ಇಂದು ನಿರ್ಧಾರವಾಗಲಿದೆ ಮೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ! ಜನರ ಒಲವು ಯಾರ ಕಡೆಗೆ..?
Karnataka by poll elections : ಇಂದು(ನವೆಂಬರ್ 23) ರಾಜ್ಯದ 3 ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ ಪ್ರಕಟವಾಗಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಶುರುವಾಗಲಿದ್ದು, ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ ಇದಾಗಿದ್ದು, ಜನರ ಒಲವು ಯಾರ ಕಡೆಗೆ ಎಂಬುದು ಇನ್ನು ಕೆಲವೇ ತಾಸುಗಳಲ್ಲಿ ತಿಳಿದು ಬರಲಿದೆ.

ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ರಿಸಲ್ಟ್ ಇಂದು ಪ್ರಕಟವಾಗಲಿದ್ದು, 3 ಕ್ಷೇತ್ರದಲ್ಲಿ ಕೌಂಟಿಂಗ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಅಭ್ಯರ್ಥಗಳ ಭವಿಷ್ಯ ಇಂದು ಪ್ರಕಟವಾಗಲಿದೆ. ಮತ ಎಣಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.
ಎಣಿಕೆ ಕಾರ್ಯಕ್ಕೆ ಈಗಾಗಲೆ ಆಯೋಗದಿಂದ ಸಕಲ ಸಿದ್ಧತೆ ನಡೆದಿದೆ. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಮತ ಎಣಿಕೆ ನಡೆಯಲಿದ್ದು, ಒಂದೊಂದು ಕೊಠಡಿಯಲ್ಲಿ ತಲಾ 7 ಟೇಬಲ್ ವ್ಯವಸ್ಥೆ
ಮಾಡಲಾಗಿದೆ. ಪ್ರತ್ಯೇಕವಾಗಿ ಪೋಸ್ಟಲ್ ಬ್ಯಾಲೆಟ್ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, 15 ಟೇಬಲ್‌ಗಳಿಗೆ 45 ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಚನ್ನಪಟ್ಟಣದಲ್ಲಿ ನಿಖಿಲ್ V/s ಸಿಪಿವೈ ಹಣಾಹಣಿಯಾದರೆ, ಶಿಗ್ಗಾಂವಿಯಲ್ಲಿ ಭರತ್ V/s ಯಾಸಿರ್ ಖಾನ್ ಪಠಾಣ್ ಫೈಟ್ ಜೋರಗಿದೆ, ಇನ್ನೂ ಸಂಡೂರಲ್ಲಿ ಅನ್ನಪೂರ್ಣ V/ಬಂಗಾರು ಹನುಮಂತು ನಡುವೆ ಕಾಳಗ ಜೋರಾಗಿದ್ದು, ಕೆಲವೇ ಹೊತ್ತಿನಲ್ಲಿ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ನಿಖರ ಫಲಿತಾಂಶ ದೊರೆಯಲಿದೆ.