ಚಾಮರಾಜನಗರ:‌ ತಮ್ಮಿಚ್ಛೆಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಹುಮ್ಮಸಿನಲ್ಲಿ ಲಕ್ಷ-ಲಕ್ಷ ಹಣ ಹಿಡಿದು ಬಾಜಿಗೆ ಆಹ್ವಾನಿಸಿದ ಇಬ್ಬರಿಗೆ ಖಾಕಿ ಬಿಸಿ ಮುಟ್ಟಿಸಿ ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೆಸಾರ್ಟ್‌ ರಾಜಕೀಯ ಇಲ್ಲ, ಸಂಪೂರ್ಣ ಬಹುಮತ ಪಡೆಯುತ್ತೇವೆ : ಸಿಎಂ ಬೊಮ್ಮಾಯಿ


ಹಣ ಹಿಡಿದು ಪಂಥಕ್ಕೆ ಆಹ್ವಾನಿಸಿದ ಕೊಳ್ಳೇಗಾಲ ತಾಲೂಕು ಬಸ್ತಿಪುರ ಗ್ರಾಮದ ಮಲ್ಲೇಶ್ ಹಾಗೂ ಬಾಜಿ ವೀಡಿಯೋ ಮಾಡಿದ್ದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ ತರಕಾರಿ ವ್ಯಾಪಾರಿಯಾಗಿದ್ದು 8 ಲಕ್ಷ ರೂ. ಹಣದ ಕಂತೆ ಮುಂದೆ ಪಂಥಕ್ಕೆ ಆಹ್ವಾನಿಸಿದ್ದರು.


ಇದನ್ನೂ ಓದಿ: Karnataka Exit Poll Result: ಕರ್ನಾಟಕದಲ್ಲಿ ಯಾರ ಸರ್ಕಾರ ರಚನೆ? ಎಕ್ಸಿಟ್ ಪೋಲ್ ಭವಿಷ್ಯ..!


ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಮೂರು ಲಕ್ಷ, ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ 3 ಲಕ್ಷ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರವಾಗಿ‌ 2 ಲಕ್ಷ ಹಣ ಕಟ್ಟುತ್ತೇನೆ, ಬನ್ನಿ ಬಾಜಿ ಕಟ್ಟಿ ಎಂದು ಮಲ್ಲೇಶ್ ಆಹ್ವಾನಿಸಿದ್ದರು.ಚುನಾವಣಾ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಜೂಜಾಟಕ್ಕೆ ಪ್ರಚೋದನೆ ನೀಡಿದ್ದಾರೆಂದು ಇಬ್ಬರನ್ನು ಬಂಧಿಸಿದ್ದಾರೆ.ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