Karnataka Assembly Election 2023: ಮೈಸೂರಿನಲ್ಲಿ ಯಾರ ಕೈ ಹಿಡಿಯಲಿದ್ದಾನೆ ಮತದಾರ ಪ್ರಭು?
ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರಗಳು ಕೂಡ ಈ ಬಾರಿಯ ಚುನಾವಣೆಯಲ್ಲಿ ಭಿನ್ನವಾಗಿ ಎಂದೇ ಹೇಳಬಹುದು.ಆದರೆ ಅವೆಲ್ಲಾ ಪ್ರಾಯೋಗಿಕವಾಗಿ ಹೇಗೆಲ್ಲಾ ಕಾರ್ಯಗತಗೊಳ್ಳುತ್ತವೆ ಮತ್ತು ಮತದಾರ ಪ್ರಭು ಯಾರ ಕಡೆ ವಾಲುತ್ತಾನೆ ಎನ್ನುವುದನ್ನು ನಾವು ಕಾಯ್ದು ನೋಡಬೇಕಾಗಿದೆ.
ಮೈಸೂರು: ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿ ತನ್ನ ಛಾಪನ್ನು ಮೂಡಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ, ಇದಕ್ಕೆ ಪೂರಕವಾಗಿ ಅದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿನ ಪ್ರಯೋಗವೇ ಇದಕ್ಕೆ ಸಾಕ್ಷಿ.ಆದರೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು ಪ್ರಬಲ ಪ್ರದೇಶವಾಗಿರುವ ಮೈಸೂರು ಭಾಗಗಳಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರ ಹೇಗೆ ಸ್ಪಂದಿಸುತ್ತಾನೋ ನೋಡಬೇಕಾಗಿದೆ.ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರಗಳು ಕೂಡ ಈ ಬಾರಿಯ ಚುನಾವಣೆಯಲ್ಲಿ ಭಿನ್ನವಾಗಿ ಎಂದೇ ಹೇಳಬಹುದು.ಆದರೆ ಅವೆಲ್ಲಾ ಪ್ರಾಯೋಗಿಕವಾಗಿ ಹೇಗೆಲ್ಲಾ ಕಾರ್ಯಗತಗೊಳ್ಳುತ್ತವೆ ಮತ್ತು ಮತದಾರ ಪ್ರಭು ಯಾರ ಕಡೆ ವಾಲುತ್ತಾನೆ ಎನ್ನುವುದನ್ನು ನಾವು ಕಾಯ್ದು ನೋಡಬೇಕಾಗಿದೆ.
ಮೈಸೂರು ಜಿಲ್ಲೆ
ಒಟ್ಟು ವಿಧಾನಸಭಾ ಕ್ಷೇತ್ರಗಳು 11
ಕಾಂಗ್ರೆಸ್ ಗೆದ್ದಿರೋ ಕ್ಷೇತ್ರಗಳು 4
ಜೆಡಿಎಸ್ ಗೆದ್ದಿರೋ ಕ್ಷೇತ್ರಗಳು 4
ಬಿಜೆಪಿ ಗೆದ್ದಿರೋ ಕ್ಷೇತ್ರಗಳು 3
ಪ್ರಸ್ತುತ - 11 ಕ್ಷೇತ್ರದಲ್ಲಿ-
ಕಾಂಗ್ರೆಸ್ - 4
ಜೆಡಿಎಸ್ - 5
ಬಿಜೆಪಿ - 2
---------
ಕ್ಷೇತ್ರ ಸಂಖ್ಯೆ 210 : ಪಿರಿಯಾಪಟ್ಟಣ.
ಕೆ.ಮಹದೇವ್(ಒಕ್ಕಲಿಗ ಸಮಾಜ), ಜೆಡಿಎಸ್ (ಗೆಲುವು)-77,770.
ಕೆ.ವೆಂಕಟೇಶ್, ಕಾಂಗ್ರೆಸ್-70,277
ಎಸ್.ಮಂಜುನಾಥ್, ಬಿಜೆಪಿ-4,047
ಜೆಡಿಎಸ್‌ನ ಕೆ.ಮಹದೇವ್‌ಗೆ 7,493 ಮತಗಳ ಅಂತರದ ಗೆಲುವು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವಿರೋಧಿ ಅಲೆ ಹಾಗೂ ಹೆಚ್‌ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಅಲೆಗಳು ಮಹದೇವ್ ಗೆಲುವಿಗೆ ಪ್ರಮುಖ ಕಾರಣ.
