Karnataka Assembly Election 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ಆಗುತ್ತಿದ್ದರೂ ರಾಜ್ಯದ ಕಟ್ಟಕಡೆಯ ಗ್ರಾಮವಾದ ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಇದುವರೆಗೆ ಒಬ್ಬರೂ ಮತ ಹಾಕಿಲ್ಲ.


COMMERCIAL BREAK
SCROLL TO CONTINUE READING

ಹೌದು..., ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ 101 ಅರ್ಹ ಮತದಾರರಿದ್ದಾರೆ. ಆದರೆ, ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಗ್ರಾಮಸ್ಥರು ಅಸಮಾಧಾನಗೊಂಡು ಮತದಾನ ಬಹಿಷ್ಕಾರ ಮಾಡಿದ್ದಾರೆ.


ಇದನ್ನೂ ಓದಿ- ಸಂಭ್ರಮದಿಂದ ಸೋಲಿಗರ ಮತದಾನ: ವನವಾಸಿಗಳನ್ನು ಸೆಳೆಯುತ್ತಿದೆ ಎಥ್ನಿಕ್ ಮತಗಟ್ಟೆ


ಮೂಲಸೌಕರ್ಯ ಸಮಸ್ಯೆ: 
ಮೂಲಸೌಕರ್ಯ ಸಮಸ್ಯೆಯಿಂದಾಗಿ ಬೆಳಗ್ಗೆಯಿಂದಲೇ ಮತಗಟ್ಟೆಯತ್ತ ತಿರುಗಿಯೂ ನೋಡದೇ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಗುಂಡ್ಲುಪೇಟೆ ತಹಶಿಲ್ದಾರ್ ತಳವಾರ್ ಸ್ಥಳಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರ ಜೊತೆ ಮಾತನಾಡಿದ್ದಾರೆ. 


ಇದನ್ನೂ ಓದಿ- Karnataka Election 2023 Updates: ಮತದಾನ ಪ್ರಕ್ರಿಯೆ ಆರಂಭ: ಮತಗಟ್ಟೆಗೆ ಬಂದ ಬೆಕ್ಕು


ಆದರೆ, ತಹಶಿಲ್ದಾರ್ ಮಾತಿಗೆ ಒಪ್ಪದ ಗ್ರಾಮಸ್ಥರು ಎಲ್ಲರ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಯಾರೊಬ್ವರು ಮತ ಹಾಕಿಲ್ಲ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.