Karnataka Cabinet-LIVE:ʼಜೋಡೆತ್ತು ಸರ್ಕಾರʼ ನಾಳೆಯಿಂದ ಸಿದ್ದು, ಡಿಕೆಶಿ ದರ್ಬಾರ್‌

Fri, 19 May 2023-9:47 pm,

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಟ್ಟ ಅಲಂಕಾರವಾಗಿದೆ. ಆದರೆ ಇದೀಗ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಿಯೋಜಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Karnataka Cabinet Discussion: ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಟ್ಟ ಅಲಂಕಾರವಾಗಿದೆ. ಆದರೆ ಇದೀಗ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಿಯೋಜಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Latest Updates

  • ನೀಟ್ ಪರೀಕ್ಷಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ಪರೀಕ್ಷಾರ್ಥಿಗಳ ಮೇಲೆ ಏಕೆ ಇಲ್ಲ..?

    COMMERCIAL BREAK
    SCROLL TO CONTINUE READING

     

    ನಿಯೋಜಿತ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರೇ  ನಾಳೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ನಿಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅತೀವ ತೊಂದರೆಯಾಗಲಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಮಾಣ ವಚನ ಸ್ವೀಕರಿಸುವ ದಿನವನ್ನು ಮುಂದೂಡಬಹುದಲ್ಲವೇ..? ನೀಟ್ ಪರೀಕ್ಷಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ಪರೀಕ್ಷಾರ್ಥಿಗಳ ಮೇಲೆ ಏಕೆ ಇಲ್ಲ..? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
     

     

     

     

     

     

  • 2000 ನೋಟು ನಿಷೇಧ : ಪ್ರಧಾನ ಮಂತ್ರಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

    COMMERCIAL BREAK
    SCROLL TO CONTINUE READING

    RBI 2000 ರೂ. ಮುಖಬೆಲೆಯ ನೋಟುಗಳನ್ನಿ ನಿಷೇಧಿಸಿದ ಬೆನ್ನಲ್ಲೆ ವಿಪಕ್ಷಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ಪ್ರಾಹ ಪ್ರಾರಂಭಿಸಿವೆ. ಇದೀಗ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಕುರಿತು ಟ್ಟೀಟ್‌ ಮೂಲಕ ಕಿಡಿಕಾರಿದ್ದಾರೆ. ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

    ಅಲ್ಲದೆ, ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ  ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

     

     

     

  • ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದರು.

    COMMERCIAL BREAK
    SCROLL TO CONTINUE READING

     

     

     

  • ನಾಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ರಾಜಕೀಯ ನಾಯಕರು, ಸಿಎಂಗಳು ಸಾಕ್ಷಿಯಾಗಲಿದ್ದಾರೆ.