ಒಟ್ಟು ಮತದಾರರು : 1,87,351 (ನ.2022ಕ್ಕೆ ಅನ್ವಹಿಸುವಂತೆ)
ಪುರುಷ - 94388
ಮಹಿಳೆ - 92963
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 18 ಸಾವಿರ
ದಲಿತ – 30ಸಾವಿರ
ಒಕ್ಕಲಿಗ – 43 ಸಾವಿರ
ಕುರುಬ – 38 ಸಾವಿರ
ಉಪ್ಪಾರ – 8 ಸಾವಿರ
ಮುಸ್ಲಿಂ – 7 ಸಾವಿರ
ಬುಡಕಟ್ಟು ಜನಾಂಗ – 6 ಸಾವಿರ
ಇತರೆ – 34 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು- ಒಕ್ಕಲಿಗ ಸಮುದಾಯ
ಕ್ಷೇತ್ರ ಸಂಖ್ಯೆ 211 : ಕೃಷ್ಣರಾಜನಗರ.
ಸಾರಾ.ಮಹೇಶ್(ಒಕ್ಕಲಿಗ ಸಮಾಜ), ಜೆಡಿಎಸ್ (ಗೆಲುವು) -85,011
ಡಿ.ರವಿಶಂಕರ್, ಕಾಂಗ್ರೆಸ್ -83,232
ಹೆಚ್.ಜಿ.ಶ್ವೇತಾ ಗೋಪಾಲ್, ಬಿಜೆಪಿ- 2,716
ಜೆಡಿಎಸ್‌ನ ಸಾರಾ.ಮಹೇಶ್‌ಗೆ 1,779 ಮತಗಳ ಅಂತರ ಗೆಲುವು.
ಹೆಚ್‌ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಗೆಲುವು.
ಒಟ್ಟು ಮತದಾರರು : 207749 (ನ.9 2022ಕ್ಕೆ ಅನ್ವಹಿಸುವಂತೆ)
ಪುರುಷ - 104005
ಮಹಿಳೆ - 103744
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 25 ಸಾವಿರ
ದಲಿತ - 26 ಸಾವಿರ
ಒಕ್ಕಲಿಗ - 50 ಸಾವಿರ
ಕುರುಬ - 48 ಸಾವಿರ
ಉಪ್ಪಾರ - 5 ಸಾವಿರ
ನಾಯಕ - 15 ಸಾವಿರ
ಮುಸ್ಲಿಂ - 12 ಸಾವಿರ
ಇತರೆ - 20 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು-ಒಕ್ಕಲಿಗ/ಕುರುಬ
ಕ್ಷೇತ್ರ ಸಂಖ್ಯೆ 212 : ಹುಣಸೂರು
ಗೆದ್ದ ಒಂದೇ ವರ್ಷದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಸೆಟೆದು ನಿಂತ ಹೆಚ್.ವಿಶ್ವನಾಥ್ ಆಪರೇಷನ್ ಕಮಲದ ಮುಂದಾಳತ್ವ ವಹಿಸಿ ಬಿಜೆಪಿ ಸೇರಿಕೊಂಡರು. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್ ನ ಹೆಚ್.ಪಿ.ಮಂಜುನಾಥ್ ವಿರುದ್ಧ 39,727 ಮತಗಳ ಸೋಲು ಕಂಡರು.
ಒಟ್ಟು ಮತದಾರರು : 2,33217 (ನ.09 2022ಕ್ಕೆ ಅನ್ವಯ)
ಪುರುಷ - 1,16,805
ಮಹಿಳೆ -1,16,412
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 18 ಸಾವಿರ
ದಲಿತ - 39 ಸಾವಿರ
ಒಕ್ಕಲಿಗ -37 ಸಾವಿರ
ಕುರುಬ - 30 ಸಾವಿರ
ನಾಯಕ - 29 ಸಾವಿರ
ಮುಸ್ಲಿಂ - 15 ಸಾವಿರ
ಅಲ್ಪ ಸಂಖ್ಯಾತ : 40 ಸಾವಿರ
ಇತರೆ – 15 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ನಾಯಕ/ಕುರುಬ
ಕ್ಷೇತ್ರ ಸಂಖ್ಯೆ 213 : ಹೆಗ್ಗಡದೇವನಕೋಟೆ
ಅನಿಲ್ ಚಿಕ್ಕಮಾದು (ನಾಯಕ ಸಮಾಜ), ಕಾಂಗ್ರೆಸ್ (ಗೆಲುವು)-76,652
ಚಿಕ್ಕಣ್ಣ, ಜೆಡಿಎಸ್-54,559
ಸಿದ್ದರಾಜು, ಬಿಜೆಪಿ-34,425
ಕಾಂಗ್ರೆಸ್ ನ ಅನಿಲ್ ಚಿಕ್ಕಮಾದುಗೆ 22,093 ಮತಗಳ ಅಂತರದ ಗೆಲುವು.
