Koppal District Assembly Election Result 2023: ಕೊಪ್ಪಳ ಜಿಲ್ಲೆಯು ರಾಯಚೂರು ಜಿಲ್ಲೆಯಿಂದ ಹೊಸ ಜಿಲ್ಲೆಯಾಗಿ ಅಸ್ತಿತ್ವಕೆ ಬಂದಿತು. ಕೊಪ್ಪಳ, ಗಂಗಾವತಿ, ಕುಷ್ಟಗಿ & ಯಲಬುರ್ಗಾ ಹಾಗೂ ಹೊಸದಾಗಿ ರೂಪುಗೊಂಡ ಕನಕಗಿರಿ, ಕಾರಟಗಿ, ಕುಕನೂರ ತಾಲೂಕುಗಳನ್ನು ಒಳಗೊಂಡಿದೆ. ದಕ್ಷಿಣದಲ್ಲಿ ಬಳ್ಳಾರಿ ಜಿಲ್ಲೆ, ಉತ್ತರ ದಿಕ್ಕಿನಲ್ಲಿ ಬಾಗಲಕೋಟೆ, ಪಶ್ಚಿಮದಲ್ಲಿ ಗದಗ, ಪೂರ್ವದಲ್ಲಿ ರಾಯಚೂರು ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯು ಸುತ್ತುವರೆದಿದೆ. ಕೊಪ್ಪಳ ಜಿಲ್ಲೆಯು ಕೇಂದ್ರ ವಿಶ್ವ ಪರಂಪರೆ ತಾಣ ಹಂಪಿಯಿಂದ ಹತ್ತಿರವಾಗಿದೆ.


COMMERCIAL BREAK
SCROLL TO CONTINUE READING

ಕೊಪ್ಪಳವನ್ನು ಶಾತವಾಹನರು, ಗಂಗರು, ಹೊಯ್ಸಳರು ಮತ್ತು ಚಾಲುಕ್ಯ ರಾಜವಂಶಗಳ ರಾಜ್ಯಕ್ಕಿಂತ ಮೊದಲು ಪತ್ತೆಹಚ್ಚಲಾಗಿದೆ. “ಕೊಪ್ಪಳ” ಎಂಬ ಹೆಸರು “ವಿದಿತ ಮಹಾ ಕೊಪಣ ನಗರ”ವೆಂದು ಮಹಾನ್ ಕವಿ ಕವಿರಾಜಮಾರ್ಗ ಕಾವ್ಯದಿಂದ ಆಯ್ಕೆ ಮಾಡಲಾಗಿದೆ. ಅಶೋಕನ ಕಾಲದಲ್ಲಿ ಜೈನ ಧರ್ಮವು ಈ ಪ್ರದೇಶದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಹೀಗಾಗಿ ಇದನ್ನು “ಜೈನಕಾಶಿ” ಎಂದು ಕರೆಯಲಾಗುತ್ತದೆ. ಪ್ರಸ್ತುತ ಕೊಪ್ಪಳದ ಗವಿ ಮಠವು ಪ್ರಮುಖ ಆಕರ್ಷಣೆ ಹೊಂದಿದೆ.


ಯಲಬುರ್ಗಾ ವಿಧಾನಸಭಾ ಕ್ಷೇತ್ರ:


Yelburga District Assembly Election Result 2023: ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳಿವೆ. ಕ್ಷೇತ್ರದ ಸಮಗ್ರತೆಯ ದೃಷ್ಟಿಯಿಂದ ಕುಕನೂರು ಪ್ರದೇಶಕ್ಕೆ ಸಿಕ್ಕಷ್ಟು ಅಭಿವೃದ್ಧಿಯ ಭಾಗ್ಯ ಯಲಬುರ್ಗಾಕ್ಕೆ ಸಿಕ್ಕಿಲ್ಲವೆಂಬ ಮಾತಿದೆ. ಪ್ರತಿ ಚುನಾವಣೆ ಬಂದಾಗಲೂ ಯಲಬುರ್ಗಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಯೇ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತದೆ. ಕೃಷ್ಣಾ ‘ಬಿ’ ಸ್ಕೀಂ ಮೂಲಕ ಕ್ಷೇತ್ರಕ್ಕೆ ಕೃಷ್ಣಾ ನದಿಯ ನೀರನ್ನು ತರುತ್ತೇವೆಂದು ಇಲ್ಲಿನ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಕೃಷ್ಣೆಯ ಒಂದು ಹನಿ ನೀರು ಕೂಡ ಯಲಬುರ್ಗಾ ಕ್ಷೇತ್ರವನ್ನು ಮುಟ್ಟಿಲ್ಲ. 


