Karnataka Assembly Election 2023: ನಗರ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಮತದಾನವಾಗಬೇಕು ಹಾಗೂ ನಿರ್ಭಿತಿ, ಭಯಮುಕ್ತರಾಗಿ ಮತಗಟ್ಚೆಗೆ ಬಂದು ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಜನರಿಗೆ ಅರವು ಮೂಡಿಸುವ ಸಲುವಾಗಿ ಬೆಂಗಳೂರು ಮಹಾನಗರ ಪಾಲಿಕೆ ಎಲೆಕ್ಷನ್ ಜಾಥಾ ನಡೆಸುತ್ತಿದೆ. 


COMMERCIAL BREAK
SCROLL TO CONTINUE READING

ಭಾರತೀಯ ಸಂವಿಧಾನವು ಈ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕು ನೀಡಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ- Karnataka Election 2023: ʻಗಜ ಪ್ರಸವʼದಂತಾದ ಬಿಜೆಪಿ ಟಿಕೆಟ್‌ ಹಂಚಿಕೆ! ಇಂದಾದರೂ ಹೊರಬರುತ್ತಾ ಮೊದಲ ಪಟ್ಟಿ?


ಈ ಹಿನ್ನೆಲೆ ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸಿದ್ದಯ್ಯ ಪುರಾಣಿಕ್ ರಸ್ತೆ, ಬಸವೇಶ್ವರನಗರದಲ್ಲಿರುವ  ಸರ್ಕಾರಿ ಹೊಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮತ್ತು ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಮತದಾನ ಜಾಗೃತಿ ಜಾತಾಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ  ಆಡಳಿತಗಾರರಾದ ರಾಕೇಶ್ ಸಿಂಗ್ ರವರು, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರ ಮಾರ್ಗದರ್ಶನದಲ್ಲಿ ಮತದಾರರಿಗೆ ಮತದಾನದ ಮಹತ್ವದ ಅರಿವು ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಂಡಿದ್ದ ಕಾರಣ ಸಾಕಷ್ಟು ಜನ ಆಗಮಿಸಿದ್ದರು. 


ಇದನ್ನೂ ಓದಿ- ಚುನಾವಣಾ ಕರ್ತವ್ಯ ಲೋಪ; ಹೆಸ್ಕಾಂ ಅಭಿಯಂತರರನ್ನು ಅಮಾನತ್ತುಗೊಳಿಸಿದ ಜಿಲ್ಲಾಧಿಕಾರಿ


ಸಹಾಯಕ ಕಾರ್ಯಪಾಲಕ ಅಭಿಯಂತರ, ನೋಡಲ್ ಅಧಿಕಾರಿ ಉಮೇಶ್, ಸಹಾಯಕ ಅಭಿಯಂತರಾದ ವಿಜಯಕುಮಾರ್, ಕಂದಾಯಾಧಿಕಾರಿ ರಾಜೇಂದ್ರನ್  ಸೇರಿದಂತೆ ಬಿಬಿಎಂಪಿ ಅಧಿಕಾರಿಗಳಾದ ಮಮತ, ಪ್ರಶಾಂತ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ಗುರುಪ್ರಸಾದ್, ಯುನಾನಿ ಕಾಲೇಜು ಪ್ರಾಂಶುಪಾಲರಾದ ಮಂಜುಳ, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮತದಾನ ಜಾಗೃತಿ ಜಾತಾದಲ್ಲಿ ಪಾಲ್ಗೊಂಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.