ತಂದೆ ಚಿಕ್ಕಮಾದು ಅವರ ನಿಧನದ ಅನುಕಂಪ ಹಾಗೂ ಸಿದ್ದರಾಮಯ್ಯ ಸರ್ಕಾರದ ಕೆಲಸಗಳ ಶ್ರೀರಕ್ಷೆ ಗೆಲುವಿಗೆ ಪ್ರಮುಖ ಕಾರಣ.
ಒಟ್ಟು ಮತದಾರರು : 2,20911(ನ.9 2022ಕ್ಕೆ ಅನ್ವಯ)
ಪುರುಷ - 111267
ಮಹಿಳೆ - 109644
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ -26 ಸಾವಿರ
ದಲಿತ – 58 ಸಾವಿರ
ಒಕ್ಕಲಿಗ – 28 ಸಾವಿರ
ಕುರುಬ – 15 ಸಾವಿರ
ಉಪ್ಪಾರ – 5 ಸಾವಿರ
ಎಸ್.ಟಿ. – 60 ಸಾವಿರ
ಮುಸ್ಲಿಂ – 8 ಸಾವಿರ
ಇತರೆ – 25 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ಪರಿಶಿಷ್ಟ ಪಂಗಡ
ಕ್ಷೇತ್ರ ಸಂಖ್ಯೆ 214 : ನಂಜನಗೂಡು.
ಬಿ.ಹರ್ಷವರ್ಧನ್ (ದಲಿತ) ಬಿಜೆಪಿ, (ಗೆಲುವು)-78,030.
ಕಳಲೆ.ಎನ್.ಕೇಶವಮೂರ್ತಿ, ಜೆಡಿಎಸ್ - 65,551.
ದಯಾನಂದ ಮೂರ್ತಿ ಹೆಚ್.ಎಸ್. - 13,679
ಬಿಜೆಪಿಯ ಬಿ.ಹರ್ಷವರ್ಧನ್‌ಗೆ 12,479 ಮತಗಳ ಗೆಲುವು.
ಕ್ಷೇತ್ರದಲ್ಲಿ ಬಿಜೆಪಿ ಸಂಸ್ ವಿ.ಶ್ರೀನಿವಾಸನ್ ಪ್ರಸಾದ್ ಸಂಚಾರ, ಸಿದ್ದರಾಮಯ್ಯ ಹಾಗೂ ಪ್ರಸಾದ್ ನಡುವಿನ ನೇರ ಪೈಪೋಟಿ. ಹರ್ಷವರ್ಧನ್ ಪ್ರಸಾದ್‌ರ ಅಳಿಯ ಎಂಬ ಲೇಬಲ್ ಗೆಲುವುನ ಪ್ರಮುಖ ಕಾರಣಗಳು.
ಒಟ್ಟು ಮತದಾರರು : 210051
ಪುರುಷ - 105064
ಮಹಿಳೆ - 104987
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ – 59 ಸಾವಿರ
ದಲಿತ – 60 ಸಾವಿರ
ಒಕ್ಕಲಿಗ – 8 ಸಾವಿರ
ಕುರುಬ – 6 ಸಾವಿರ
ಉಪ್ಪಾರ – 23 ಸಾವಿರ
ನಾಯಕ – 28 ಸಾವಿರ
ಮುಸ್ಲಿಂ – 11 ಸಾವಿರ
ಇತರೆ – 10 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ನಾಯಕ/ಉಪ್ಪಾರ
ಕ್ಷೇತ್ರ ಸಂಖ್ಯೆ 215 : ಚಾಮುಂಡೇಶ್ವರಿ.
ಜಿಟಿ.ದೇವೇಗೌಡ (ಒಕ್ಕಲಿಗ) ಜೆಡಿಎಸ್ (ಗೆಲುವು)-1,21,325.
ಸಿದ್ದರಾಮಯ್ಯ, ಕಾಂಗ್ರೆಸ್ - 85,283.
ಎಸ್.ಆರ್.ಗೋಪಾಲ್‌ರಾವ್, ಬಿಜೆಪಿ - 12,064.
ಜೆಡಿಎಸ್‌ನ ಜಿಟಿ.ದೇವೇಗೌಡಗೆ 36,042 ಮತಗಳ ಅಂತರದ ಗೆಲುವು.
