Karnataka Elections 2023 : ಬೆಳಿಗ್ಗೆಯಿಂದ ಈ ವರೆಗೆ ರಾಜ್ಯದಲ್ಲಿ ಶೆ.20.99 ರಷ್ಟು ಮತದಾನ..!
Karnataka Vidhansabha Chunav Latest Updates: ಕರ್ನಾಟಕ ವಿಧಾನಸಭಾ ಚುನಾವಣೆ 2023 ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ, ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
Karnataka Assembly Election 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ತಮ್ಮ ಹಕ್ಕು ಚಲಾಯಿಸಲು ಮತದಾರರು ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. 11 ಗಂಟೆಯ ಹೊತ್ತಿಗೆ ರಾಜ್ಯದಲ್ಲಿ ಶೇ.20.94 ರಷ್ಟು ಮತದಾನ ನಡೆದಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 17.74 ರಷ್ಟು ಮತದಾನವಾಗಿದೆ.
224 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 11 ಗಂಟೆಯ ಹೊತ್ತಿಗೆ ಶೆ.20.94ರಷ್ಟು ಮತದಾನ ನಡೆದಿದೆ. ಬೆಂಗಳೂರು ಕೇಂದ್ರ 19.30%, ಬೆಂಗಳೂರು ಉತ್ತರ 17.50%, ಬೆಂಗಳೂರು ದಕ್ಷಿಣ 19.18%, ಬೆಂಗಳೂರು ನಗರ 17.72% ಮತನಾದವಾಗಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 20.23ರಷ್ಟು ಜನರು ಮತ ಚಾಲಾಯಿಸಿದ್ದಾರೆ.
ಇದನ್ನೂ ಓದಿ:ರಸ್ತೆ, ಬಸ್ ಸಮಸ್ಯೆ: ಮಧ್ಯಾಹ್ನವಾದರೂ ಮತ ಹಾಕದ ರಾಜ್ಯದ ಕಟ್ಟ ಕಡೆಯ ಗ್ರಾಮದ ಜನತೆ
ಇನ್ನು ಜಿಲ್ಲಾವ್ಯಾಪಿ ನೋಡುವುದಾದರೆ, ಉತ್ತರ ಕನ್ನಡ 25.46%, ದಕ್ಷಿಣ ಕನ್ನಡ 28.46%, ದಾವಣಗೆರೆ 21.32%, ಧಾರವಾಡ 20.82%, ಗದಗ 21.14%, ಕಲಬುರಗಿ 17.89%, ಬೆಳಗಾವಿ 20.76%, ಬಳ್ಳಾರಿ 23.56%, ಬೀದರ್ 20.54%, ಬಾಗಲಕೋಟೆ 23.44%, ವಿಜಯಪುರ 20.66%, ಚಾಮರಾಜನಗರ 16.77%, ಚಿಕ್ಕಬಳ್ಳಾಪುರ 21.46%, ಚಿಕ್ಕಮಗಳೂರು 22.29% ಚಿತ್ರದುರ್ಗ 18.56%, ರಷ್ಟು ಮತದಾನವಾಗಿದೆ.
ಅಲ್ಲದೆ, ಹಾವೇರಿ 19.44%, ಹಾಸನ 22.18%, ಕೋಲಾರ 19.87%, ಕೊಡಗು 26.49% ಮಂಡ್ಯ 19.56%, ಕೊಪ್ಪಳ 21.46%, ಮೈಸೂರು 19.34%, ರಾಯಚೂರು 22.48%, ಶಿವಮೊಗ್ಗ 22.75%, ರಾಮನಗರ 25.21%, ತುಮಕೂರು 22.06%, ವಿಜಯನಗರ 21.07%, ಉಡುಪಿ 30.26%, ಯಾದಗಿರಿ 18.84ರಷ್ಟು ಮತದಾನ ಜರುಗಿದೆ.
ಇದನ್ನೂ ಓದಿ: ಸಂಭ್ರಮದಿಂದ ಸೋಲಿಗರ ಮತದಾನ: ವನವಾಸಿಗಳನ್ನು ಸೆಳೆಯುತ್ತಿದೆ ಎಥ್ನಿಕ್ ಮತಗಟ್ಟೆ
ರಾಜಧಾನಿಯಲ್ಲಿ 17.74% ಮತದಾನ : ಸಿನಿಕಾನ್ ಸಿನಿಟಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, 11 ಗಂಟೆ ಹೊತ್ತಿಗೆ 17.74%ರಷ್ಟು ಮತದಾನ ನಡೆದಿದೆ. ಕ್ಷೇತ್ರವಾರು ನೋಡುವುದಾದರೆ ಬೆಂಗಳೂರು ಕೇಂದ್ರ ವ್ಯಾಪ್ತಿಗೆ ಬರುವ ಚಾಮರಾಜಪೇಟೆ ಕ್ಷೇತ್ರದಲ್ಲಿ 16%ರಷ್ಟು, ಚಿಕ್ಕಪೇಟೆ 18%, ಗಾಂಧಿನಗರ 17%, ರಾಜಾಜಿನಗರ 20%, ಆರ್.ಆರ್. ನಗರ 17%, ಶಾಂತಿನಗರ 16%, ಶಿವಾಜಿನಗರ 17%, ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರದ ಮತಕ್ಷೇತ್ರಗಳು : ಸಿ.ವಿ ರಾಮನ್ನಗರ 16%, ಹೆಬ್ಬಾಳ 20%, ಕೆ.ಆರ್. ಪುರ 19%, ಮಹಾಲಕ್ಷ್ಮೀ ಲೇಔಟ್ 20%, ಮಲ್ಲೇಶ್ವರಂ 21%, ಪುಲಿಕೇಶಿನಗರ 18%, ಸರ್ವಜ್ಞನಗರ 15% ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ರೆಡ್ಡಿ ನಾಮಫಲಕ ಇರೋ ಬ್ಯಾಡ್ಜ್ ಹಾಕಿಕೊಂಡಿರುವ ಚುನಾವಣಾ ಏಜೆಂಟ್ : ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು ಆಕ್ರೋಶ
ಬೆಂಗಳೂರು ದಕ್ಷಿಣದ ಮತಕ್ಷೇತ್ರಗಳು : ಬಿಟಿಎಂ ಲೇಔಟ್ 17%, ಬಸವನಗುಡಿ 19%, ಬೊಮ್ಮನಹಳ್ಳಿ 18%, ಗೋವಿಂದರಾಜನಗರ 19%, ಜಯನಗರ 20%, ಪದ್ಮನಾಭನಗರ 20%, ವಿಜಯನಗರ 16% ರಷ್ಟು ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರ ಮತಕ್ಷೇತ್ರಗಳು : ಆನೇಕಲ್ 13%, ಬೆಂಗಳೂರು ದಕ್ಷಿಣ ಕ್ಷೇತ್ರ 17%, ಬ್ಯಾಟರಾಯನಪುರ 17%, ದಾಸರಹಳ್ಳಿ 15%, ಮಹಾದೇವಪುರ 17%, ಯಲಹಂಕ 19%, ಯಶವಂತಪುರ 20% ರಷ್ಟು ಮತದಾನವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