Karnataka Assembly Elections: ಚುನಾವಣೆಗೆ ದಿನಗಣನೇ ಶುರುವಾಗುತ್ತಿದ್ದಂತೆ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಜೋರಾಗಿ ನಡೆಸುತ್ತಿದ್ದಾರೆ. ಆದರೆ ಕೆಲವು ವಿಡಿಯೋಗಳು ಟ್ರೋಲ್ ಆಗಿರುವುದರಿಂದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಹೋಗಿದೆ. ಎಲ್ಲಿ ಅಂತೀರಾ ಈ ಸ್ಟೋರಿ ಓದಿ... 


COMMERCIAL BREAK
SCROLL TO CONTINUE READING

ಹೌದು.. ಬಿಸಿಲುನಾಡು ರಾಯಚೂರಿನಲ್ಲಿ ಅದೊಂದು ಪಾಲಿಟಿಕಲ್ ಫೈಟ್ ನಡೆದು ಹೋಗಿದೆ..ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ದೊಡ್ಡ ಹೊಡೆದಾಟವೇ ನಡೆದು ಹೋಗಿದೆ.. ಆ ಸಿನೆಮಾ ಸ್ಟೈಲ್ ಹೊಡೆದಾಟಕ್ಕೆ ರಾಯಚೂರು ಜನ ಬೆಚ್ಚಿ ಬಿದ್ದಿದ್ದಾರೆ.


ಹೌದು, ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬಹುತೇಕ ರಾಯಚೂರು ನಗರದ ಜನ ಅದಾಗಲೇ ನಿದ್ದೆಗೆ ಜಾರುತ್ತಿದ್ರು.. ಆಗ ಕೇಳಿಸಿದ್ದೇ ರಣ ಭಯಂಕರ ಶಬ್ಧ, ಜೋರು ಜೋರು ಕಿರುಚಾಟ.. ಹೊಡೆದಾಟದ ಅವಾಚ್ಯ ಶಬ್ಧಗಳು ಮಲಗಿದ್ದ ಜನರನ್ನ ಬಡಿದೆಬ್ಬಿಸಿತ್ತು.. ರಾಯಚೂರು ನಗರದ ಅಂದ್ರೂನ್ ಖಿಲ್ಲಾ ಏರಿಯಾದ ಜನ ಏನಾಯ್ತು ಅಂತ ಎದ್ದು ನೋಡೊವಷ್ಟರಲ್ಲಿ ಇಡೀ ಏರಿಯಾವೇ ರಣಾಂಗಣವಾಗಿತ್ತು.. ಅಲ್ಲಿ ರಕ್ತ ಚಿಮ್ಮಿತ್ತು.. ಅಲ್ಲಿ ಅಂದುಕೊಂಡಂತೇ ಆಗಿದ್ರೆ ಅಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳೀಸೊ ಹೊಡೆದಾಟವೇ ನಡೆದು ಹೋಗ್ತಿತ್ತು. ಆದ್ರೆ ಅಲ್ಲಿ ಸದರ್ ಬಜಾರ್ ಪೊಲೀಸರು ಅಲರ್ಟ್ ಆಗಿದ್ದರಿಂದ ನಡೆಯಬೇಕಾದ ಬಾರೀ ಅನಾಹುತ ತಪ್ಪಿದಂತಾಗಿದೆ. 


ಇದನ್ನೂ ಓದಿ- Karnataka elections: ಕಾಂಗ್ರೆಸ್ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ-ಸಿದ್ದರಾಮಯ್ಯ


ಹೌದು, ನಿನ್ನೆ ರಾಯಚೂರು ನಗರದ ಅಂದ್ರೂನ್ ಖಿಲ್ಲಾ ಏರಿಯದಾದಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ ನಡೆದು ಹೋಗಿದೆ. ಅಲ್ಲಿ ಬಿಜೆಪಿ ಬೆಂಬಲಿಗ ಆಸೀಪ್ ನ ಬಲಗೈ ಮೂರು ಬೆರಳುಗಳು ಕಟ್ ಆಗಿದ್ರೆ, ಕಾಂಗ್ರೆಸ್ ಬೆಂಬಲಿಗ ಮೊಹಮ್ಮದ್ ವಾಸಿಮ್ ಮೇಲೂ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಇಲ್ಲಿ ಹಲ್ಲೆಗೊಳಗಾಗಿರೋ ಬಿಜೆಪಿ ಬೆಂಬಲಿಗ ಆಸೀಪ್ ಇದೇ ರಾಯಚೂರು ನಗರದ ಅಂದ್ರೂನ್ ಖಿಲ್ಲಾ ಏರಿಯಾದ ವಾರ್ಡ್7 ರ ನಿವಾಸಿ.. ಮತ್ತೊಬ್ಬ ಗಾಯಾಳು ಮೊಹಮ್ಮದ್ ವಾಸಿಮ್ ಕೂಡ ಇದೇ ಏರಿಯಾದವ.. ಅಷ್ಟೇ ಅಲ್ಲ, ಮೊಹಮ್ಮದ್ ವಾಸೀಮ್ ವಾರ್ಡ್ ನಂಬರ್ 7 ರ ಕಾಂಗ್ರೆಸ್ ಕೌನ್ಸಲರ್ ತಿಮ್ಮಾರೆಡ್ಡಿ ಆಪ್ತ.. ತ್ತ ಬಿಜೆಪಿಯ ಆಸೀಫ್ ಸಹೋದರ ಅಹ್ಮದ್ ಬೇಗ್ ಕಾಂಟ್ರಾಕ್ಟರ್ ಆಗಿದ್ದಾರೆ.. ಈತ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ.. 


