Karnataka Election Result 2023: ಕೊಡಗು ಜಿಲ್ಲೆಯಲ್ಲಿ ಇವರದ್ದೇ ಗೆಲುವು ಎನ್ನುತ್ತದೆ ಗ್ರೌಂಡ್ ರಿಪೋರ್ಟ್
Karnataka Election Result 2023 : ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಗೆಲ್ಲುವ ಕುದುರೆ ಯಾವುದು? ಮತದಾರ ಪ್ರಭು ಈ ಬಾರಿಯೂ ಕಮಲದತ್ತ ಒಲವು ತೋರಿದ್ದಾನೆಯೇ? ಏನು ಹೇಳುತ್ತದೆ ವರದಿ ?
Karnataka Election Result 2023 : ಕೊಡಗು ಎರಡೇ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಪುಟ್ಟ ಜಿಲ್ಲೆ. ದಕ್ಷಿಣ ಕಾಶ್ಮೀರ ಎಂದು ಕರೆಸಿಕೊಳ್ಳುವ ಇದು ಮಡಿಕೇರಿ ಮತ್ತು ವಿರಾಜ ಪೇಟೆ ಎನ್ನುವ ಎರಡು ಕ್ಷೇತ್ರಗಳನ್ನು ಇದು ಒಳಗೊಂಡಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ :
2018ರ ಫಲಿತಾಂಶ :
ಬಿಜೆಪಿಯ ಅಪ್ಪಚ್ಚು ರಂಜನ್ ಪಡೆದ ಮತಗಳು 70,631
ಜೆಡಿ(ಎಸ್) ನ ಜೀವಿಜಯ ಪಡೆದ ಮತಗಳು 54,616
ಕಾಂಗ್ರೆಸ್ ನ ಕೆ. ಪಿ ಚಂದ್ರಕಲಾ ಪಡೆದ ಮತಗಳು 38,219
2008ರ ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ಇದು ಮಡಿಕೇರಿ ಕ್ಷೇತ್ರವಾಗಿ ಬದಲಾಯಿತು. ಒಕ್ಕಲಿಗ ಮತ್ತು ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಜನಸಂಖ್ಯೆ ಕೂಡಾ ಕಡಿಮೆ. ಇಲ್ಲಿ ಕೊಡವ ಸಮುದಾಯದ ಶಾಸಕ ಅಪ್ಪಚ್ಚು ರಂಜನ್ ನಾಲ್ಕು ಬಾರಿ ಶಾಸಕರಾಗಿ ಗೆದ್ದು ಬಂದಿದ್ದಾರೆ. ಹಾಗೆ ನೋಡಿದರೆ 2004 ರಿಂದ ಇಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದು. 2004ರಲ್ಲಿ ಕೆ ಜೀ ಬೊಪ್ಪಯ್ಯ ಇಲ್ಲಿ ಗೆದ್ದಿದ್ದಾರೆ. ಇದಾದ ನನತ್ರ ಎಲ್ಲಾ ಚುನಾವಣೆಯಲ್ಲಿಯೂ ಅಪ್ಪಚ್ಚು ರಂಜನ್ ಗೆಲುವಿನ ಕೇಕೆ ಹಾಕಿದ್ದಾರೆ. ಈ ಬಾರಿ ಕೂಡಾ ಇಲ್ಲಿನ ಸ್ಥಿತಿಯಲ್ಲಿ ಹೆಚ್ಚು ಬದಲಾವಣೆ ಕಾಣುತ್ತಿಲ್ಲ.
ಇದನ್ನೂ ಓದಿ : ವಿಧಾನಸಭಾ ಚುನಾವಣೆ: ಮತ ಎಣಿಕೆ ದಿನ ನಿಷೇಧಾಜ್ಞೆ ಜಾರಿ
2023 ರ ಕಣದಲ್ಲಿರುವವರು :
ಬಿಜೆಪಿ- ಅಪ್ಪಚ್ಚು ರಂಜನ್ ಎಂ.ಪಿ.
ಕಾಂಗ್ರೆಸ್ - ಡಾ.ಮಂಥರ್ ಗೌಡ
ಜೆ ಡಿ (ಎಸ್) - ಎನ್.ಎಂ.ಮುತ್ತಪ್ಪ
ವಿರಾಜಪೇಟೆ ವಿಧಾನಸಭಾ ಕ್ಷೇತ್ರ
2018ರ ಫಲಿತಾಂಶ :
ಬಿಜೆಪಿಯ ಕೆ ಜಿ ಬೋಪಯ್ಯ ಪಡೆದ ಮತಗಳು 77,944
ಕಾಂಗ್ರೆಸ್ ನ ಎಸ್ ಅರುಣ್ ಮಾಚಯ್ಯ ಪಡೆದ ಮತಗಳು 64,591
ಜೆಡಿ(ಎಸ್) ನ ಸಂಕೇತ್ ಪೂವಯ್ಯ ಪಡೆದ ಮತಗಳು 11,224
ಇದನ್ನೂ ಓದಿ : Haveri Assembly Election 2023: ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಇದಾದ ನಂತರ ವಿರಾಜಪೇಟೆ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನೆಯಾಯಿತು. ಈಗಲೂ ಬ=ಇಲ್ಲಿ ಬಿಜೆಪಿ ಅಭ್ಯರ್ಥಿ ಕೆ ಜೀ ಬೋಪಯ್ಯ ಅವರೇ ಗೆಲ್ಲುವುದು ಎನ್ನುವ ಮಾತೇ ಜೋರಾಗಿದೆ.
2023 ರ ಕಣದಲ್ಲಿರುವವರು :
ಬಿಜೆಪಿ - ಕೆಜಿ ಬೋಪಯ್ಯ
ಕಾಂಗ್ರೆಸ್ - ಎ.ಎಸ್.ಪೊನ್ನಣ್ಣ
ಜೆ ಡಿ (ಎಸ್) - ಮನ್ಸೂರ್ ಅಲಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.