Karnataka Election Result 2023: ಹಾಸನದಲ್ಲಿ ಕೇಕೆ ಹಾಕಿದ ಜೆಡಿಎಸ್ ಮತ್ತು ಬಿಜೆಪಿ
Karntaka Assembly election :ಹಾಸನದ ಒಟ್ಟು ಏಳು ಮತ ಕ್ಷೇತ್ರಗಳಿವೆ. ಈ ಪೈಕಿ ಕಳೆದ ಚುನಾವಣೆ ಯಲ್ಲಿ ಅಂದರೆ 2018 ರ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿತ್ತು. ಈ ಬಾರಿ ಇಲ್ಲಿ ಜೆಡಿಎಸ್ ಗೆದ್ದುದೆಷ್ಟು? ಸೋತಿದೆಷ್ಟು
Karntaka Assembly election : ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಇನ್ನು ಎರಡು ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡರೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬಂದಿದ್ದಾರೆ. ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡ ಭಾರೀ ಅಂತರದಿಂದ ಸೋಲು ಕಂಡಿದ್ದು ಜೆಡಿಎಸ್ ಮತ್ತೆ ಈ ಕ್ಷೇತ್ರದಲ್ಲಿ ತನ್ನ ಅಧಿಕಾರ ಸ್ಥಾಪಿಸಿದೆ. ಆದರೆ ತನ್ನದೇ ಆದ ಎರಡು ಕ್ಷೇತ್ರಗಳು ಕೂಡಾ ಜೆಡಿಎಸ್ ಕೈ ತಪ್ಪಿವೆ.
ಹಾಸನ ಮತ ಕ್ಷೇತ್ರ :
ಹಾಸನ ಮತಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡಗೆ ಸೋಲಾಗಿದೆ. ಜೆಡಿಎಸ್ ನ ಸ್ವರೂಪ್ ಇಲ್ಲಿ ಜಯ ಭೇರಿ ಬಾರಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ವರೂಪ್ ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಮತ್ತೆ ತನ್ನ್ ಪ್ರಾಬಲ್ಯ ಮೆರೆದಿದೆ.
ಅಭ್ಯರ್ಥಿಗಳು ಪಡೆದ ಮತ :
ಜೆಡಿಎಸ್ - ಸ್ವರೂಪ್ ಪ್ರಕಾಶ್ - 84005
ಬಿಜೆಪಿ - ಪ್ರೀತಂಗೌಡ - 75110
ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ - 4241
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ :
ಮೊದಲಿನಿಂದಲೂ ಜೆಡಿಎಸ್ ನದ್ದೇ ಕ್ಷೇತ್ರವಾಗಿದ್ದ ಇಲ್ಲಿ ಈ ಬಾರಿ ಕೂಡಾ ಹೆಚ್.ಡಿ.ರೇವಣ್ಣ ಗೆಲುವು ಸಾಧಿಸಿದ್ದಾರೆ. ಇಲ್ಲಿ ಮೊದಲಿನಿಂದಲೂ ದೇವೇಗೌಡ ಕುಟುಂಬಕ್ಕೆ ಆಪ್ತರಾಗಿರುವವರೇ ಗೆದ್ದು ಬರುತ್ತಿರುವುದು ಇತಿಹಾಸ.
ಅಭ್ಯರ್ಥಿಗಳು ಪಡೆದ ಮತ :
ಜೆಡಿಎಸ್ - ಹೆಚ್.ಡಿ.ರೇವಣ್ಣ - 86907
ಕಾಂಗ್ರೆಸ್ - ಶ್ರೇಯಸ್ ಪಟೇಲ್ - 84149
ಬಿಜೆಪಿ - ದೇವರಾಜೇಗೌಡ - 4764
ಶ್ರವಣಬೆಳಗೊಳ :
ಈ ಕ್ಷೇತ್ರದಲ್ಲಿ ಜೆಡಿಎಸ್ ನ ಸಿ.ಎನ್.ಬಾಲಕೃಷ್ಣಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನೊಂದಿಗೆ ಇವರು ತಮ್ಮ ಗೆಲುವಿನ ಪರಂಪರೆಯನ್ನು ಮುಂದುವರೆಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತ :
ಜೆಡಿಎಸ್ - ಸಿ.ಎನ್.ಬಾಲಕೃಷ್ಣ-84511
ಕಾಂಗ್ರೆಸ್ - ಎಂ.ಎ.ಗೋಪಾಲಸ್ವಾಮಿ - 78416
ಬಿಜೆಪಿ - ಚಿದಾನಂದ್ - 5585
ಅರಸೀಕೆರೆ
ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ವಿಜಯ ಪತಾಕೆ ಹಾರಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತ :
ಜೆಡಿಎಸ್ - ಎನ್.ಆರ್. ಸಂತೋಷ್ - 77006
ಕಾಂಗ್ರೆಸ್ - ಕೆ.ಎಂ.ಶಿವಲಿಂಗೇಗೌಡ -97099
ಬಿಜೆಪಿ - ಜಿವಿಟಿ ಬಸವರಾಜ್ - 6456
ಅರಕಲಗೂಡು ಕುರುಕ್ಷೇತ್ರ
ಅರಕಲ ಗೂಡು ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಮಂಜು ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸುಲಭವಾಗಿ ಸೋಲಿಸುವ ಮೂಲಕ ವಿಧಾನ ಸಭೆ ಪ್ರವೇಶಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತ :
ಜೆಡಿಎಸ್ - ಎ.ಮಂಜು -73605
ಕಾಂಗ್ರೆಸ್ - ಶ್ರೀಧರ್ ಗೌಡ - 35731
ಬಿಜೆಪಿ - ಯೋಗಾರಮೇಶ್ - 19385
ಬೇಲೂರು ಕ್ಷೇತ್ರ 2023 ಕಣದಲ್ಲಿರುವ ನಾಯಕರು :
ಬೇಲೂರು ಕ್ಷೇತ್ರ ಜೆಡಿಎಸ್ ತೆಕ್ಕೆಯಿಂದ ಜಾರಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್ ಗೆಲುವು ಸಾಧಿಸಿದ್ದಾರೆ.
2023 ಕಣದಲ್ಲಿರುವ ನಾಯಕರು :
ಜೆಡಿಎಸ್ - ಕೆ.ಎಸ್.ಲಿಂಗೇಶ್ - 38446
ಬಿಜೆಪಿ - ಹೆಚ್.ಕೆ.ಸುರೇಶ್ - 62628
ಕಾಂಗ್ರೆಸ್ - ಬಿ.ಶಿವರಾಮ್ - 55221
ಸಕಲೇಶಪುರ ಕ್ಷೇತ್ರ
ಸಕಲೇಶಪುರದಲ್ಲಿಯೂ ಈ ಬಾರಿ ಜೆಡಿಎಸ್ ಗೆ ಸೋಲಾಗಿದೆ. ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರಿಗೆ ವಿಜಯ ಮಾಲೆ ಹಾಕಿದ್ದಾರೆ.
2023 ಕಣದಲ್ಲಿರುವ ನಾಯಕರು :
ಜೆಡಿಎಸ್ -ಹೆಚ್.ಕೆ.ಕುಮಾರಸ್ವಾಮಿ - 56113
ಬಿಜೆಪಿ - ಸಿಮೆಂಟ್ ಮಂಜು - 58073
ಕಾಂಗ್ರೆಸ್ - ಮುರುಳಿ ಮೋಹನ್ - 42613
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.