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯ ಆಚಾರ್‌ ಹಾಲಪ್ಪ ಬಸಪ್ಪ ಅವರು 79,072 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಬಸವರಾಜ್ ರಾಯರೆಡ್ಡಿ ಅವರು 65,754 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 13,318 ಮತಗಳಾಗಿದ್ದವು. 


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಹಾಲಪ್ಪ ಆಚಾರ್ - ಬಿಜೆಪಿ


ಬಸವರಾಜ ರಾಯರಡ್ಡಿ - ಕಾಂಗ್ರೆಸ್


ಮಲ್ಲನಗೌಡ ಕೋನನಗೌಡ್ರ – ಜೆಡಿಎಸ್


ಮೌಲಾಹುಸೇನ್ ಬುಲ್ಡಿಯಾರ - ಎಎಪಿ


ಕುಷ್ಟಗಿ ವಿಧಾನಸಭಾ ಕ್ಷೇತ್ರ:


Kushtagi District Assembly Election Result 2023: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಮತ್ತು ಜಾತಿಗಿಂತ ವ್ಯಕ್ತಿ ಮುಖ್ಯವೆಂಬುದು ಹಲವು ಬಾರಿ ಸಾಬೀತಾಗಿದೆ. ನಿರ್ಣಾಯಕವಲ್ಲದ ಸಮುದಾಯದವರೂ ಗೆದ್ದಿರುವ ಉದಾಹರಣೆ ಇದೆ. ಬ್ರಾಹ್ಮಣ ಸಮುದಾಯದ ಕಾಂತಾರಾವ್‌ ದೇಸಾಯಿ ಮತ್ತು ಮುಸ್ಲಿಂ ಸಮುದಾಯದ ಹಸನಸಾಬ ದೋಟಿಹಾಳ ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರದ ಹೊರಗಿನ ಮಸ್ಕಿಯಿಂದ ವಲಸೆ ಬಂದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರನ್ನೂ ಈ ಕ್ಷೇತ್ರದ ಮತದಾರರು ಆರಿಸಿದ್ದಾರೆ.


2018ರ ಫಲಿತಾಂಶ:


2018ರಲ್ಲಿ ನಡೆದ ಚುನಾವಣೆಯಲ್ಲಿ ಅಮರೇಗೌಡ ಬಯ್ಯಾಪುರ ಅವರು 87,566 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ದೊಡ್ಡನಗೌಡ ಪಾಟೀಲ್ ಅವರು 69,535 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 18,031 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಅಮರೇಗೌಡ ಬಯ್ಯಾಪುರ - ಕಾಂಗ್ರೆಸ್


ದೊಡ್ಡನಗೌಡ ಎಚ್.ಪಾಟೀಲ್ –ಬಿಜೆಪಿ


ಶರಣಪ್ಪ ಕುಂಬಾರ – ಜೆಡಿಎಸ್


ಸಿ.ಎಂ.ಹಿರೇಮಠ – KRPP


ಕನಕಗಿರಿ ವಿಧಾನಸಭಾ ಕ್ಷೇತ್ರ:


 Kanakagiri District Assembly Election Result 2023: ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರವಾದ ನಂತರ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಲೆಕ್ಕಾಚಾರ ಜೋರಾಗಿಯೇ ಇದೆ. ಇದರ ಆಧಾರದಲ್ಲಿಯೇ ಈ ಕ್ಷೇತ್ರದ ಪ್ರಜಾಪ್ರತಿನಿಧಿಯ ಆಯ್ಕೆಯಾಗುತ್ತದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳು ಹೆಚ್ಚಾಗಿದ್ದರೂ, ಲಿಂಗಾಯತ ಸಮುದಾಯದ ಮತಗಳೇ ಇಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ 3 ಸಮುದಾಯಗಳನ್ನು ಹೊರತುಪಡಿಸಿ, ತೆಲುಗು ಭಾಷಿಕರು, ಉಪ್ಪಾರ ಸಮುದಾಯದವರು ಕ್ಷೇತ್ರದಲ್ಲಿದ್ದಾರೆ.


2018ರ ಫಲಿತಾಂಶ:


2018ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದ ಬಸವರಾಜ ದಡೇಸುಗೂರು 87,735 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಶಿವರಾಜ ತಂಗಡಗಿ 73,510 ಮತ ಗಳಿಸುವ ಮೂಲಕ ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 14,225 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಶಿವರಾಜ್ ಎಸ್‌.ತಂಗಡಗಿ - ಕಾಂಗ್ರೆಸ್


ಬಸವರಾಜ್ ದಡೇಸುಗೂರು - ಬಿಜೆಪಿ


ರಾಜಗೋಪಾಲ - ಜೆಡಿಎಸ್


ಡಾ.ಸಿ.ವೆಂಕಟರಮಣ – KRPP


ಯರ್ರಿಸ್ವಾಮ ಕುಂಟೋಜಿ - AAP


ಇದನ್ನೂ ಓದಿ: Haveri Assembly Election 2023: ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?


