ಕೊಪ್ಪಳ : 12 ವರ್ಷಗಳ ರಾಜಕೀಯ ವನವಾಸದಿಂದ ಬಂದಿದ್ದೇನೆ. ರಾಜಕೀಯ ಎಂದರೆ ಮೋಸ,ವಂಚನೆ ಮಾಡಿ ತುಳಿದು ಬೆಳೆಯುವುದು. ನಾನು ರಾಜಕೀಯ ಬಿಟ್ಟು ಮನೆಯಲ್ಲಿ ಸುಮ್ಮನೆ ಇದ್ದೆ. ನಾನು ಬೆಳೆಸಿದ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ. ನಾನು ಬಳ್ಳಾರಿಯಲ್ಲಿ ಇದ್ದರೆ ನನ್ನನ್ನು ಓಡಾಡಿಸಬೇಕಾಗುತ್ತದೆ ಎಂದು ಹೇಳಿ ನನ್ನನ್ನು ಹೊರಗಡೆ ಹಾಕಿದರು. ನನ್ನ ಮಗಳಿಗೆ ಹೆರಿಗೆ ಆದಾಗ ಸಿಬಿಐ ಅಧಿಕಾರಿಗಳು ಮನೆಗೆ ಬಂದು ಮೊಮ್ಮಗಳ ಫೋಟೋ ತೆಗೆದರು ಎಂದು ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಾನು ಬಡತನದಲ್ಲಿ ಹುಟ್ಟಿ ಬೆಳೆದವನು. ಸಾಮಾನ್ಯ ಪೊಲೀಸ್ ಪೇದೆಯ ಮಗ. ಸಮಯ ಬಂದಾಗ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಾನು‌ ಮುಟ್ಟಿದ್ದು ಮಣ್ಣು ಅದು ನಿಜವಾಗಿಯೂ ಬಂಗಾರ ಆಯಿತು. ಬಳ್ಳಾರಿಯಲ್ಲಿ 50 ಸಾವಿರ ಬಡವರಿಗೆ ಮದುವೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. 


ನಾನು ಜಾತಿ ಎಂದಿಗೂ ನೋಡಿಲ್ಲ. 25 ವರ್ಷಗಳ ಹಿಂದೆ ಚನ್ನಬಸವತಾತನ ಆಶೀರ್ವಾದ ಆಗಿತ್ತು. 2008 ರಲ್ಲಿ ಇಂದಿನ ಶಾಸಕ ನನ್ನ ಭಾಷಣದಿಂದ ಗೆದ್ದಿದ್ದರು. ಇಕ್ಬಾಲ್ ಅನ್ಸಾರಿ,ಪರಣ್ಣ ಮುನವಳ್ಳಿ ಯಾವ ಲೆಕ್ಕಕ್ಕೂ ಇಲ್ಲ. ನನಗಷ್ಟೇ ಅಲ್ಲ ಕೆ ಆರ್ ಪಿ ಪಿ ಕಾರ್ಯಕರ್ತನಿಗೂ ಲೆಕ್ಕಕ್ಕೆ ಇಲ್ಲ. ಕೆ ಆರ್ ಪಿ ಪಿ ಪ್ರಧಾನ ಕಚೇರಿ ಗಂಗಾವತಿಯಲ್ಲಿ ಕಟ್ಟುತ್ತೇನೆ ಎಂದಿದ್ದಾರೆ. 