    1. COMMERCIAL BREAK
      SCROLL TO CONTINUE READING

      ಎಂ.ಕೆ.ಸ್ಟಾಲಿನ್- ತಮಿಳುನಾಡು ಸಿಎಂ

    2. ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಸಿಎಂ

    3. ನಿತೀಶ್ ಕುಮಾರ್- ಬಿಹಾರ ಸಿಎಂ

    4. ಹೇಮಂತ್ ಸೊರೇನ್- ಜಾರ್ಖಂಡ್ ಸಿಎಂ

    5. ತೇಜಸ್ವಿ ಯಾದವ್- ಬಿಹಾರ ಡಿಸಿಎಂ

    6. ಶರದ್ ಪವಾರ್- ಎನ್ ಸಿಪಿ ಮುಖ್ಯಸ್ಥ

    7. ಉದ್ದವ್ ಠಾಕ್ರೆ- ಮಹಾರಾಷ್ಟ್ರ ಮಾಜಿ ಸಿಎಂ

    8. ಅಖಿಲೇಶ್ ಯಾದವ್-ಯುಪಿ ಮಾಜಿ ಸಿಎಂ

    9. ಫಾರೂಕ್ ಅಬ್ದುಲ್ಲಾ- ಜಮ್ಮು ಕಾಶ್ಮೀರ ಮಾಜಿ ಸಿಎಂ

    10. ಮೆಹಬೂಬ ಮುಕ್ತಿ- ಜಮ್ಮು ಕಾಶ್ಮೀರ ಮಾಜಿ ಸಿಎಂ

    11. ಸೀತಾರಾಂ ಯೆಚೂರಿ- ಸಿಪಿಎಂ ನಾಯಕ

    12. ಡಿ.ರಾಜಾ- ಸಿಪಿಐ ನಾಯಕ

    13. ಲಲನ್ ಸಿಂಗ್- ಜೆಡಿಯು ನಾಯಕ

    14. ವೈಕೋ- ತಮಿಳುನಾಡು ಎಂಡಿಎಂಕೆ ಪಾರ್ಟಿ

    15. ಎಂ.ಕೆ.ಪ್ರೇಮಚಂದ್ರನ್- ಆರ್ ಎಸ್ ಪಿ ಪಾರ್ಟಿ

    16. ದೀಪಾಂಕರ್ ಭಟ್ಟಾಚಾರ್ಯ- ಸಿಪಿಐಎಂ

    17. ತಿರುಮಾವಲನ್- ವಿಸಿಕೆ ಪಾರ್ಟಿ

    18. ಜಯಂತ್ ಚೌದರಿ- ಆರ್ ಎಲ್ ಡಿ ನಾಯಕ
       

  • ದೆಹಲಿಯಲ್ಲಿ ಸಚಿವ ಸಂಪುಟ ರಚನೆಗೆ ಕಸರತ್ತು

    COMMERCIAL BREAK
    SCROLL TO CONTINUE READING

     

    ದೆಹಲಿಯಲ್ಲಿ ಸಚಿವ ಸಂಪುಟ ರಚನೆ ಕಸರತ್ತು ನಡೆದಿದೆ. ನಾಲ್ವರು ನಾಯಕರ ನಡುವೆ ಮಹತ್ವದ ಸಭೆ ಜರುಗುತ್ತಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ನಿಯೋಜಿತ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಡಿಸಿಎಂ ಡಿಕೆಶಿ ಸಭೆಯಲ್ಲಿ ಉಪಸ್ಥಿತರಿದ್ದಾರೆ.  40 ಕ್ಕೂ ಹೆಚ್ಚು ಶಾಸಕರ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾವಾರು, ಜಾತಿವಾರು ಸಚಿವ ಸ್ಥಾನ ನೀಡಿಕೆ, ಅಲ್ಪಸಂಖ್ಯಾತ ಸಮುದಾಯದಿಂದ ಮೂವರಿಗೆ ಸ್ಥಾನ, ಜಮೀರ್ ಅಹ್ಮದ್, ಯು.ಟಿ.ಖಾದರ್, ತನ್ವೀರ್ ಸೇಠ್‌ಗೆ ಸಚಿವ ಸ್ಥಾನ, ಚಾಮರಾಜನಗರದ ಪುಟ್ಟರಂಗ ಶೆಟ್ಟಿಗೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ, ಮೈಸೂರಿನಿಂದ ಅನಿಲ್ ಚಿಕ್ಕಮಾದು ಹೆಸರು, ಕೊಡಗಿನ ಪೊನ್ನಣ್ಣ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ , ಎಸ್.ಎಸ್.ಮಲ್ಲಿಕಾರ್ಜುನ್, ಆರ್.ಬಿ.ತಿಮ್ಮಾಪೂರ, ಕೆ.ಹೆಚ್.ಮುನಿಯಪ್ಪ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿ ಬರುತ್ತಿವೆ. ಸ್ಪೀಕರ್ ಸ್ಥಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

    ಇನ್ನು ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಶರಣ ಪ್ರಕಾಶ್ ಪಾಟೀಲ್ ಆಯ್ಕೆ ಪೆಂಡಿಂಗ್‌ನಲ್ಲಿದೆ ಎನ್ನಲಾಗಿದೆ. ಕೆ.ಎನ್.ರಾಜಣ್ಣ, ಎಸ್.ಆರ್.ಶ್ರೀನಿವಾಸ್ ಹೆಸರು ಇನ್ನೂ ಚರ್ಚೆಗೆ ಬಂದಿಲ್ಲ. ಲಕ್ಷ್ಮೀ‌ಹೆಬ್ಬಾಳ್ಕರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ. ಲಕ್ಷ್ಮಣ್ ಸವದಿ ಹೆಸರು ‌ಚರ್ಚೆಗೆ ಬಂದಿಲ್ಲ ಆದ್ರೆ, ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ ನೀಡಲು ಸಮ್ಮತಿ ಇದೆ ಎಂದು ತಿಳಿದು ಬಂದಿದೆ.
     

  • ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷರ ಮುಂದಿಡಲಾಗುತ್ತದೆ  : ಪ್ರಿಯಾಂಕ್‌ ಖರ್ಗೆ

    COMMERCIAL BREAK
    SCROLL TO CONTINUE READING

    ಸಚಿವ ಸಂಪುಟದ ಅಂತಿಮ ನಿರ್ಧಾರ ಕೈಗೊಳ್ಳಲು ನಿಯೋಜಿತ ಸಿಎಂ ಮತ್ತು ಡಿಸಿಎಂ ಬಂದಿದ್ದಾರೆ. ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಕಾಂಗ್ರೆಸ್ ಅಧ್ಯಕ್ಷರ ಮುಂದಿಡಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಹೇಳಿದರು. ಅಲ್ಲದೆ, ಚುನಾವಣೆಯಲ್ಲಿ ಸೋತಿದ್ದು ಏಕೆ, ಪಕ್ಷದಲ್ಲಿ ಎಷ್ಟು ಒಡಕು ಇದೆ ಎಂಬುದನ್ನು ಬಿಜೆಪಿ ಯೋಚಿಸಬೇಕು. ಕರ್ನಾಟಕದ ಜನರು ಅಭಿವೃದ್ಧಿಗಾಗಿ ಕಾಂಗೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಿದರು.

     

     

  • ಎಐಸಿಸಿ ಪ್ರಧಾನ ಕಾರ್ಯದರ್ಶಿ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

    COMMERCIAL BREAK
    SCROLL TO CONTINUE READING

    ನಾಳೆ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ದೆಹಲಿಗೆ ಪ್ರಯಾಣ ಬೆಳೆಸಿರುವ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ನಾಳೆ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುತವಂತೆ ಆಹ್ವಾನ ನೀಡಲಿದ್ದಾರೆ. ಅಲ್ಲದೆ, ಸಚಿವ ಸಂಪುಟದ ಕುರಿತು ಚರ್ಚೆ ನಡೆಸಲಿದ್ದಾರೆ.
     

  • ಕರ್ನಾಟಕ ಸಿಎಂ ನಿಯೋಜಿತ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಆಗಮಿಸಿದ್ದಾರೆ.

    COMMERCIAL BREAK
    SCROLL TO CONTINUE READING

     

     

     

  • ಕಾಂಗ್ರೆಸ್ ನಲ್ಲಿ‌ ವೀರಶೈವ-ಲಿಂಗಾಯತರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನ ಕೊಡದ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಈಗ ಅಧಿಕಾರ ದಾಹದಿಂದ ವೀರಶೈವ ಸಮುದಾಯವನ್ನೇ ಮರೆತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರೂ ಈಗ ಮೌನ ತಾಳಿದ್ದಾರೆ. ಸಮುದಾಯದ 39 ಶಾಸಕರು ಗೆದ್ದಿದ್ದರೂ ಉನ್ನತ ಸ್ಥಾನ ಕೇಳುವಲ್ಲಿ ಗಟ್ಟಿ ದನಿ ಕೇಳಿಸ್ತಿಲ್ಲ ಕಾಂಗ್ರೆಸ್ ನ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ ಎಂದು ಹೇಳಿದ್ದಾರೆ.

    COMMERCIAL BREAK
    SCROLL TO CONTINUE READING

     

     

     

  • ಈಗಾಗಲೇ ಹಲವು ಜನ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಮತ್ತಷ್ಟು ಸಚಿವ ಆಕಾಂಕ್ಷಿಗಳು ದೌಡಾಯಿಸುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾಯಕರು ಲಾಭಿ ನಡೆಸುತ್ತಿದ್ದಾರೆ.

    COMMERCIAL BREAK
    SCROLL TO CONTINUE READING

    ದೆಹಲಿಯಲ್ಲಿ ಇರುವ ಮತ್ತು ಬರುತ್ತಿರುವ ಸಚಿವ ಆಕಾಂಕ್ಷಿಗಳ ಪಟ್ಟಿ:

