Karnataka Election 2023: ಮತದಾನಕ್ಕೆ ಸಜ್ಜಾದ ಯುವಕರು
Karnataka Election: ವಿಧಾನ ಸಭೆ ಚುನಾವಣೆಗೆ ನಾಯಕರು ಮಾತ್ರ ಪ್ರಚಾರದದಲ್ಲಿ ಇರದೇ ಯುವಕರು ಸಹ ಮುಳುಗಿದ್ದಾರೆ. ಕ್ಷೇತ್ರ ಕ್ಷೇತ್ರಕ್ಕೂ ಭೇಟಿ ನೀಡಿ ಮತ ಪ್ರಚಾರ ಮಾಡುತ್ತಿರುವ ರಾಜ್ಯ ನಾಯಕರು, ಸಿನಿಮಾ ತಾರೆಯರು ಒಂದೆಡೆಯಾದರೆ, ಯುವಕರು ಸಹ ತಮ್ಮ ಇಚ್ಛೆಯ ಪಕ್ಷ ಕುರಿತು ಸಾಮಾಜಿಕ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.
ಬೆಂಗಳೂರು: ವಿಧಾನ ಸಭೆ ಚುನಾವಣೆಗೆ ನಾಯಕರು ಮಾತ್ರ ಪ್ರಚಾರದದಲ್ಲಿ ಇರದೇ ಯುವಕರು ಸಹ ಮುಳುಗಿದ್ದಾರೆ. ಕ್ಷೇತ್ರ ಕ್ಷೇತ್ರಕ್ಕೂ ಭೇಟಿ ನೀಡಿ ಮತ ಪ್ರಚಾರ ಮಾಡುತ್ತಿರುವ ರಾಜ್ಯ ನಾಯಕರು, ಸಿನಿಮಾ ತಾರೆಯರು ಒಂದೆಡೆಯಾದರೆ, ಯುವಕರು ಸಹ ತಮ್ಮ ಇಚ್ಛೆಯ ಪಕ್ಷ ಕುರಿತು ಸಾಮಾಜಿಕ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ಇಷ್ಟ ಬಂದ ನಾಯಕರ ಪರ ಟ್ವೀಟರ್ ಫೇಸ್ ಬುಕ್ ಮೂಲಕ ಚುನಾವಣೆ ಕಲರವ ಹೆಚ್ಚಿಸುತ್ತಿದ್ದಾರೆ.
ನಗರದಲ್ಲಿ ಯಾವೊಬ್ಬ ಮತದಾರನೂ ಆಮೀಷಕ್ಕೆ ಒಳಗಾಗದೆ ಎಲ್ಲರೂ ತಪ್ಪದೆ ಮತ ಚಾಯಿಸುವಂತಾಗಬೇಕು, ಅದಕ್ಕೆ ಎಲ್ಲಾ ಯುವ ಸಮೂಹ ಕೈಜೋಡಿಸಬೇಕೆಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿಯಾದ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಕೋರಿದರು.
ಇದನ್ನೂ ಓದಿ: Election Campaign: ಮಲೆನಾಡಿನಲ್ಲಿ ಸಿದ್ದನಗೌಡ ಪಾಟೀಲ್ ಸಮ್ಮುಖದಲ್ಲಿ ನಡೆದ ಸಿಪಿಐ ಅದ್ದೂರಿ ಸಮಾವೇಶ!
ಇಂದು ಬೆಂಗಳೂರು ನಗರ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಅವರು, ಕರ್ನಾಟಕ ರಾಜ್ಯದಲ್ಲಿ ಜನಪ್ರಧಿಗಳು ನಾಗರಿಕರಿಗೆ ಸಾಕಷ್ಟು ಹತ್ತಿರವಾಗಿರುವುದರ ಜೊತೆಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯ ಎಂದು ಹೇಳಿದರು.
ಮೊದಲ ಬಾರಿ ಮತದಾನ ಮಾಡುವವರು ಒಮ್ಮೆ ಮಾತ್ರ ಮತದಾನ ಮಾಡದೆ ಎಲ್ಲಾ ಚುನಾವಣಾಗಳಲ್ಲೂ ತಪ್ಪದೆ ಮತ ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಬರಲಿದೆ.
ಇದನ್ನೂ ಓದಿ: "ಬಿಜೆಪಿ ಅವರ ಭ್ರಷ್ಟಾಚಾರದ ಲೂಟಿ ಸುಮಾರು 150,000 ಲಕ್ಷ ಕೋಟಿ ಆಗಿದೆ"- ದಿನೇಶ್ ಗೂಂಡುರಾವ್ ಆರೋಪ
18 ವರ್ಷ ತುಂಬಿದ ನಂತರ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಯಾವ ರಂಗಕ್ಕೆ ಹೋಗಬೇಕು ಎಂಬುದರ ಬಗ್ಗೆ ಸ್ವಯಂ ವಿವೇಚನೆಯಿರುತ್ತದೆ. ಅದೇ ರೀತಿ ನಿಮ್ಮ ವಿಧಾಸಭಾ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಬರಬೇಕೆಂಬುದನ್ನೂ ಕೂಡಾ ನೀವು ವಿವೇಚನೆಯೊಂದಿಗೆ ಅರ್ಹರಿಗೆ ಮತ ಚಲಾಯಿಸಬೇಕೆಂದು ತಿಳಿಸಿದರು.
ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪ್ರಜಾಪ್ರಭುತ್ವದ ಆಶಯಗಳು ಸಂಪೂರ್ಣವಾಗಬೇಕಾದರೆ ಪ್ರತಿಯೊಬ್ಬ ಮತದಾರನೂ ತಪ್ಪದೆ ಮತ ಚಾಲಾಯಿಸಬೇಕು ಎಂದು ಹೇಳಿದರು. ಇನ್ನು ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ನಾವೆಲ್ಲರೂ ಹೆಚ್ಚು-ಹೆಚ್ಚು ಜಾಗೃತರಾಗಿರಬೇಕು. ಆಗ ಪ್ರಜಾಪ್ರಭುತ್ವದ ಸಂಪೂರ್ಣ ಬಲ ನಮಗೆ ಸಿಗಲಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಿ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಎಲ್ಲಾ ವಿದ್ಯಾರ್ಥಿಗಳಲ್ಲಿ ಕೋರಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.