Karnataka Elections 2023 Voting Day : ಮತದಾನ ಮುಕ್ತಾಯ.. ಸ್ಟ್ರಾಂಗ್ ರೂಮ್ ಸೇರಿದ ಅಭ್ಯರ್ಥಿಗಳ ಭವಿಷ್ಯ!

Wed, 10 May 2023-6:10 pm,

Karnataka Elections 2023 Voting Day Live Updates: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13 ರಂದು ಚುನಾವಣಾ ರಿಸಲ್ಟ್‌ ಲಭ್ಯವಾಗಲಿದೆ. ಅಭ್ಯರ್ಥಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ.

Karnataka Assembly Polls 2023 ​: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13 ರಂದು ಚುನಾವಣಾ ರಿಸಲ್ಟ್‌ ಲಭ್ಯವಾಗಲಿದೆ. ಮತದಾನ ಪ್ರಕ್ರಿಯೆ ಇದೀಗ ಮುಕ್ತಾಯವಾಗಿದೆ. ಅಭ್ಯರ್ಥಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. 224 ಕ್ಷೇತ್ರಗಳಲ್ಲಿ 2615 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಇಂದು ನಡೆಯಿತು. ಮತಗಟ್ಟೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಸುಮಾರು 5.3 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇಂದು ಮುಂಜಾನೆಯಿಂದಲೇ ಮತದಾರರು ಬಹಳ ಉತ್ಸಾಹದಿಂದ ಬಂದು ಮತದಾನದಲ್ಲಿ ಪಾಲ್ಗೊಂಡರು.


COMMERCIAL BREAK
SCROLL TO CONTINUE READING

ಮುಂಜಾನೆಯಿಂದಲೇ ಮತಗಟ್ಟೆಗೆ ಮತದಾರರು ಆಗಿಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಮೂಲಕ ತನ್ನ ನೆಚ್ಚಿನ ನಾಯಕ ಅಥವಾ ನಾಯಕಿಗೆ ತಮ್ಮ ಅಮೂಲ್ಯ ಮತವನ್ನು ನೀಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿತ್ತು. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಿತು.


 

Latest Updates

  • ಕರ್ನಾಟಕ ವಿಧಾನಸಭೆ ಚುನಾವಣೆ Live: 6 ಗಂಟೆಗೆ ಮತಗಟ್ಟೆಗಳ ಗೇಟ್ ಕ್ಲೋಸ್

    COMMERCIAL BREAK
    SCROLL TO CONTINUE READING

    6 ಗಂಟೆ ನಂತರ ಬರುವ ಮತದಾರರಿಗೆ ಮತದಾನಕ್ಕಿಲ್ಲ ಅವಕಾಶ. ಬೂತ್ ನ ಒಳಗೆ ಇರುವ ಮತದಾರರಿಗೆ ಮಾತ್ರ ಮತದಾನಕ್ಕೆ ಅವಕಾಶ. ಬೆಳ್ಳಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಅವಕಾಶ ನೀಡಿದ್ದ ಚುನಾವಣೆ ಆಯೋಗ. ಒಟ್ಟು 11 ಗಂಟೆಗಳ ಕಾಲ ಅವಕಾಶ ನೀಡಿರುವ ಆಯೋಗ

  • ಕರ್ನಾಟಕ ವಿಧಾನಸಭೆ ಚುನಾವಣೆ Live: 5 ಗಂಟೆಯವರೆಗೆ 65.69% ರಷ್ಟು ಮತದಾನ

    COMMERCIAL BREAK
    SCROLL TO CONTINUE READING

    ಸಂಜೆ 5 ಗಂಟೆಯವರೆಗೆ 65.69% ರಷ್ಟು ಮತದಾನವಾಗಿದ್ದು, ಇನ್ನೂ ಅರ್ಧ ಗಂಟೆ ಬಾಕಿಯಿದೆ. ಸಂಜೆಯಾದಂತೆ ಜನರು ಹೆಚ್ಚಿನ ಸಂಕ್ಯೆಯಲ್ಲಿ ಮತಗಟ್ಟೆಗೆ ತೆರಳುತ್ತಿದ್ದಾರೆ. ಕಳೆದ ಬಾರಿ 72.13% ರಷ್ಟು ಮತದಾನವಾಗಿತ್ತು. 1952ರ ನಂತರ ಕಳೆದ ಬಾರಿಯೇ ಹೆಚ್ಚಿನ ಮತದಾನವಾಗಿತ್ತು. 

     

     

     

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?

    COMMERCIAL BREAK
    SCROLL TO CONTINUE READING

    ಬೆಂಗಳೂರು ಕೇಂದ್ರ - 51.20%

    ಚಾಮರಾಜಪೇಟೆ - 48.68%
    ಚಿಕ್ಕಪೇಟೆ - 52.59%
    ಗಾಂಧಿನಗರ - 53.5%
    ರಾಜಾಜೀನಗರ - 52.83%
    ರಾಜರಾಜೇಶ್ವರಿ ನಗರ - 52.8%
    ಶಾಂತಿ ನಗರ - 46.44%
    ಶಿವಾಜಿನಗರ - 51.57%

    ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 52.81%

    ಆನೇಕಲ್ - 55.76%
    ಬೆಂಗಳೂರು ಸೌಥ್ - 48.98%
    ಬ್ಯಾಟರಾಯನ ಪುರ - 52.98%
    ದಾಸರಹಳ್ಳಿ - 46.68%
    ಮಹಾದೇವ ಪುರ - 50.21%
    ಯಲಹಂಕ - 57.16%
    ಯಶವಂತ ಪುರ - 57.88%

    ಬೆಂಗಳೂರು ಕೇಂದ್ರ ಉತ್ತರ- 50.20%%

    ಸಿವಿ ರಾಮನ್‌ನಗರ - 44.01%
    ಹೆಬ್ಬಾಳ - 51.34%
    ಕೆಆರ್ ಪುರಂ - 53.83%
    ಮಹಾಲಕ್ಷ್ಮಿ ಲೇಔಟ್ - 52.49%
    ಮಲ್ಲೇಶ್ವರಂ - 52.68%
    ಪುಲಕೇಶಿ ನಗರ್ - 48.09%
    ಸರ್ವಜ್ಞ ನಗರ್ - 49.01%

    ಬೆಂಗಳೂರು ದಕ್ಷಿಣ- 49.42%

    ಬಿಟಿಎಮ್ ಲೇಔಟ್ - 46.42%
    ಬಸವನಗುಡಿ- 52.73%
    ಬೊಮ್ಮನಹಳ್ಳಿ - 45.19%
    ಗೋವಿಂದ ರಾಜ್ ನಗರ-49.8%
    ಜಯನಗರ - 53.09%
    ಪದ್ಮನಾಭ ನಗರ- 45.39%
    ವಿಜಯನಗರ - 45.39%

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಸ್ಟ್ರಾಂಗ್ ರೂಮ್ ಗಳಿಗೆ ವಿವಿ ಪ್ಯಾಟ್ ಶಿಫ್ಟ್

    COMMERCIAL BREAK
    SCROLL TO CONTINUE READING

    ಪೊಲೀಸ್ ಭದ್ರತೆ ಯಲ್ಲಿ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ಸೇರಲಿದೆ. ಮೇ 13 ರಂದು ವಿವಿ ಪ್ಯಾಟ್ ಓಪನ್ ಆಗಲಿವೆ. ಈಗಾಗಲೇ ನಿಗದಿ ಮಾಡಿರುವ ಸ್ಟ್ರಾಂಗ್ ರೂಮ್ ಗಳಿಗೆ ರವಾನೆಯಾಗಲಿದೆ. ವಿವಿ ಪ್ಯಾಟ್ ಚೆಕ್ ಮಾಡಿ ಬಳಿಕ ಅವುಗಳನ್ನು ಅಧಿಕಾರಿಗಳು ಸ್ಟ್ರಾಂಗ್ ರೂಮ್ ನಲ್ಲಿ ಇಡಲಿದ್ದಾರೆ. ಸ್ಟ್ರಾಂಗ್ ರೂಮ್ ಗೆ ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್ ಗಳಿಗೆ 4 ಸ್ಟ್ರಾಂಗ್ ರೂಮ್ ರಚನೆ ಮಾಡಲಾಗಿದೆ. 

    1. ಬೆಂಗಳೂರು ಸೆಂಟ್ರಲ್ - BMS ಕಾಲೇಜ್ ಬಸವನಗುಡಿ

    • RR ನಗರ
    • ಶಿವಾಜಿನಗರ
    • ಶಾಂತಿನಗರ
    • ಗಾಂಧಿನಗರ
    • ರಾಜಾಜಿನಗರ
    • ಚಾಮರಾಜಪೇಟೆ
    • ಚಿಕ್ಕಪೇಟೆ

    2. ಬೆಂಗಳೂರು ದಕ್ಷಿಣ - SSMRV ಕಾಲೇಜ್ ಜಯನಗರ

    • ಗೋವಿದರಾಜ್ ನಗರ 
    • ವಿಜಯನಗರ
    • ಬಸವನಗುಡಿ
    • ಪದ್ಮನಾಭನಗರ
    • ಬಿಟಿಎಮ್ ಲೇಔಟ್ 
    • ಜಯನಗರ
    • ಬೊಮ್ಮನಹಳ್ಳಿ

    3. ಬೆಂಗಳೂರು ಉತ್ತರ - ಮೌಂಟ್ ಕಾರ್ಮಲ್ ಕಾಲೇಜ್ ವಸಂತನಗರ

    • ಕೆ ಅರ್ ಪುರಂ
    • ಮಾಹಾಲಕ್ಷ್ಮಿ ಲೇಔಟ್
    • ಮಲ್ಲೇಶ್ವರಂ
    • ಹೆಬ್ಬಾಳ
    • ಪುಲಕೇಶಿನಗರ
    • ಸರ್ವಜ್ಞನಗರ
    • ಸಿ ವಿ ರಾಮನ್ ನಗರ

    4. ಬೆಂಗಳೂರು - ನಗರ ( Urabn)  ಸೆಂಟ್ ಜೋಷಫ್ ಕಾಲೇಜ್ ವಿಟಲ್ ಮಲ್ಯಾ ರಸ್ತೆ

    • ಯಲಹಂಕ
    • ಬ್ಯಾಟರಾಯನಪುರ
    • ಯಶವಂತಪುರ
    • ದಾಸರಹಳ್ಳಿ
    • ಮಾಹದೇವಪುರ
    • ಬೆಂಗಳೂರು ದಕ್ಷಿಣ
    • ಆನೆಕಲ್

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಮತದಾನಕ್ಕೆ ಒಂದು ಗಂಟೆ ಬಾಕಿ

    COMMERCIAL BREAK
    SCROLL TO CONTINUE READING

    ಮತದಾನಕ್ಕೆ ಒಂದು ಗಂಟೆ ಬಾಕಿ. ಆರು ಗಂಟೆಗೆ ಮತದಾನ ಮುಕ್ತಾಯ. ಕೆಲವೆಡೆ ಬಿರುಸಿನ ಮತದಾನ ಶುರು. ಆರು ಗಂಟೆಯ ನಂತರ ಮತದಾನ ಮಾಡೋದಕ್ಕೆ ಅವಕಾಶವಿಲ್ಲ. ಪೊಲೀಸರ ಭದ್ರತೆಯಲ್ಲಿ ಆರು ಗಂಟೆಯ ನಂತರ ಇವಿಎಂ ಮಿಷನ್ ರವಾನೆ. ಈಗಾಗಲೇ ಸೆಂಟರ್ ಗಳನ್ನು ಗುರುತಿಸಲಾಗಿದೆ. 

