Karnataka Assembly Election: 2023ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಟಿಕೆಟ್ ಘೋಷಣೆ ಬಳಿಕ ರಾಜ್ಯದಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಮೂಡಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರ ಸ್ವಾಮಿ ಇಂದು  ರಾಜೀನಾಮೆ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶಿರಸಿಯ ಸ್ಪೀಕರ್‌ ಕಚೇರಿಗೆ ಆಗಮಿಸಿದ ಎಂ ಪಿ ಕುಮಾರ ಸ್ವಾಮಿ  ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಂ ಪಿ ಕುಮಾರ ಸ್ವಾಮಿ ಅವರು, ಮೂರು ಬಾರಿ ಮೂಡಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ ಈ ಬಾರಿ ಬಿಜೆಪಿ ಪಕ್ಷದ ಕೆಲ ನಾಯಕರಿಂದಾಗಿ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಪಕ್ಷದ ನಾಯಕರ ನಡೆಗೆ ಬೇಸರವಾಗಿದ್ದು, ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದರು. 


ಇದನ್ನೂ ಓದಿ- "ನಂಬಿಸಿ ಕತ್ತು ಕುಯ್ಯುವುದು" ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್!: ಕಾಂಗ್ರೆಸ್


ಇದೇ ಸಂದರ್ಭದಲ್ಲಿ ಕೆಲ ನಾಯಕರ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದ ಅವರು,  ನನ್ನನ್ನ ಹುಚ್ಚು ನಾಯಿ ಓಡಿಸಿದ ರೀತಿ ಪಕ್ಷದಿಂದ ಓಡಿಸಿದ್ರು. ಇದಕ್ಕೆಲ್ಲಾ ಸಿ.ಟಿ ರವಿ ಹಾಗೂ ಪ್ರಾಣೇಶ್ ಕಾರಣವಾಗಿದ್ದು, ಹೀನಾಯವಾಗಿ ನನ್ನನ್ನ ನಡೆಸಿಕೊಂಡ್ಡಿದ್ದಾರೆ.  ಅವರೇ ಜನ ಕಳ್ಸಿ, ಅವ್ರೇ ಜಗಳ ಮಾಡ್ಸಿ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರೋ ರೀತಿ ಮಾಡಿದರು. ಅವರಿಂದ ಬಿಜೆಪಿ ಪಕ್ಷ ಉಳಿಸಲ್ಲ. ಸಿ.ಟಿ ರವಿ ಬಿಜೆಪಿಗೆ ಮಾರಕವಾಗಿ ಪರಿಣಮಿಸುತ್ತಾರೆ. ಮುಂದಿನ ಬಾರಿ ಜನರೇ ಅವ್ರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶದ ಮಾತುಗಳನ್ನಾಡಿದರು. 


ಇದನ್ನೂ ಓದಿ- Karnataka Assembly election 2023: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಎಸ್.ಅಂಗಾರ!


ನನಗೆ ಇನ್ನೂ ವಯಸ್ಸಾಗಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಬೇರೆ  ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಇಂದು ಸಂಜೆ ವೇಳೆಗೆ ಮುಂದಿನ ನಡೆಯ ಕುರಿತು ತೀರ್ಮಾನಿಸುತ್ತೇನೆ. ಜೆಡಿಎಸ್ ಪಕ್ಷದವರಿಂದಲೂ ಕರೆ‌ಬಂದಿದ್ದು, ಸ್ವತಂತ್ರವಾಗಿ ಸ್ವರ್ಧಿಸುವುದೋ ಅಥವಾ ಬೇರೆ ಪಕ್ಷ ಸೇರುವುದೋ ಎಂಬುದನ್ನೂ ನಿರ್ಧರಿಸುವುದಾಗಿ ತಿಳಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.