ಸಿಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ! ಕನ್ನಡಕ್ಕೆ ಕಂಟಕ ರವಿ!: ಕಾಂಗ್ರೆಸ್ ವ್ಯಂಗ್ಯ
Karnataka Election 2023: ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ, ಹಿಂದಿ ಹೇರಿಕೆಗೂ ಸಮರ್ಥನೆ. ಸಿಟಿ ರವಿ ಅವರೇ, ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ ಎಂದು ಕಾಂಗ್ರೆಸ್ ಕುಟುಕಿದೆ.
ಬೆಂಗಳೂರು: ಬೆಂಗಳೂರಿನ ಮಾರುಕಟ್ಟೆಗೆ ಅಮುಲ್ ಉತ್ಪನ್ನಗಳ ಸರಬರಾಜು ವಿಚಾರ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಅಮುಲ್ ಪರ ಬ್ಯಾಟಿಂಗ್ ಮಾಡಿರುವ ಬಿಜೆಪಿ ನಾಯಕ ಸಿಟಿ ರವಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ. ಮೊಸರಿಗೆ ದಹಿ ಎಂದರೂ ಸಮರ್ಥನೆ, ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ, ಹಿಂದಿ ಹೇರಿಕೆಗೂ ಸಮರ್ಥನೆ. ಸಿಟಿ ರವಿ ಅವರೇ, ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ’ ಎಂದು ಕಾಂಗ್ರೆಸ್ ಕುಟುಕಿದೆ.
"ಈ ಬಾರಿ ಪರಮೇಶ್ವರ ಅವರನ್ನು ಸೋಲಿಸುತ್ತೇವೆ"
‘ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ, ತಮ್ಮ ಭಾಷೆಯ ಉಳಿವಿಗಾಗಿ, ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗಾಗಿ ಹೋರಾಡಿದಾಗೆಲ್ಲ ಅಣಕಿಸುವ, ಟೀಕಿಸುವ ಸಿಟಿ ರವಿಯವರೇ, ನಿಮಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ, ತಾತ್ಸಾರ? ಸಿಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ! ಕನ್ನಡಕ್ಕೆ ಕಂಟಕ ರವಿ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಸಮರ್ಥಿಸಿಕೊಂಡಿದ್ದ ಸಿಟಿ ರವಿ, ಕಾಂಗ್ರೆಸ್ ಮಾಡಿದ ಟ್ವೀಟ್‍ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ ಗುಲಾಮರಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಭಾರತದ ಬ್ರ್ಯಾಂಡ್ ಅಮುಲ್ ಭಾರತದಲ್ಲೇ ಉತ್ಪನ್ನ ಮಾರಿದರೆ ಇವರಿಗೆ ತೊಂದರೆ. ಇದೆಂಥ ಲೂಸರ್ಸ್‍ನ ಗುಂಪು’ ಎಂದು ಸಿಟಿ ರವಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದರು.
"ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಅವರ ಕೇಂದ್ರ ನಾಯಕರ ರಾಜ್ಯ ಪ್ರವಾಸವೇ ಸಾಕ್ಷಿ"
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.