  • Karnataka Elections 2023 ಮತ ಚಲಾಯಿಸಿದ ಮಂಜಮ್ಮ ಜೋಗತಿ 

    COMMERCIAL BREAK
    SCROLL TO CONTINUE READING

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಜಾನಪದ ಕಲಾವಿದರು ಹಾಗೂ ಚುನಾವಣಾ ರಾಯಭಾರಿಯಾದ ಮಂಜಮ್ಮ ಜೋಗತಿ ಅವರು ಮತ ಚಲಾಯಿಸಿದರು. 

     

     

  • Chikkamagaluru Election Live: ಬೂತ್ ಮುಂದೆ ಜಗಳ, ಹೊರಗಡೆ ಬರ್ಥ್ ಡೇ ಆಚರಣೆ
     
    ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಹುಟ್ಟುಹಬ್ಬ ಆಚರಣೆ. ರಸ್ತೆ ಮಧ್ಯೆಯೇ ಹುಟ್ಟು ಹಬ್ಬ ಆಚರಿಸಿದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಘಟನೆ. ಇಂದು ಬಿಜೆಪಿ ಕಾರ್ಯಕರ್ತ ಪೂರ್ಣೇಶ್ ಹುಟ್ಟುಹಬ್ಬ. ಚುನಾವಣಾ ಬ್ಯುಸಿ‌ ಮಧ್ಯೆಯೂ ಎಲ್ಲರೂ ಸೇರಿ ಬರ್ಥ್ ಡೇ ಆಚರಣೆ. ಎಲ್ಲರೂ ಸೇರಿ ಕೇಕ್‌ ಕತ್ತರಿಸಿ, ಕೇಕ್ ತಿನ್ನಿಸಿ ಹುಟ್ಟು ಹಬ್ಬ ಆಚರಣೆ

  • "ನಾನು ಈಗಷ್ಟೇ  ಪ್ರಗತಿಪರ,ಸಮೃದ್ಧ ಮತ್ತು ಶಾಂತಿಯುತ ಕರ್ನಾಟಕಕ್ಕಾಗಿ ಮತ ಹಾಕಿದ್ದೇನೆ"-ಇತಿಹಾಸಕಾರ ರಾಮಚಂದ್ರ ಗುಹಾ 

  •  ಮತದಾನ ಮಾಡಲು ಉಡುಪಿಯ ಮತಗಟ್ಟೆಗೆ ಆಗಮಿಸಿದ ನಟ ರಿಷಬ್ ಶೆಟ್ಟಿ

  • ಬೆಂಗಳೂರಿನ ಜಯನಗರದಲ್ಲಿ ಮತದಾನ ಮಾಡಿದ ನಂತರ ಯುವ ಮತದಾರರಿಗೆ ಸಂದೇಶ ನೀಡಿದ ಸುಧಾ ಮೂರ್ತಿ; "ದಯವಿಟ್ಟು ನಮ್ಮನ್ನು ನೋಡಿ. ನಾವು ವಯಸ್ಸಾದವರು ಆದರೆ ನಾವು 6 ಗಂಟೆಗೆ ಎದ್ದು ಇಲ್ಲಿಗೆ ಬಂದು ಮತ ಚಲಾಯಿಸಿ. ದಯವಿಟ್ಟು ನಮ್ಮಿಂದ ಕಲಿಯಿರಿ. ಮತದಾನ ಪ್ರಜಾಪ್ರಭುತ್ವದ ಪವಿತ್ರ ಭಾಗ..." ಎಂದು ಹೇಳಿದರು.

  • ನಟ ಧ್ರುವ ಸರ್ಜಾ ಇಂದು ಬೆಂಗಳೂರಿನಲ್ಲಿ ಮತದಾನ ಮಾಡಿದರು.

  • ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದಾದ್ಯಂತ ಶೇ.52.03ರಷ್ಟು ಮತದಾನವಾಗಿದೆ.

  • Bengaluru Election Live: 95 ವರ್ಷದ ಸೀತಮ್ಮ ಅವರಿಂದ ಮತದಾನ 

    COMMERCIAL BREAK
    SCROLL TO CONTINUE READING

    ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಅವರ ತಾಯಿ 95 ವರ್ಷದ ಸೀತಮ್ಮ ಅವರು ಮತದಾನ ಮಾಡುವ ಮೂಲಕ ಮಾದರಿಯಾದರು. ಬಿಟಿಎಂ ಲೇಔಟ್‌ನ ಮತಗಟ್ಟೆ ಸಂಖ್ಯೆ 202ರ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೊಠಡಿ ಸಂಖ್ಯೆ 1ರಲ್ಲಿ ಮತದಾನ ಮಾಡಿದರು. 
     

     

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಅಧಿಕಾರಿಗಳ ವಿರುದ್ಧ ಆಕ್ರೋಶ

    COMMERCIAL BREAK
    SCROLL TO CONTINUE READING

    ಹತ್ತು ವರ್ಷದ ಹಿಂದೆ ಮೃತರಾಗಿರುವ ತಂದೆಯ ಹೆಸ್ರು ವೋಟರ್ ಲಿಸ್ಟ್ ನಲ್ಲಿದೆ. ಆದರೆ ಮಗನ ಹೆಸ್ರು ಮಿಸ್ಸಿಂಗ್. ಅಧಿಕಾರಿಗಳ ವಿರುದ್ಧ ಆಕ್ರೋಶ. ಬದುಕಿರುವವರ ಹೆಸರು ಡಿಲೀಟ್ ಆಗುತ್ತೆ, ಸತ್ತವರ ಹೆಸ್ರು ಇರುತ್ತೆ ಅಂತಾ ಆಕ್ರೋಶ. ಜಯನಗರದ ಮತಗಟ್ಟೆಯಲ್ಲಿ ಘಟನೆ. 

  • ಬಸವನ ಬಾಗೇವಾಡಿ ಮತಕ್ಷೇತ್ರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಂಕರ ನಗರ ಕೂಡಗಿ ಎಲ್ ಟಿ ಯ ಲಂಬಾಣಿ ಜನಾಂಗದ ಮಾದರಿಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ವಯೋವ್ರುದ್ಧೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

    COMMERCIAL BREAK
    SCROLL TO CONTINUE READING

     

  • Bengaluru Election Live: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ. ಬಿಟಿಎಂ ಲೇಔಟ್ ವಿಧಾನಸಭೆಯ ಲಕ್ಕಸಂದ್ರ ವಾರ್ಡ್ ನಲ್ಲಿ ಗಲಾಟೆ. ಮತದಾನದ ಚೀಟಿ ಬರೆದುಕೊಡುವ ವಿಚಾರವಾಗಿ ಗಲಾಟೆ

  • ನಿವೃತ್ತ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್ ಅವರು ಮೈಸೂರಿನ ಕುವೆಂಪು ನಗರದಲ್ಲಿ ಮತ ಚಲಾಯಿಸಿದರು.

  • ಕಲಘಟಗಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 105 ಥೀಮ್ ಆಧಾರಿತ ಮತದಾನ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಲಂಬಾಣಿ ವೇಷ ಭೂಷಣ ಧರಿಸಿ ವಿಶೇಷ ರೀತಿಯಲ್ಲಿ ಮತದಾರರನ್ನು ಆಕರ್ಷಿಸುವ ಕೆಲಸ ಮಾಡಿದ್ದಾರೆ.

  • ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಬೇತೂರು ಹಳ್ಳಿಯಲ್ಲಿ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರಗು ತಂದಿದ್ದಾರೆ.

  • Bengaluru Election Live:  ಮತದಾನ ಮಾಡಿದವರಿಗೆ ಫ್ರೀ ದೋಸೆ ಆಫರ್

    COMMERCIAL BREAK
    SCROLL TO CONTINUE READING

    ನಿಸರ್ಗ ಹೊಟೇಲ್ ನಲ್ಲಿ ಮತದಾನ ಮಾಡಿದವರಿಗೆ ಫ್ರೀ ದೋಸೆ ಆಫರ್ ನೀಡಲಾಗಿದೆ. ಮತದಾರರು ವೋಟ್ ಹಾಕಿ ಬೆಣ್ಣೆ ದೋಸೆ ಸವಿದರು. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೊಟೇಲ್. ಮತದಾನ ಮಾಡಿದವರಿಗೆ ಬೆಣ್ಣೆದೋಸೆ, ಮೈಸೂರ್ ಪಾಕ್ ಆಫರ್. ಮೊದಲು ಬಂದ 100 ಯುವ ಮತದಾರರಿಗೆ ಫಿಲ್ಮಂ ಟಿಕೆಟ್ ಆಫರ್. ಮತದಾನ ಉತ್ತೇಜಿಸಲು ಈ ಆಫರ್ ನೀಡಿದ್ದ ಹೊಟೇಲ್. ಮತದಾನ ಮಾಡಿ ಹೊಟೇಲ್ ನತ್ತ ಮುಖಮಾಡ್ತಿರೋ ಮತದಾರರು. 

  • ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ 6,86,318 ಜನ ಮತ ಚಲಾಯಿಸಿದ್ದು, ಶೇ.30.94 ರಷ್ಟು ಮತದಾನ

  • ಕಡೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 101 ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ ಯುವತಿಯರಿಗೆ ಚುನಾವಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳ ವತಿಯಿಂದ ಸರ್ಟಿಫಿಕೇಟ್ಸ್ ನೀಡಲಾಯಿತು.

  • Karnataka Assembly Election 2023: ಈವರೆಗೆ ರಾಜ್ಯದಲ್ಲಿ ಎಷ್ಟು ಮತದಾನವಾಗಿದೆ? 

    COMMERCIAL BREAK
    SCROLL TO CONTINUE READING

    ಬೆಂಗಳೂರು ಕೇಂದ್ರ 29.41%, ಬೆಂಗಳೂರು ಉತ್ತರ 29.90%, ಬೆಂಗಳೂರು ದಕ್ಷಿಣ 30.68%, ಬಾಗಲಕೋಟೆ 40.87%, ಬೆಂಗಳೂರು ಗ್ರಾಮಾಂತರ, 40.16% ಬೆಂಗಳೂರು ನಗರ, 31.54%, ಬೆಳಗಾವಿ 37.48%, ಬಳ್ಳಾರಿ 39.74%, ಬೀದರ್ 37.11%, ವಿಜಯಪುರ 36.55%, ಚಾಮರಾಜನಗರ 30.63%, ಚಿಕ್ಕಬಳ್ಳಾಪುರ 40.15%, ಚಿಕ್ಕಮಗಳೂರು 41.00%. ಚಿತ್ರದುರ್ಗ 36.41%, ದಕ್ಷಿಣ ಕನ್ನಡ 44.17%, ದಾವಣಗೆರೆ 38.64%, ಧಾರವಾಡ 36.14%, ಗದಗ 38.98%,  ಕಲಬುರಗಿ 32.69%, ಹಾಸನ 40.84%, ಹಾವೇರಿ 36.74%, ಕೊಡಗು 45.64%, ಕೋಲಾರ 36.87%, ಕೊಪ್ಪಳ 39.94, ಮಂಡ್ಯ 39.38, ಮೈಸೂರು 36.73%, ರಾಯಚೂರು 38.20%, ರಾಮನಗರ 42.52%, ಶಿವಮೊಗ್ಗ 41.02%, ತುಮಕೂರು 40.60%, ಉಡುಪಿ 47.79, ಉತ್ತರ ಕನ್ನಡ ಜಿಲ್ಲೆ 42.43%, ವಿಜಯನಗರ 39.56%, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 35.68ರಷ್ಟು ಮತದಾನವಾಗಿದೆ. 

