ಚಾಮರಾಜನಗರದಲ್ಲಿ 15 ಲಕ್ಷ ಮೌಲ್ಯದ ಮದ್ಯ, 12 ಲಕ್ಷ ಹಣ ಸೀಜ್
Karnataka Assembly Election: ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದ ವೇಳೆ, ಹಾಸನದ ವುಡ್ ಪೆಕ್ಕರ್ ಡಿಸ್ಟಿಲರಿಯಿಂದ ಸರಬರಾಜಾದ ಮದ್ಯದಲ್ಲಿ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂದಿದ್ದರಿಂದ 4,320 ಲೀಟರ್ ಮದ್ಯವನ್ನುವಶಕ್ಕೆ ಪಡೆದು ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಕೇಸ್ ದಾಖಲಿಸಿದ್ದಾರೆ.
Karnataka Assembly Election 2023: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಪ್ರತ್ಯೇಕ ಪ್ರಕರಣಗಳಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 12 ಲಕ್ಷ ರೂ. ಹಣ ಮತ್ತು 15 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಫ್ಯಾಕ್ಟರಿಯಿಂದ ಮದ್ಯದಂಗಡಿಗಳಿಗೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಮೌಲ್ಯದ 4,320 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಡಿಸ್ಟಿಲರಿ ಸನ್ನದುದಾರರು ಹಾಗೂ ಲಾರಿ ಚಾಲಕನ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ಇದನ್ನೂ ಓದಿ- ಚುನಾವಣಾ ಪ್ರಚಾರದಲ್ಲಿ ಭಾಗಿ,ವಾರ್ಡನ್ ಅಮಾನತು
ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದ ವೇಳೆ, ಹಾಸನದ ವುಡ್ ಪೆಕ್ಕರ್ ಡಿಸ್ಟಿಲರಿಯಿಂದ ಸರಬರಾಜಾದ ಮದ್ಯದಲ್ಲಿ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂದಿದ್ದರಿಂದ 4,320 ಲೀಟರ್ ಮದ್ಯವನ್ನುವಶಕ್ಕೆ ಪಡೆದು ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಕೇಸ್ ದಾಖಲಿಸಿದ್ದಾರೆ.
ಬೈಕಿನಲ್ಲಿ ದಾಖಲೆ ಇಲ್ಲದೇ 12 ಲಕ್ಷ ಸಾಗಾಟ- ಮನಿ ಸೀಜ್ ಮಾಡಿದ ಪೊಲೀಸ್:-
ಇನ್ನೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ವೇಳೆ 12 ಲಕ್ಷ ರೂ. ವಶಕ್ಕೆ ಪಡೆದ ಘಟನೆ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಇದನ್ನೂ ಓದಿ- ಜಮೀರ್ ಅಹಮದ್ ಖಾನ್ ವಿರುದ್ಧದ ಕೇಸ್ ಗೆ ತಡೆ ನೀಡಲು ನಕಾರ
ಬಾಣಹಳ್ಳಿ ಚೆಕ್‍ಪೋಸ್ಟ್ ನಲ್ಲಿ ಸಂತೇಮರಹಳ್ಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಬೈಕ್‍ವೊಂದರಲ್ಲಿ ಯಾವುದೇ ದಾಖಲಾತಿಗಳಿಲ್ಲದ 12 ಲಕ್ಷ ರೂ. ಸಾಗಿಸುತ್ತಿದದ್ದು ಬೆಳಕಿಗೆ ಬಂದಿದೆ. ಕೂಡಲೇ ಹಣ ಜಪ್ತಿ ಮಾಡಿ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.