ಸಿದ್ದರಾಮಯ್ಯಗೆ ಒಕ್ಕಲಿಗ ವಿರೋಧಿ ಪಟ್ಟ ಬಂದಿದ್ದು, ಹೆಚ್‌ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ನೇರ ಗುದ್ದಾಟ, ಸಿದ್ದರಾಮಯ್ಯ ಆಡಳಿತ ವಿರೋಧಿ ಅಲೆ, ಇದೆಲ್ಲದರ ಪರಿಣಾಮ ಹಾಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜಕೀಯ ಮರುಹುಟ್ಟು ಪಡೆದಿದ್ದ ಕ್ಷೇತ್ರದಲ್ಲೇ ಹೀನಾಯ ಸೋಲು ಕಾಣಬೇಕಾಯಿತು.
ಒಟ್ಟು ಮತದಾರರು : 305556
ಪುರುಷ - 153023
ಮಹಿಳೆ -152533
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 25 ಸಾವಿರ
ದಲಿತ - 40 ಸಾವಿರ
ಒಕ್ಕಲಿಗ - 70 ಸಾವಿರ
ಕುರುಬ - 40 ಸಾವಿರ
ನಾಯಕ - 38 ಸಾವಿರ
ಬ್ರಾಹ್ಮಣ - 15 ಸಾವಿರ
ಮುಸ್ಲಿಂ - 5 ಸಾವಿರ
ಇತರೆ - 50 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು - ಒಕ್ಕಲಿಗ
ಕ್ಷೇತ್ರ ಸಂಖ್ಯೆ 216 : ಕೃಷ್ಣರಾಜ.
ಎಸ್.ಎ.ರಾಮದಾಸ್ (ಬ್ರಾಹ್ಮಣ) ಬಿಜೆಪಿ, (ಗೆಲುವು)-78,573.
ಎಂ.ಕೆ.ಸೋಮಶೇಖರ್, ಕಾಂಗ್ರೆಸ್-52,226.
ಕೆ.ವಿ.ಮಲ್ಲೇಶ್-11,607.
ಬಿಜೆಪಿಯ ರಾಮದಾಸ್ ಗೆ 26,347ಮತಗಳ ಗೆಲುವು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಹಾಗೂ ಸ್ಥಳೀಯವಾಗಿ ರಾಮದಾಸ್ ಮೇಲೆ ಇದ್ದ ಒಲವು ಗೆಲುವಿನ ಪ್ರಮುಖ ಕಾರಣ.
ಒಟ್ಟು ಮತದಾರರು : 2,39332
ಪುರುಷ - 117406
ಮಹಿಳೆ - 121926
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ/ವೀರಶೈವ : 40 ಸಾವಿರ
ಬ್ರಾಹ್ಮಣ : 60 ಸಾವಿರ
ದಲಿತ : 40 ಸಾವಿರ
ಒಕ್ಕಲಿಗ : 15 ಸಾವಿರ
ಕುರುಬ : 25 ಸಾವಿರ
ನಾಯಕ : 12 ಸಾವಿರ
ಮುಸ್ಲಿಂ : 8 ಸಾವಿರ
ಇತರೆ : 30 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ದಲಿತ
ಕ್ಷೇತ್ರ ಸಂಖ್ಯೆ 217 : ಚಾಮರಾಜ.
ಎಲ್.ನಾಗೇಂದ್ರ (ಒಕ್ಕಲಿಗ) ಬಿಜೆಪಿ (ಗೆಲುವು)-51,683.
ವಾಸು, ಕಾಂಗ್ರೆಸ್ -36,747.
ಕೆ.ಎಸ್.ರಂಗಪ್ಪ, ಜೆಡಿಎಸ್- 27,284.
ಕೆ.ಹರೀಶ್‌ಗೌಡ, ಪಕ್ಷೇತರ-21,282
ಬಿಜೆಪಿಯ ಎಲ್.ನಾಗೇಂದ್ರ ಗೆ 14,936 ಮತಗಳ ಗೆಲುವು.
ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕೆ.ಹರೀಶ್‌ಗೌಡ ನಿಂತದ್ದು ಬಿಜೆಪಿಗೆ ವರದಾನ ಆಯ್ತು. ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರರ ಕಿತ್ತಾಟದ ನಡುವೆ ಬಿಜೆಪಿಯ ಎಲ್.ನಾಗೇಂದ್ರ ಗೆದ್ದು ಬೀಗಿದರು.