  • ಮಂಡ್ಯ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

  • Chikkaballapur Election Live: ಮಧ್ಯಾಹ್ನ 1:00 ಗಂಟೆವರೆಗೆ ಚಿಕ್ಕಬಳ್ಳಾಪುರ ಮತದಾನ ವಿವರ

    COMMERCIAL BREAK
    SCROLL TO CONTINUE READING

    ಗೌರಿಬಿದನೂರು - 38.87%
    ಬಾಗೇಪಲ್ಲಿ - 43.37%
    ಚಿಕ್ಕಬಳ್ಳಾಪುರ - 42.77%
    ಶಿಡ್ಲಘಟ್ಟ - 37.97%
    ಚಿಂತಾಮಣಿ - 42.00%
    ಒಟ್ಟು -  40.35% 

  • ನಾಗಮಂಗಲದಲ್ಲಿ ಒಕ್ಕಲಿಗ ಮಠದ ನಾಯಕ ನಿರ್ಮಲಾನಂದನಾಥ ಸ್ವಾಮೀಜಿ ಮತ ಚಲಾಯಿಸಿದರು.

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಬೆಂಗಳೂರಿನ ಶೇಕಾಡವಾರು ಮತದಾನ‌ 

    COMMERCIAL BREAK
    SCROLL TO CONTINUE READING

    ಬೆಂಗಳೂರು ಕೇಂದ್ರ  - 29.65
    ಚಾಮರಾಜಪೇಟೆ - 28.33%
    ಚಿಕ್ಕಪೇಟೆ - 30.84%
    ಗಾಂಧಿನಗರ - 28.65%
    ರಾಜಾಜೀನಗರ - 32.41%
    ರಾಜರಾಜೇಶ್ವರಿ ನಗರ - 31.72%
    ಶಾಂತಿ ನಗರ - 25.86%
    ಶಿವಾಜಿನಗರ - 29.75%
    ಬೆಂಗಳೂರು ಉತ್ತರ - 30.00%
    ಸಿವಿ ರಾಮನ್‌ನಗರ - 26.85%
    ಹೆಬ್ಬಾಳ - 32.96%
    ಕೆಆರ್ ಪುರಂ - 29.43%
    ಮಹಾಲಕ್ಷ್ಮಿ ಲೇಔಟ್ - 34.26₹
    ಮಲ್ಲೇಶ್ವರಂ - 32.08%
    ಪುಲಕೇಶಿ ನಗರ್ - 28.65%
    ಸರ್ವಜ್ಞ ನಗರ್ - 25.08

  • ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ ಚಲಾಯಿಸಿದರು.

  • ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ ಚಲಾಯಿಸಿದರು.

  • ಕರ್ನಾಟಕ ವಿಧಾನಸಭೆ ಚುನಾವಣೆ Live: ವೋಟಿಂಗ್ ಬೂತ್ ಎದುರಲ್ಲೇ ಮಾರಾಮಾರಿ

    COMMERCIAL BREAK
    SCROLL TO CONTINUE READING

    ಪದ್ಮನಾಭನಗರ ವೋಟಿಂಗ್ ಬೂತ್ ಎದುರಲ್ಲೇ ಮಾರಾಮಾರಿ. ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಘಟನೆ. ಎರಡು ಗುಂಪುಗಳ ನಡುವೆ ಗಲಾಟೆ. ಗಾಂಜಾ ಏಟಲ್ಲಿ ಬಂದಿದ್ದ ಸುಮಾರು 30 ಯುವಕರಿಂದ ಹಲ್ಲೆ ಆರೋಪ. ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಗ್ಯಾಂಗ್. ಮಹಿಳೆಯರ ಮೇಲೂ ಹಲ್ಲೆ ನಡೆಸಿರೊ ಪುಂಡರ ಗ್ಯಾಂಗ್‌. ಕಬ್ಬಾಳ್ ಉಮೇಶ್ ಹುಡುಗರನ್ನ ಕರೆಸಿ ಹಲ್ಲೆ ನಡೆಸಿರೊ ಆರೋಪ. ಕಬ್ಬಳ್ ಉಮೇಶ್ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಪತಿ. ಮೀನಮ್ಮ ಮತ್ತು ಚನ್ನಪ್ಪ ಎಂಬುವವರಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು. ದೂರುಗಳನ್ನು ಪಡೆದು ಪರಿಶೀಲನೆ ನಡೆಸುತ್ತಿರುವ ಪೊಲೀಸರು. ವಿಡಿಯೋ ಫೋಟೇಜ್ ಪಡೆದು ತನಿಖೆ ನಡೆಸ್ತಿರೊ ಪೊಲೀಸರು.

  • " ತಮ್ಮ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು. ನಾನು ಸೆಲೆಬ್ರಿಟಿಯಾಗಿ ಇಲ್ಲಿಗೆ ಬಂದಿಲ್ಲ, ನಾನು ಭಾರತೀಯನಾಗಿ ಇಲ್ಲಿಗೆ ಬಂದಿದ್ದೇನೆ ಮತ್ತು ಇದು ನನ್ನ ಜವಾಬ್ದಾರಿ" ಎಂದು ನಟ ಕಿಚ್ಚ ಸುದೀಪ್ ಮತ ಚಲಾಯಿಸಿದ ನಂತರ ಹೇಳಿದರು.

  • ಸಿದ್ದರಾಮನಹುಂಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ 

  • 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಮತ ಚಲಾಯಿಸುತ್ತ ಬಂದಿರುವ RWA ಸದಸ್ಯೆಯಾದ ವಯೋವ್ರುದ್ಧೆಯೊಬ್ಬರು ಇಂದು ಮತ ಚಲಾಯಿಸಿದ್ದು ಪ್ರಶಂಸನೀಯ.

    COMMERCIAL BREAK
    SCROLL TO CONTINUE READING

  • ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಹೊಸ ಜೋಡಿ ಮತ ಚಲಾಯಿಸಿದ ಕ್ಷಣ.

  • ಪುಟ್ಟೇನಹಳ್ಳಿ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ ಕಿಚ್ಚ ಸುದೀಪ್

    COMMERCIAL BREAK
    SCROLL TO CONTINUE READING

    ಕಿಚ್ಚ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು

  • 88 ವರ್ಷದ ನಾಡೋಜ ದಂಪತಿಗಳಾದ ಪ್ರೊಫೆಸರ್ ಕಮಲಾ ಹಂಪನಾ ಮತ್ತು ಹಂಪನಾ ಅವರು ಇಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

  • ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿನ ಮತಗಟ್ಟೆ 212 ರಲ್ಲಿ ಮತದಾನ ಚಲಾವಣೆ ಮಾಡಿದ್ದಾರೆ.

    COMMERCIAL BREAK
    SCROLL TO CONTINUE READING

     

  • ಮಧ್ಯಾಹ್ನ  1 ಗಂಟೆ ವೇಳೆಗೆ ಬೆಂಗಳೂರಿನ ವಿಧಾನ ಸಭಾ ಕ್ಷೇತ್ರಗಳ ಶೇಕಾಡವಾರು ಮತದಾನ‌ಪ್ರಮಾಣ - 

    COMMERCIAL BREAK
    SCROLL TO CONTINUE READING

    ಬೆಂಗಳೂರು  ಉತ್ತರ 30.00

    ಸಿವಿ ರಾಮನ್‌ನಗರ - 26.85%
    ಹೆಬ್ಬಾಳ - 32.96%
    ಕೆಆರ್ ಪುರಂ - 29.43%
    ಮಹಾಲಕ್ಷ್ಮಿ ಲೇಔಟ್ - 34.26₹
    ಮಲ್ಲೇಶ್ವರಂ - 32.08%
    ಪುಲಕೇಶಿ ನಗರ್ - 28.65%
    ಸರ್ವಜ್ಞ ನಗರ್ - 25.08

  • ಕರ್ನಾಟಕ ವಿಧಾನಸಭೆ ಚುನಾವಣೆ Live: ಮಹದೇವಪುರದಲ್ಲಿ ಕೈಕೊಟ್ಟ ಮತಯಂತ್ರ 

    COMMERCIAL BREAK
    SCROLL TO CONTINUE READING

    ಮಹದೇವಪುರ ಕ್ಷೇತ್ರದ ಜ್ಯೋತಿಪುರ ಗ್ರಾಮದ ಮತಗಟ್ಟೆ ಸಂಖ್ಯೆ  3 ರಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಪರದಾಡುವಂತಾಯಿತು. 150ಕ್ಕು ಹೆಚ್ಚು ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮತಯಂತ್ರ ದೋಷದಿಂದ ಬಿಸಿಲಿನಲ್ಲಿ ಮತದಾರರು ಕಾಯುವಂತಾಯಿತು. 

  • Vijayapura Election Live: ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿದ ಗ್ರಾಮಸ್ಥರು

    COMMERCIAL BREAK
    SCROLL TO CONTINUE READING

    ಗ್ರಾಮಸ್ಥರು ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. EVM ಮಷಿನ್ ಹಾಗೂ ವಿವಿಪ್ಯಾಟ್ ಮಷಿನ್‌ಗಳನ್ನ ಒಡೆದು ಹಾಕಿದ್ದಾರೆ. ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳಿಗೂ ಥಳಿಸಿದ್ದು, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 

  • Karnataka Assembly Elections: ಗೋಪಾಲಯ್ಯ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆ

    COMMERCIAL BREAK
    SCROLL TO CONTINUE READING

    ಗೋಪಾಲಯ್ಯ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಕಾರ್ಯಕರ್ತರು ಹಣ ಹಂಚಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ. ಣ ಹಂಚಿರುವ ಹಿನ್ನಲೆ‌ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ. ಕುರುಬರಹಳ್ಳಿ ದೊಡ್ಡಮ್ಮನ ದೇವಸ್ಥಾನ ಬಳಿ ಹಣ ಹಂಚಿರುವ ಆರೋಪ ಕೇಳಿಬಂದಿದೆ. 

  • Vijayanagar Election Live:  ವೋಟ್ ಹಾಕಲು ಕಾದು ಸುಸ್ತಾದ ಮತದಾರರು

    COMMERCIAL BREAK
    SCROLL TO CONTINUE READING

    ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ ನಲ್ಲಿ ವೋಟ್ ಹಾಕಲು ಕಾದು ಕಾದು ಮತದಾರರು ಸುಸ್ತಾಗಿದ್ದಾರೆ. ವೀವರ್ಸ್ ಕಾಲೋನಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. 1 ಗಂಟೆ ಕಾದರೂ ಮತದಾನ ಪ್ರಕ್ರಿಯೆ ಚುರುಕು ಕಾಣದ ಹಿನ್ನೆಲೆ ಮತದಾರರು ಹೈರಾಣಾಗಿದ್ದಾರೆ. ದು ಬೂತ್ ನಲ್ಲಿ 900 ಮಂದಿ, ಮತ್ತೊಂದು ಬೂತ್ ನಲ್ಲಿ 1,500 ಮತದಾರರು ಇರುವ ಹಿನ್ನೆಲೆ ಮತದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. 