ಇದನ್ನೂ ಓದಿ: "ಪ್ರಜಾತಂತ್ರದ ಹತ್ಯೆ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರ ಹತ್ಯೆಯ ಸಂಚು ಈಗ ಬಯಲಾಗುತ್ತಿದೆ"


ಗಂಗಾವತಿ ಬಾಂಬೆ ಆಗುವ ರೀತಿ ಅಭಿವೃದ್ಧಿ ಮಾಡುತ್ತೇನೆ. ಗಂಗಾವತಿ ಕ್ಷೇತ್ರ ಶ್ರೀರಾಮ ಚಂದ್ರರು ಚಾತುರ್ಮಾಸ ಮಾಡಿದ ಕ್ಷೇತ್ರ. ಡಿಸೆಂಬರ್ 25 ರಂದು ನಾನು ಗಂಗಾವತಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದೆ. ನನ್ನ ಬಾಯಲ್ಲಿ ಮಾತು ಬಂದರೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಾಣ ಬಿಡುತ್ತೇನೆ, ಮಾತು ಬಿಡುವುದಿಲ್ಲ. ಹೊಂದಾಣಿಕೆ‌ ಇಲ್ಲದ್ದಕ್ಕೆ ನನಗೆ ಈ ಪರಿಸ್ಥಿತಿ ಬಂದಿದೆ. ಬರುಕಿದ್ದರೆ ಜನಾರ್ಧನರೆಡ್ಡಿ ತರಹ ಬದುಕಬೇಕು ಎನ್ನುವ ರೀತಿ ಬದುಕುತ್ತೇನೆ ಎಂದು ಹೇಳಿದ್ದಾರೆ. 


ನನ್ನ‌ ಇತಿಮಿತಿಗಳು ನನಗೆ ಗೊತ್ತು. ರಾಜಕೀಯ ಭದ್ರ ಬುನಾದಿ ಹಾಕಿಕೊಳ್ಳಲು 2028 ರಲ್ಲಿ ಗಂಗಾವತಿಂದಲೇ ಸ್ಪರ್ಧೆ ಮಾಡುತ್ತೇನೆ. ಆಂಧ್ರದಲ್ಲಿ ಜಗನ್ ಗೆದ್ದ ರೀತಿ,ತೆಲಂಗಾಣ ದಲ್ಲಿ ಕೆ ಸಿ ಆರ್. ತಮಿಳು ನಾಡಿನಲ್ಲಿ ಪ್ರಾದೇಶಿಕ ಪಕ್ಷ ಗೆದ್ದಂಗೆ ನಾನು ಗೆಲ್ಲುತ್ತೇನೆ. ಯಾರು ಏನೇ ಮಾತನಾಡಿದರೂ ನಾನು ತೆಲೆಕೆಡಸಿಕೊಳ್ಳುವುದಿಲ್ಲ. ಬೇರೆ ಯವರು ಪಕ್ಷ ಮಾಡಿ ಇನ್ನೊಬ್ಬರ ಮುಂದೆ ತೆಲೆ ತೆಗ್ಗಿಸಿದಂಗೆ ನಾನು ತೆಲೆ ಬಗ್ಗಿಸುವುದಿಲ್ಲ ಎಂದು ಹೇಳಿದ್ದಾರೆ. 


ಎರಡು ರಾಷ್ಟ್ರೀಯ ಪಕ್ಷಗಳು ನನ್ನ ಮನೆ ಬಂದು ತೆಲೆ ಬಗ್ಗಿಸುವುದನ್ನು ನೀವು ನೋಡುತ್ತೀರಿ. ನಾನು ಜಾತಕ,ಭವಿಷ್ಯದ ಮೇಲೆ ನಂಬಿಕೆ ಇಟ್ಟವನು ಅಲ್ಲ. ನನ್ನ‌ ತಂದೆಯವರು ಜಾತಕ‌ ನಂಬುತ್ತಿದ್ದರು. ನನ್ನ‌ ಜಾತಕದಲ್ಲಿ 43 ವರ್ಷದಲ್ಲಿ ಬಂಧನ ಆಗುತ್ತದೆ ಎಂದು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು. ನನ್ನ ಟೈಂ ಈಗ ಸ್ಟಾರ್ಟ್ ಆಗಿದೆ. ಜನಾರ್ಧನರೆಡ್ಡಿ, ‌ಕೆ ಆರ್ ಪಿ ಪಿ ಬೆಳವಣಿಗೆಯನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ: ʼಹತ್ತು ಮಣಿಕಂಠರನ್ನು ನೋಡಿದ್ದೇನೆʼ : ಬಿಜೆಪಿ ಅಭ್ಯರ್ಥಿ ಬೆದರಿಕೆಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌


