Karnataka Election Result 2023 : ಉಡುಪಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
Karnatak election result 2023 : ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಉಡುಪಿ ಜಿಲ್ಲೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.
Karnatak election result 2023 : ಉಡುಪಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಕಲಿಗಳು ಗೆದ್ದು ಬೀಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ ಈ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಈ ಫಲಿತಾಂಶದ ಮೂಲಕ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಯಾರೇ ಇರಲಿ ಇಲ್ಲಿ ಪಕ್ಷ ಮುಖ್ಯ ಎನ್ನುವುದನ್ನು ಇಲ್ಲಿಯ ಮತದಾರರು ಸಾಬೀತು ಪಡಿಸಿದ್ದಾರೆ. ಅಲ್ಲಿಗೆ ಕರಾವಳಿ ಜಿಲ್ಲೆಯನ್ನು ಬಿಜೆಪಿಯಿಂದ ಜಾರಿ ಹೋಗುವುದಕ್ಕೆ ಇಲ್ಲಿನ ಮತದಾರ ಅವಕಾಶ ಮಾಡಿ ಕೊಟ್ಟಿಲ್ಲ.
ಉಡುಪಿಯ ಜಿಲ್ಲೆಯ ಫಲಿತಾಂಶ ಚಿತ್ರಣ :
ಬೈಂದೂರೂ ಮತ ಕ್ಷೇತ್ರ :
ಕಾಂಗ್ರೆಸ್ ನ ಕೆ. ಗೋಪಾಲ ಪೂಜಾರಿ ಇಲ್ಲಿ ಬಿಜೆಪಿಯ ಗುರುರಾಜ್ ಗಂಟಿಹೊಳೆ ಅವರಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರಾದರೂ ಗೆಲುವು ಸಾಧಿಸುವುದು ಸಾಧ್ಯವಾಗಿಲ್ಲ. ಇಲ್ಲಿ ಕೊನೆಗೂ ಬಿಜೆಪಿಯ ಗುರುರಾಜ್ ಗಂಟಿಹೊಳೆ ಗೆಲುವಿನ ನಗೆ ಬೀರಿದ್ದಾರೆ.
2023 ರ ಕಣದಲ್ಲಿರುವವರು :
ಬಿಜೆಪಿ - ಗುರುರಾಜ್ ಗಂಟಿಹೊಳೆ
ಕಾಂಗ್ರೆಸ್ - ಕೆ. ಗೋಪಾಲ ಪೂಜಾರಿ
ಜೆಡಿಎಸ್ - ಮನ್ಸೂರ್ ಇಬ್ರಾಹಿಂ
ಕುಂದಾಪುರ ಕ್ಷೇತ್ರ :
ಹಾಲಾಡಿ ಅವರ ರಾಜಕೀಯ ನಿವೃತ್ತಿಯಿಂದಾಗಿ ಇಲ್ಲಿ ಹೊಇಸ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಕಿರಣ್ ಕುಮಾರ್ ಕೊಡ್ಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ದಿನೇಶ್ ಹೆಗ್ಡೆ ಅವರನ್ನು ಸೋಲಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
2023 ರ ಕಣದಲ್ಲಿರುವವರು :
ಬಿಜೆಪಿ - ಕಿರಣ್ ಕುಮಾರ್ ಕೊಡ್ಗಿ
ಕಾಂಗ್ರೆಸ್ - ಎಂ.ದಿನೇಶ್ ಹೆಗ್ಡೆ
ಜೆ ಡಿ (ಎಸ್) - ರಮೇಶ್ ಕುಂದಾಪುರ
ಉಡುಪಿ ವಿಧಾನಸಭಾ ಕ್ಷೇತ್ರ :
ಇಲ್ಲಿ ಕೂಡಾ ಬಿಜೆಪಿಯನ್ನು ಪ್ರತಿನಿಧಿಸಿದ್ದ ಯಶ್‌ಪಾಲ್ ಸುವರ್ಣ ಗೆದ್ದಿದ್ದಾರೆ. ಕಾಂಗ್ರೆಸ್ ನ ಪ್ರಸಾದ್ ರಾಜ್ ಕಾಂಚನ್ ಅವರನ್ನು ಪರಾಭವಗೊಳಿಸಿ ವಿಜಯ ಲಕ್ಷ್ಮೀಯನ್ನು ಒಲಿಸಿಕೊಂದಿದ್ದಾರೆ.
2023 ರ ಕಣದಲ್ಲಿರುವವರು :
ಬಿಜೆಪಿ - ಯಶ್‌ಪಾಲ್ ಸುವರ್ಣ
ಕಾಂಗ್ರೆಸ್ -ಪ್ರಸಾದ್ ರಾಜ್ ಕಾಂಚನ್
ಜೆ ಡಿ (ಎಸ್) - ದಕ್ಷತ್ ಆರ್ ಶೆಟ್ಟಿ
ಎಎಪಿ - ಪ್ರಭಾಕರ್ ಪೂಜಾರಿ
ಕಾಪು ವಿಧಾನಸಭಾ ಕ್ಷೇತ್ರ
ಇಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆಯನ್ನು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಸೋಲಿಸಿದ್ದಾರೆ.
2023 ರ ಕಣದಲ್ಲಿರುವವರು :
ಬಿಜೆಪಿ - ಗುರ್ಮೆ ಸುರೇಶ್ ಶೆಟ್ಟಿ
ಕಾಂಗ್ರೆಸ್ : ವಿನಯ್ ಕುಮಾರ್ ಸೊರಕೆ
ಜೆ ಡಿ (ಎಸ್) - ಸಬೀನಾ ಸಮದ್
ಕಾರ್ಕಳ ವಿಧಾನಸಭಾ ಕ್ಷೇತ್ರ
ಕಾರ್ಕಳ ಕ್ಷೇತ್ರದಲ್ಲಿ ಕೂಡಾ ಬಿಜೆಪಿಯ ಸುನಿಲ್ ಕುಮಾರ್ ಕಾಂಗ್ರೆಸ್ ನ ಉದಯ ಶೆಟ್ಟಿ ಮುನಿಯಾಲು ಅವರನ್ನು ಸೋಲಿಸಿದ್ದಾರೆ.
2023 ರ ಕಣದಲ್ಲಿರುವವರು :
ಬಿಜೆಪಿ - ವಿ. ಸುನಿಲ್ ಕುಮಾರ್
ಕಾಂಗ್ರೆಸ್ - ಉದಯ ಶೆಟ್ಟಿ ಮುನಿಯಾಲು
AAP - ಡೇನಿಯಲ್ ರೇಂಜರ್
ಜೆಡಿಎಸ್ - ಶ್ರೀಕಾಂತ ಪೂಜಾರಿ ಕುಚ್ಚೂರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.