  • Hasan Election Live: ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವು

    COMMERCIAL BREAK
    SCROLL TO CONTINUE READING

    ಹಾಸನ : ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಹಕ್ಕು ಚಲಾಯಿಸಿ ಹೊರಗೆ ಬಂದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಜಯಣ್ಣ (49) ಸಾವನ್ನಪ್ಪಿದ ದುರ್ದೈವಿ. ಮತ ಕೇಂದ್ರದ ಆವರಣದಲ್ಲೇ ಕೊನೆಯುಳಿರೆಳೆದ ಜಯಣ್ಣ. 

  • Kolar Election Live: ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ 19.01% ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    COMMERCIAL BREAK
    SCROLL TO CONTINUE READING

    ಶ್ರೀನಿವಾಸಪುರ ಶೇ. 22
    ಮುಳಬಾಗಿಲು – ಶೇ. 15.45
    ಕೆಜಿಎಫ್ – ಶೇ. 22.5
    ಬಂಗಾರಪೇಟೆ -ಶೇ. 20.12
    ಕೋಲಾರ -ಶೇ. 16.45
    ಮಾಲೂರು -ಶೇ. 18.11

  • Gadag Election Live: ಬಳ್ಳಾರಿ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ 19.4% ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    COMMERCIAL BREAK
    SCROLL TO CONTINUE READING

    ಶಿರಹಟ್ಟಿ- ಶೇ. 16.2
    ಗದಗ- ಶೇ. 15.64
    ರೋಣ- ಶೇ. 22.04
    ನರಗುಂದ -ಶೇ. 23.72

  • Bengaluru Election 2023: ಮತದಾನ ಮಾಡಲು ಆ್ಯಂಬುಲೆನ್ಸ್ ನಲ್ಲಿ ತೆರಳಿದ ರೋಗಿ

    COMMERCIAL BREAK
    SCROLL TO CONTINUE READING

    ಮತದಾನ ಮಾಡಲು ರೋಗಿಯೊಬ್ಬರು ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ತಿಲಕ್ ನಗರದ ಸಾಗರ್ ಆಸ್ಪತ್ರೆಯಿಂದ ಆರ್.ಆರ್ ನಗರಕ್ಕೆ ಮತದಾನ ಮಾಡಲು ತೆರಳಿ ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದಾರೆ. ಆರ್ ಆರ್ ನಗರ ನಿವಾಸಿಯಾಗಿರುವ ಶೇಷಾದ್ರಿ (40) ಕಿಡ್ನಿ ಸಮಸ್ಯೆಯಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

  • ಕರ್ನಾಟಕ ವಿಧಾನಸಭೆ ಚುನಾವಣೆ Live : ವಾಕಿಂಗ್ ಸ್ಟಿಕ್ ಹಿಡಿದು ಬರುತ್ತಿರುವ ವಯೋವೃದ್ದ ಮತದಾರರು

    COMMERCIAL BREAK
    SCROLL TO CONTINUE READING

    ವಾಕಿಂಗ್ ಸ್ಟಿಕ್ ಹಿಡಿದು ವಯೋವೃದ್ದ ಮತದಾರರು ಮತಗಟ್ಟೆ ಕಡೆ ಬರುತ್ತಿದ್ಧಾರೆ. ಯುವಕರು ನಾಚುವಂತೆ ಸ್ಟಿಕ್ ಹಿಡಿದು ವೃದ್ಧ ಮತದಾರರು ಬರುತ್ತಿದ್ದಾರೆ. ಬಿಬಿಎಂಪಿ  ಹತ್ತಕ್ಕೂ ಹೆಚ್ಚು ವೀಲ್ ಚೇರ್ ವ್ಯವಸ್ಥೆ ಮಾಡಿದೆ. ವೀಲ್ ಚೇರ್ ಗಳಲ್ಲಿ ಬಂದು ಬಹಳ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. 

  • Bangalore Election Live: ಬೆಂಗಳೂರು ವಿಧಾನಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ

    COMMERCIAL BREAK
    SCROLL TO CONTINUE READING

    ಆನೇಕಲ್ ವಿಧಾನ ಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇಕಡಾ 20ರಷ್ಟು ಮತದಾನ. ಬೆಂಗಳೂರು ವಿಧಾನಸಭಾ ಕ್ಷೇತ್ರ ಶೇಕಡ 20 ರಷ್ಟು ಮತದಾನ

  • Hasan Election Live: ಹಾಸನ ಜಿಲ್ಲೆಯಲ್ಲಿ 11.30 ರವರೆಗೆ ಶೇ.20.92% ರಷ್ಟು ಮತದಾನ ನಡೆದಿದೆ. ತಾಲೂಕಾವಾರು ಮತದಾನ ಹೀಗಿದೆ

    COMMERCIAL BREAK
    SCROLL TO CONTINUE READING

    ಶ್ರವಣಬೆಳಗೊಳ- 21.93%
    ಅರಸೀಕೆರೆ- 20.79%
    ಬೇಲೂರು- 18.99%
    ಹಾಸನ- 20.85%
    ಹೊಳೆನರಸಿಪುರ- 22.21%
    ಅರಕಲಗೂಡು- 19.16%
    ಸಕಲೇಶಪುರ- 22.57%

  • Kalaburagi Election 2023: ಮಲ್ಲಿಕಾರ್ಜುನ ಖರ್ಗೆ ಮತದಾನ 

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಮತ ಚಲಾಯಿಸಿದರು. "ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದಿಂದ ಗೆಲ್ಲುತ್ತದೆ. 130-135ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ" ಎಂದಿದ್ದಾರೆ.

     

     

  • Karnataka Elections 2023 : ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಮಾಂಡ್ ಕಂಟ್ರೋಲ್ ರೂಂ

    COMMERCIAL BREAK
    SCROLL TO CONTINUE READING

    ಬೆಂಗಳೂರಿನಾದ್ಯಂತ ಮತದಾನ‌ ಬಿರುಸಿನಿಂದ ನಡೆಯುತ್ತಿದ್ದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಕಂಟ್ರೋಲ್ ರೂಂ ನಲ್ಲಿ ಕುಳಿತಿರುವ ಪ್ರಾದೇಶಿಕ ಆಯುಕ್ತರಾದ ಶ್ರೀ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು 28 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಕುರಿತು ಪರಿವೀಕ್ಷಣೆ ಮಾಡಿದರು.

  • Chamarajanagar Election Live: ಸಂಭ್ರಮದಿಂದ ಸೋಲಿಗರ ಮತದಾನ

    COMMERCIAL BREAK
    SCROLL TO CONTINUE READING

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಎಥ್ನಿಕ್ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು ಸೋಲಿಗರು ಸಂಭ್ರಮದಿಂದ ಮತ ಚಲಾವಣೆ ಮಾಡುತ್ತಿದ್ದಾರೆ. ಮತಗಟ್ಟೆಯತ್ತ ವನವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಸ್ವಾಗತ ಕಮಾನು, ಬಣ್ಣಬಣ್ಣದ ಬಾವುಟಗಳು, ಜನಪದ ಚಿತ್ರಗಳನ್ನು ಮತಗಟ್ಟೆಯಲ್ಲಿ ರಚಿಸಿ ಹೊಸ ಲುಕ್ ಕೊಟ್ಟಿದ್ದು ಸೋಲಿಗರು ಸಂಭ್ರಮದಿಂದ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ. 

     

  • Karnataka Elections 2023 : ಬಾಣಂತಿಯಿಂದ ಮತದಾನ

    COMMERCIAL BREAK
    SCROLL TO CONTINUE READING

    ವಿಜಯನಗರದಲ್ಲಿ 14 ದಿನದ ಬಾಣಂತಿ ಮತದಾನ ಮಾಡಿದರು. ಪುಷ್ಟವತಿ ಕರಡಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಹಗರಿಬೊಮ್ಮನಹಳ್ಳಿ ತಾ. ಉಲುವತ್ತಿ ಗ್ರಾಮದಲ್ಲಿ ಮತ ಚಲಾಯಿಸಿದರು. 

  • Karnataka Elections 2023 : ಅಂಗ ವೈಕಲ್ಯದ ನಡುವೆಯೂ ಮತದಾನ 

    COMMERCIAL BREAK
    SCROLL TO CONTINUE READING

    ಅಂಗ ವೈಕಲ್ಯದ ನಡುವೆಯೂ ಮತದಾನ ಮಾಡಿ ಮಾದರಿಯಾದ ಅಶ್ವತ್. ಗೋವಿಂದರಾಜನಗರದ ಪಂತರ ಪಾಳ್ಯ ವಾರ್ಡ್ ನಲ್ಲಿ ವೋಟ್ ಮಾಡಿದ ವಿಕಲಚೇತನ. ತಂದೆ - ತಾಯಿ ಸಹಾಯದಿಂದ ಮತಗಟ್ಟೆಗೆ ಬಂದು ವೋಟ್ ಮಾಡಿ ಇತರರಿಗೆ ಮಾದರಿಯಾದ ವ್ಯಕ್ತಿ. ಹುಟ್ಟಿದಾಗಿನಿಂದಲೂ ಅಂಗ ವೈಕಲ್ಯದಿಂದ ಬಲಳುತ್ತಿರುವ ಅಶ್ವತ್.

  • Karnataka Elections 2023 : ಅಂಗ ವೈಕಲ್ಯದ ನಡುವೆಯೂ ಮತದಾನ 

    COMMERCIAL BREAK
    SCROLL TO CONTINUE READING

    ಅಂಗ ವೈಕಲ್ಯದ ನಡುವೆಯೂ ಮತದಾನ ಮಾಡಿ ಮಾದರಿಯಾದ ಅಶ್ವತ್. ಗೋವಿಂದರಾಜನಗರದ ಪಂತರ ಪಾಳ್ಯ ವಾರ್ಡ್ ನಲ್ಲಿ ವೋಟ್ ಮಾಡಿದ ವಿಕಲಚೇತನ. ತಂದೆ - ತಾಯಿ ಸಹಾಯದಿಂದ ಮತಗಟ್ಟೆಗೆ ಬಂದು ವೋಟ್ ಮಾಡಿ ಇತರರಿಗೆ ಮಾದರಿಯಾದ ವ್ಯಕ್ತಿ. ಹುಟ್ಟಿದಾಗಿನಿಂದಲೂ ಅಂಗ ವೈಕಲ್ಯದಿಂದ ಬಲಳುತ್ತಿರುವ ಅಶ್ವತ್.

