ಬೆಂಗಳೂರು: ಕಳೆದ 15 ದಿನದಲ್ಲಿ ಚುನಾವಣಾ ಆಕ್ರಮವು ಬರೋಬ್ಬರಿ 150 ಕೋಟಿ ರೂ. ಮುಟ್ಟಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ನಗದು ಸೇರಿ 5.24 ಕೋಟಿ ರೂ. ಮೌಲ್ಯದ  ವಸ್ತುಗಳನ್ನು ಸೀಜ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವರುಣಾ ಬಳಿಕ ಚಾಮರಾಜನಗರದಲ್ಲಿ ತಂತ್ರ ರೂಪಿಸಲು ಮುಂದಾದ ಸೋಮಣ್ಣ 


ಶುಕ್ರವಾರ 3.65 ಕೋಟಿ ರೂ. ನಗದು, 9.97 ಲಕ್ಷ ರೂ. ಮೌಲ್ಯದ ಗಿಫ್ಟ್ ಗಳು, 1.40 ಕೋಟಿ ರೂ. ಮೌಲ್ಯದ ಮದ್ಯ, 7.63 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


ಇದನ್ನೂ ಓದಿ: ಕುತೂಹಲ ಮೂಡಿಸಿದ ಬಿ ವೈ ವಿಜಯೇಂದ್ರ, ಜಿ.ಪರಮೇಶ್ವರ ಭೇಟಿ..!


ಚುನಾವಣಾ ಅಕ್ರಮ ಸಂಬಂಧ ಇದುವರೆಗೆ 1,262 FIRಗಳು ದಾಖಲಾಗಿವೆ. ಕಳೆದ 15 ದಿನಗಳಲ್ಲಿ ವಶಪಡಿಸಿಕೊಂಡಿರುವ 149.58 ಕೋಟಿ ರೂ. ಪೈಕಿ 61 ಕೋಟಿ ರೂ. ನಗದು, 33 ಕೋಟಿ ರೂ. ಮೌಲ್ಯದ ಮದ್ಯ, 24 ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹಗಳು, 18 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳು, 13 ಕೋಟಿ ರೂ. ಮೌಲ್ಯದ ಡ್ರಗ್ಸ್, ನಾರ್ಕೊಟಿಕ್ಸ್ ಸೇರಿದೆ. ಮಾ.9 ರಿಂದ ಮಾ.27ವರೆಗೆ 58 ಕೋಟಿ ರೂ. ಜಪ್ತಿ ಮಾಡಲಾಗಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.