    • ದಿನೇಶ್ ಗುಂಡೂರಾವ್

    • ಎಚ್ ಕೆ ಪಾಟೀಲ್

    • ಕೆ ಎಚ್ ಮುನಿಯಪ್ಪ

    • ಅಜಯ್ ಸಿಂಗ್

    • ಸಿ.ಎಸ್.ನಾಡಗೌಡ

    • ಪ್ರಕಾಶ ಹುಕ್ಕೇರಿ

    • ಬಿಕೆ ಹರಿಪ್ರಸಾದ್

    • ಆರ್.ವಿ.ದೇಶಪಾಂಡೆ

    • ಶರಣ ಪ್ರಕಾಶ್ ಪಾಟೀಲ್

    • ಪ್ರಿಯಾಂಕಾ ಖರ್ಗೆ

    • ಶರತ್ ಬಚ್ಚೇಗೌಡ

    • ಎಂ.ಬಿ ಪಾಟೀಲ್

    • ಬಿ ಆರ್ ಪಾಟೀಲ್

    • ಶಿವರಾಜ್ ತಂಗಡಗಿ

    • ಕೆ ಎನ್ ರಾಜಣ್ಣ

    • ರಹೀಮ್ ಖಾನ್

    • ಈಶ್ವರ ಖಂಡ್ರೆ

    • ಶ್ರೀನಿವಾಸ ಮಾನೆ

    • ರಿಜ್ವಾನ್ ಅರ್ಷದ್

    • ಕೃಷ್ಣ ಬೈರೇಗೌಡ

    • ಟಿ ರಘುಮೂರ್ತಿ

    • ಪ್ರದೀಪ್ ಈಶ್ವರ್

    • ಬೇಲೂರು ಗೋಪಾಲ ಕೃಷ್ಣ

    • ಕೆ.ಸಿ.ವೀರೇಂದ್ರ

    • ಡಿ ಸುಧಾಕರ್

    • ಬಿ.ಜಿ.ಗೋವಿಂದಪ್ಪ

    • ಯಶವಂತರಾಯಗೌಡ ಪಾಟೀಲ

    • ಎಂಸಿ ಸುಧಾಕರ್

    • ನಯನಾ ಮೋಟಮ್ಮ

    • ಆರ್.ಬಿ.ತಿಮ್ಮಾಪುರ

    • ಬಿ ಶಿವಣ್ಣ

    • ಅರವಿಂದಕುಮಾರ್ ಅರಳಿ (MLC)

    • ಆರ್ ರಾಜೇಂದ್ರ (MLC)

  • ಕೊಟ್ಟ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಡಿಸಿಎಂ ನಿಯೋಜಿತ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.

    COMMERCIAL BREAK
    SCROLL TO CONTINUE READING

     

     

     

  • ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನೂತನ ಸಿಎಂ ಪದಗ್ರಹಣ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಕೇಂದ್ರದ ಘಟಾನುಘಟಿ ನಾಯಕರ ಪಟ್ಟಿ ಹೀಗಿದೆ. ಇನ್ನು ಈ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್ ನಿಂದ ಭದ್ರತೆಯನ್ನು ಕಲ್ಪಿಸಲಾಗಿದೆ. ಜೊತೆಗೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳಿಗೆ Z+ ಮತ್ತು Z ಕ್ಯಾಟಗರಿ ಭದ್ರತೆಯನ್ನು ನೀಡಲಾಗುತ್ತದೆ. 

    • COMMERCIAL BREAK
      SCROLL TO CONTINUE READING

      ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ  Z+, CRPF ASL ಪ್ರೊಟೆಕ್ಟ್ ನಿಂದ ಭದ್ರತೆ ಕಲ್ಪಿಸಲಾಗುತ್ತಿದೆ.

    • ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಸಿಎಂ

    • ಅಶೋಕ್ ಗೆಹ್ಲೋಟ್- ರಾಜಸ್ಥಾನ ಸಿಎಂ

    • ಭೂಪೇಶ್ ಭಗೇಲಾ –ಛತ್ತೀಸ್ಗಡ ಸಿಎಂ

    • ನಿತೇಶ್ ಕುಮಾರ್-ಬಿಹಾರ ಸಿಎಂ

    • ಸುಖ್ವೀಂದರ್ ಸಿಂಗ್ ಸುಖು- ಹಿಮಾಚಲ ಪ್ರದೇಶ ಸಿಎಂ

    • ಎನ್ ರಂಗಸ್ವಾಮಿ- ಪಾಂಡಿಚೇರಿ ಸಿಎಂ

    • ಎಂ ಕೆ ಸ್ಟ್ಯಾಲಿನ್- ತಮಿಳುನಾಡು ಸಿಎಂ

    • ಹೇಮಂತ್ ಸೊರೆನ್ - ಜಾರ್ಖಂಡ್ ಸಿಎಂ

    ಇಷ್ಟೂ ಸಿಎಂಗಳಿಗೂ Z+ ಕ್ಯಾಟಗರಿ ಭದ್ರತೆ ಕಲ್ಪಿಸಲಾಗುತ್ತಿದೆ.

  • ನಾಳೆ ಕಂಠೀರವ ಸ್ಟೇಡಿಯಂನಲ್ಲಿ ನೂತನ ಸಿಎಂ ಪದಗ್ರಹಣ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಕೇಂದ್ರದ ಘಟಾನುಘಟಿ ನಾಯಕರ ಪಟ್ಟಿ ಹೀಗಿದೆ. ಇನ್ನು ಈ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್ ನಿಂದ ಭದ್ರತೆಯನ್ನು ಕಲ್ಪಿಸಲಾಗಿದೆ. ಜೊತೆಗೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳಿಗೆ Z+ ಮತ್ತು Z ಕ್ಯಾಟಗರಿ ಭದ್ರತೆಯನ್ನು ನೀಡಲಾಗುತ್ತದೆ. 

