ಹುಬ್ಬಳ್ಳಿ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ ಹಿನ್ನೆಲೆ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಮತಯಾಚನೆ ಮಾಡಿದರು. ನಾಮಪತ್ರ ಸಲ್ಲಿಕೆ ನಂತರ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಕಾಂಗ್ರೆಸ್ ನಾಯಕರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಜವಾಬ್ದಾರಿ ಕೊಟ್ಟಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗ್ತಾ ಇದೆ. ಸೆಂಟ್ರಲ್ ಕ್ಷೇತ್ರದಲ್ಲಿಯೂ ವ್ಯಾಪಕ ಬೆಂಬಲ ಸಿಗ್ತಾ ಇದೆ ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಶೆಟ್ಟರ್ ಸೋಲಿಸಿ ಅಭಿಯಾನ ಮಾಡ್ತಿದಾರೆ. ಶೆಟ್ಟರ್ ಸೋಲಿಸೋದ್ರಲ್ಲಿ ಬಹಳಷ್ಟು ಜನರಿಗೆ ಖುಷಿ ಇದೆ. ಆದ್ರೆ ಸೆಂಟ್ರಲ್ ಕ್ಷೇತ್ರದ ಮತದಾರರು ಕೈ ಬಿಡಲ್ಲ. ಇವತ್ತಿಗೂ ನಾಯಕರನ್ನು ಮುಗಿಸೋ ಷಡ್ಯಂತ್ರ ಮುಂದುವರಿದಿದೆ. ಯಾವ ಕಾರಣಕ್ಕೆ ಬಿ.ಎಸ್.ವೈ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರಿ. ಈಗ ಚುನಾವಣೆಯಲ್ಲಿ ಅವರ ಉಪಯೋಗ ತಗೋತಿದೀರಿ. ಹಾಗಿದ್ದರೆ ಬಿ.ಎಸ್.ವೈ ಅವರನ್ನು ಸಿಎಂ ಸ್ಥಾನದಲ್ಲಿ ಏಕೆ ಮುಂದುವರಿಸಲಿಲ್ಲ. ಹಿರಿಯ ನಾಯಕರನ್ನು ಮುಗಿಸೋ ಷಡ್ಯಂತ್ರ ನಡೆದಿದೆ ಎಂದು ಹೇಳಿದರು. 


ಇದನ್ನೂ ಓದಿ: ಮುಸ್ಲಿಂರ ಸಹಕಾರ ಬೇಕು; ವಿಶ್ವಾಸ ಬಂದಾಗ ಅವಕಾಶ ಮಾಡಿಕೊಡುತ್ತೇವೆ: ಬಿಎಸ್ ಯಡಿಯೂರಪ್ಪ


ಬಿ.ಎಲ್.ಸಂತೋಷ್ ಹೇಳಿಕೆ ಫೇಕ್ ಅಂತಾರೆ. ಸರ್ಕಾರವೇ ನಿಮ್ಮದಿದೆ. ಹಾಗಾದ್ರೂ ತನಿಖೆ ಏಕೆ ಮಾಡಿಸ್ತಿಲ್ಲ. ಯಾವುದು ಅನಾನುಕೂಲ ಆಗುತ್ತೋ ಅದನ್ನು ಫೇಕ್ ಅನ್ನೋದು. ನಳಿನ ಕುಮಾರ್ ಕಟೀಲ್ ದೂರವಾಣಿ ಸಂಭಾಷಣೆ ವೈರಲ್ ಆಯ್ತು. ನಂತರ ಅದು ಫೇಕ್ ಅಂತ ಹೇಳಿದ್ರು. ಆದ್ರೆ ಇದುವರೆಗೂ ಅದರ ಬಗ್ಗೆ ತನಿಖೆ ಪೂರ್ಣಗೊಂಡಿಲ್ಲ. ಫೇಕ್ ಅನ್ನೋದಾದಾದ್ರೆ ಯಾರುಗಾದ್ರೂ ಶಿಕ್ಷೆಯಾಗಬೇಕಿತ್ತಲ್ಲವಾ..? ಗುಲಾಮನಾಗಿ ಇರೋದನ್ನು ಧಿಕ್ಕರಿಸಿ ಹೊರಗೆ ಬಂದಿದ್ದೇನೆ. ಬಿಜೆಪಿ ಒಬ್ಬನೇ ವ್ಯಕ್ತಿಯ ಕೈಯಲ್ಲಿದೆ. ಕೇಂದ್ರ ಸಂಪುಟದಲ್ಲಿ ಯಾರಿಗೆ ಎಷ್ಟು ಆದ್ಯತೆ ಸಿಕ್ಕಿದೆ ಅನ್ನೋದನ್ನ ನೀವೇ ನೋಡಿ. ಗುಲಾಮಿ ಸಂಸ್ಕೃತಿಗೆ ಒಗ್ಗಿಕೊಳ್ಳೋರು ಮಾತ್ರ ಬಿಜೆಪಿಯಲ್ಲಿರಲು ಸಾಧ್ಯ. ಜೀ ಹುಜೂರ್ ಅನ್ನೋರು ಮಾತ್ರ ಬಿಜೆಪಿಯಲ್ಲಿರಬೇಕೆಂದು ಷಡ್ಯಂತ್ರ ಎಂದು ಹೇಳಿದರು. 


