Karnataka Assembly Election: ಅಸೆಂಬ್ಲಿ ಎಲೆಕ್ಷನ್ ಗೆ ಮುಹೂರ್ತ ಪಿಕ್ಸ್ ಆಗಿದೆ. ರಾಜಕೀಯ ಪಕ್ಷಗಳ ಅಂತಿಮ ಪಟ್ಟಿಗೂ ಕ್ಷಣಗಣನೆ ಶುರುವಾಗಿದೆ. ಈ ಹೊಸ್ತಿಲಿನಲ್ಲೇ ಬಿಸಿಲನಗರಿ ರಾಯಚೂರು ಜಿಲ್ಲೆಯಲ್ಲಿ ಆಘಾತಕಾರಿ ಸಂಗತಿವೊಂದು ಬೆಳಕಿಗೆ ಬಂದಿದೆ. ರಾಯಚೂರು ನಗರದ‌‌ ಕೆಲವೆಡೆ ಬ್ರಾಂಡೆಡ್ ಮದ್ಯದ ಬಾಟಲ್ ಗೆ ಕಡಿಮೆ ಬೆಲೆಯ ಮದ್ಯ ಸಂಗ್ರಹ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಮುಂಬೈನಿಂದ ನಕಲಿ ಬ್ರಾಂಡೆಡ್ ಕ್ಯಾಪ್, ಲೇಬಲ್ ತರಿಸಿಕೊಂಡು ಕೃತ್ಯ ಎಸಗಲಾಗುತ್ತಿದೆ ಎಂಬುದು ಗೊತ್ತಾಗಿದೆ. ನಾಲ್ಕು ಕಡೆ‌ ದಾಳಿ ನಡೆಸಿರೊ ರಾಯಚೂರು ಅಬಕಾರಿ‌ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂ. ಮೌಲ್ಯದ  500 ಕ್ಕು ಹೆಚ್ಚು ನಕಲಿ ಕ್ಯಾಪ್, ಲೇಬಲ್ ಗಳು, 80 ಕ್ಕು ಹೆಚ್ಚು ಲೀಟರ್ ಮದ್ಯ, ಹೋಂಡಾ ಆಕ್ಟಿವಾ ಬೈಕ್ ಹಾಗೂ ಆಟೋವನ್ನ ಜಪ್ತಿ ಮಾಡಿದ್ದಾರೆ. 200 ರೂ. ಬೆಲೆಯ ಬ್ರಾಂಡೆಡ್ ಮದ್ಯದ ಖಾಲಿ ಬಾಟಲ್ ಗೆ, ಅತೀ ಕಡಿಮೆ 60-80 ರೂ. ಬೆಲೆಯ ಮದ್ಯ ಸಂಗ್ರಹ ಮಾಡುವಾಗ ಆರೋಪಿಯನ್ನ  ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರೋ ಆರೋಪಿಯನ್ನ ರಾಮ ಆಂಜನೇಯ ಅಲಿಯಾಸ್  ಆಂಜನೇಯ ಎನ್ನಲಾಗಿದೆ. ಸ್ಕೂಟರ್ ನಲ್ಲಿ ನಕಲಿ ಕ್ಯಾಪ್ ಗಳ ಸಪ್ಲೆ ಮಾಡುತ್ತಿದ್ದಾಗ ಅಬಕಾರಿ ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಸ್ಕೂಟರ್ ತಪಾಸಣೆ ನಡೆಸಿದಾಗ, ವಿಚಾರ ಬಯಲಾಗಿದೆ. ಅದರಲ್ಲೂ ಪ್ರಮುಖವಾಗಿ ಈ ನೆಟ್ವರ್ಕ್ ಆಂಧ್ರ-ತೆಲಂಗಾಣ ಗಡಿ ಭಾಗದಲ್ಲಿ ಆ್ಯಕ್ಟಿವ್ ಆಗಿ‌ ಕೆಲಸ ಮಾಡುತ್ತಿದೆ. 


ಇದನ್ನೂ ಓದಿ- ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತು ಬಂದ ರಸ್ತೆ!!


ಎರಡೂ ದಿನಗಳಿಂದ ಕಡಗಂದೊಡ್ಡಿ, ಎಲ್‌ಕೆ ದೊಡ್ಡಿ, ಹೊಸೂರು ಸೇರಿ ನಾಲ್ಕು ಕಡೆ ದಾಳಿ ಮಾಡಲಾಗಿದೆ. ಹೀಗಾಗಲೇ ನಕಲಿ ಬ್ರಾಂಡೆಡ್ ಒಂದು ಟೀಂ ವಶಕ್ಕೆ ಪಡೆದಾಗ ಇಡೀ ಜಾಲದ ಇಂಟರ್ ಲಿಂಕ್ ಪತ್ತೆಯಾಗಿದೆ‌. ಚುನಾವಣೆ ಹಿನ್ನೆಲೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದೆ. ರಸ್ತೆಯ ಮದ್ಯದಲ್ಲಿರೋ ಡಾಬಾಗಳ ಮೂಲಕ‌ ಮಾರಾಟಕ್ಕೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ರಿವೀಲ್ ಆಗಿದೆ‌.


ಸದ್ಯ ಓರ್ವ ಆರೋಪಿ ರಾಮಾಂಜನೇಯ ಅರೆಸ್ಟ್ ಕೂಡ ಆಗಿದ್ದು,ಈ ಪ್ರಕರಣ ಕಿಂಗ್ ಪಿನ್ ಗಾಗಿ  ಪೊಲೀಸರು ಹುಡುಕಾಟದಲ್ಲಿದ್ದಾರೆ. ಇದರ ಜೊತೆ ಗಡಿಭಾಗದ ಅಕ್ರಮ ಮದ್ಯ ತಡೆಗಟ್ಟಲು ಗಡಿಭಾಗದಲ್ಲಿ 3 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಹಗಲು ರಾತ್ರಿ ಪರಿಶೀಲನೆ ನಡೆಸುತ್ತಿದ್ದಾರೆ . 


ಇದನ್ನೂ ಓದಿ- ನಾನು ಚುನಾವಣೆಗೆ ಸ್ಪರ್ಧಿಸಲ್ಲ: ವದಂತಿಗಳಿಗೆ ಕಿವಿಗೊಡಬೇಡಿ- ಅನಿತಾ ಕುಮಾರಸ್ವಾಮಿ ಮನವಿ


ಅದರಲ್ಲೂ ಬ್ರಾಂಡೆಡ್ ಮದ್ಯ ಮತ್ತು ಕಡಿಮೆ ದರದ ಮದ್ಯದ ಕಲರ್ ಹೊಂದಿಕೆಯಾಗಿದೆ. ದುಡ್ಡು ಮಾಡುವ ಸಲುವಾಗಿ ಈ ಕೃತ್ಯ ಎಸಗಲಾಗುತ್ತಿದೆ. ಇಂತಹ ಪ್ರಕರಣಗಳಿಂದ ಮದ್ಯ ಪ್ರಿಯರು ಎಚ್ಚರಿಕೆ ವಹಿಸಬೇಕಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.