Karnataka Assembly Election: ಮೈಸೂರಿನಲ್ಲಿ ಇಂದು ದಿಗ್ಗಜರಿಂದ ಚುನಾವಣಾ ಪ್ರಚಾರ
Karnataka Assembly Elections: ಇಂದು ಮೈಸೂರಿನಲ್ಲಿ ಒಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Karnataka Assembly Elections 2023: 10 ಮೇ 2023ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ಆರಂಭಿಸಿವೆ. ಮೈಸೂರು ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ.
ನಿನ್ನೆಯಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭರ್ಜರಿ ಪ್ರಚಾರ ನಡೆಸಿ ಕಮಲ ಪಾಲಯಕ್ಕೆ ಜೀವ ತುಂಬಿದ್ದರು. ಇಂದು ಮೈಸೂರಿನಲ್ಲಿ ಒಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ- ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ
ಎಚ್.ಡಿ. ದೇವೇಗೌಡರ ಕಾರ್ಯಕ್ರಮದ ವಿವರ:
* ಬೆಳಗ್ಗೆ 11 ಗಂಟೆಗೆ ಪಿರಿಯಾಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮನ
* ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಪರ ಮತಯಾಚನೆ.
* ಮಧ್ಯಾಹ್ನ 2 ಗಂಟೆಗೆ ಕೆ ಆರ್ ನಗರಕ್ಕೆ ಪ್ರಯಾಣ
* ಕೆ ಆರ್ ನಗರ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್ ಪರ ಮತಯಾಚನೆ
* ಹೊಸೂರು, ಸಾಲಿಗ್ರಾಮ, ಮಿರ್ಲೆ ಗ್ರಾಮದಲ್ಲಿ ಪ್ರಚಾರ
* ಸಂಜೆ 4.30ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಎಚ್.ಡಿ. ಕುಮಾರಸ್ವಾಮಿಯವರ ಕಾರ್ಯಕ್ರಮ ಇಂತಿದೆ:
>> ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಆಗಮನ
>> ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪೂಜೆ
>> ಬೆಳಗ್ಗೆ 10 ಗಂಟೆಗೆ ಚಾಮರಾಜ ಕ್ಷೇತ್ರದಲ್ಲಿ ಪ್ರಚಾರ
>> ವಿಜಯನಗರದ ಸಪ್ತಪದಿ ಕಲ್ಯಾಣಮಂಟಪದಲ್ಲಿ ಸಭೆ
>> ಜೆಡಿಎಸ್ ಅಭ್ಯರ್ಥಿ ರಮೇಶ್ ಪರ ಮತಯಾಚನೆ
>> ಮಧ್ಯಾಹ್ನ 12.30ಕ್ಕೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ
>> ಜೆಡಿಎಸ್ ಅಭ್ಯರ್ಥಿ ಕೆ ವಿ ಮಲ್ಲೇಶ್ ಪರ ಮತಯಾಚನೆ
>> ಮಧ್ಯಾಹ್ನ 3.30ಕ್ಕೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ
>> ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ಪರ ಮತಯಾಚನೆ
>> ಟಿ ನರಸೀಪುರ ಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಕಾರ್ಯಕ್ರಮ
ಇದನ್ನೂ ಓದಿ- ಡಿಜಿಟಲ್ ಮಿಡೀಯಾ ಮೊರೆ ಹೋದ ರಾಜಕೀಯ ಕಲಿಗಳು; ಕಂಗಾಲಾದ ಪ್ರಿಂಟಿಂಗ್ ಪ್ರೆಸ್ ಮಾಲೀಕರು
ಪ್ರಿಯಾಂಕಾ ಗಾಂಧಿಯವರ ಕಾರ್ಯಕ್ರಮಗಳು ಈ ರೀತಿ ಇದೆ:
** ಬೆಳಗ್ಗೆ 11.30ಕ್ಕೆ ಸುತ್ತೂರು ಹೆಲಿಪ್ಯಾಡ್‌ಗೆ ಆಗಮನ.
** ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಾರ್ವಜನಿಕರ ಸಭೆಯಲ್ಲಿ ಭಾಗಿ
** ಟಿ ನರಸೀಪುರ ತಾಲ್ಲೂಕಿನ ಹೆಳವರಹುಂಡಿಯಲ್ಲಿ ಸಭೆ
** ಟಿ ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ ಹೆಚ್ ಸಿ ಮಹದೇವಪ್ಪ ಪರ ಮತಯಾಚನೆ
** ಮಧ್ಯಾಹ್ನ 2:30ಕ್ಕೆ ಟಿ ನರಸೀಪುರದಿಂದ ಹನೂರಿಗೆ ಹೊರಡಲಿರುವ ಪ್ರಿಯಾಂಕಾ ಗಾಂಧಿ
** ಸಂಜೆ 05:30 ರಿಂದ 6:30 ಕೆ ಆರ್ ನಗರದಲ್ಲಿ ರೋಡ್ ಶೋ
** ಕೈ ಅಭ್ಯರ್ಥಿ ರವಿಶಂಕರ್ ಪರ ಮತಯಾಚನೆ
** ಕೆ ಆರ್ ನಗರದ ತೋಪಮ್ಮನ ದೇವಸ್ಥಾನ, ಅಂಬೇಡ್ಕರ್ ಪುತ್ಥಳಿ ಮಾರ್ಗವಾಗಿ ಸಾಗಿ
ಮುನ್ಸಿಪಾಲಿಟಿ ಆಫೀಸ್ ವೃತ್ತದವರೆಗೂ ಸುಮಾರು 2 ಕಿ.ಮೀ ಮೆರವಣಿಗೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.