ಅಂಚೆ ಮತದಾನ ವ್ಯವಸ್ಥೆ ಸಂಪೂರ್ಣ ಫೇಲ್? ವೃದ್ಧರಿಗೆ ಸಂಕಷ್ಟ
Karnataka Vidhansabha Chunav 2023 Latest Update: ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
Karnataka Assembly Election 2023 Latest Updates: ವಯೋವೃದ್ಧರು, ಅಂಗವಿಕಲರು, ಅಂಗಾಂಗ ವೈಫಲ್ಯ ಉಳ್ಳವರು, ಅಸಶಕ್ತರಿಗಾಗಿ ಸರ್ಕಾರ ಈ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಅಂಚೇ ಮತದಾನ ವ್ಯವಸ್ಥೆ ಜಾರಿಗೆ ತಂದರೂ ಅದು ಸಂಪೂರ್ಣ ಫೇಲ್ ಆಗಿದೆಯಾ ? ಎಂಬ ಸಂಶಯ ಕಂಡು ಬರುತ್ತಿದೆ.
ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ- 400ಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್: ಮತಗಟ್ಟೆಗೆ ಬಂದವರಿಗೆ ಬಿಗ್ ಶಾಕ್
ಇತ್ತ ಅಂಗವಿಕಲರು ಕೈಯಲ್ಲಿ ಸ್ಟಿಕ್ ಹಿಡಿದು ಮತದಾನಕ್ಕೆ ಗೌರವ ಕೊಟ್ಟು ತಮ್ಮ ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಮಾದರಿ ಆಗಿದ್ದಾರೆ.
ಈ ಮಧ್ಯೆ, ಚುನಾವಣೆ ಅಧಿಕಾರಿ ನೂರೆಂಟು ಸಭೆ ನಡೆಸಿ, ಪತ್ರಿಕಾಗೋಷ್ಠಿ ನಡೆಸಿ ಅಂಚೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಸಹ ಅವರದೇ ಇಲಾಖೆ ಅಧಿಕಾರಿಗಳು ಅಂಚೆ ಮತದಾನದ ವ್ಯವಸ್ಥೆ ಬಗ್ಗೆ ನಿಷ್ಕಾಳಜಿ ತೋರಿದ್ರಾ ? ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- Political Leaders Voted: ಕುಟುಂಬದೊಂದಿಗೆ ಬಹಳ ಉತ್ಸುಕರಾಗಿ ಮತದಾನ ಮಾಡಿದ ರಾಜಕೀಯ ನಾಯಕರು..
ಒಟ್ಟಾರೆ ಚುನಾವಣೆ ಆಯೋಗ ವಯೋವೃದ್ಧರು, ಅಂಗವಿಕಲರು, ಅಶಕ್ತರಿಗಾಗಿ ಜಾರಿಗೆ ತಂದ ಅಂಚೆ ಮತದಾನ ವ್ಯವಸ್ಥೆ ಅರ್ಹರಿಂದ ದೂರವೇ ಉಳಿದಂತಾಗಿರುವುದು ಮಾತ್ರ ವಿಪರ್ಯಾಸ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.