  • Karnataka Elections 2023 : ರಾಜ್ಯದಲ್ಲಿ ಚುರುಕು ಪಡೆದ ಮತದಾನ 

    COMMERCIAL BREAK
    SCROLL TO CONTINUE READING

    ರಾಜ್ಯದಲ್ಲಿ ಮತದಾನ ಚುರುಕು ಪಡೆದಿದೆ. ರಾಜ್ಯದಲ್ಲಿ ಬೆಳಗ್ಗೆಯಿಂದ ಇಲ್ಲಿಯವರಿಗೆ 20.99% ಮತದಾನ ಆಗಿದೆ. ಬೆಳಗ್ಗೆ7 ರಿಂದ 11 ವರಿಗೆ 20.99% ರಷ್ಟು ಮತದಾನ ನಡೆದಿದೆ. ರಾಜ್ಯ ಚುನಾವಣಾ ಆಯೋಗದ ಅಧಿಕೃತ ಮಾಹಿತಿ ನೀಡಿದೆ. 

  • Karnataka Elections 2023 : ಮತ ಚಲಾಯಿಸಿದ‌ ತುಷಾರ್ ಗಿರಿ ನಾಥ್ 

    COMMERCIAL BREAK
    SCROLL TO CONTINUE READING

    ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಮತಗಟ್ಟೆಯಲ್ಲಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

  • Kalaburagi Election 2023: ಮತ ಚಲಾಯಿಸಿದ‌ ರಿಷಬ್ ಶೆಟ್ಟಿ

    COMMERCIAL BREAK
    SCROLL TO CONTINUE READING

    ಕುಂದಾಪುರ ಕೆರಾಡಿಯಲ್ಲಿ ಹಕ್ಕು ಚಲಾಯಿಸಿದ‌ ರಿಷಬ್ ಶೆಟ್ಟಿ. ಕೆರಾಡಿ‌ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾವಣೆ. ಸರದಿಯಲ್ಲಿ‌ ನಿಂತು‌ ಮತದಾನ. 

  • Karnataka Elections 2023 : ಮತದಾನ ಮಾಡಿದ ಡಿ.ಕೆ ಶಿವಕುಮಾರ್ 

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷವು 141 ಸ್ಥಾನಗಳನ್ನು ಪಡೆಯುತ್ತದೆ ಎಂದು ನನಗೆ 200% ವಿಶ್ವಾಸವಿದೆ. ನಾವು ಸಂಪೂರ್ಣ ಬಹುಮತದಿಂದ ಗೆಲ್ಲುತ್ತೇವೆ" ಎಂದು ಹೇಳಿದ್ದಾರೆ.

     

  • Bengaluru Assembly Election 2023: ಮತದಾನಕ್ಕಾಗಿ ಅಮೆರಿಕದಿಂದ ಬಂದ ಮಹಿಳೆ!

    COMMERCIAL BREAK
    SCROLL TO CONTINUE READING

    ಉದ್ಯೋಗದ ನಿಯಮಿತ್ತ ದೂರದ ಹೊರದೇಶವಾಗಿರುವ ಅಮೆರಿಕದಿಂದ ಬಂದು ಕಾರವಾರದ ಶಿರಸಿಯ ಬೆಟ್ಟದಕೊಪ್ಪದ‌ ನಿವಾಸಿ ಅಶ್ವಿನಿ ರಾಜಶೇಖರ ಭಟ್‌ ಮತದಾನ ಮಾಡಿದ್ದಾರೆ. ವೋಟ್‌ ಮಾಡಲೆಂದೇ ಸಾಗರದಾಚೆ ಇರುವ ಅಮೆರಿಕದಿಂದ ಬಂದಿದ್ದಾರೆ ಎನ್ನಲಾಗಿದೆ. ಅಶ್ವಿನಿ ಎಂಬ ಮಹಿಳೆ ತನ್ನ ಊರ ಸಮೀಪದ ಕಾನಗೋಡ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. 

  • ಕರ್ನಾಟಕ ಮತದಾನ 2023 ಲೈವ್: ಪ್ರಿಯಾಂಕ್ ಖರ್ಗೆ ಆರೋಪ 

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಮತ್ತು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು "ಚಮನೂರು ಗ್ರಾಮದ ಬೂತ್ #178 ರಲ್ಲಿ ಮತದಾನ ಸ್ಥಗಿತಗೊಂಡಿದ್ದು, ಅಧ್ಯಕ್ಷರು ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ/ ಪ್ರಭಾವ ಬೀರುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

     

     

  • ಕರ್ನಾಟಕ ಮತದಾನ 2023 ಲೈವ್: ಸಪ್ತಮಿ ಗೌಡ, ಡಾಲಿ ಧನಂಜಯ್ ಮತದಾನ

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಜೆಪಿ‌ ನಗರ ಸೆಂಟ್ ಪಾಲ್ ಶಾಲೆಯಲ್ಲಿ ನಟಿ ಸಪ್ತಮಿ ಗೌಡ ಮತ ಚಲಾಯಿಸಿದರು. ಹಾಸನದ ಅರಸೀಕೆರೆಯ ಕಾರೇಹಳ್ಳಿಯಲ್ಲಿ ನಟ ಡಾಲಿ ಧನಂಜಯ್ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದರು.

  • Bengaluru Assembly Election 2023: 86 ವರ್ಷದ ಹಿರಿಯಜ್ಜಿಯ ಮತದಾನ 

    COMMERCIAL BREAK
    SCROLL TO CONTINUE READING

    86 ವರ್ಷದ ಹಿರಿಯಜ್ಜಿಯ ಮತದಾನ ಮಾಡಿದರು. ವೀಲ್ಹ್ ಚೇರ್ ನಲ್ಲಿ ಮತಗಟ್ಟೆಗೆ ಆಗಮಿಸಿದ ಗೌರಮ್ಮ, ತಮ್ಮ ಹಕ್ಕು ಚಲಾಯಿಸಿದರು. ಎಲ್ಲರೂ ವೋಟ್ ಮಾಡಿ ಎಂದು ಮನವಿ ಮಾಡಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಸಹಕಾರಿ ವಿದ್ಯಾ ಕೇಂದ್ರ ಮತಗಟ್ಟೆಯಲ್ಲಿ ಮತದಾನ ಮಾಡಿದರು.

  • Karnataka Assembly Election 2023: ಮತದಾನ ಮಾಡಿದ ನಟ ದುನಿಯಾ ವಿಜಯ್ 

    COMMERCIAL BREAK
    SCROLL TO CONTINUE READING

    ನಟ ದುನಿಯಾ ವಿಜಯ್ ಮತ ಚಲಾಯಿಸಿದರು. ಇದೇ ವೇಳೆ ಮಾತನಾಡಿದ ಅವರು, ಮತದಾನ ಮಾಡೋದು ನಮ್ಮ ಹಕ್ಕು. ಯಾರು ಮನೆಯಲ್ಲಿ ಸುಮ್ನೆ ಕೂರಬೇಡಿ. ಮಿಸ್ ಮಾಡದೇ ಎಲ್ಲರೂ ವೋಟ್ ಮಾಡಿ ಎಂದು ಮನವಿ ಮಾಡಿದರು. 

  • Karnataka Assembly Election 2023: ಅರವಿಂದ ಲಿಂಬಾವಳಿ ಮತದಾನ

    COMMERCIAL BREAK
    SCROLL TO CONTINUE READING

    ಕೆ.ಆರ್.ಪುರ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದರು.

  • Karnataka Assembly Election 2023: ಮತ ಚಲಾಯಿಸಿದ ಶರತ್ ಬಚ್ಚೇಗೌಡ

    COMMERCIAL BREAK
    SCROLL TO CONTINUE READING

    ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ. ಹೊಸಕೋಟೆಯ ಪ್ರೌಡಶಾಲೆಯಲ್ಲಿ ಮತದಾನ. ಪತ್ನಿ ಜೊತೆ ಆಗಮಿಸಿದ ಶರತ್ ಬಚ್ಚೇಗೌಡ. ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಶರತ್ ಬಚ್ಚೇಗೌಡ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ.‌ 

  • Karnataka Elections : ಶೋಭಾ ಕರಂದ್ಲಾಜೆ ಮತದಾನ 

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಮತಗಟ್ಟೆಗೆ ಆಗಮಿಸಿದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ ಚಲಾಯಿಸಿದರು.

     

     

  • Karnataka Assembly Election 2023: ಮತ ಚಲಾಯಿಸಿದ ಜಗದೀಶ್​ ಶೆಟ್ಟರ್​​

    COMMERCIAL BREAK
    SCROLL TO CONTINUE READING

    ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್​ ಶೆಟ್ಟರ್ ಮತದಾನ ಮಾಡಿದರು. ಕೇಶ್ವಾಪುರ ಎಸ್‌ಬಿ‌ಐ ಶಾಲೆಯ ಬೂತ್​​​ ಸಂಖ್ಯೆ 125 ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. 

  • Karnataka Assembly Election 2023: ನಾರಾಯಣ ಗೌಡ ಮತದಾನ 

    COMMERCIAL BREAK
    SCROLL TO CONTINUE READING

    ಮಂಡ್ಯದ ಮತಗಟ್ಟೆಯಲ್ಲಿ ಕರ್ನಾಟಕದ ಸಚಿವ ಹಾಗೂ ಬಿಜೆಪಿ ಮುಖಂಡ ನಾರಾಯಣ ಗೌಡ ಕುಟುಂಬ ಸಮೇತ ಮತದಾನ ಮಾಡಿದರು.

     

     

  • Karnataka Assembly Election 2023: ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಮತದಾನ 

    COMMERCIAL BREAK
    SCROLL TO CONTINUE READING

    ಬೊಮ್ಮನಹಳ್ಳಿ 256 ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ಮತದಾನ ಮಾಡಿದರು. ಬೆಂಬಲಿಗರ ಜೊತೆ ಬಂದು ಮತದಾನ ಮಾಡಿದರು. ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. 
     

  • Karnataka Assembly Election 2023: ನಟ ಚಂದನ್ ಶೆಟ್ಟಿ ಮತದಾನ

    COMMERCIAL BREAK
    SCROLL TO CONTINUE READING

    ನಾಗರಬಾವಿಯಲ್ಲಿ ತಾಯಿಯೊಂದಿಗೆ ಆಗಮಿಸಿ, ನಟ ಚಂದನ್ ಶೆಟ್ಟಿ ಮತದಾನ ಮಾಡಿದರು. 

  • Karnataka Election 2023 Live Updates and News: ಹುಬ್ಬಳ್ಳಿಯಲ್ಲಿ ಮತಗಟ್ಟೆಗೆ ಬಂದ ಬೆಕ್ಕು

    COMMERCIAL BREAK
    SCROLL TO CONTINUE READING

    ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಮತಗಟ್ಟೆಗಳಿಗೆ ಆಗಮಿಸುವುದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಮತಗಟ್ಟೆಗೆ ಬೆಕ್ಕು ಬಂದಿರುವುದು ನಿಜಕ್ಕೂ ವಿಶೇಷವಾಗಿದೆ.

     

  • Karnataka Assembly Election 2023: ಮತದಾನ ಮಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ

    COMMERCIAL BREAK
    SCROLL TO CONTINUE READING

    ಮತಗಟ್ಟೆಗೆ ಬಂದು ಮತದಾನ ಮಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ. ಎನ್.ಆರ್ ಪುರ ತಾಲೂಕಿನ ದೊರಮಕ್ಕಿಯಲ್ಲಿ ಮತದಾನ. ಮಾಜಿ ಸಚಿವ ಡಿ.ಎನ್ ಜೀವರಾಜ್ ಮತದಾನ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ಎನ್ ಜೀವರಾಜ್.

