Karnataka Elections 2023: ಮತದಾರರ ಸೆಳೆಯಲು ನಕಲಿ ಲಕ್ಷ್ಮಿದೇವಿಯ ಬೆಳ್ಳಿ ಫೋಟೋ ಹಂಚಿಕೆ..?
ಬೆಳ್ಳಿ ಫೋಟೋ ಎಂದು ಮಹಿಳೆಯರಿಗೆ ನೀಡಿದ್ದ ಉಡುಗೊರೆಯ ಅಸಲಿತ್ತು ಬಟಾಬಯಲಾಗಿದೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಫೋಟೋ ಎಂದು ಆಕ್ರೋಶ ಹೊರಹಾಕಿರುವ ಮಹಿಳೆಯರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಾಸನ: ಮತದಾರರ ಸೆಳೆಯಲು ನಕಲಿ ಬೆಳ್ಳಿ ಫೋಟೋ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮಹಿಳೆಯರಿಗೆ ಶ್ರೀ ಲಕ್ಷ್ಮಿಯ ನಕಲಿ ಬೆಳ್ಳಿ ಫೋಟೋ ಹಂಚಿದ್ದಾರೆಂದು ಆರೋಪಿಸಲಾಗಿದೆ.
ಕಾರ್ಯಕ್ರಮವೊಂದರಲ್ಲಿ ನೀಡಿದ ಬೆಳ್ಳಿ ಫೋಟೋವನ್ನು ಮನೆಗೆ ತಂದು ಪರಿಶೀಲಿಸಿದಾಗ ಅದರ ಅಸಲಿಯತ್ತು ಗೊತ್ತಾಗಿದೆ. ಪೇಪರ್ ನಲ್ಲಿ ಲಕ್ಷ್ಮಿದೇವಿಯ ಫೋಟೋವನ್ನು ಅಚ್ಚೋತ್ತಿರುವುದನ್ನು ಕಂಡ ಮಹಿಳೆಯರು ಫೋಟೋವನ್ನು ಹರಿದು, ನದಿಗೆ ಬಿಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: "ವರುಣಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣ ಇದೆ"
ವಿಡಿಯೋ ವೈರಲ್!
ಬೆಳ್ಳಿ ಫೋಟೋ ಎಂದು ಮಹಿಳೆಯರಿಗೆ ನೀಡಿದ್ದ ಉಡುಗೊರೆಯ ಅಸಲಿತ್ತು ಬಟಾಬಯಲಾಗಿದೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಫೋಟೋ ಎಂದು ಆಕ್ರೋಶ ಹೊರಹಾಕಿರುವ ಮಹಿಳೆಯರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಳೆದ 15 ದಿನದಿಂದ ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿದೇವಿಯ ಪೂಜೆ ಹೆಸರಿನಲ್ಲಿ ಮತದಾರರ ಸೆಳೆಯಲು ಯತ್ನಿಸಲಾಗಿದೆ. ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್‍ವಾರು ಹಾಗು ಗ್ರಾಪಂವಾರು ನಡೆದ ಕಾರ್ಯಕ್ರಮದಲ್ಲಿ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ಮಾಡಿ ಆಮಿಷ ಒಡ್ಡಲಾಗಿದೆ ಎಂದು ರೇವಣ್ಣ ಆರೋಪಿಸಿದ್ದಾರೆ. ಇದೀಗ ಮಹಿಳೆಯರಿಗೆ ಕೊಟ್ಟ ಉಡುಗೊರೆಯ ಫೋಟೋ ಬಿಚ್ಚಿ ಅದು ಕಳಪೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಗಿಫ್ಟ್ ಕೊಡಬೇಕಿತ್ತೇ ಎಂದು ಮಹಿಳೆಯರ ಅಸಮಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೈಬೀಸಿ ಹೋಗುವ ಶೋಕಿವಾಲನ ಶೋಕಿಗೆ ಜನರ ಜೇಬು ಬರಿದಾಗುತ್ತಿದೆ: ಕಾಂಗ್ರೆಸ್
ಪುಟ್ಟ ಫೋಟೋ ಮಾಡಿ ಆಕರ್ಷಕ ಪ್ರೇಮ್ ಹಾಕಿ ಅದರೊಳಗೆ ಅದೃಷ್ಟಲಕ್ಷ್ಮಿ ಫೋಟೋ ಮುದ್ರಿಸಲಾಗಿದೆ. ಲಕ್ಣ್ಮಿದೇವಿ ಫೋಟೋ ಬೆಳ್ಳಿಯದ್ದು ಎಂದು ಪೂಜಾ ಸಮಯದಲ್ಲಿ ಮಹಿಳೆಯರು ಮುಗಿಬಿದ್ದಿದ್ದಾರೆ. ಇದೀಗ ಫೋಟೋ ಬಿಚ್ಚಿ ವಿಡಿಯೋ ಮಾಡಲಾಗಿದ್ದು, ಅದು ವೈರಲ್ ಆಗಿದೆ. ಶಾಸಕ ಪ್ರೀತಂಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.