ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು 43 ಅಭ್ಯರ್ಥಿಗಳನ್ನೊಳಗೊಂಡ ಮೂರನೇ ಪಟ್ಟಿಯನ್ನು (ಶನಿವಾರ) ಬಿಡುಗಡೆ ಮಾಡಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿರುವ ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಸೇರಿದಂತೆ 43 ಜನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇದರಲ್ಲಿ 16 ಹೊಸ ಮುಖಗಳಿಗೆ ಕೈ ಮಣೆಹಾಕಿದೆ.


COMMERCIAL BREAK
SCROLL TO CONTINUE READING

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ ಅಥಣಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ನಿನ್ನೆ ಸವದಿ ಟಿಕೆಟ್‌ ನೀಡದಿದ್ದಕ್ಕೆ ಬಿಜೆಪಿ ತೊರೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇಂದು ಅವರನ್ನು ಅಥಣಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಘೋಷಿಸಿದೆ. ಬಿಜೆಪಿ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನೀಡದೆ ಅವರನ್ನು ಅಗೌರವದಿಂದ ನಡೆಸಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೆ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೂಡ ಇದನ್ನೇ ಒತ್ತಿ ಹೇಳಿದ್ದರು.


Karnataka election 2023: ಮತ್ತೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ


ಇತ್ತೀಚೆಗೆ ಬಿಜೆಪಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಬಿಜೆಪಿ ಕರ್ನಾಟಕ ಉಸ್ತುವಾರಿ ಸಚಿವ ಅರುಣ್ ಸಿಂಗ್ ಮಾತನಾಡಿ, ಚುನಾವಣೆಯಲ್ಲಿ ಸೋತರೂ ಸವದಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೂ ಅವರು ದೊಡ್ಡ ತಪ್ಪು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಅಂತ ಹೇಳಿದ್ದರು.


ಇನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 209 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ರಾಜ್ಯ ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಚಿತಾಪುರ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಸಿದ್ದರಾಮಯ್ಯ ಅವರು ವರುಣಾದಿಂದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ದ ಕಣಕ್ಕಿಳಿಯಲಿದ್ದಾರೆ.


43 ಅಭ್ಯರ್ಥಿಗಳ ಪೈಕಿ 16 ಹೊಸ ಮುಖಗಳಿಗೆ ಕಾಂಗ್ರೆಸ್‌ ಮಣೆ


  1. ಮೂಡಿಗೆರೆ - ನಯನ ಮೋಟಮ್ಮ

  2. ಬೊಮ್ಮನಹಳ್ಳಿ - ಉಮಾಪತಿ ಶ್ರೀನಿವಾಸ್ ಗೌಡ

  3. ಔರಾದ್ - ಭೀಮ್ ಸೇನ್ ಶಿಂಧೆ

  4. ಚಿಕ್ಕಬಳ್ಳಾಪುರ - ಪ್ರದೀಪ್‌ ಈಶ್ವರ್

  5. ಬೆಳಗಾವಿ ದಕ್ಷಿಣ - ಪ್ರಭಾವತಿ ಮಸ್ತ್ ಮರಡಿ

  6. ತೇರದಾಳ - ಸಿದ್ದಪ್ಪ ಕೊಣ್ಣೂರು

  7. ಶಿರಹಟ್ಟಿ - ಸುಜಾತ ದೊಡ್ಡಮನಿ 

  8. ಕುಮಟಾ - ನಿವೇದಿತ್ ಆಳ್ವಾ 

  9. ಬಳ್ಳಾರಿ ಸಿಟಿ - ನಾ.ರ ಭರತ್ ರೆಡ್ಡಿ

  10. ಶಿವಮೊಗ್ಗ - ಎಚ್.ಸಿ ಯೋಗೇಶ್ 

  11. ಕಾರ್ಕಳ - ಉದಯ್ ಶೆಟ್ಟಿ

  12. ದಾಸರಹಳ್ಳಿ - ಧನಂಜಯ್ ಗೌಡ

  13. ಮದ್ದೂರು - ಉದಯ್ ಗೌಡ

  14. ಹಾಸನ - ಬನವಾಸಿ ರಂಗಸ್ವಾಮಿ

  15. ಪುತ್ತೂರು - ಅಶೋಕ್ ರೈ

  16. ಚಾಮರಾಜ - ಹರೀಶ್ ಗೌಡ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.