ಬಿ.ಎಸ್.ವೈ ಬೇರೆ ಪಕ್ಷ ಕಟ್ಟಲು ಬಸವರಾಜ ಬೊಮ್ಮಾಯಿ ಕಾರಣ. ಬೊಮ್ಮಾಯಿ, ಮುರುಗೇಶ್ ನಿರಾಣಿ ಬೇರೆ ಪಕ್ಷ ಕಟ್ಟಲು ಕುಮ್ಮಕ್ಕು ಕೊಟ್ರು. ಆದ್ರೆ ಕೆ.ಜೆ.ಪಿ ಮಾಡಿದ ನಂತರ ಅವರ ಜೊತೆಗೆ ಹೋಗಲಿಲ್ಲ. ಕಾಂಗ್ರೆಸ್ ಒಂದು ಕೆಸರು ಅಂತ ಬೊಮ್ಮಾಯಿ ಹೇಳ್ತಾರೆ. ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ತಪ್ಪು ಮಾಡಿದಾರೆ ಅಂತಾರೆ. 2012 ರಲ್ಲಿ ಬೊಮ್ಮಾಯಿ ಕಾಂಗ್ರೆಸ್ ಗೆ ಹೋಗೋಕೆ ಹೊರಟಿದ್ರು. ಆಗ ಕಾಂಗ್ರೆಸ್ ಹೊಲಸು ಆಗಿರಲಿಲ್ವೆ ಎಂದರು. 


ಇದನ್ನೂ ಓದಿ: ರಾಜಧಾನಿಯ ಮಹಿಳೆಯರಿಗೆ ಪ್ರತೀ ಕ್ಷೇತ್ರದಲ್ಲಿ ಪಿಂಕ್ ಬೂತ್ ನಿರ್ಮಾಣ


ರೌಡಿಶೀಟರ್ ಗೆ ಬಿಜೆಪಿ ಟಿಕೆಟ್ ಕೊಡುತ್ತೆ. ಖರ್ಗೆ ಕುಟುಂಬವನ್ನು ಕೊಂದು ಹಾಕ್ತೇನೆ ಅನ್ನೋನಿಗೆ ಸಾಥ್ ಕೊಡ್ತಾರೆ. ಸಿಡಿ ಕೇಸ್ ನಲ್ಲಿ ಸ್ಟೇ ತಂದವರಿಗೆ ಟಿಕೇಟ್ ಕೊಡ್ತಾರೆ. ಹೀಗಿರುವಾಗ ಬಿಜೆಪಿ ಐಡಿಯಾಲಜಿ ಎಲ್ಲಿದೆ. ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮಾಡಿದಾರೆ. ಚುನಾವಣಾ ಕ್ಯಾಂಪೇನ್ ಮಾಡುವಾಗ ಸಿಎಂ, ಬಿಎಸ್ ವೈ ಮತ್ತಿತರರು ಯಾಕೆ ಇರಲಿಲ್ಲ. ಸದಾನಂದಗೌಡರನ್ನು ಮೋದಿ ಕೆಳಗಿಳಿಸಿ ಕಳಿಸಿದ್ದಾರೆ ಎಂದು ಹೇಳಿದರು. 


ಹಾಗಿದ್ರೆ ನಿಮ್ಮ ಪ್ರಾತಿನಿಧ್ಯತೆ ಏನು? ನಾನು ಸಿಎಂ ಸ್ಥಾನಕ್ಕೂ ಕ್ಲೈಂ ಮಾಡಲಿಲ್ಲ. ಆದರೂ ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟರು. ಒತ್ತಾಯ ಪೂರ್ವಕವಾಗಿ ನನ್ನ ಬೆಂಬಲಿಗರನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸಿದರು. ರಾಜಕಾರಣದಲ್ಲಿ ಒಳ ಹೊಡೆತ, ಹೊರ ಹೊಡೆತಗಳಿರುತ್ತೆ. ಐಟಿ, ಇಡಿ ರೈಡ್ ಗೆ ಹೆದರಿ ಓಪನ್ ಆಗಿ ಬರ್ತಿಲ್ಲ. ಈ ಚುನಾವಣೆ ಒಳ ಹೊಡೆತದ ಚುನಾವಣೆ. ಒಳಗಿಂದೊಳಗೆ ನನಗೆ ಬೆಂಬಲ ಸಿಗ್ತಾ ಇದೆ ಎಂದು ಹೇಳಿದರು. 


