Karnataka Election 2023 : ಬಹಿರಂಗ ಪ್ರಚಾರಕ್ಕೆ ತೆರೆ.. ಮತದಾನಕ್ಕೆ ಇನ್ನೆರಡೇ ದಿನ ಬಾಕಿ! 

Mon, 08 May 2023-5:40 pm,

Karnataka Assembly Election 2023 Live News Updates: ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶ, ರೋಡ್​ ಶೋ ಬಲು ಜೋರಾಗಿತ್ತು. ಮತಾದನಾಕ್ಕೆ ಇನ್ನು 2 ದಿನ ಬಾಕಿ ಉಳಿದಿದ್ದು, ಇದೀಗ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಮೇ10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ನಡೆಯಲಿದೆ.

Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇವಲ ಎರಡಡು ದಿನ ಬಾಕಿ ಇದೆ. ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಭರದಿಂದ ಪ್ರಚಾರ ನಡೆಸಿದವು. ಕೈ - ಕಮಲ ಕಲಿಗಳು ಭರ್ಜರಿ ಮತಬೇಟೆಯಾಡಿದರು. ಇತ್ತ ಜೆಡಿಎಸ್‌ ನಾಯಕರು ಕೂಡ ಅಬ್ಬರದ ಪ್ರಚಾರ ನಡೆಸಿದ್ರು. ಹೈವೋಲ್ಟೆಜ್​​ ಕ್ಷೇತ್ರಗಳಲ್ಲಂತೂ ಅಖಾಡ ಸಿಕ್ಕಾಪಟ್ಟೇ ರಂಗೇರಿತ್ತು. ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಮೂರು ಪಕ್ಷಗಳು ಪಣತೊಟ್ಟಿವೆ. ಶತಾಗತಾಯ ಸರ್ಕಾರ ರಚಿಸಲು ಕಾಂಗ್ರೆಸ್‌ ರಣತಂತ್ರಗಳನ್ನು ಹೆಣೆದು, ಸರ್ಕಾರದ ವಿರುದ್ಧ ಅನೇಕ ಬ್ರಹ್ಮಾಸ್ತ್ರಗಳನ್ನು ಬಿಟ್ಟಿದೆ.


COMMERCIAL BREAK
SCROLL TO CONTINUE READING

ಇತ್ತ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ತನ್ನ ಕೆಲಸದ ಜೊತೆ ಮೋದಿ ಫೇಮ್‌ ಇಟ್ಟುಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿತು. ಉಭಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದವು.  ಮೋದಿ ರೋಡ್‌ ಶೋ, ಪ್ರಿಯಾಂಕಾ - ರಾಹುಲ್‌ ಅಬ್ಬರದ ಮತಬೇಟೆಯ ನಡುವೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶ, ರೋಡ್​ ಶೋ ಬಲು ಜೋರಾಗಿತ್ತು. ಮತಾದನಾಕ್ಕೆ ಇನ್ನು 2 ದಿನ ಬಾಕಿ ಉಳಿದಿದ್ದು, ಇದೀಗ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ.  

Latest Updates

  • ಈಗ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ, ಇನ್ನೂ ಮುಂದೆ ರಾಜಕೀಯ ಪಕ್ಷಗಳು ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ.ಮತದಾನಕ್ಕೂ  48 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಬೇಕಾಗಿದೆ.ಮೇ 10 ರಂದು ಮತದಾನ ಇರುವುದರಿಂದಾಗಿ ಅಲ್ಲಿಯವರೆಗೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದೆ

    COMMERCIAL BREAK
    SCROLL TO CONTINUE READING

     

  • Karnataka Election 2023 Live Updates: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ 