ನಿಮ್ಮ ಮೊಮ್ಮಗಳು ಅದೃಷ್ಟ ಇದ್ದಾಳೆ ಎಂದು ಜ್ಯೋತಿಷ್ಯಿಯೊಬ್ಬರು ಹೇಳಿದ್ದಾರೆ. ನಿಜವಾಗಿಯೂ ನನ್ನ ಮೊಮ್ಮಗಳು ನನಗೆ ಕೂಡಿ ಬಂದಿದ್ದಾಳೆ. ಜಗನ್ಮಾತೆ ನನ್ನ ಮೊಮ್ಮಗಳ ರೂಪದಲ್ಲಿ ಬಂದಿದ್ದಾಳೆ. ಗಂಗಾವತಿ ಕ್ಷೇತ್ರಕ್ಕೆ ಬೇಕಾಗಿರುವುದು ನೆಮ್ಮದಿ, ಅಭಿವೃದ್ಧಿ ಎರಡನ್ನೂ ಕೊಡಲು ಜನಾರ್ಧನರೆಡ್ಡಿ ಬಂದಿದ್ದಾನೆ. ಯಾವ ನಗರದಲ್ಲಿ ಶಾಂತಿ,ನೆಮ್ಮದಿ‌ ಇರುತ್ತೋ ಆ ನಗರ ಮಹಾನಗರ ಆಗುತ್ತೆ ಎಂದು ಹೇಳಿದ್ದಾರೆ. 


ರಾಜಕೀಯ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳು ಬೆಂಕಿ‌ಹಚ್ಚುವ ಕೆಲಸ ಮಾಡುತ್ತಿವೆ. 5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡುತ್ತೇನೆ. ಅಮೆರಿಕಕ್ಕೆ ಹೋಗಿ ನೋಡಿಕೊಂಡು ಬರುವಂತೆ ಅಂಜನಾದ್ರಿ ಅಭಿವೃದ್ಧಿ ಮಾಡುತ್ತೇನೆ. 26 ರಾಜ್ಯದ ಸಿಎಂಗಳಿಗೆ ಕೈಮುಗಿದು ಯಾತ್ರಿ ನಿವಾಸಗಳನ್ನು ಕಟ್ಟುತ್ತೇನೆ. ಭೂಲೋಕ ಸ್ವರ್ಗದಲ್ಲಿ ಇದ್ದೇವೆ ಎನ್ನುವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ಗಂಗಾವತಿ ವಿಶ್ವದ ಗಮನಸೆಳೆಯುವ ರೀತಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ. 


ಅಭಿವೃದ್ದಿಗಾಗಿ ಹೆಚ್ಚಿನ ಸಮಯ ಕಾಯುವ ಪರಸ್ಥಿತಿಯಲ್ಲಿ ನಾನು ಇಲ್ಲ. ಈ ಎಲ್ಲ ಅಭಿವೃದ್ಧಿಯನ್ನು 5 ವರ್ಷದಲ್ಲಿ ಮಾಡುತ್ತೇನೆ. ಬಡವರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ಕಟ್ಟಿಸಿಕೊಡುತ್ತೇನೆ. ಗಂಗಾವತಿ ಕ್ಷೇತ್ರದಲ್ಲಿ ಹಲವು ಭಾಗದಲ್ಲಿ ಇನ್ನೂ ಬಡತನ ಇದೆ. ತುಂಗಭದ್ರಾ ನದಿಯ ಅಡಿಯಲ್ಲಿ ನಾಲ್ಕು ಸಮಾನಾಂತರ ಜಲಾಶಯ‌ ನಿರ್ಮಾಣ ಮಾಡುತ್ತೇನೆ. ಈ ಮೂಲಕ  ಇರಕಲಗಡ್,ಕಿನ್ನಾಳ ಭಾಗವನ್ನು ನೀರಾವರಿ ಮಾಡುತ್ತೇ‌ನೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ: ಮೋದಿ ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡ್ತಿದ್ದಾರೆ - ಹೆಚ್‌ಡಿ ಕುಮಾರಸ್ವಾಮಿ