  • Karnataka Assembly Election 2023: ನಟ ಚಂದನ್ ಶೆಟ್ಟಿ ಮತದಾನ

    COMMERCIAL BREAK
    SCROLL TO CONTINUE READING

    ನಾಗರಬಾವಿಯಲ್ಲಿ ತಾಯಿಯೊಂದಿಗೆ ಆಗಮಿಸಿ, ನಟ ಚಂದನ್ ಶೆಟ್ಟಿ ಮತದಾನ ಮಾಡಿದರು. 
     

  • Karnataka Assembly Election 2023: ಪ್ರಲ್ಹಾದ ಜೋಶಿ ಮತದಾನ 

    COMMERCIAL BREAK
    SCROLL TO CONTINUE READING

    ಹುಬ್ಬಳ್ಳಿಯ ಮತಗಟ್ಟೆಗೆ ಆಗಮಿಸಿದ ಕೇಂದ್ರ ಸಚಿವ ಹಾಗೂ ಧಾರವಾಡ ಕ್ಷೇತ್ರದ ಬಿಜೆಪಿ ಸಂಸದ ಪ್ರಲ್ಹಾದ ಜೋಶಿ ಮತದಾನ ಮಾಡಿದರು. "ಜನರು ಈ ಪ್ರಜಾಪ್ರಭುತ್ವದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವನ್ನು ತರಲು ಜನರು ಆಸಕ್ತಿ ಹೊಂದಿದ್ದಾರೆ. ಬಿಜೆಪಿ ಸ್ವಂತವಾಗಿ ಸರ್ಕಾರವನ್ನು ರಚಿಸುತ್ತದೆ" ಎಂದು ಹೇಳಿದರು. 

  • Yadagiri Assembly Election 2023: ಶತಾಯುಷಿಯಿಂದ ಮತದಾನ

    COMMERCIAL BREAK
    SCROLL TO CONTINUE READING

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರಿನಲ್ಲಿ ಶತಾಯುಷಿಯೊಬ್ಬರು ಮತದಾನ ಮಾಡಿದ್ದಾರೆ. 105 ವರ್ಷದ ದೇವಕ್ಕಮ್ಮ ಸಿದ್ದರಾಮರಡ್ಡಿಯಿಂದ ಮತದಾನ ಮಾಡಿದರು. ಕಾರಿನಲ್ಲಿ ಮೊಮ್ಮಗನ ಜೊತೆ ಆಗಮಿಸಿ ಮತ ಚಲಾಯಿಸಿದರು. ಹುರುಪಿನಿಂದ ದೇವಕ್ಕಮ್ಮ ಮತದಾನ ಮಾಡಿದರು. 

  • Karnataka Assembly Election 2023: ನಟಿ ತಾರ ಮತದಾನ

    COMMERCIAL BREAK
    SCROLL TO CONTINUE READING

    ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂವೇದ್ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ನಟಿ ತಾರಾ ಮತ ಚಲಾಯಿಸಿದರು. ಕುಟುಂಬಸ್ಥರ ಜೊತೆ ಆಗಮಿಸಿ ಮತಚಲಾಯಿಸಿದರು. ಪತಿ ವೇಣು ಜೊತೆ ಆಗಮಿಸಿ ಮತದಾನ ಮಾಡಿದರು. 

  • ಕರ್ನಾಟಕ ಚುನಾವಣಾ ಲೈವ್: ನಳಿನ್ ಕುಮಾರ್ ಕಟೀಲ್ ಮತದಾನ 

    COMMERCIAL BREAK
    SCROLL TO CONTINUE READING

    ಮಂಗಳೂರಿನ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದರು. 

     

     

     

  • Haveri Assembly Election: ಮತ ಚಲಾಯಿಸಿದ ಸಿಎಂ ಬೊಮ್ಮಾಯಿ

    COMMERCIAL BREAK
    SCROLL TO CONTINUE READING

    ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 102ರಲ್ಲಿ ಕುಟುಂಬ ಸಮೇತ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ ಚಲಾಯಿಸಿದರು. 

     

     

  • Karnataka Election 2023 Live Updates and News: ಮತ ಚಲಾಯಿಸಿದ ನಟ ಉಪೇಂದ್ರ 

    COMMERCIAL BREAK
    SCROLL TO CONTINUE READING

    ನಟ ಉಪೇಂದ್ರ ಕತ್ರಿಗುಪ್ಪೆಯ BTL ವಿದ್ಯಾವಾಣಿ ಶಾಲೆಯಲ್ಲಿ ಮತ ಚಲಾಯಿಸಿದರು. 

  • Bidar Assembly Election : ಬೀದರ್ ಜಿಲ್ಲೆಯಲ್ಲಿ ಬಿದ್ರಿ ಮತಗಟ್ಟೆ 

    COMMERCIAL BREAK
    SCROLL TO CONTINUE READING

    ಬಿದರಿ ಕಲೆಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸುಂದರವಾದ ಬಿದ್ರಿ‌ ಮತಗಟ್ಟೆಗಳನ್ನು ಕೂಡ ನಿರ್ಮಿಸಲಾಗಿದೆ. ಬಿದರಿ‌ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ ಎರಡು ಬಿದರಿ‌ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ಸುಂದರವಾದ ಬಿದರಿ‌ ಮತದಾನ ಕೇಂದ್ರವನ್ನು ನಿರ್ಮಿಸಲಾಗಿದೆ. 

  • Karnataka Election 2023 Live Updates and News: ಪದ್ಮನಾಭನಗರದ ಮತಗಟ್ಟೆಗೆ ಆರ್.ಅಶೋಕ್ ಭೇಟಿ‌ 

    COMMERCIAL BREAK
    SCROLL TO CONTINUE READING

    ಪದ್ಮನಾಭನಗರದ ಮತಗಟ್ಟೆಗೆ ಆರ್.ಅಶೋಕ್ ಭೇಟಿ‌ ನೀಡಿದರು. ನಾನು ಬೆಳಗ್ಗೆ 7 ಗಂಟೆಗೆ ವೋಟ್ ಮಾಡಿದೆ. ಮತದಾನ ಸಂವಿಧಾನದ ಅಧಿಕಾರ. ಈ ಅಧಿಕಾರ ಚಲಾಯಿಸಿ, ಚುನಾಯಿತರನ್ನು ಪ್ರಶ್ನಿಸುವ ಅಧಿಕಾರ ಪಡೆಯಬಹುದು. ಇದು ಪ್ರಜಾಪ್ರಭುತ್ವದ ಹಬ್ಬ. ಇದು ದೊಡ್ಡ ಅವಕಾಶ. ಮಳೆ ಬರುವ ಕಾರಣ ಮಧ್ಯಾಹ್ನದ ಒಳಗೆ ಜನ ಮತ ಚಲಾಯಿಸಿ. ನಾನು ವೋಟ್ ಮಾಡಿದ್ದೀನಿ, ನೀವು ಮಾಡಿ. ವೀಲ್ಹ್ ಚೇರ್ ನಲ್ಲಿ ಬಂದು ಹಿರಿಯರು, ವಿಶೇಷ ಚೇತನರು ವೋಟ್ ಮಾಡ್ತಿದ್ದಾರೆ. ಹೀಗಾಗಿ ಯುವಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು.ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಮಾಡಿ ಎಂದು ಹೇಳಿದರು. 

  • Karnataka Election 2023 Live Updates and News: ವೀಲ್‌ ಚೇರ್‌ನಲ್ಲಿ ‌ಆಗಮಿಸಿದ ಬಿಜೆಪಿ ಅಭ್ಯರ್ಥಿ ತಾಯಿ

    COMMERCIAL BREAK
    SCROLL TO CONTINUE READING

    ಮತದಾನ ಮಾಡಲು ಮತಗಟ್ಟೆಗೆ ವೀಲ್‌ ಚೇರ್‌ನಲ್ಲಿ ‌ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಎಂ ಸತೀಶ್ ರೆಡ್ಡಿ ತಾಯಿ ಆಗಮಿಸಿದರು. ಹೊಂಗಸಂದ್ರದ ಓಣಿ ರಸ್ತೆಯಲ್ಲಿರುವ ಮತಗಟ್ಟೆ.

  • Karnataka Election 2023 Live Updates and News: ಮತದಾನ ಮಾಡಿದ ಎಸ್.ಟಿ ಸೋಮಶೇಖರ್

    COMMERCIAL BREAK
    SCROLL TO CONTINUE READING

    ಯಶವಂತಪುರದಲ್ಲಿ ಮತದಾನ ಮಾಡಲು ಕುಟುಂಬ ಸಮೇತರಾಗಿ ಆಗಮಿಸಿರುವ ಎಸ್.ಟಿ ಸೋಮಶೇಖರ್ ಆಗಮಿಸಿದರು. ನಾಗದೇವನಹಳ್ಳಿಯ ರೋಟರಿ ಬೆಂಗಳೂರು ವಿದ್ಯಾಲಯದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

  • Chikkamagaluru Assembly Election 2023 : ಮತ ಚಲಾಯಿಸಿದ ಮದುಮಗಳು 

    COMMERCIAL BREAK
    SCROLL TO CONTINUE READING

    ಚಿಕ್ಕಮಗಳೂರಿನ ಮತಗಟ್ಟೆ ಸಂಖ್ಯೆ 165 ರಲ್ಲಿ ಮದುಮಗಳು ಮತದಾನ ಮಾಡಿದರು. ಮದುವೆಗೆ ರೆಡಿಯಾಗಿ, ಕೊರಳಲ್ಲಿ ಮಾಲೆ ಧರಿಸಿಯೇ ಮತಗಟ್ಟೆಗೆ ಬಂದಿದ್ದರು.

     

     

  • Vijayanagara Assembly Election: ಎದುರು ಬದುರಾದ ಕಾಂಗ್ರೆಸ್‌ - ಬಿಜೆಪಿ ಅಭ್ಯರ್ಥಿಗಳು 

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಅಭ್ಯರ್ಥಿ ಎಂ ಕೃಷ್ಣಪ್ಪ ಮತದಾನ ಮಾಡಿದರು. ಮತದಾನ ಮಾಡಿ ಹೊರಗೆ ಬರ್ತಿದ್ದಂತೆ ಮತಗಟ್ಟೆ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ರವೀಂದ್ರ ಆಗಮಿಸಿದರು. ಮತಗಟ್ಟೆ ಕೇಂದ್ರದ ಬಳಿ ಕಾಂಗ್ರೆಸ್ ನ ಎಂ ಕೃಷ್ಣಪ್ಪ ಹಾಗೂ ಬಿಜೆಪಿಯ ರವೀಂದ್ರ ಎದುರು ಬದುರಾದರು. ವಿಜಯನಗರದ ಹೋಲಿ ಏಂಜಲ್ಸ್ ಹೈ ಸ್ಕೂಲ್ ನ‌ ಮತಗಟ್ಟೆ ಕೇಂದ್ರ.

