ಬೆಂಗಳೂರು: ಬಿಜೆಪಿಗರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದಿದ್ದರು, ಆದರೆ ಕರ್ನಾಟಕದ ಜನತೆ ಬಿಜೆಪಿ ಮುಕ್ತ ದಕ್ಷಿಣ ಭಾರತವನ್ನಾಗಿ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

‘ಇದು ಐತಿಹಾಸಿಕ ಘಳಿಗೆ. ಕರ್ನಾಟ ಇತಿಹಾಸ ಸೃಷ್ಟಿಸಿದೆ. ಕರ್ನಾಟಕ ಇಡೀ ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕು ತೋರಿದೆ. ಕರ್ನಾಟಕದ ನನ್ನೆಲ್ಲಾ ಸಹೋದರ-ಸಹೋದರಿಯರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು 6.5 ಕೋಟಿ ಕನ್ನಡಿಗರ ಗೆಲುವು’ ಎಂದು ಸುರ್ಜೇವಾಲಾ ಹೇಳಿದ್ದಾರೆ.


Karnataka Election Results 2023: 5 ಸ್ಥಾನಗಳಲ್ಲಿ ಕಾಂಗ್ರೆಸ್, 2 ಸ್ಥಾನಗಳಲ್ಲಿ ಬಿಜೆಪಿ, ಇಲ್ಲಿದೆ ಬಾಗಲಕೋಟೆ ಫೈನಲ್ ರಿಸಲ್ಟ್


‘ಈ ದೇಶದಲ್ಲಿ ಪ್ರಜಾತಂತ್ರ ಉಳಿಸುವ ಹೊಸ ಮಂತ್ರವನ್ನು ಕರ್ನಾಟಕ ರಾಜ್ಯ ನೀಡಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ಗೆಲುವಲ್ಲ, ಸಂವಿಧಾನ ರಕ್ಷಣೆಗೆ ಇಡೀ ದೇಶಕ್ಕೆ ಸಿಕ್ಕಿರುವ ಗೆಲುವು. ವಿಭಜನೆ, ದ್ವೇಷ, ಜಾತಿ-ಧರ್ಮದ ಮೇಲೆ ಒಡೆಯುವ ರಾಜಕಾರಣಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಬದ್ಧವಾಗಿದ್ದು, ಪಾರದರ್ಶಕ ಆಡಳಿತದ ಮೂಲಕ ಪ್ರತಿ ಕನ್ನಡಿಗರ ಸೇವೆಗೆ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.


ಕರ್ನಾಟಕದ ಗೆಲುವು, ಬ್ರಾಂಡ್ ಕರ್ನಾಟಕದ ಗೆಲುವು. ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಕರ್ನಾಟಕದ ಜನತೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾವು ಆಡಳಿತ ನಡೆಸುತ್ತೇವೆ’ ಎಂದು ಸುರ್ಜೇವಾಲಾ ಹೇಳಿದ್ದಾರೆ.


Gundlupet Assembly Constituency Result 2023: ಮಹಾದೇವಪ್ರಸಾದ್ ಅಭಿವೃದ್ಧಿ- ಬಿಜೆಪಿ 40% ನನ್ನ ಗೆಲುವಿಗೆ ಕಾರಣ: ಗಣೇಶ್ ಪ್ರಸಾದ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.