ಬೆಂಗಳೂರು : ನಾನು ಕಟ್ಟಿ ಬೆಳೆಸಿದ ಬಿಜೆಪಿಯನ್ನು ತೊರೆದಿದ್ದೇನೆ. ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಅವರು ವ್ಯವಸ್ಥಿತವಾಗಿ ಸಂಚು ರೂಪಿಸಿ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ ಎಂದು ಕಮಲ ಪಾಳಯದ ಮೇಲೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಗುಡುಗಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಳೆಸಿದ ಪಕ್ಷದಲ್ಲೇ ನನಗೆ ಗೌರವ ಸಿಗಲಿಲ್ಲ. ಏಕಾಎಕಿ ಸಣ್ಣ ಮಕ್ಕಳಿಗೆ ಹೇಳುವಂತೆ ನನಗೆ ಕರೆ ಮಾಡಿ, ನಿಮಗೆ ಟಿಕೆಟ್‌ ಇಲ್ಲ ಒಪ್ಪಿಗೆ ಪತ್ರ ಕಳಿಸಿಕೊಡಿ ಅಂತ ಹೇಳ್ತಾರೆ ಅಂದ್ರೆ ಏನ್‌ ಅರ್ಥ. ಒಬ್ಬ ಹಿರಿಯ ನಾಯಕನಿಗೆ ನೀಡಬೇಕಾದ ಕನಿಷ್ಠ ಗೌರವವನ್ನೂ ಸಹ ಬಿಜೆಪಿ ನನಗೆ ನೀಡಲಿಲ್ಲ ಎಂದು ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ಡಿಕೆ ಸಹೋದರರು ಒಕ್ಕಲಿಗ ಜನಾಂಗಕ್ಕೆ ಕಳಂಕ..! ಹಣ ಪಡೆದು ಟಿಕೆಟ್‌ ನೀಡಿದ್ದಾರೆ


ಅಲ್ಲದೆ, ನನಗೆ ಕೊನೆಗಳಿಗೆಯಲ್ಲಿ ಯಾವುದೇ ಪೂರ್ವ ಮಾಹಿತಿ ನೀಡದೆ ಏಕಾಏಕಿ ನನಗೆ ಟಿಕೆಟ್ ಇಲ್ಲ ನಿಮ್ಮ ಒಪ್ಪಿಗೆ ಪತ್ರವನ್ನು ಕಳಿಸಿ ಕೊಡಿ ಅಂತ ಹೇಳುವ ಮೂಲಕ ಹೀನಾಯವಾಗಿ ಬಿಜೆಪಿಯವರು ನಡೆಸಿಕೊಂಡರು. ನನಗೆ ಬಹಳ ಬೇಜಾರ ಆಗಿದೆ. ಇದು ಹಿರಿಯ ನಾಯಕನ ಜೊತೆ ನಡೆದುಕೊಳ್ಳುವ ರೀತಿಯಲ್ಲ. ಹೀಗಾಗಿ ನನಗೆ, ನಮ್ಮ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.


ಯಾವ ಪಕ್ಷವನ್ನು ಕಟ್ಟಿ ಬೆಳೆಸಿದ್ವಿ ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಗೆ ಹಾಕ್ತಾರೆ ಅಂದ್ರೆ ನಂಗೆ ಬೇರೆ ಯಾವುದೇ ದಾರಿಯಿಲ್ಲ. ಹಾಗಾಗಿ ಇವತ್ತು ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಪಕ್ಷ ಮುಖ್ಯ ವ್ಯಕ್ತಿ ಅಲ್ಲ ಎಂಬ ಸಿದ್ಧಾಂತ ನಂಬಿ ಪಕ್ಷವನ್ನು ಬೆಳೆಸಿದವರು, ಆದರೆ ಇಂದು ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಅವರೆಲ್ಲಾ ವ್ಯವಸ್ಥಿತವಾಗಿ ಸಂಚು ರೂಪಿಸಿ ನನ್ನನ್ನು ಹೊರಗೆ ಹಾಕಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ ವಾಗ್ದಾಳಿ ನಡೆಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