ಬೆಂಗಳೂರು: ಬಿಜೆಪಿಯಿಂದ ಶೋಷಣೆಗೆ ಒಳಗಾದ ದಲಿತರಿಗೆ ಕಾಂಗ್ರೆಸ್ ಪಕ್ಷವೇ ಭರವಸೆ ಎಂದು ಕಾಂಗ್ರೆಸ್ ಬುಧವಾರ ಟ್ವೀಟ್ ಮಾಡಿತ್ತು. ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಎಸ್ ಪಕ್ಷಕ್ಕೆ ದಲಿತರ ನೆನಪಾಗಿದೆ’ ಎಂದು ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

#DalitVirodhiCongress ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷಕ್ಕೆ ದಲಿತರ ನೆನಪಾಗಿದೆ. ದಲಿತರು ಈ ಭಾರಿ ನಿಮ್ಮನ್ನು ಸೋಲಿಸುತ್ತಾರೆಂಬ ಸಮೀಕ್ಷೆ ಆಧರಿಸಿ ಕೋಲಾರ ಬಿಟ್ಟು ಓಡಿದ ಸಿದ್ದರಾಮಯ್ಯವರೇ, ದಲಿತ  ನಾಯಕರನ್ನು ಸೋಲಿಸಿದ ನೀವು ಯಾವ ಮುಖವಿಟ್ಟುಕೊಂಡು ದಲಿತರಲ್ಲಿ ಓಟು ಕೇಳುತ್ತೀರಿ?’ ಎಂದು ಪ್ರಶ್ನಿಸಿದೆ.


"ಬಿಜೆಪಿಗೆ ಕೊಳ್ಳೆ ಹೊಡೆಯಲು ಎಟಿಎಂ ಆಗಿದೆ ಬೆಂಗಳೂರು!!"


‘ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಶ್ರೀನಿವಾಸ್ ಪ್ರಸಾದ್, ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಿತ್ತು. ಅಖಂಡ ಶ್ರೀನಿವಾಸಮೂರ್ತಿ ಮೇಲೆ ದಾಳಿ ನಡೆದಾಗಲು, ತುಷ್ಟೀಕರಣದ ಕಾರಣದಿಂದ ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ’ವೆಂದು ಬಿಜೆಪಿ ಟೀಕಿಸಿದೆ.


ದಲಿತ ನಾಯಕರ ಮೇಲೆ ಸುಳ್ಳು ಪ್ರಕರಣ ದಾಖಲು. ಕಾಂಗ್ರೆಸ್ ದಲಿತರಿಗೆ ಭರವಸೆಯ ಬೆಳಕನ್ನು ಹಿಂದೆಯೂ ನೀಡಿದೆ, ಮುಂದೆಯೂ ನೀಡಲಿದೆ’ ಎಂದು ‘ಕೈ’ ಪಕ್ಷವು ಟ್ವೀಟ್ ಮಾಡಿತ್ತು.


ಇದನ್ನೂ ಓದಿ: ಉತ್ತರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಬದ್ಧತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.