ಒಟ್ಟು ಮತದಾರರು : 234190 (2022ಕ್ಕೆ ಅನ್ವಹಿಸುವಂತೆ)
ಪುರುಷ - 1,15916
ಮಹಿಳೆ - 118274
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 10 ಸಾವಿರ
ದಲಿತ - 36 ಸಾವಿರ
ಒಕ್ಕಲಿಗ - 70 ಸಾವಿರ
ಕುರುಬ - 20 ಸಾವಿರ
ನಾಯಕ-ಗಣಿಗ - 14 ಸಾವಿರ
ವಿಶ್ವಕರ್ಮ - 15 ಸಾವಿರ
ಮುಸ್ಲಿಂ - 24 ಸಾವಿರ
ಇತರೆ - 45 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ಲಿಂಗಾಯತ/ಬ್ರಾಹ್ಮಣ
ಕ್ಷೇತ್ರ ಸಂಖ್ಯೆ 218 : ನರಸಿಂಹರಾಜ
ತನ್ವೀರ್‌ಸೇಠ್ (ಮುಸ್ಲಿಂ) ಕಾಂಗ್ರೆಸ್, (ಗೆಲುವು)-62,268.
ಸಂದೇಶ್‌ಸ್ವಾಮಿ, ಬಿಜೆಪಿ-44,141.
ಅಬ್ದುಲ್ ಮಜೀದ್, ಎಸ್‌ಡಿಪಿಐ-33,284.
ಅಬ್ದುಲ್ ಅಜೀಜ್, ಜೆಡಿಎಸ್-14,709.
ಕಾಂಗ್ರೆಸ್ ನ ತನ್ವೀರ್‌ಸೇಠ್‌ಗೆ 18,127 ಮತಗಳ ಗಲುವು.
ಮುಸ್ಲಿಮರ ಪ್ರಾಬಲ್ಯವೇ ಗೆಲುವುನ ಪ್ರಮುಖ ಕಾರಣ. ಕ್ಷೇತ್ರದಲ್ಲಿರುವ ಹಿಂದೂಗಳ ಜೊತೆಗೆ ಉತ್ತಮ ಒಡನಾಟ ಬೆಳೆಸಿರುವ ಪರಿಣಾಮ ತನ್ವೀರ್ ಗೆಲುವು ಸುಲಭವಾಯ್ತು.
ಒಟ್ಟು ಮತದಾರರು : 2,68,499
ಪುರುಷ - 1,30,626,
ಮಹಿಳೆ - 1,37,873
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 15 ಸಾವಿರ
ದಲಿತ - 20 ಸಾವಿರ
ಒಕ್ಕಲಿಗ - 15 ಸಾವಿರ
ಕುರುಬ - 8 ಸಾವಿರ
ನಾಯಕ - 18 ಸಾವಿರ
ಮುಸ್ಲಿಂ - 1ಲಕ್ಷ 10 ಸಾವಿರ
ಬ್ರಾಹ್ಮಣ - 6 ಸಾವಿರ
ಕ್ರಿಶ್ಚಿಯನ್- 10 ಸಾವಿರ
ಇತರೆ - 43 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ನಾಯಕರು/ದಲಿತ
ಕ್ಷೇತ್ರ ಸಂಖ್ಯೆ 219 : ವರುಣ.
ಯತೀಂದ್ರ ಸಿದ್ದರಾಮಯ್ಯ (ಕುರುಬ) ಕಾಂಗ್ರೆಸ್, (ಗೆಲುವು)-96,435.
ಟಿ.ಬಸವರಾಜು, ಬಿಜೆಪಿ-37,819.
ಅಭಿಷೇಕ್.ಎಸ್.ಮನೇಗರ್, ಜೆಡಿಎಸ್-28,123.
ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯಗೆ 58,616 ಮತಗಳ ಬಾರಿ ಗೆಲುವು.
ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವುದು ಅವರ ಗೆಲುವಿನ ಬಹುದೊಡ್ಡ ಅಸ್ತ್ರ, ಸಹೋದರ ರಾಕೇಶ್ ಸಿದ್ದರಾಮಯ್ಯ ಸಾವಿನ ಅನುಕಂಪ, ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಗೆಲುವಿನ ಪ್ರಮುಖ ಕಾರಣಗಳು.
ಒಟ್ಟು ಮತದಾರರು : 2,23,007 (2022 ಕ್ಕೆ ಅನ್ವಹಿಸುವಂತೆ)
ಪುರುಷ - 1,11,777
ಮಹಿಳೆ - 1,11,230
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 53 ಸಾವಿರ
ದಲಿತ - 48 ಸಾವಿರ
ಒಕ್ಕಲಿಗ - 12 ಸಾವಿರ
ಕುರುಬ - 27 ಸಾವಿರ
ಉಪ್ಪಾರ - 14 ಸಾವಿರ
ನಾಯಕ - 23 ಸಾವಿರ
ಇತರೆ - 35 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು – ದಲಿತರು
ಕ್ಷೇತ್ರ ಸಂಖ್ಯೆ 220 : ತಿ.ನರಸೀಪುರ
ಎಂ.ಅಶ್ವಿನ್‌ಕುಮಾರ್ (ದಲಿತ) ಜೆಡಿಎಸ್, (ಗೆಲುವು)-83,929
ಹೆಚ್.ಸಿ.ಮಹದೇವಪ್ಪ, ಕಾಂಗ್ರೆಸ್-55,451.
