ಬೆಂಗಳೂರು : ಎಪ್ರಿಲ್‌ 13 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿತ್ತು. ಅಭ್ಯರ್ಥಿಗಳು ಹರಸಾಹಸ ಮಾಡಿ ತಮ್ಮ ತಮ್ಮ ಪಕ್ಷದಿಂದ ಟಿಕೆಟ್‌ ಪಡೆದುಕೊಂಡರು. ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ದೆಹಲಿಯಿಂದ ಹೈಕಮಾಂಡ್‌ಗಳು ಕರ್ನಾಟಕ್ಕೆ ಧಾವಿಸಿ ಭರ್ಜರಿ ಪ್ರಚಾರ ನಡಿಸಿದರು. ಪ್ರಧಾನ ಮಂತ್ರಿ ಮೋದಿ ಕಮಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ರೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡರು.


COMMERCIAL BREAK
SCROLL TO CONTINUE READING

ನಾಮಪತ್ರ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 20 ರಂದು ನಿಗದಿಗಯಾಗಿತ್ತು. ನಾಮಪತ್ರಗಳ ಪರಿಶೀಲನೆ ಏಪ್ರಿಲ್‌ 21 ರಂದು ನಡೆದಿತ್ತು. ನಾಮಪತ್ರ ಹಿಂಪಡೆಯಲು ಏಪ್ರಿಲ್‌ 24 ಕೊನೆಯ ದಿನವಾಗಿತ್ತು. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಎಣಿಕೆ ಕಾರ್ಯ ಮೇ 13 ರಂದು ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಮೇ 15 ಪೂರ್ಣಗೊಳ್ಳಲಿದೆ.


ಇದನ್ನೂ ಓದಿ: Karnataka Elections 2023: ಹೊಸಕೆರೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ ರಾಕಿಂಗ್ ಸ್ಟಾರ್ ಯಶ್!


ಇನ್ನು ಪ್ರಸ್ತುತ ವಿಧಾನಸಭೆಯ ಅವಧಿ ಮೇ 24, 2013ರಂದು ಅಂತ್ಯವಾಗಲಿದೆ. ಸದ್ಯ ಈ ಬಾರಿ ಯಾವ ಪಕ್ಷ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ ಎಂಬ ಚರ್ಚೆ ಶುರುವಾಗಿದೆ. 2018ರಲ್ಲಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಆದ್ರೆ, 80 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್‌, 37 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. 


ಇದಕ್ಕೂ ಮುನ್ನ ಬಿ.ಎಸ್‌. ಯಡಿಯೂರಪ್ಪ ತರಾತುರಿಯಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿ ಬಹುಮತ ಸಾಭೀತು ಪಡಿಸಲಾಗದೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಅಂದಿನ ದಿನ ಮರಳಿ ಸರ್ಕಾರ ರಚನೆ ಮಾಡುವುದಾಗಿ ಶಪಥ ಮಾಡಿದ್ದರು. ನಂತರ 16 ಶಾಸಕರ ಪಕ್ಷಾಂತರದಿಂದಾದಿ ಕುಮಾರಸ್ವಾಮಿಯವರು ಬಹುಮತ ಸಾಭಿತು ಪಡಿಸಲಾಗದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಬಿಜೆಪಿ ಮರಳಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತು.


ಇದನ್ನೂ ಓದಿ: Deve Gowda Voted: ಹೆಲಿಕಾಪ್ಟರ್‌ ಮೂಲಕ ಬಂದಿಳಿದು ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು


ಸದ್ಯ, ಬಹುನಿರೀಕ್ಷಿತ 2023 ಚುನಾವಣೆ ಮತದಾನ ಪೂರ್ಣಗೊಂಡಿದೆ. ಈ ಬಾರಿ ಯಾವ ಪಕ್ಷ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತದೆ ಎನ್ನುವ ಕುತೂಹಲ ಹೆಚ್ಚಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೆಚ್‌.ಡಿ.ಕುಮಾರಸ್ವಾಮಿಯವರು ಕಿಂಗ್‌ ಮೇಕರ್‌ ಆಗ್ತಾರಾ ಅಥವಾ ಕಾಂಗ್ರೆಸ್‌ ಇಲ್ಲವೇ ಬಿಜೆಪಿ ಬಹುಮತ ಪಡೆದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತವೆಯೇ.. ಎಂದು ಕಾಯ್ದು ನೋಡಬೇಕಿದೆ.


ಇನ್ನು ಜೀ ಕನ್ನಡ ನ್ಯೂಸ್ ಮತ್ತು ಮ್ಯಾಟ್ರಿಜ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ 103 ರಿಂದ 118 ಸ್ಥಾನಗಳು ಲಭಿಸಿದರೆ, ಬಿಜೆಪಿಗೆ 79 ರಿಂದ 94 ಸ್ಥಾನಗಳು ಲಭಿಸಲಿವೆ ಇನ್ನೂ ಜೆಡಿಎಸ್ ಪಕ್ಷವು 25 ರಿಂದ 33 ಸ್ಥಾನಗಳನ್ನು ಪಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