    COMMERCIAL BREAK
    SCROLL TO CONTINUE READING

    ಬಿ.ಎಲ್.ಸಂತೋಷ್ ಹೇಳಿಕೆ ಫೇಕ್ ಅಂತಾರೆ. ಸರ್ಕಾರವೇ ನಿಮ್ಮದಿದೆ. ಹಾಗಾದ್ರೂ ತನಿಖೆ ಏಕೆ ಮಾಡಿಸ್ತಿಲ್ಲ. ಯಾವುದು ಅನಾನುಕೂಲ ಆಗುತ್ತೋ ಅದನ್ನು ಫೇಕ್ ಅನ್ನೋದು. ನಳಿನ ಕುಮಾರ್ ಕಟೀಲ್ ದೂರವಾಣಿ ಸಂಭಾಷಣೆ ವೈರಲ್ ಆಯ್ತು. ನಂತರ ಅದು ಫೇಕ್ ಅಂತ ಹೇಳಿದ್ರು. ಆದ್ರೆ ಇದುವರೆಗೂ ಅದರ ಬಗ್ಗೆ ತನಿಖೆ ಪೂರ್ಣಗೊಂಡಿಲ್ಲ. ಫೇಕ್ ಅನ್ನೋದಾದಾದ್ರೆ ಯಾರುಗಾದ್ರೂ ಶಿಕ್ಷೆಯಾಗಬೇಕಿತ್ತಲ್ಲವಾ..? ಗುಲಾಮನಾಗಿ ಇರೋದನ್ನು ಧಿಕ್ಕರಿಸಿ ಹೊರಗೆ ಬಂದಿದ್ದೇನೆ. ಬಿಜೆಪಿ ಒಬ್ಬನೇ ವ್ಯಕ್ತಿಯ ಕೈಯಲ್ಲಿದೆ. ಕೇಂದ್ರ ಸಂಪುಟದಲ್ಲಿ ಯಾರಿಗೆ ಎಷ್ಟು ಆದ್ಯತೆ ಸಿಕ್ಕಿದೆ ಅನ್ನೋದನ್ನ ನೀವೇ ನೋಡಿ. ಗುಲಾಮಿ ಸಂಸ್ಕೃತಿಗೆ ಒಗ್ಗಿಕೊಳ್ಳೋರು ಮಾತ್ರ ಬಿಜೆಪಿಯಲ್ಲಿರಲು ಸಾಧ್ಯ. ಜೀ ಹುಜೂರ್ ಅನ್ನೋರು ಮಾತ್ರ ಬಿಜೆಪಿಯಲ್ಲಿರಬೇಕೆಂದು ಷಡ್ಯಂತ್ರ ಎಂದು ಜಗದೀಶ್ ಶೆಟ್ಟರ್ 
    ಹೇಳಿದರು. 

  • Karnataka Election 2023 Live Updates: ಧಾರವಾಡದಲ್ಲಿ ಮತ್ತೊಂದು ಐಟಿ ರೇಡ್

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ. ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪೂರಿ ಮನೆ ಮೇಲೆ ದಾಳಿ. 6 ಜನ ಐಟಿ ಅಧಿಕಾರಿಗಳಿಂದ ದಾಳಿ. ಧಾರವಾಡ ನಗರದ ವಿವೇಕಾನಂದ ನಗರದ ಬಡಾವಣೆಯಲ್ಲಿ ಇರುವ ರಾಬರ್ಟ್ ಮನೆ. ದಾಖಲೆ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು. 

  • Karnataka Election 2023: ಸುದೀಪ್‌ 3 ತಾಸಿನ‌ ನಾಯಕ

    COMMERCIAL BREAK
    SCROLL TO CONTINUE READING

    ಬಹಿರಂಗ ಪ್ರಚಾರದ ಕೊನೆದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕೈ ನಾಯಕರಾದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸಿದರು. ಇನ್ನು, ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ, ಅಳಲು-ನಗಲು ದುಡ್ಡು ತೆಗೆದುಕೊಳ್ಳುವವರು ಅವರು, ಜನ ಸೇವೆ ಮಾಡುವವರಲ್ಲ‌, ಅವರು 3 ತಾಸಿನ ನಾಯಕರು ಎಂದು ಟೀಕಿಸಿದರು. 