ನಾನು ರೂಪಿಸಿದ ಯೋಜನೆಗಳ ಜಾರಿಗೆ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿತು. ಸಾವಿರಾರು ಕೋಟಿ ಹಣ ತಂದೆ. ಕೆಲ ಯೋಜನೆ ಅಪೂರ್ಣವಾಗಿವೆ. ಜನ ಹಿಂದಿನ ವಿಶ್ವಾಸವನ್ನೇ ತೋರುತ್ತಿದ್ದಾರೆ. ಹುಬ್ಬಳ್ಳಿಯನ್ನು ಪರಿಪೂರ್ಣ ನಗರ ಮಾಡೋದೇ ನನ್ನ ಗುರಿ. ಅತಿ ಹೆಚ್ಚು ಮಾರ್ಜಿನ್ ನಿಂದ ಗೆಲ್ತೇನೆ
ಬಿಜೆಪಿಯ ಆಂತರಿಕ ಸಭೆಗಳಲ್ಲಿ ಬಹಳಷ್ಟು ಜನ ನಾನು ಸೋಲಬೇಕೆಂದು ಕನಸು ಕಾಣ್ತಿದಾರೆ. ಈ ಬಾರಿಯೂ ಅದೇ ರೀತಿಯ ಷಡ್ಯಂತ್ರ ನಡೆದಿದೆ ಎಂದು ಹೇಳಿದರು. 


ಇದನ್ನೂ ಓದಿ: ವಿಧಾನಸಭೆ ಚುನಾವಣೆ ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ: ವಿವರ ಹೀಗಿದೆ ನೋಡಿ..


ಸೋಲಿನ ಕಾರಣಕ್ಕೆ ಶೆಟ್ಟರ್ ಗೆ ಟಿಕೇಟ್ ನೀಡಿಲ್ಲ ಎಂದ ಸಂಕೇಶ್ವರ್ ಹೇಳಿಕೆ ವಿಚಾರ, ಬೇರೆಯವರ ಒತ್ತಡದಿಂದ ವಿಜಯ ಸಂಕೇಶ್ವರ್ ಹೇಳಿಕೆ ನೀಡ್ತಿದಾರೆ. ಅದರ ಬಗ್ಗೆ ನಾನು ಹೆಚ್ಚು ಹೇಳಲ್ಲ. ಫ್ಲಡ್ ಗೇಟ್ ಓಪನ್ ಆಗಿದೆ. ಒಳ ಹೊಡೆತ ಆರಂಭಗೊಂಡಿದೆ. ಅದನ್ನು ತಡೆದುಕೊಳ್ಳೋ ಶಕ್ತಿ ಬಿಜೆಪಿಗೆ ಇಲ್ಲ.
ಜನರ ಬಿರುಗಾಳಿಯಲ್ಲಿ ಬಿಜೆಪಿಯವರು ಕೊಚ್ಚಿಕೊಂಡು ಹೋಗ್ತಾರೆ. ಕಾಂಗ್ರೆಸ್ ನಾಯಕರಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತಿದಾರೆ. ಇದು ನನ್ನ ಕೊನೆ ಚುನಾವಣೆ. ಇದು ನನ್ನ ವೈಯಕ್ತಿಕ ನಿರ್ಧಾರ. 70 ವರ್ಷಗಳ ಮಾತ್ರ ಚುನಾವಣಾ ರಾಜಕಾರಣದಲ್ಲಿ ಇರಬೇಕೆಂದಿದ್ದೇನೆ. ಕ್ರಿಯಾಶೀಲ ರಾಜಕಾರಣಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿದರು.