ಎಸ್.ಶಂಕರ್ , ಬಿಜೆಪಿ- 11,812.
ಜೆಡಿಎಸ್‌ನ ಎಂ.ಅಶ್ವಿನ್‌ಕುಮಾರ್‌ಗೆ 28,478ಮತಗಳ ಅಂತರದ ಗೆಲುವು.
ಗೆಲುವಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂಬ ಅಲೆ ಹಾಗೂ ಹೆಚ್.ಸಿ.ಮಹದೇವಪ್ಪ ಮತ್ತು ಸಿದ್ದರಾಮಯ್ಯ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ ಪ್ರಮುಖ ಕಾರಣ.
ಒಟ್ಟು ಮತದಾರರು : 1,97,949, (2022 ನ.09ಕ್ಕೆ ಅನ್ವಯವಾಗುವಂತೆ)
ಪುರುಷ - 98,402,
ಮಹಿಳೆ - 99,547
ಮತಗಳ ಜಾತಿ ಲೆಕ್ಕಾಚಾರ :
ಲಿಂಗಾಯತ - 16 ಸಾವಿರ
ದಲಿತ - 50 ಸಾವಿರ
ಒಕ್ಕಲಿಗ - 52 ಸಾವಿರ
ಕುರುಬ - 18 ಸಾವಿರ
ಉಪ್ಪಾರ - 18 ಸಾವಿರ
ನಾಯಕ - 25
ಮುಸ್ಲಿಂ - 8 ಸಾವಿರ
ಇತರೆ - 18 ಸಾವಿರ
ಡಿಸೈಡಿಂಗ್ಫ್ಯಾಕ್ಟರ್ ಮತದಾರರು - ಒಕ್ಕಲಿಗ..
ಕೃಷ್ಣರಾಜ -
ಬಿಜೆಪಿ - ಶ್ರೀವತ್ಸ
ಕಾಂಗ್ರೆಸ್ - ಎಂಕೆ ಸೋಮಶೇಖರ್
ಜೆಡಿಎಸ್ - ಕೆವಿ ಮಲ್ಲೇಶ್
----
ಕಾಂಗ್ರೆಸ್‌ಗೆ ಗೆಲುವಿನ ಸಾಧ್ಯತೆ ಹೆಚ್ಚು- ಕಾರಣ ಬಿಜೆಪಿಯಲ್ಲಿ ಹೊಸ ಅಭ್ಯರ್ಥಿ- ಶಾಸಕ ರಾಮದಾಸ್‌ಗೆ ಕೋಕ್ ನೀಡಿದ್ದು, ಮಾಜಿ ಶಾಸಕ ಎಂಕೆ ಸೋಮಶೇಖರ್‌ಗೆ ಗೆಲುವಿನ ಸಾಧ್ಯತೆ.
ಚಾಮರಾಜ -
ಬಿಜೆಪಿ - ಹಾಲಿ ಶಾಸಕ L.ನಾಗೇಂದ್ರ
ಕಾಂಗ್ರೆಸ್ - ಕೆ.ಹರೀಶ್‌ಗೌಡ
ಜೆಡಿಎಸ್ - HK ರಮೇಶ್
- ಕಾಂಗ್ರೆಸ್‌ಗೆ ಗೆಲುವಿನ ಸಾಧ್ಯತೆ. ಆದರೆ ಮಾಜಿ ಶಾಸಕ ವಾಸುಗೆ ಟಿಕೆಟ್ ಮಿಸ್ ಆಗಿರುವ ಕಾರಣ, ಬಂಡಾಯ ಇದ್ದು ಬಿಜೆಪಿಗೆ ಲಕ್ ಖುಲಾಯಿಸುವ ಸಾಧ್ಯತೆ ಇದೆ.