ಗಂಗಾವತಿ ವಿಧಾಸನಭಾ ಕ್ಷೇತ್ರ:  


Gangavathi District Assembly Election Result 2023: ಕರ್ನಾಟಕದ ‘ಭತ್ತದ ಕಣಜ’ ಎಂದೇ ಕರೆಯಲಾಗುವ ಗಂಗಾವತಿಯಲ್ಲಿ 1989, 1994 ಹಾಗೂ 1999ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಶ್ರೀರಂಗದೇವರಾಯಲು ಸತತ 3 ಬಾರಿ ಜಯಗಳಿಸಿ ದಾಖಲೆ ಬರೆದರು. 2004ರಿಂದ ಹೊಸ ತಲೆಮಾರು ರಾಜಕೀಯ ಪ್ರವೇಶ ಮಾಡಿತು. ಅಂದಿನಿಂದ ಕ್ಷೇತ್ರದಲ್ಲಿ ಇಕ್ಬಾಲ್‌ ಅನ್ಸಾರಿ ಮತ್ತು ಪರಣ್ಣ ಈಶ್ವರಪ್ಪ ಮುನವಳ್ಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಮ್ಮೆ ಇಕ್ಬಾಲ್‌ ಅನ್ಸಾರಿ ಗೆದ್ದರೆ, ಮತ್ತೊಮ್ಮೆ ಪರಣ್ಣ ಈಶ್ವರಪ್ಪ ಮುನವಳ್ಳಿ ಗೆಲ್ಲುತ್ತಾ ಬರುತ್ತಿದ್ದಾರೆ. ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬರು ಗೆದ್ದಿರುವುದು ವಿಶೇಷವಾಗಿದೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ 67,617 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಇಕ್ಬಾಲ್ ಅನ್ಸಾರಿ ಅವರು 59,644 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 7,973 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ಇಕ್ಬಾಲ್ ಅನ್ಸಾರಿ - ಕಾಂಗ್ರೆಸ್


ಪರಣ್ಣ ಮುನವಳ್ಳಿ - ಬಿಜೆಪಿ


ಜನಾರ್ದನ ರೆಡ್ಡಿ - KRPP


ಶರಣಪ್ಪ ಸಜ್ಜಿಹೊಲ - AAP 


ಚನ್ನಕೇಶವ - ಜೆಡಿಎಸ್


ಕೊಪ್ಪಳ ವಿಧಾನಸಭಾ ಕ್ಷೇತ್ರ:


Koppal District Assembly Election Result 2023: ಕೊಪ್ಪಳದಲ್ಲಿ 1999ರಿಂದಲೂ ಬಸವರಾಜ ಹಿಟ್ನಾಳ್‌ ಮತ್ತು ಸಂಗಣ್ಣ ಕರಡಿ ಕುಟುಂಬದ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇದೆ. 2004ರಲ್ಲಿ ಬಸವರಾಜ್ ಹಿಟ್ನಾಳ್ ಗೆದ್ದರೆ, 2008 ಮತ್ತು 2011ರ ಉಪಚುನಾವಣೆಯಲ್ಲಿ ಕರಡಿ ಸಂಗಣ್ಣ ಗೆದ್ದರು. 2013ರಲ್ಲಿ ತಂದೆ ಬಸವರಾಜ್‌ ಹಿಟ್ನಾಳ್‌ ಬದಲಿಗೆ ಚುನಾವಣೆಗೆ ನಿಂತ ರಾಘವೇಂದ್ರ ಹಿಟ್ನಾಳ್‌ ಅವರು 2013, 2018ರಲ್ಲಿ ಸತತ 2ಬಾರಿ ಗೆದ್ದು ಹ್ಯಾಟ್ರಿಕ್‌ನ ನಿರೀಕ್ಷೆಯಲ್ಲಿದ್ದಾರೆ.


2018ರ ಫಲಿತಾಂಶ


2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ರಾಘವೇಂದ್ರ ಹಿಟ್ನಾಳ್ ಅವರು 98,783 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಸಂಗಣ್ಣ ಕರಡಿಯವರು 72,432 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 26,351 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ರಾಘವೇಂದ್ರ ಹಿಟ್ನಾಳ್ – ಕಾಂಗ್ರೆಸ್


ಮಂಜುಳಾ ಕರಡಿ - ಬಿಜೆಪಿ


ಸಿ.ವಿ.ಚಂದ್ರಶೇಖರ್ - ಜೆಡಿಎಸ್


ಇದನ್ನೂ ಓದಿ: Yadgir Assembly Election 2023: ಯಾದಗಿರಿ ಜಿಲ್ಲೆಯಲ್ಲಿ ಯಾರಿಗೆ ಮತದಾರನ ‘ಜೈ’ಕಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.