ಇತ್ತೀಚೆಗೆ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಇದೇ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ನೇತೃತ್ವದಲ್ಲಿ ಕಾರ್ಯಕ್ರಮವೊಂದನ್ನ ಮಾಡಿದ್ರು.. ಆ ವಿಡಿಯೋವನ್ನ ಕಾಂಗ್ರೆಸ್ ಪಾಳಯದವರು ಟ್ರೋಲ್ ಮಾಡುತ್ತಿದ್ರು.. ಈ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ಬಿಜೆಪಿಯ ದಲಾಲ್ ಅಂದ್ರೆ ಬಿಜೆಪಿ ಬ್ರೋಕರ್ ಅಂತ ಟ್ರೋಲ್ ಮಾಡುತ್ತಿದ್ರಂತೆ. ಇದರಿಂದ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ಬೆಂಬಲಿಗರು, ಕುಟುಂಬಸ್ಥರು ಬೇಸರಗೊಂಡಿದ್ರು. ಈ ಮಧ್ಯೆಯೂ ಈ ರೀತಿ ಟ್ರೋಲ್ಗಳನ್ನ ಫೇಸ್ಬುಕ್, ವಾಟ್ಸ್ ಆಪ್ ಮೂಲಕ ಹರಿಬಿಡಲಾಗ್ತಿತ್ತು. ಇದೇ ವಿಚಾರ ನಿನ್ನೆಯೂ ಪ್ರಸ್ತಾಪವಾಗಿದೆ. ಆಗ ಈ ಬಿಜೆಪಿ-ಕಾಂಗ್ರೆಸ್ ಬೆಂಬಲಿಗರ ನಡುವೆ ಕಿರಿಕ್ ಆಗಿದೆ. ನಂತ್ರ ಕಾಂಗ್ರೆಸ್ನ ಮೊಹಮ್ಮದ್ ವಾಸೀಮ್ ಮಚ್ಚನ್ನ ತಂದ್ರೆ, ಇನ್ನೂ ಕೆಲವರು ದೊಡ್ಡ ದೊಣ್ಣೆಗಳನ್ನ ತಂದು ಬಿಜೆಪಿ ಬೆಂಬಲಿಗ ಗುತ್ತಿಗೆದಾರ ಅಹ್ಮದ್ ಬೇಗ್ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರಂತೆ.. ಆಗ ವಿರೋಧಿ ಬಣದ ಕೈಗೆ ಸಿಕ್ಕಿ ಅಹ್ಮದ್ ಬೇಗ್ ಸಹೋದರ ಆಸೀಫ್ ಮೇಲೆ ಮಚ್ಚು ಬೀಸಲಾಗಿತ್ತಂತೆ.. ಆದ್ರೆ ಆ ಮಚ್ಚನ್ನ ಆಸೀಫ್ ಕೈಯಿಂದ ಹಿಡಿದಿದ್ರು.. ಆಗ ಅವರ ಬಲಗೈನ ಮೂರು ಬೆರಳುಗಳು ಕಟ್ ಆಗಿವೆಯೆಂದು ವರದಿಯಾಗಿದೆ. 


ಇದನ್ನೂ ಓದಿ- ಅಮುಲ್ ವಿಚಾರದಲ್ಲಿ ರಾಜಕಾರಣ ಸಲ್ಲದು: ಸಿಎಂ ಬಸವರಾಜ್ ಬೊಮ್ಮಾಯಿ


ಸದ್ಯ ಘಟನೆ ಸಂಬಂಧ ಸದರ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಕೌಂಟರ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ಈ ಹೊಡೆದಾಟದಿಂದ ರಾಯಚೂರಿನ ಜನ ಬೆಚ್ಚಿ ಬಿದ್ದಿರೋದಂತು ಸುಳ್ಳಳ್ಳ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.