  • ಕರ್ನಾಟಕ ಚುನಾವಣಾ ಲೈವ್: ಭೈರತಿ ಸುರೇಶ್ ಮತದಾನ

    COMMERCIAL BREAK
    SCROLL TO CONTINUE READING

    ಬೂತ್ 175 ರಲ್ಲಿ ಭೈರತಿ ಸುರೇಶ್ ಮತದಾನ ಮಾಡಿದರು. ಇದೇ ವೇಳೆ ಗಲಾಟೆ ಬಗ್ಗೆ ಸ್ಪಷ್ಟನೆ ಕೊಟ್ಟರು. ಅವರೆಲ್ಲ ಗೆಳೆಯರೇ, ಮತಗಟ್ಟೆ ಬಳಿ ವೋಟ್ ಕೇಳಬೇಡಿ ಎಂದೆ ಅಷ್ಟೇ. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು. ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಒಳ್ಳೆಯ ಒಲವಿದೆ ಎಂದು ಭೈರತಿ ಸುರೇಶ್ ಹೇಳಿದರು.

  • Karnataka Election 2023 Live Updates and News: ಮತದಾನ ಮಾಡಿದ ದತ್ತಾತ್ರೇಯ ಹೊಸಬಾಳೆ

    COMMERCIAL BREAK
    SCROLL TO CONTINUE READING

    ಗಾಂಧಿನಗರ ಶೇಷಾದ್ರಿಪುರಂ ನಲ್ಲಿ ಮತದಾನ ಮಾಡಿದ ದತ್ತಾತ್ರೇಯ ಹೊಸಬಾಳೆ. ದತ್ತಾತ್ರೇಯ ಹೊಸಬಾಳೆ RSS ಸರಸಂಘ ಸಹಕಾರ್ಯವಾಹ

  • ಕರ್ನಾಟಕ ಮತದಾನ 2023 ಲೈವ್: ಜೆಡಿಎಸ್ ಅಭ್ಯರ್ಥಿ ಬೆಂಬಲಿಗ - ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ

    COMMERCIAL BREAK
    SCROLL TO CONTINUE READING

    ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆಯಿತು. ಮತಗಟ್ಟೆ ಮುಂದೆ ನಿಂತ ಮತದಾರರ ಬಳಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ವೋಟು ಇಲ್ಲದಿದ್ರು ಮತಗಟ್ಟೆಗೆ ಪ್ರವೇಶಿಸಿದ್ದೀರಾ. ಆದ್ರ ಜೊತೆ ಇಲ್ಲಿ ಮತ ಕೇಳಿ ಕಾನುನು ಉಲ್ಲಂಘಿಸುತ್ತಿದ್ದೀರಾ. ಇಲ್ಲಿ ಬಂದು ರೌಡಿಸಂ ಮಾಡಬೇಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಆರ್ ಟಿ ನಗರದ ಪ್ರೆಸಿಡೆನ್ಸಿ ಸ್ಕೂಲ್ ನಲ್ಲಿ ಗಲಾಟೆ ನಡೆದಿದೆ. 

  • Nelamangala Assembly Election: ಬಸವಣ್ಣದೇವರ ಮಠದ ಸ್ವಾಮೀಜಿ ಮತದಾನ

    COMMERCIAL BREAK
    SCROLL TO CONTINUE READING

    ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ  191 ರಲ್ಲಿ ಮತದಾನ ಮಾಡಿದರು. ಇದೇ ವೇಳೆ  ಮತದಾರರು ಸ್ವಾಮೀಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. 

  • Padmanabhanagar Assembly Election: ರಘುನಾಥ್ ನಾಯ್ಡು ಮತದಾನ

    COMMERCIAL BREAK
    SCROLL TO CONTINUE READING

    ಪದ್ಮಾನಭಾನಗರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು BMN ಕಾಲೇಜಿಗೆ ಆಗಮಿಸಿ ಮತದಾನ ಮಾಡಿದರು. 

  • Karnataka Election 2023 Live Updates and News: ಜಿ ಪರಮೇಶ್ವರ ಮತದಾನ

    COMMERCIAL BREAK
    SCROLL TO CONTINUE READING

    ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಜಿ ಪರಮೇಶ್ವರ ಅವರು ತುಮಕೂರಿನ ಸಿದ್ಧಾರ್ಥನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

     

     

  • Karnataka Election 2023 Live Updates and News: ನಟ ಗೋಲ್ಡನ್ ಸ್ಟಾರ್ ಗಣೇಶ್ ಮತದಾನ 

    COMMERCIAL BREAK
    SCROLL TO CONTINUE READING

    ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್‌ ಜೊತೆ ಬಂದು ಮತದಾನ ಮಾಡಿದರು. ಆರ್ ಆರ್ ನಗರದ ಮೌಂಟ್ ಕಾರ್ಮೆಲ್ ಸ್ಕೂಲ್ ಗೆ ಬಂದ ನಟ ಗಣೇಶ್ ತಮ್ಮ ಹಕ್ಕು ಚಲಾಯಿಸಿದರು. 

  • Karnataka Election 2023 Live Updates and News: ಈಶ್ವರ ಖಂಡ್ರೆ ಮತದಾನ 

    COMMERCIAL BREAK
    SCROLL TO CONTINUE READING

    ಬೀದರ್ ನ ಭಾಲ್ಕಿ ಕ್ಷೇತ್ರದಲ್ಲಿ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ ಚಲಾಯಿಸಿದರು. 

  • Karnataka Election 2023 Live Updates and News: ಕೆ ನಾರಾಯಣರಾಜು ಮತದಾನ 

    COMMERCIAL BREAK
    SCROLL TO CONTINUE READING

    ಬೊಮ್ಮನಹಳ್ಳಿ ಜೆಡಿಎಸ್ ಅಭ್ಯರ್ಥಿ ಕೆ ನಾರಾಯಣರಾಜು ಮತದಾನ ಮಾಡಿದರು. ದೊರೆಸಾನಿ ಪಾಳ್ಯ 108 ಮತಗಟ್ಟೆಯಲ್ಲಿ ಕೆ ನಾರಾಯಣ ರಾಜು ದಂಪತಿ ಮತದಾನ ಮಾಡಿದರು. ಎಲ್ಲ ಜನತೆಗ ಮತದಾನ ಮಾಡುವಂತೆ ಮನವಿ ಮಾಡಿದರು.

  • Karnataka Election 2023 Live Updates and News: ಮತ ಚಲಾಯಿಸಿದ ಸುಧಾಮೂರ್ತಿ 

    COMMERCIAL BREAK
    SCROLL TO CONTINUE READING

    ಸುಧಾಮೂರ್ತಿ ಕುಟುಂಬಸ್ಥರು ಮತದಾನ ಮಾಡಿದ್ದು ಜೀ ಕನ್ನಡ ನ್ಯೂಸ್ ಜೊತೆ ಮಾತಾಡಿ ಬೆಳಗ್ಗೆ ಎದ್ದು ಹೇಗೆ ಹಲ್ಲು ಉಜ್ಜುತ್ತಿರಾ ಹಾಗೆ ನೆನಪಲ್ಲಿ ಮತದಾನ ಮಾಡಿ ಎಂದಿದ್ದಾರೆ. 

  • Karnataka Election 2023 Live Updates and News: ಅಖಂಡ ಶ್ರೀನಿವಾಸಮೂರ್ತಿ ಮತದಾನ 

    COMMERCIAL BREAK
    SCROLL TO CONTINUE READING

    ಪುಲಕೇಶಿನಗರ ಬೂತ್ 28 ಕ್ಕೆ ಬಂದು ಅಖಂಡ ಶ್ರೀನಿವಾಸಮೂರ್ತಿ ಮತ ಚಲಾಯಿಸಿದರು. ಪುಲಕೇಶಿನಗರದ ಬಿಎಸ್ ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ಅವರು ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. 

  • Karnataka Election 2023 Live Updates and News: ಭಾಸ್ಕರ್ ರಾವ್‌ ಮತದಾನ

    COMMERCIAL BREAK
    SCROLL TO CONTINUE READING

    ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್‌ ಮತದಾನ ಮಾಡಿದರು. ಬಸವನಗುಡಿ ನ್ಯಾಷನಲ್ ಕಾಲೇಜ್ ಮತಗಟ್ಟೆ ಕೇಂದ್ರಲ್ಲಿ ಮತದಾನ ಮಾಡಿದರು. ಮತಗಟ್ಟೆಗೆ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು. ಪತ್ನಿ, ಮಗಳು, ಅಳಿಯನ ಜೊತೆ ಬಂದು, ಸರತಿ ಸಾಲಿನಲ್ಲಿ ನಿಂತು ಭಾಸ್ಕರ್ ರಾವ್ ತಮ್ಮ ಹಕ್ಕು ಚಲಾಯಿಸಿದರು.

  • Karnataka Election 2023 Live Updates and News: ದಾಸರಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿಯಿಂದ ಮತದಾನ 

    COMMERCIAL BREAK
    SCROLL TO CONTINUE READING

    ದಾಸರಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಜಿ.ಧನಂಜಯ ಗೌಡ ಮತ ಚಲಾವಣೆ ಮತದಾನ ಮಾಡಿದರು. ತಂದೆ ಗಂಗಾಧರಯ್ಯ,  ತಾಯಿ ಗಂಗಮ್ಮ, ಪತ್ನಿ ರಾಧ ಮತ್ತು ಮಗನ ಜೊತೆ ಆಗಮಿಸಿ ಮತ ಚಲಾಯಿಸಿದರು. ಸುಂಕದಕಟ್ಟೆಯ ವಿನಾಯಕ ಸ್ಕೂಲ್  ಮತಗಟ್ಟೆ ಸಂಖ್ಯೆ 402 ರಲ್ಲಿ ಮತ ಚಲಾವಣೆ ಮಾಡಿದರು.  

  • Karnataka Election 2023 Live Updates and News: ಮತದಾನ ಮಾಡಿದ ನಟ ರಮೇಶ್ ಅರವಿಂದ್

    COMMERCIAL BREAK
    SCROLL TO CONTINUE READING

    ಪತ್ನಿ ಜೊತೆ ಆಗಮಿಸಿ ಮತದಾನ ಮಾಡಿದ ನಟ ರಮೇಶ್ ಅರವಿಂದ್. ಪದ್ಮನಭಾನಗರದ BMN ಕಾಲೇಜ್ ಗೆ ಆಗಮಿಸಿ ಮತ ಚಲಾಯಿಸಿದರು.

  • Karnataka Election 2023 Live Updates and News: ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ ನಳಿನಿ‌ ನಟರಾಜನ್ 

    COMMERCIAL BREAK
    SCROLL TO CONTINUE READING

    ವಿಜಯನಗರ ಕ್ಷೇತ್ರದ ಹಂಪಿನಗರದಲ್ಲಿ ನಳಿನಿ‌ ನಟರಾಜನ್ ಮತದಾನ. 75 ವರ್ಷದ ನಳಿನಿ ನಟರಾಜನ್. ವೀಲ್ ಚೇರ್ ನಲ್ಲಿ ಬಂದು‌ ಮತದಾನ. ನಮ್ಮ ಹಕ್ಕು ಚಲಾಯಿಸಲು ಕಷ್ಟ ಆದ್ರೂ ಸರಿ ಮಾಡಬೇಕು. ಒಳ್ಳೆಯ ಜನಪ್ರತಿನಿಧಿ ಆಯ್ಕೆ ಮಾಡಬೇಕು. ಯುವಕರು ಹೆಚ್ಚು ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. 