    • COMMERCIAL BREAK
      SCROLL TO CONTINUE READING

      ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ  Z+, CRPF ASL ಪ್ರೊಟೆಕ್ಟ್ ನಿಂದ ಭದ್ರತೆ ಕಲ್ಪಿಸಲಾಗುತ್ತಿದೆ.

    • ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಸಿಎಂ

    • ಅಶೋಕ್ ಗೆಹ್ಲೋಟ್- ರಾಜಸ್ಥಾನ ಸಿಎಂ

    • ಭೂಪೇಶ್ ಭಗೇಲಾ –ಛತ್ತೀಸ್ಗಡ ಸಿಎಂ

    • ನಿತೇಶ್ ಕುಮಾರ್-ಬಿಹಾರ ಸಿಎಂ

    • ಸುಖ್ವೀಂದರ್ ಸಿಂಗ್ ಸುಖು- ಹಿಮಾಚಲ ಪ್ರದೇಶ ಸಿಎಂ

    • ಎನ್ ರಂಗಸ್ವಾಮಿ- ಪಾಂಡಿಚೇರಿ ಸಿಎಂ

    • ಎಂ ಕೆ ಸ್ಟ್ಯಾಲಿನ್- ತಮಿಳುನಾಡು ಸಿಎಂ

    • ಹೇಮಂತ್ ಸೊರೆನ್ - ಜಾರ್ಖಂಡ್ ಸಿಎಂ

    ಇಷ್ಟೂ ಸಿಎಂಗಳಿಗೂ Z+ ಕ್ಯಾಟಗರಿ ಭದ್ರತೆ ಕಲ್ಪಿಸಲಾಗುತ್ತಿದೆ.

  • ನಾನೇನು ಮಾತನಾಡೋಕೆ ಹೋಗಿಲ್ಲ. ಡಿಸಿಎಂ ಕೊಡಿ ಎಂದು ಯಾರನ್ನು ಕೇಳಿಲ್ಲ. ಒಂದು ಖುಷಿಯ ವಿಚಾರ ಅಂದ್ರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಇದೀಗ ಸರ್ಕಾರ ರಚನೆ ಆಗ್ತಾ ಇದೆ. ಸಮುದಾಯ ನಮಗೆ ಡಿಸಿಎಂ ಕೊಡಿ ಅಂತ ಹೇಳೋದು ಸಹಜ. ಮಂತ್ರಿ ಸ್ಥಾನಗಳು ಹೆಚ್ಚು ಕೊಡಿ ಅನ್ನೋದು ಸಹಜ. ಡಿಸಿಎಂ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಸಚಿವ ಸ್ಥಾನ ಅದನ್ನೆಲ್ಲ ಹೈ ಹಾಗೂ ಸಿಎಂ ಬಗೆಹರಿಸುತ್ತಾರೆ. ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಆಗಿರಲಿಲ್ಲ. ಹಾಗಾಗಿ ಇಂದು ಹೋಗಿ ಭೇಟಿಯಾಗಿ ಶುಭಾಶಯ ಕೋರಿದ್ದೇನೆ. ಸಚಿವ ಸಂಪುಡದ ಬಗ್ಗೆ ಅವರ ಬಳಿ ಮಾತನಾಡಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ. 

    COMMERCIAL BREAK
    SCROLL TO CONTINUE READING

     

     

     

  • ಕರ್ನಾಟಕ ನಿಯೋಜಿತ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ಹೆಚ್’ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇಬ್ಬರು ನಾಯಕರು ದೆಹಲಿಗೆ ತೆರಳುತ್ತಿದ್ದಾರೆ.

    COMMERCIAL BREAK
    SCROLL TO CONTINUE READING

     

     

     

  • Karnataka Cabinet Discussion: ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿರುವ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂಗೆ ಕರ್ನಾಟಕದ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ. ಆ ಬಳಿಕ ದೆಹಲಿಗೆ ತೆರಳಲಿದ್ದಾರೆ.

    COMMERCIAL BREAK
    SCROLL TO CONTINUE READING

     

     

     

  • Karnataka Cabinet Discussion: ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಹೊರಗೆ ಜಮಾಯಿಸಿರುವ ಬೆಂಬಲಿಗರನ್ನು ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಇನ್ನು ಮೇ 20ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

    COMMERCIAL BREAK
    SCROLL TO CONTINUE READING

     

     

     

ZEENEWS TRENDING STORIES

By continuing to use the site, you agree to the use of cookies. You can find out more by Tapping this link