ನರಸಿಂಹರಾಜ ಕ್ಷೇತ್ರ -
ಬಿಜೆಪಿ - ಸತೀಶ್ ಸಂದೇಶ್ ಸ್ವಾಮಿ
ಕಾಂಗ್ರೆಸ್ - ತನ್ವೀರ್ ಸೇಠ್
ಜೆಡಿಎಸ್ - ಅಬ್ದುಲ್ ಖಾದರ್
SDPI - ಅಬ್ದುಲ್ ಮಜಿದ್
AAP - ಧರ್ಮಶ್ರೀ ಸಿಂಗ್
ಈ ಬಾರಿ ಎನ್.ಆರ್ ಕ್ಷೇತ್ರದಲ್ಲಿ SDPIಗೆ ಗೆಲುವಿನ ಸಾಧ್ಯತೆ. ಆದರೆ ಎಎಪಿ ಅಭ್ಯರ್ಥಿ ಭರ್ಜರಿ ಪ್ರಚಾರ ಹಾಗೂ ಕೇಂದ್ರ ನಾಯಕರ ಆಗಮನದಿಂದ ಮುಸ್ಲಿಂ ಮತಗಳು ವಿಭಜನೆ ಆಗಿ ಕಾಂಗ್ರೆಸ್‌ಗೆ ಲಕ್ ಖುಲಾಯಿಸುವ ಸಾಧ್ಯತೆ ಇದೆ.
-
ಚಾಮುಂಡೇಶ್ವರಿ ಕ್ಷೇತ್ರ -
ಬಿಜೆಪಿ - ಕವೀಶ್ ಗೌಡ
ಕಾಂಗ್ರೆಸ್ - ಮಾವನಹಳ್ಳಿ ಸಿದ್ದೇಗೌಡ
ಜೆಡಿಎಸ್ - ಜಿಟಿ ದೇವೇಗೌಡ
- ಜೆಡಿಎಸ್‌ಗೆ ಗೆಲುವು ಸಾಧ್ಯತೆ.
ಕಾಂಗ್ರೆಸ್ ಮತಗಳು ಬಿಜೆಪಿಗೆ ಸಾಧ್ಯತೆ-
ಕವೀಶ್ ಗೌಡ, ಮಾಜಿ ಕಾಂಗ್ರೆಸ್ ಶಾಸಕ ವಾಸು ಪುತ್ರ.
ಸಿದ್ದೇಗೌಡ ಹಾಗೂ ಜಿಟಿಡಿ ಮಧ್ಯೆ ಟಫ್ ಫೈಟ್. ಆದರು ಜಿಟಿಡಿ ಜಯ ಸಾಧ್ಯತೆ.
----
ಹುಣಸೂರು ಕ್ಷೇತ್ರ
ಬಿಜೆಪಿ - ದೇವನಹಳ್ಳಿ ಸೋಮಶೇಖರ್
ಕಾಂಗ್ರೆಸ್- HP ಮಂಜುನಾಥ್ ( ಹಾಲಿ ಶಾಸಕ )
ಜೆಡಿಎಸ್ - ಜಿಡಿ ಹರೀಶ್ ಗೌಡ,
ಈ ಬಾರಿ ಜೆಡಿಎಸ್ ಗೆಲುವು ಸಾಧ್ಯತೆ. ಕಾರಣ ಜಿಟಿಡಿ ಪುತ್ರ, ಈ ಹಿಂದೆ ಮಂಜುನಾಥ್ ಗೆಲುವಿಗೆ ಕಾರಣವೇ ಜಿಟಿ ಕುಟುಂಬ, ಜೊತೆಯಲ್ಲಿ ಜಿಟಿಡಿ ಅಭಿವೃದ್ಧಿ ಕೆಲಸ ಮಾಡಿರುವುದು. 3 ಬಾರಿ ಹೆಚ್.ಪಿ ಮಂಜುನಾಥ್ ಶಾಸಕ ಆಗಿರೋದು. ಅಭಿವೃದ್ಧಿಗೆ ಅಷ್ಟಾಗಿ ಆದ್ಯತೆ ಇಲ್ಲದಿರುವುದು.
--
ಕೆ.ಆರ್.ನಗರ ಕ್ಷೇತ್ರ -
ಬಿಜೆಪಿ - ಹೊಸಹಳ್ಳಿ ವೆಂಕಟೇಶ್
ಕಾಂಗ್ರೆಸ್ - ಡಿ.ರವಿಶಂಕರ್
ಜೆಡಿಎಸ್ - ಸಾರಾ ಮಹೇಶ್
ಕಾಂಗ್ರೆಸ್‌ಗೆ ಗೆಲುವಿನ ಸಾಧ್ಯತೆ ಇದೆ. ಕಾರಣ, ಕಳೆದ ಬಾರಿ ಅಲ್ಪ ಮತಗಳ ಅಂತರದ ಸೋಲು, ಸಿಂಪತಿ ಮತಗಳು.