ಜೋಶಿ ಅವರು ಕೇಳ್ತಾರೆ ಅಂತ ನಾನು ಉತ್ತರ ಕೊಡ್ತಾ ಹೋಗಲ್ಲ. ಅವರು ನಮ್ಮ ಬೆಂಬಲಿಗನ್ನು ಹೆದರಿಸಿ, ಬೆದರಿಸ್ತಿದಾರೆ. ನೀವು ಪ್ರಾಮಾಣಿಕವಾಗಿ ಪ್ರಚಾರ ಮಾಡಿ. ಅದನ್ನು ಬಿಟ್ಟು ಬೆಳಿಗ್ಗೆಯಿಂದ ಸಂಜೆವರೆಗೆ ಒತ್ತಡ ಹಾಕ್ತಿದಾರೆ. ಈ ರೀತಿ ದಮ್ ಕೊಡೋದು ಸರಿಯಲ್ಲ. ಅವರ ವರ್ತನೆಯಿಂದ ಜನರಲ್ಲಿ ಆಕ್ರೋಶ ಜಾಸ್ತಿಯಾಗುತ್ತಿದೆ. ಕೇಂದ್ರ ಸಚಿವರಾಗಿದ್ದುಕೊಂಡು ಖಾಯಂ ಟಿಕಾಣಿ ಇಲ್ಲಿಯೇ ಹಾಕಿದಾರೆ. ನನಗೆ ಯಾರ ಭಯವೂ ಇಲ್ಲ ಎಂದು ಹೇಳಿದರು.


ಇದನ್ನೂ ಓದಿ: 


ಇದು ಸೆಮಿಪೈನಲ್. ಲೋಕಸಭೆ ಚುನಾವಣೆ ಫೈನಲ್ ಮ್ಯಾಚ್ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ. 2024 ಚುನಾವಣೆಯಲ್ಲಿಯೂ ಅದರ ಪರಿಣಾಮ ಆಗುತ್ತೆ. ಕೆಲವೊಬ್ಬರು ಹೇಳಿದ್ರೆ ಲಿಂಗಾಯತರು ಕಾಂಗ್ರೆಸ್ ಗೆ ಮತ ಹಾಕಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, 50 - 100 ಜನರನ್ನು ಸೇರಿಸಿ ಲಿಂಗಾಯತರ ಸಭೆ ಮಾಡಿದ್ರು. ಹಾಗಾದ್ರೆ ಅದು ನಿಜವಾದ ಲಿಂಗಾಯತರ ಸಭೆಯಾ? ಅಲ್ಲಿ ಕೈಗೊಂಡ ನಿರ್ಧಾರದಂತೆಯೇ ಎಲ್ಲವೂ ಆಗುತ್ತಾ ಎಂದರು.


ಕಾಂಗ್ರೆಸ್ ನಲ್ಲಿ ಕೊನೆವರೆಗೂ ಇರ್ತೇನೆ.ಪಕ್ಷ ಮತ್ತು ವ್ಯಕ್ತಿ ಎರಡೂ ಬೇಕು. ಮೋದಿ ರೋಡ್ ಶೋ ಮಾಡ್ತಿದಾರೆ. ಮೋದಿ ಮೇಲೆಯೇ ಇವ್ರು ಅವಲಂಬಿತರಾಗಿದ್ದಾರೆ. ಹೊಸ ಮನೆಗೆ ಹೋಗಿದ್ದೇನೆ. ಅಲ್ಲಿ ಸಿಎಂ ಸ್ಥಾನಕ್ಕೆ ನಾನು ಕ್ಲೈಂ ಮಾಡಲ್ಲ. ಕಾಂಗ್ರೆಸ್ ನಲ್ಲಿದ್ದವರೇ ಸಿಎಂ ಆಗಲಿ. ಯಾವ ಪಕ್ಷದಲ್ಲಿರುತ್ತೇನೋ ಅದಕ್ಕೆ ಬದ್ಧವಾಗಿರ್ತೇನೆ. ನಮ್ಮ ಬೆಂಬಲಿಗರ ಮೇಲೂ ಐಟಿ ರೈಡ್ ಗುಮ್ಮ ಇದೆ. ನಮಗೂ ಹೆದರಿಕೆ ಹಾಕಿದಾರೆ. ಬೆದರಿಕೆ ತಂತ್ರ ನಡೀತಿದೆ. ಬೆಂಬಲಿಗರು, ಅಭಿಮಾನಿಗಳ ಮೇಲೆ ಒತ್ತಡ ತರ್ತಿದಾರೆ ಎಂದು ಹೇಳಿದರು.


ಇದನ್ನೂ ಓದಿ: ಬಿಜೆಪಿಯ ಅಭಿವೃದ್ಧಿ, ಕಾಂಗ್ರೆಸ್‌ನ ಒಡೆದು ಆಳುವ ನೀತಿ ನಡುವೆ ಚುನಾವಣೆ ನಡೆದಿದೆ - ಸಿಎಂ ಬೊಮ್ಮಾಯಿ‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.