ಉತ್ತರ ಕರ್ನಾಟಕ ಪಂಚ ನದಿಗಳ‌ ನಾಡು. ಆದರೆ ಅಭಿವೃದ್ಧಿ ಆಗಿದ್ದು ಮಾತ್ರ ದಕ್ಷಿಣ ಕರ್ನಾಟಕ. ಜನಾರ್ಧನರೆಡ್ಡಿ ಅಂದರೆ ಶ್ರೀಮಂತ,ಹೆಲಿಕ್ಯಾಪ್ಟರ್ ಅಂತ ನನ್ನನ್ನು ಬಿಂಬಿಸಲಾಗಿದೆ. ಕಲಬುರಗಿ, ಶಿವಮೊಗ್ಗ, ಮೈಸೂರು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಜನಾರ್ಧನರೆಡ್ಡಿ. ಕೆ ಆರ್ ಪಿ ಪಿ ಅಧಿಕಾರಕ್ಕೆ ಬಂದರೆ ಹೆಲಿಟೂರಿಸಂ ಆರಂಭ ಮಾಡುತ್ತೇನೆ. ಗಂಗಾವತಿಯಲ್ಲಿ ರೆಡಿಮೇಡ್ ಬಟ್ಟೆ ತಯಾರು ಮಾಡುವ ಅಂತರಾಷ್ಟ್ರೀಯ ಫ್ಯಾಕ್ಟರಿ ಹಾಕುತ್ತೇನೆ. ಮನೆಯಲ್ಲಿ ಕುಳಿತು 30 ರಿಂದ 40 ಸಾವಿರ ದುಡಿಯುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. 


ಎರಡು ರಾಷ್ಟ್ರೀಯ ಪಕ್ಷಗಳು ಗೆಲ್ಲಲು ಜಾತಿ ಮಾಡುತ್ತಿದ್ದಾರೆ. ಅವರನ್ನು ಫುಟ್ಬಾಲ್ ಆಡುವಂತೆ ಆಡಬೇಕು. ಜನಾರ್ಧನರೆಡ್ಡಿ ಬಂದಿರುವ ನೆಲವಿದು. ಇಲ್ಲಿ ಯಾರೂ ಯೋಚನೆ ಮಾಡಬೇಡಿ. ನೀವು ಮಾತನಾಡುವಾಗ ಜನಾರ್ಧನರೆಡ್ಡಿ ಮಾತನಾಡುತ್ತಾನೆ ಎಂದುಕೊಂಡು ಮಾತನಾಡಿ. ಒಬ್ಬ ಎಂ ಎಲ್ ಎ ಮನೆಗೆ ಹೋದರೆ ಆತ ರಾತ್ರಿ ಎದ್ದಿರುತ್ತಾನೆ ಎಂದು ಹೇಳುತ್ತಾರೆ. 7 ಜಿ.ಪಂ‌ ಕ್ಷೇತ್ರಗಳಲ್ಲಿ ಜನಸಂಪರ್ಕ ಕಚೇರಿ ತೆಗೆಯುತ್ತೇನೆ. ದುಡ್ಡು ತಂದು ಪೋಸ್ಟಿಂಗ್ ಹಾಕುತ್ತಾರೋ ಆತ ಯಾರ ಮಾತನ್ನೂ ಕೇಳುವುದಿಲ್ಲ. ಅವರಿಗೆ ಕಷ್ಟ ಇದ್ದರೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.