---
ಪಿರಿಯಾಪಟ್ಟಣ ಕ್ಷೇತ್ರ -
ಬಿಜೆಪಿ - ವಿಜಯಶಂಕರ್
ಕಾಂಗ್ರೆಸ್ - ಕೆ.ವೆಂಕಟೇಶ್
ಜೆಡಿಎಸ್ - ಕೆ.ಮಹದೇವು
ಜೆಡಿಎಸ್‌ನ ಮಹದೇವುಗೆ ಗೆಲುವಿನ ಸಾಧ್ಯತೆ. ಕಾರಣ ಸರಳ ವ್ಯಕ್ತಿತ್ವ. ಜನರ ಸಂಪರ್ಕಕ್ಕೆ ಸಿಗುವ ವ್ಯಕ್ತಿ. ಅಭಿವೃದ್ಧಿ ವರದಾನ.
---
ವರುಣಾ ಕ್ಷೇತ್ರ
ಬಿಜೆಪಿ - ವಿ.ಸೋಮಣ್ಣ
ಕಾಂಗ್ರೆಸ್ -
ಸಿದ್ದರಾಮಯ್ಯ
ಜೆಡಿಎಸ್ - ಭಾರತೀ ಶಂಕರ್
ಸಿದ್ದರಾಮಯ್ಯಗೆ ಗೆಲುವಿನ ಸಾಧ್ಯತೆ ಇದೆ. ಲಿಂಗಾಯತ ಮತವನ್ನ ಬಿಜೆಪಿ ನಂಬಿದ್ದರು. ಸಿದ್ದರಾಮಯ್ಯ ಸ್ಥಳೀಯರು ಹುಟ್ಟೂರು ಎಂಬ ಕಾರಣಕ್ಕೆ ಆದ್ಯತೆ ಮೇರೆಗೆ ಗೆಲುವಿನ ಸಾಧ್ಯತೆ ಇದೆ.
-----
ನಂಜನಗೂಡು ಕ್ಷೇತ್ರ -
ಬಿಜೆಪಿ - ಹರ್ಷವರ್ಧನ್ ( ಹಾಲಿ ಶಾಸಕ )
ಕಾಂಗ್ರೆಸ್ - ದರ್ಶನ್ ಧ್ರುವ ನಾರಾಯಣ
ಜೆಡಿಎಸ್ - ದರ್ಶನ್‌ಗೆ ಸಹಕಾರ ನೀಡಿದ್ದು ಯಾವುದೇ ಅಭ್ಯರ್ಥಿ ಹಾಕಿಲ್ಲ.
ದರ್ಶನ್ ಧ್ರುವಾಗೆ ಸಿಂಪತಿ ಗೆಲುವು ಸಾಧ್ಯತೆ. ತಂದೆಯ ವರ್ಚಸ್ಸು, ತಂದೆ ತಾಯಿ ಇಬ್ಬರ ಸಾವು ಎರಡು ಕೂಡ ಗೆಲುವಿಗೆ ಮುನ್ನಡಿ ಬರೆಯಲಿದೆ.
---
HD ಕೋಟೆ ಕ್ಷೇತ್ರ
ಬಿಜೆಪಿ - ಕೃಷ್ಣನಾಯಕ
ಕಾಂಗ್ರೆಸ್ - ಅನಿಲ್ ಚಿಕ್ಕಮಾದು
ಜೆಡಿಎಸ್ - ಜಯಪ್ರಕಾಶ್ ಚಿಕ್ಕಣ್ಣ
- ಬಿಜೆಪಿಗೆ ಗೆಲುವಿನ ಸಾಧ್ಯತೆ - ಕಾರಣ- ಧ್ರುವ ನಾರಾಯಣ ಕಾಂಗ್ರೆಸ್ ಸಹಕಾರಕ್ಕೆ ಇಲ್ಲದಿರೋದು. ಕರೋನಾ ವೇಳೆ ಕೃಷ್ಣನಾಯಕ ಕೆಲಸ ಮಾಡಿದ್ದು ಕೈ ಹಿಡಿಯುವ ಸಾಧ್ಯತೆ ಇದೆ.
---
ಟಿ.ನರಸೀಪುರ ಕ್ಷೇತ್ರ -
ಬಿಜೆಪಿ - ಡಾ.ರೇವಣ್ಣ
ಕಾಂಗ್ರೆಸ್ - HC ಮಹದೇವಪ್ಪ
ಜೆಡಿಎಸ್ - ಆರ್.ಅಶ್ವಿನ್ ಕುಮಾರ್ - ಹಾಲಿ ಶಾಸಕ
-
ಜೆಡಿಎಸ್ ಗೆಲುವಿನ ಸಾಧ್ಯತೆ. ಕಾರಣ, ಸರಳ ವ್ಯಕ್ತಿ, ಕೈಗೆ ಸಿಗುವ ಶಾಸಕ, ಅಭಿವೃದ್ಧಿ ಕೆಲಸ.
--------
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.