ಬೆಂಗಳೂರು: ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್ ಮೇ 9ರವರೆಗೆ ಜಾರಿ ಬೇಡವೆಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

#MuslimReservation ಹ್ಯಾಶ್‍ಟ್ಯಾಗ್‍ ಬಳಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಮುಸ್ಲಿಂ ಮೀಸಲಾತಿ ರದ್ದತಿಗೆ ತಡೆಯಾಜ್ಞೆ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಾಡಿರುವ ಕಪಾಳ‌ಮೋಕ್ಷವಾಗಿದೆ. ಈ ತಡೆಯಾಜ್ಞೆ ತಾತ್ಕಾಲಿಕವಾಗಿದ್ದರೂ ಇದೇ ಖಾಯಂ‌ ಆದೇಶ ಆಗುವುದು ಖಂಡಿತ’ವೆಂದು ಹೇಳಿದ್ದಾರೆ.


ಮುಸ್ಲಿಮರಿಗೆ ಮೀಸಲಾತಿ: ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ಇಲ್ಲ:ಸಿಎಂ ಬೊಮ್ಮಾಯಿ 


ಬಿಜೆಪಿ ಸರ್ಕಾರ ತಕ್ಷಣ ಮುಸ್ಲಿಂ ಮೀಸಲಾತಿ ರದ್ದತಿಯ ಆದೇಶವನ್ನು ಹಿಂದೆಗೆದುಕೊಂಡು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಮೀಸಲಾತಿಯನ್ನು ರಾಜಕೀಯದಾಟದ ದಾಳವನ್ನಾಗಿ ಮಾಡಬಾರದು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Karnataka Election 2023: ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ಎಚ್.ಡಿ.ಕುಮಾರಸ್ವಾಮಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.