ಮೈಸೂರು: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಸ್ಪರ್ಧೆಯ ಗುಟ್ಟನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬಿಚ್ಚಿಟ್ಟಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆಗೆ ಬಂದು ಸೋಮಣ್ಣಗೆ ಟಾಸ್ಕ್ ನೀಡಿದ್ದರಂತೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾತನಾಡಿದ ಸೋಮಣ್ಣ, ‘ಅಮಿತ್ ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿ.ಎಲ್.ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ.  ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅದರಂತೆ ಅಮಿತ್ ಶಾ ನನ್ನ ಮನೆಗೆ ಬಂದರು, ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು’ ಎಂದು ಸೋಮಣ್ಣ ಹೇಳಿದ್ದಾರೆ.  


ಇದನ್ನೂ ಓದಿ: Siddaramaiah: ಕಾಂಗ್ರೆಸ್ ಕಾಲದಲ್ಲಿ ಐಟಿ-ಬಿಟಿ ರಾಜಧಾನಿ, ಬಿಜೆಪಿ ಅವಧಿಯಲ್ಲಿ ಅಪರಾಧಿಗಳ ಜಗತ್ತಿನ ರಾಜಧಾನಿ -  ಸಿದ್ದರಾಮಯ್ಯ


ಇದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು. ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟುಬಿಡಿ ಅಂತಾ ನಾನು ಕೇಳಿಕೊಂಡೆ. ನೀನು ಹೋಗಿ ವರುಣಾದಲ್ಲಿ ನಿಲ್ಲಬೇಕು ಅಂತಾ ಸೂಚನೆ ನೀಡಿದರು. ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣಾ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.


ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ. ವರುಣಾವನ್ನು ತಾಲೂಕು ಮಾಡಿಲ್ಲ, ಒಂದು ಪಟ್ಟಣ ಪಂಚಾಯಿತಿ ಮಾಡಿಲ್ಲ. ಆದರೂ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, 14 ಬಜೆಟ್ ಮಾಡಿದ್ದೀರಿ. ನೀವು ಏನೂ ಮಾಡಿಲ್ಲ, ಆದರೂ ಇಷ್ಟೆಲ್ಲ ಸಿಕ್ಕಿದೆ. ದೇವರ ಕೈಯಲ್ಲಿ ಬರೆಸಿಕೊಂಡು ಬಂದವರು ಯಾರೂ ಇಲ್ಲ. ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ‌’ವೆಂದು ಸೋಮಣ್ಣ ಟೀಕಿಸಿದರು.


ಇದನ್ನೂ ಓದಿ: Karnataka Election 2023: ಅಶೋಕ್‌ರನ್ನು ಗೆಲ್ಲಿಸಿ, ಕನಕಪುರಕ್ಕೆ ಎಷ್ಟು ಬೇಕೋ ಅಷ್ಟು ಅನುದಾನ‌ ಕೊಡುತ್ತೇನೆ: ಸಿಎಂ ಬೊಮ್ಮಾಯಿ‌


ನಿಮ್ಮ ಕಾರ್ಯವೈಖರಿ ನಿಮಗೆ ತೃಪ್ತಿಯಾಗಿದೆಯೇ ಹೇಳಿ? ನಿಮಗೆ ಚಾಲೆಂಜ್ ಮಾಡಲ್ಲ, ಮನವಿ ಮಾಡುತ್ತೇನೆ. ವರುಣಾ ಕ್ಷೇತ್ರಕ್ಕೆ ಹೋಗೋಣ ಬನ್ನಿ. ಏನಾಗಬೇಕಿತ್ತು ನೋಡೋಣ ಬನ್ನಿ. ರಾತ್ರಿ 1 ಗಂಟೆಗೆ ಮಲಗುತ್ತೇನೆ, ಬೆಳಗ್ಗೆ 4.30ಕ್ಕೆ ಏಳುತ್ತೇನೆ. ನನ್ನಷ್ಟು ಜನರ ಹತ್ತಿರಕ್ಕೆ ಹೋಗುವ ರಾಜಕಾರಣಿ ಯಾರೂ ಇಲ್ಲ. ಇದನ್ನು ನಾನು ಅಹಂಕಾರದಿಂದ ಹೇಳಿಕೊಳ್ಳುತ್ತೇನೆಂದು ಸೋಮಣ್ಣ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.