Karnataka Assembly Election 2023:  ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು ಕೊನೆ ದಿನದ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಅಬ್ಬರಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಇಂದು ಗುಂಡ್ಲುಪೇಟೆಯಲ್ಲಿ ಕೈ ಅಭ್ಯರ್ಥಿ ಗಣೇಶ್ ಪ್ರಸಾದ್ ಪರ ಮತಯಾಚನೆ ಮಾಡಿ ಕಮಲಪಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.


ಸಿದ್ದರಾಮಯ್ಯ ಅವರಂತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಪ್ರಧಾನಿ ಇಲ್ಲಿಗೆ ಬಂದು ಭಾವನಾತ್ಮಕವಾಗಿ ಮಾತನಾಡಿ ಹೋಗುತ್ತಾರೆ.‌ ಆದರೆ, 40%  ಲಂಚದ ಬಗ್ಗೆ ಅವರೆಲ್ಲೂ ಮಾತನಾಡಲ್ಲ, ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ, ಲಂಚ ತಿನ್ನಲ್ಲ -ತಿನ್ನಲು ಬಿಡಲ್ಲ ಎನ್ನುತ್ತಾರೆ. ಇಲ್ಲಿ ಬಿಜೆಪಿ ಅವರು 40%  ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.


ಇದನ್ನೂ ಓದಿ- ಚುನಾವಣೆ ಎಫೆಕ್ಟ್: ಇಂದಿನಿಂದ ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ


ಬಿಜೆಪಿ ‌ಸರಕಾರ ಭ್ರಷ್ಟವಾಗಿದ್ದು ದುರಾಡಳಿತ ನಿಷ್ಕ್ರಿಯತೆ, ಜನ ವಿರೋಧಿ ನೀತಿಗಳಿಂದ ಬೇಸತ್ತು ಹೋಗಿರುವ ಜನತೆ ಬದಲಾವಣೆಯನ್ನು ಬಯಸಿದ್ದಾರೆ.  ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರನಷ್ಟೆ ಸತ್ಯ ಎಂದು ಭವಿಷ್ಯ ನುಡಿದರು.


ಗಣೇಶ್ ಪ್ರಸಾದ್ ಗೆ ಕೊಡುವ ಮತ ಸಿದ್ದರಾಮಯ್ಯನಿಗೆ ಕೊಟ್ಟಂತೆ. ಗಣೇಶ್ ಪ್ರಸಾದ ಗೆಲುವು ಸಿದ್ದರಾಮಯ್ಯನ ಗೆಲುವು. ಆದ್ದರಿಂದ ತಪ್ಪದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿದರು.


ಇದೇ ವೇಳೆ ಹಾಲಿ ಶಾಸಕ ನಿರಂಜನ್ ಕುಮಾರ್ ಅವರ ಬಗ್ಗೆಯೂ ತೀವ್ರ ವಾಗ್ಧಾಲಿ ನಡೆಸಿದ ಸಿದ್ದರಾಮಯ್ಯ, ಹಾಲಿ ಶಾಸಕರು ಕ್ಷೇತ್ರಕ್ಕೆ ಏನು ಮಾಡಿಲ್ಲ ನನ್ನ ಮುಖ್ಯ ಮಂತ್ರಿ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಬಡವರಿಗೆ ನೀಡಿದೆ. ಬಿಜೆಪಿ ಸರಕಾರ ಎಷ್ಟು ಮನೆಗಳನ್ನು ನೀಡಿದೆ ಎಂದು ಪ್ರಶ್ನೆ ಮಾಡಿದರು. ವಸತಿ ಸಚಿವ ವಿ.ಸೋಮಣ್ಣನ ಹತ್ತಿರ ಬಡ ಮಹಿಳೆ  ನಿವೇಶನ ಕೇಳಿದರೆ ಅವಳ ಹಲ್ಲೆ ಮಾಡಿದ ಸಚಿವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಅವರು ಕಿಡಿಕಾರಿದರು.


ಇದನ್ನೂ ಓದಿ- Karnataka Election: ವಿಧಾನಸಭೆ ಚುನಾವಣೆ ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ: ವಿವರ ಹೀಗಿದೆ ನೋಡಿ..


ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣ ಕೊನೆ ಆಟ: 
ಸಚಿವ ವಿ. ಸೋಮಣ್ಣ ಅವರು ಇಂದು ವರುಣಾದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಕೊನೆ ಹಂತದ ಪ್ರಚಾರ ನಡೆಸಿದರು. ಬಳಿಕ ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟು ಚಾಮರಾಜನಗರದ ವಿವಿಧ ಬಡಾವಣೆಗಳಲ್ಲಿ ಮತಬೇಟೆ ನಡೆಸಿದರು.


ಕೊಳದ ಗಣಪತಿ ದೇವಾಲಯದದಿಂದ ಆರಂಭಗೊಂಡ ಸೋಮಣ್ಣ ಪ್ರಚಾರ ಅಂಗಡಿ ಬೀದಿ, ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ, ಆದಿಶಕ್ತಿ ದೇವಾಲಯ ಸೇರಿದಂತೆ ಚಾಮರಾಜನಗರ ಜಿಲ್ಲಾಕೇಂದ್ರದ್ಯಾಂತ ಬಿರುಸಿನ ಪ್ರಚಾರ ನಡೆಸಿದರು.


ರೋಡ್ ಶೋ ನಡೆಸಿದ ವಾಟಾಳ್: 
ಚಾಮರಾಜನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಇಂದು ಆಟೋ ಚಾಲಕರ ಜೊತೆ ರೋಡ್ ಶೋ ನಡೆಸಿ ಗಮನ ಸೆಳೆದರು. 


ಸಂತೇಮರಹಳ್ಳಿ ವೃತ್ತದಲ್ಲಿ ಆರಂಭಗೊಂಡ ವಾಟಾಳ್ ರೋಡ್ ಶೋ ಡಿವಿಏಷನ್ ರಸ್ತೆ, ಬಿ‌.ರಾಚಯ್ಯ ಜೋಡಿ ರಸ್ತೆ, ಷರೀಪ್ ಸರ್ಕಲ್, ಗುಂಡ್ಲುಪೇಟೆ ವೃತ್ತ, ಅಂಗಡಿ ಬೀದಿಗಳಲ್ಲಿ ಮಗಳ ಜೊತೆ ರೋಡ್ ಶೋ ನಡೆಸಿ ತಮಗೊಂದು ಮತ ನೀಡುವಂತೆ ಮನವಿ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.