Karnataka Election Result 2023: ಉತ್ತರಕನ್ನಡ ಜಿಲ್ಲೆಯಲ್ಲಿ 4 ಕ್ಷೇತ್ರದಲ್ಲಿ ಕಾಂಗ್ರೆಸ್, 2 ರಲ್ಲಿ ಬಿಜೆಪಿಗೆಲುವು
Karntaka Assembly election result :ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಈ ಬಾರಿ ಇಲ್ಲಿನ ಮತದಾರ ಸೈ ಅಂದಿದ್ದು ಯಾರಿಗೆ? ಜಿಲ್ಲೆಯಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ ?
Karntaka Assembly election result : ಉತ್ತರಕನ್ನಡ ಜಿಲ್ಲೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಈ ಜಿಲ್ಲೆಯಲ್ಲಿ ಆರು ಮತ ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಕಾಂಗ್ರೆಸ್, ಇನ್ನುಳಿದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 4
ಕಾರವಾರ, ಶಿರಸಿ, ಹಳಿಯಾಳ ಮತ್ತು ಭಟ್ಕಳ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಇನ್ನುಳಿದ ಯಲ್ಲಾಪುರ ಮತ್ತು ಕುಮಟಾದಲ್ಲಿ ಬಿಜೆಪಿ ಜಯ ಗಳಿಸಿದೆ.
ಭಟ್ಕಳ
ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಮಂಕಾಳು ವೈದ್ಯ ಆರಿಸಿ ಬಂದಿದ್ದಾರೆ. ಇವರು ಬಿಜೆಪಿಯ ಸುನಿಲ ನಾಯ್ಕ ಅವರನ್ನು ಸೋಲಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ -ಮಂಕಾಳು ವೈದ್ಯ - 99603
ಬಿಜೆಪಿ - ಸುನೀಲ್ ಬಿ. ನಾಯ್ಕ - 66946
ಆಮ್ ಆದ್ಮಿ - ಡಾ.ನಸೀಮ್ ಅಹ್ಮದ್ - 1003
ಕಾರವಾರ :
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸತೀಶ್ ಸೈಲ್ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯ ರೂಪಾಲಿ ನಾಯ್ಕ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಸತೀಶ್ ಸೈಲ್ - 76305
ಬಿಜೆಪಿ - ರೂಪಾಲಿ ನಾಯ್ಕ್ - 73890
ಜೆಡಿಎಸ್ -ಚೈತ್ರಾ ಕೊಠಾರಕರ್ - 2864
ಯಲ್ಲಾಪುರ
ಯಲ್ಲಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಶಿವರಾಮ ಹೆಬ್ಬಾರ್ ಆಯ್ಕೆಯಾಗಿ ಬಂದಿದ್ದಾರೆ. ಇವರು ಕಾಂಗ್ರೆಸ್ ನ ವಿ.ಎಸ್.ಪಾಟೀಲ್ ಅವರನ್ನು ಸೋಲಿಸುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ಶಿವರಾಮ ಹೆಬ್ಬಾರ್- 73952
ಕಾಂಗ್ರೆಸ್ -ವಿ.ಎಸ್.ಪಾಟೀಲ್ - 70193
ಜೆಡಿಎಸ್ - ನಾಗೇಶ್ ಹಿನ್ನಯ್ಯ ನಾಯ್ಕ್ - 1630
ಹಳಿಯಾಳ ಕ್ಷೇತ್ರ :
ಹಳಿಯಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಕಾಂಗ್ರೆಸ್ ನ ಆರ್. ವಿ ದೇಶಪಾಂಡೆ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ ದೇಶಪಾಂಡೆ ಒಂಭತ್ತನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಕಾಂಗ್ರೆಸ್ - ಆರ್.ವಿ.ದೇಶಪಾಂಡೆ - 56912
ಬಿಜೆಪಿ - ಸುನೀಲ್ ಹೆಗೆಡೆ - 53328
ಜೆಡಿಎಸ್ - ಶ್ರೀಕಾಂತ ಘೋಟ್ನೇಕರ -28682
ಕುಮಟಾ ಕ್ಷೇತ್ರ :
ಕುಮಟಾದಲ್ಲಿ ಬಿಜೆಪಿಯ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದಾರೆ. ಆದರೂ ಕೆಲ ಗೊಂದಲ ಮೂಡಿರುವ ಕಾರಣ ಅಧಿಕಾರಿಗಳು ಅಂಚೆ ಮತ ಎಣಿಕೆ ಮಾಡುತ್ತಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳು :
ಜೆಡಿಎಸ್ - ಸೂರಜ್ ನಾಯ್ಕ -36587
ಬಿಜೆಪಿ - ದಿನಕರ ಶೆಟ್ಟಿ -34276
ಕಾಂಗ್ರೆಸ್ - ನಿವೇದಿತ ಆಳ್ವಾ -11935
ಶಿರಸಿ ಕ್ಷೇತ್ರ :
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲಿನ ಕಹಿ ಅನುಭವಿಸುವಂತಾಗಿದೆ.
ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ವಿಶ್ವನಾಥ ಹೆಗಡೆ ಕಾಗೇರಿ -66954
ಕಾಂಗ್ರೆಸ್ - ಭೀಮಣ್ಣ ನಾಯ್ಕ - 76021
ಜೆಡಿಎಸ್ - ಉಪೇಂದ್ರ ಪೈ - 8988
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.