ಬೆಂಗಳೂರು : Karnataka Assembly Election : ಮತದಾನ ನಮ್ಮ ಹಕ್ಕು. ಉತ್ತಮ ನಾಯಕ ಆರಿಸಿ ಬರಬೇಕಾದರೆ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸಬೇಕು. ಹೀಗಾದಾಗ ಮಾತ್ರ  ಉತ್ತಮ ನಾಯಕನ ಆಯ್ಕೆ ಸಾಧ್ಯ್ಯವಾಗುತ್ತದೆ.  ನಾನೊಬ್ಬ ಮತ ಚಲಾಯಿಸದಿದ್ದಲ್ಲಿ ಏನಾಗುತ್ತದೆ ಎನ್ನುವ ಧೋರಣೆ ಕೆಲವರಲ್ಲಿ ಇರುತ್ತದೆ . ಆದರೆ ಇಂಥಹ ಯೋಚನೆಗಳೇ ತಪ್ಪು. ಒಂದೊಂದು ಮತವು ಕೂಡಾ ಬಹು ಅಮೂಲ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಇಂದಿನ ಮತದಾನದ ಕೆಲವು ದೃಶ್ಯಗಳನ್ನು ನೋಡುತ್ತಿದ್ದರೆ ಜನ ತಮ್ಮ ಮತದಾನದ ಹಕ್ಕಿನ ಪ್ರಾಮುಖ್ಯತೆಯನ್ನು ಚೆನ್ನಾಗಿಯೇ ಅರಿತಿರುವಂತೆ ಭಾಸವಾಗುತ್ತದೆ. ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದವರು ಹುರುಪಿನಿಂದ ಬಂದು ಮತದಾನ ಮಾಡುತ್ತಿದ್ದರೆ, ಹಣ್ಣು ಹಣ್ಣು ಮುದುಕಿಯರು ಕೂಡಾ ಅಷ್ಟೇ ಸಂಭ್ರಮದಿಂದ ಹಕ್ಕು ಚಲಾಯಿಸುತ್ತಿದ್ದಾರೆ.  


ಇದನ್ನೂ ಓದಿ : ಮಲೆನಾಡಲ್ಲಿ ಮಧುಮಗಳ ಮತದಾನ ! ಸಿದ್ದರಾಮನಹುಂಡಿಯಲ್ಲಿ ವ್ಹೀಲ್ ಚೇರ್ ನಲ್ಲಿ ಬಂದು ಹಕ್ಕು ಚಲಾಯಿಸಿದ ವೃದ್ದೆ


ಶತಾಯುಷಿಯಿಂದ ಮತದಾನ :
ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದಲ್ಲಿ ಶತಾಯುಷಿ ಮಹಿಳೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ಹುನಗುಂದ ಕ್ಷೇತ್ರದ ಇಳಕಲ್ ನಗರದ ಸರ್ಕಾರಿ ಶಾಲೆ ನಂ9.ರಲ್ಲಿ ತಮ್ಮ ಮತದಾನ ಮಾಡಿದ್ದಾರೆ. ಕುಟುಂಬಸ್ಥರ ಸಹಕಾರದಿಂದ ವ್ಹೀಲ್ ಚೇರ್ ನಲ್ಲಿ ಆಗಮಿಸಿದ ಶತಾಯುಷಿ ಮಹಿಳೆ  ಚಂದಮ್ಮ ಹಿರೇಮನಿ ತಮ್ಮ ಮತ ನೀಡಿದ್ದಾರೆ. 


ವಯಸ್ಸು 100 ದಾಟಿದರೂ ಬತ್ತದ ಹುರುಪು : 
ಮತ್ತೊಂದೆಡೆ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರಿನಲ್ಲಿಯೂ  ಶತಾಯುಷಿಯೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ. 10 5 ವರ್ಷದ ದೇವಕ್ಕಮ್ಮ ಸಿದ್ದರಾಮರಡ್ಡಿಯಿಂದ ಮತದಾನ ಮಾಡಿದ್ದಾರೆ. ಕಾರಿನಲ್ಲಿ ಮೊಮ್ಮಗನ ಜೊತೆ ಆಗಮಿಸಿದ ದೇವಕ್ಕಮ್ಮ ಮತದಾನ ಮಾಡಿದ್ದಾರೆ. 


ಇದನ್ನೂ ಓದಿ :  Karnataka voting: ಮತದಾನಕ್ಕಾಗಿ ಅಮೇರಿಕಾದಿಂದ ಬಂದ ಮಹಿಳೆ!


75ರ ವಯಸ್ಸಿನಲ್ಲಿಯೂ ಹಿಂದೆ ಬೀಳದ ವೃದ್ದೆ  :
ಇನ್ನು ಗೋವಿಂದರಾಜನಗರ ಕ್ಷೇತ್ರದಲ್ಲಿ ಮತದಾನ ಮಾಡಿದ  75ರ ವೃದ್ದೆ  ರಮಾಬಾಯಿ, ಮತ ಚಲಾಯಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಪ್ರತಿ ಬಾರಿ ಮತಗಟ್ಟೆಗೆ ಬಂದೆ ವೋಟ್ ಮಾಡುತ್ತೇನೆ, ಪ್ರತಿಯೊಬ್ಬರೂ ತಪ್ಪದೆ ಬಂದು ವೋಟ್ ಮಾಡಬೇಕು ಎಂದು  ಸಲಹೆ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