ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಂದಿನಿಂದ ಒಟ್ಟು 7 ದಿನಗಳ ಕಾಲ ‘ಮತಬೇಟೆ’ಯ ದಂಡಯಾತ್ರೆ ನಡೆಸಲಿದ್ದಾರೆ. ವಾರಗಳ ಕಾಲ ನಿರಂತರವಾಗಿ ಪ್ರವಾಸ ನಡೆಸಲಿರುವ ಸಿದ್ದರಾಮಯ್ಯ, ಕ್ಷೇತ್ರಾವಾರು ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

7 ದಿನಗಳಲ್ಲಿ 5 ಜಿಲ್ಲೆಗಳ 25 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಆಪ್ತರ ಕ್ಷೇತ್ರಗಳಿಗೆ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಆಪ್ತರ ಜೊತೆಗೆ ಹೊಸ ಮುಖಗಳು ಮತ್ತು ಮಾಜಿ ಶಾಸಕರ ಕ್ಷೇತ್ರಗಳಲ್ಲಿ ಸಿದ್ದು ಅಬ್ಬರದ ಪ್ರಚಾರ ನಡೆಸಲಿದ್ದಾರೆ.


ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಉದುರುತ್ತಿವೆ ‘ಕಮಲ’ದ ದಳಗಳು: ಪ್ಲಾಪ್ ಆಯ್ತಾ ಜೋಶಿ ಪ್ಲ್ಯಾನ್?


ಬೆಳಗಾವಿ


ಗೋಕಾಕ್ - ಮಹಂತೇಶ್ ಕಡಾಡಿ - ಹೊಸ ಮುಖ


ಅರಬಾವಿ - ಅರವಿಂದ ದಳವಾಯಿ - ಹೊಸ ಮುಖ


ಬೈಲಹೊಂಗಲ - ಮಹಂತೇಶ್ ಕೌಜಲಗಿ - ಹಾಲಿ ಶಾಸಕ


ಸವದತ್ತಿ - ವಿಶ್ವಾಸ್ ವೈದ್ಯ - ಹೊಸ ಮುಖ


ಕಾಗವಾಡ - ರಾಜು ಕಾಗೆ - ಮಾಜಿ ಶಾಸಕ


ಕುಡಚಿ - ಮಹೇಂದ್ರ ತಮ್ಮಣ್ಣನವರ್ - ಹೊಸಮುಖ


ರಾಯಭಾಗ - ಮಹಾವೀರ್ ಮೋಹಿತೆ - ಹೊಸಮುಖ


ಬಳ್ಳಾರಿ


ಹೂವಿನ ಹಡಗಲಿ – ಪಿ.ಟಿ.ಪರಮೇಶ್ವರ್ ನಾಯ್ಕ್ - ಹಾಲಿ ಶಾಸಕ


ಬಳ್ಳಾರಿ ಗ್ರಾಮೀಣ - ನಾಗೇಂದ್ರ - ಹಾಲಿ ಶಾಸಕ


ಕಂಪ್ಲಿ - ಗಣೇಶ - ಹಾಲಿ ಶಾಸಕ


ಸಂಡೂರು – ಇ.ತುಕಾರಾಂ - ಹಾಲಿ ಶಾಸಕ


ಶಿರಗುಪ್ಪ – ಬಿ.ಎಂ.ನಾಗರಾಜ್ - ಹೊಸ ಮುಖ


ಕೂಡ್ಲಿಗಿ - ಶ್ರೀನಿವಾಸ್ - ಹೊಸಮುಖ


ಹೊಸಪೇಟೆ - ಗವಿಯಪ್ಪ - ಮಾಜಿ ಶಾಸಕ


ರಾಯಚೂರು


ಮಾನ್ವಿ - ಹಂಪಯ್ಯ ನಾಯಕ್ - ಮಾಜಿ ಶಾಸಕ


ರಾಯಚೂರು - ಬಸನಗೌಡ ದದ್ದಲ್ - ಹಾಲಿ ಶಾಸಕ


ದೇವದುರ್ಗ - ಶ್ರೀದೇವಿ ನಾಯಕ್ - ಹೊಸ ಮುಖ


ಲಿಂಗಸುಗೂರು – ಡಿ.ಎಸ್.ಹೂಲಿಗೇರಿ - ಹಾಲಿ ಶಾಸಕ


ಮಸ್ಕಿ - ಬಸನಗೌಡ ತುರವೀಹಾಳ್ - ಹಾಲಿ ಶಾಸಕ


ಸಿಂಧನೂರು - ಹಂಪನಗೌಡ ಬಾದರ್ಲಿ - ಮಾಜಿ ಶಾಸಕ


ಚಿತ್ರದುರ್ಗ


ಹರಪನಹಳ್ಳಿ – ಎನ್.ಕೊಟ್ರೇಶ್ - ಸೋತ ಅಭ್ಯರ್ಥಿ


ಚಳ್ಳಕೆರೆ - ರಘುಮೂರ್ತಿ - ಹಾಲಿ ಶಾಸಕ


ಹಿರಿಯೂರು - ಸುಧಾಕರ್ - ಮಾಜಿ ಶಾಸಕ


ತುಮಕೂರು


ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್ - ಮಾಜಿ ಶಾಸಕ


ತಿಪಟೂರು - ಷಡಕ್ಷರಿ - ಮಾಜಿ ಶಾಸಕ


ಇದನ್ನೂ ಓದಿ: ಹಗರಣ ಇಲ್ಲದೆ ಶಿಕ್ಷಕರ ನೇಮಕ; ಸಿಎಂ ಬಸವರಾಜ ಬೊಮ್ಮಾಯಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.