿದ್ದಾರೆ. ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಹಿಂದೆ ತಾವು ಸೋತ ಕ್ಷೇತ್ರದಲ್ಲಿ ಇದೀಗ ಗೆಲ್ಲುವ ಭರವಸೆಯೊಂದಿಗೆ ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಚುನಾವಣಾ ಅಭ್ಯರ್ಥಿಗಳ ಜೊತೆಗೆ ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆಯ ಪಾಠ ಮಾಡಿ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ.
ಪ್ರಚಾರದ ನಂತರ ಮಾತನಾಡಿದ ಅವರು "ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ಸ್ಪರ್ಧಿಸಲು ಆಶಿಸಿರಲಿಲ್ಲ, ರಾಜಕೀಯ ನಿವೃತ್ತಿಯನ್ನು ಬಯಸಿದ್ದೆ, ಆದರೆ ಕೆಲವು ರಾಜಕೀಯ ಮುಖಂಡರು ನನ್ನನ್ನು ಚುನಾವಣಾ ಕಣಕ್ಕೆ ಇಳಿಸಿ ಬಲಿಪಶು ಮಾಡಿದರು" ಎಂದು ಆರೋಪಿಸಿದ್ದಾರೆ
ಇದನ್ನೂ ಓದಿ-ಡಿಜಿಟಲ್ ಮಿಡೀಯಾ ಮೊರೆ ಹೋದ ರಾಜಕೀಯ ಕಲಿಗಳು; ಕಂಗಾಲಾದ ಪ್ರಿಂಟಿಂಗ್ ಪ್ರೆಸ್ ಮಾಲೀಕರು
ಆಡಳಿತಾರೂಢ ಪಕ್ಷದವರು, ಮುಖಂಡರು, ನನ್ನನ್ನು ಬಲಿಪಶುವನ್ನಾಗಿ ಮಾಡಿದ್ದರು. ಅವರಿಗೆಲ್ಲ ಈ ಬಾರಿ ಸರಿಯಾದ ಪಾಠ ಕಲಿಸುವಂತೆ ಹೇಳಿ, ನಾನು ನಿರಾಕರಿಸಿದರೂ ನನ್ನನ್ನು ಚುನಾವಣೆಗೆ ನಿಲ್ಲಿಸಿ ಸೋಲುವಂತೆ ಮಾಡಿವರನ್ನು ಕಣ್ಣೀರು ಹಾಕಿಸಿ, ಅಂದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುವುದೆಂದು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಜೆಡಿಎಸ್ ಉನ್ನತ ಸ್ಥಾನ ಅಂದರೆ 25 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂದು ನಮ್ಮ ನಾಯಕರು ತಿಳಿಸಿದ್ದಾರೆ. ಕಾಂಗ್ರೇಸ್ ಪಕ್ಷಕ್ಕೆ ಮಧುಗಿರಿ ಕ್ಷೇತ್ರದಿಂದಲೇ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-ಬಿಜೆಪಿಗೆ ಮುಸ್ಲಿಂ ಮತಗಳು ಬೇಕಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದು ನಿಜವಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.