  • Karnataka Election 2023 Live Updates and News: ಓಬಳಾಪುರದಲ್ಲಿ ಮತದಾನ ವಿಳಂಬ

    COMMERCIAL BREAK
    SCROLL TO CONTINUE READING

    ನೆಲಮಂಗಲ ಶಾಸಕರ ಸ್ವಗ್ರಾಮದಲ್ಲಿ ಇನ್ನೂ ಆರಂಭವಾಗದ ಮತದಾನ. ಶಾಸಕ ಕೆ.ಶ್ರೀನಿವಾಸಮೂರ್ತಿ ಸ್ವಗ್ರಾಮ ಓಬಳಾಪುರದಲ್ಲಿ ಮತದಾನ ವಿಳಂಬ. ಮತಗಟ್ಟೆ ಸಂಖ್ಯೆ 30ರಲ್ಲಿ ಮತದಾನ ವಿಳಂಬ. ಮತದಾನ ವಿಳಂಬಕ್ಕೆ ಕಾರಣ ನೀಡದ ಚುನಾವಣಾ ಅಧಿಕಾರಿಗಳು

  • Karnataka Election 2023 Live Updates and News: ಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಮತದಾನ

    COMMERCIAL BREAK
    SCROLL TO CONTINUE READING

    ಗೋವಿಂದರಾಜ‌ನಗರ ವಿಧಾನಸಭಾ ಕ್ಷೇತ್ರ. ಮತ ಚಲಾಯಿಸಲು ಬಂದ ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ. ಕುಟುಂಬ ಸಮೇತರಾಗಿ ಬಂದ ಸಪ್ತಗಿರಿ ಗೌಡ. ಸರತಿ ಸಾಲಿನಲ್ಲಿ ನಿಂತಿರುವ ಸಪ್ತಗಿರಿ ಗೌಡ ಕುಟುಂಬ. ಗೋವಿಂದರಾಜ ನಗರದಲ್ಲಿ ಮತ ಚಲಾಯಿಸಿದ ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ. ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ಮತ ಚಲಾಯಿಸಿದ ಸಪ್ತಗಿರಿಗೌಡ. 
     

  • Karnataka Election 2023 Live Updates and News: ಸಿಎಂ ಬಸವರಾಜ ಬೊಮ್ಮಾಯಿ ಟೆಂಪಲ್‌ ರನ್‌ 

    COMMERCIAL BREAK
    SCROLL TO CONTINUE READING

    ರಾಜ್ಯಾದ್ಯಂತ ಮತದಾನ ಮುಂದುವರಿದಿದ್ದು, ಹುಬ್ಬಳ್ಳಿಯ ಹನುಮಾನ್ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

  • Karnataka Election 2023 Live Updates and News: ರಂಭಾಪುರಿ ಶ್ರೀಗಳಿಂದ ಮತದಾನ 

    COMMERCIAL BREAK
    SCROLL TO CONTINUE READING

    ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಪೀಠ ಮತಗಟ್ಟೆಯಲ್ಲಿ ರಂಭಾಪುರಿ ಶ್ರೀಗಳು ಮತ ಚಲಾಯಿಸಿದ್ದಾರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ರಂಭಾಪುರಿ ಶ್ರೀಗಳು ಮತದಾನ ಮಾಡಿದರು. 

  • Karnataka Election 2023 Live Updates and News: ಮತ ಚಲಾಯಿಸಿದ ಆರ್ ಅಶೋಕ

    COMMERCIAL BREAK
    SCROLL TO CONTINUE READING

    ಸಚಿವರು ಹಾಗೂ ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ ಅವರು ಮತ ಚಲಾಯಿಸಿದರು.

     

     

     

  • Karnataka Election 2023 Live Updates and News: ಸಚಿವ ಸುಧಾಕರ್‌ರಿಂದ ಮತದಾನ

    COMMERCIAL BREAK
    SCROLL TO CONTINUE READING

    ಸಚಿವ ಕೆ ಸುಧಾಕರ್ ಅವರು ಚಿಕ್ಕಬಳ್ಳಾಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದರು. 

     

     

     

  • Karnataka Election 2023 Live Updates and News: ಮತ ಚಲಾಯಿಸಿದ ಆರಗ ಜ್ಞಾನೇಂದ್ರ

    COMMERCIAL BREAK
    SCROLL TO CONTINUE READING

    ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅವರ ಕುಟುಂಬ ತೀರ್ಥಹಳ್ಳಿಯಲ್ಲಿ ಮತ ಚಲಾಯಿಸಿದರು.

     

     

  • Karnataka Election 2023 Live Updates and News: ನಟಿ ಅಮೂಲ್ಯ ಮತದಾನ

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಆರ್ ಆರ್ ನಗರದ ಮತಗಟ್ಟೆಯಲ್ಲಿ ನಟಿ ಅಮೂಲ್ಯ ಮತ್ತು ಅವರ ಪತಿ ಮತದಾನ ಮಾಡಿದರು.

     

     

  • Karnataka Election 2023 Live Updates and News: ಮತದಾನ ಮಾಡಿ ಹೆರಿಗೆಗೆ ನಡೆದ ತುಂಬು ಗರ್ಭಿಣಿ

    COMMERCIAL BREAK
    SCROLL TO CONTINUE READING

    ತುಂಬು ಗರ್ಭಿಣಿಯೊಬ್ಬರು ತಮ್ಮ ಮೊದಲ ಮತದಾನ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಇಂದೇ ಡೆಲಿವರಿ ಡೇಟ್ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಬೇಗ ಬಂದು ಮತದಾನ ಮಾಡಿ, ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. 

  • Karnataka Election 2023 Live Updates and News: ಸಿ.ಎನ್ ಅಶ್ವತ್ಥನಾರಾಯಣ ಮತದಾನ 

    COMMERCIAL BREAK
    SCROLL TO CONTINUE READING

    ಸಚಿವ ಸಿ.ಎನ್ ಅಶ್ವತ್ಥನಾರಾಯಣ ಅವರು ಬೆಂಗಳೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಎಲ್ಲಾ ಜನರು ಬಂದು ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದು ಅಶ್ವತ್ಥನಾರಾಯಣ ಹೇಳಿದರು. 

     

     

  • Karnataka Election 2023 Live Updates and News: ನಟ ವಿಕ್ಕಿ ವರುಣ್‌ರಿಂದ ಮತದಾನ

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಚಾಮರಾಜನಗರಕ್ಕೆ ನಟ ವಿಕ್ಕಿವರುಣ್ ಆಗಮಿಸಿದ್ದು, ಮೂಡ್ಲುಪುರದಲ್ಲಿ ಮತದಾನ ಮಾಡಿದ್ದಾರೆ.

  • Karnataka Election 2023 Live Updates and News: ಸಚಿವೆ ನಿರ್ಮಲಾ ಸೀತಾರಾಮನ್​ ಮತದಾನ

    COMMERCIAL BREAK
    SCROLL TO CONTINUE READING

    ಜಯನಗರದ ಬಿಇಎಸ್ ಮತಗಟ್ಟೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತದಾನ ಮಾಡಿದ್ದಾರೆ.

     

     

  • Karnataka Election 2023 Live Updates and News: ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ 

    COMMERCIAL BREAK
    SCROLL TO CONTINUE READING

    ಕರ್ನಾಟಕದ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು.   

     

     

     

  • Karnataka Election 2023 Live Updates and News: 96 ವರ್ಷದ ಅಜ್ಜಿಯಿಂದ ಮತದಾನ 

    COMMERCIAL BREAK
    SCROLL TO CONTINUE READING

    ಮೈಸೂರಿನ ಚಾಮುಂಡಿಪುರಂ ಮತಗಟ್ಟೆಯಲ್ಲಿ 96 ವರ್ಷದ ಅಜ್ಜಿ ಮತದಾನ ಮಾಡುವ ಮೂಲಕ ಗಮನಸೆಳೆದಿದ್ದಾರೆ. ವೃದ್ಧರಿಗೆ ಮನೆಯಿಂದ ಮತಚಲಾಯಿಸುವ ವ್ಯವಸ್ಥೆಯಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಅಜ್ಜಿಯ ಉತ್ಸಾಹ ಎಲ್ಲರ ಚಿತ್ತ ಸೆಳೆದಿದೆ. ಗುಂಡೂರಾವ್ ನಗರದ ಬಂಗಾರಮ್ಮ ಎಂಬುವರು ಮತಗಟ್ಟೆ ಸಂಖ್ಯೆ 233ರಲ್ಲಿ ಮತದಾನ ಮಾಡಿದರು. 

  • Karnataka Election 2023 Live Updates and News: ಮತದಾನ ಮಾಡುವಂತೆ ಅಮಿತ್‌ ಶಾ ಮನವಿ 

    COMMERCIAL BREAK
    SCROLL TO CONTINUE READING

    "ರಾಜ್ಯದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ" ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ನಿಮ್ಮ ಒಂದು ಮತವು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜನಪರ ಮತ್ತು ಪ್ರಗತಿ ಪರ ಸರ್ಕಾರವನ್ನು ಖಚಿತಪಡಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

     

     

  • Karnataka Election 2023 Live Updates and News: ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ

    COMMERCIAL BREAK
    SCROLL TO CONTINUE READING

    ಕರ್ನಾಟಕದ ಜನತೆ, ವಿಶೇಷವಾಗಿ ಯುವಜನರು ಮತ್ತು ಮೊದಲ ಬಾರಿಗೆ ಮತದಾನ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. 

  • Karnataka Election 2023 Live Updates and News: ಮತ ಚಲಾಯಿಸಿದ ನಟ ಪ್ರಕಾಶ್ ರಾಜ್

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಶಾಂತಿ ನಗರದ ಸೇಂಟ್ ಜೋಸೆಫ್ ಶಾಲೆಯ ಮತಗಟ್ಟೆಗೆ ಆಗಮಿಸಿದ ನಟ ಪ್ರಕಾಶ್ ರಾಜ್ ತಮ್ಮ ಹಕ್ಕು ಚಲಾಯಿಸಿದರು. 

     

     

  • Karnataka Election 2023 Live Updates and News: ಮಲ್ಲೇಶ್ವರಂ ಪೋಲ್ ಬೂತ್ ನಲ್ಲಿ ಗೊಂದಲ

    COMMERCIAL BREAK
    SCROLL TO CONTINUE READING

    ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ. ಪೋಲ್ ಬೂತ್  148-149 ನಲ್ಲಿ ಗೊಂದಲ. ಎಜೇಂಟ್ ಇಲ್ಲದೆ ಅಣಕು ಮತದಾನ ಮಾಡಬಹುದು ಎಂದು ಆತಂಕ. ಅಧಿಕಾರಿಗಳ ಜೊತೆ ಮಾತಾನಾಡಿದ ಬಳಿಕ ಒಳಗೆ ಬಿಟ್ಟ ಅಧಿಕಾರಿಗಳು. 
     

  • Karnataka Election 2023 Live Updates and News: ಸಿದ್ದಲಿಂಗ ಸ್ವಾಮಿಗಳಿಂದ ಮತದಾನ

    COMMERCIAL BREAK
    SCROLL TO CONTINUE READING

    ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮಿಗಳು ತುಮಕೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

     

     

ZEENEWS TRENDING STORIES

By continuing to use the site, you agree to the use of cookies. You can find out more by Tapping this link