  • Karnataka Election 2023 Live Updates: ಮಾಜಿ ಡಿಸಿಎಂ ಕ್ಷೇತ್ರದಲ್ಲಿ ಕಾರ್ಯಕರ್ತರ ಮಾರಾಮಾರಿ

    COMMERCIAL BREAK
    SCROLL TO CONTINUE READING

    ಮಾಜಿ ಡಿಸಿಎಂ ಕ್ಷೇತ್ರದಲ್ಲಿ ಕಾರ್ಯಕರ್ತರ ಮಾರಾಮಾರಿ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ತಳ್ಳಾಟ ನೂಕಾಟ. ಡಿಸಿಎಂ ಡಾಜಿ.ಪರಮೇಶ್ವರ್ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಗಲಾಟೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಬಡಿದಾಟ. ಕೊರಟಗೆರೆಯ ಕೋಟೆ ಮಾರಮ್ಮ ದೇವಸ್ಥಾನ ಬಳಿ ಘಟನೆ. ಪೊಲೀಸರ ಮಧ್ಯ ಪ್ರವೇಶದಿಂದ ನಿಯಂತ್ರಣಗೊಂಡ ಜಟಾಪಟಿ. ಎರಡು ಪಕ್ಷಗಳು ಒಂದೇ ವಾರ್ಡ್ ನಲ್ಲಿ ಪ್ರಚಾರ ಘರ್ಷಣೆಗೆ ಕಾರಣ. 

  • Karnataka Election 2023 Live Updates: ಲಿಂಗಾಯತ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದೆ

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ವೀರಶೈವ - ಲಿಂಗಾಯತ ಸಮಾಜವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಅಧಿಕಾರ ಇದ್ದಾಗ ಏನೂ ಮಾಡಿಲ್ಲ, ಇವಾಗ  ಓಲೈಕೆ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ನಾವು ಇದ್ದೇವೆ. ಈ ಸಮಾಜವನ್ನು ಹಿಂದೆ ಒಡೆಯುವ ಪ್ರಯತ್ನ ಕಾಂಗ್ರೆಸ್ ಮಾಡಿತ್ತು. ವೀರಶೈವ ಲಿಂಗಾಯತ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದೆ. ನಮ್ಮನ್ನು ಬೆಳೆಸಿದ್ದು ವೀರಶೈವ ಲಿಂಗಾಯತ ಸಮಾಜ ಎಂದರು.

  • Karnataka Election 2023 Live Updates: ಬೆಂಗಳೂರಲ್ಲಿ ಪ್ರಿಯಾಂಕಾ ಗಾಂಧಿ ರೋಡ್‌ ಶೋ. ಗೋವಿಂದರಾಜಪುರ ಕ್ಷೇತ್ರದಲ್ಲಿ ಜೂ.ಇಂದಿರಾಗಾಂಧಿ ಮತಶಿಕಾರಿ

    COMMERCIAL BREAK
    SCROLL TO CONTINUE READING

     

  • Karnataka Election 2023 Live Updates: ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ನಾವು ಇದ್ದೇವೆ

    COMMERCIAL BREAK
    SCROLL TO CONTINUE READING

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ವೀರಶೈವ - ಲಿಂಗಾಯತ ಸಮಾಜವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಅಧಿಕಾರ ಇದ್ದಾಗ ಏನೂ ಮಾಡಿಲ್ಲ, ಇವಾಗ  ಓಲೈಕೆ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ನಾವು ಇದ್ದೇವೆ. ಈ ಸಮಾಜವನ್ನು ಹಿಂದೆ ಒಡೆಯುವ ಪ್ರಯತ್ನ ಕಾಂಗ್ರೆಸ್ ಮಾಡಿತ್ತು. ವೀರಶೈವ ಲಿಂಗಾಯತ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದೆ. ನಮ್ಮನ್ನು ಬೆಳೆಸಿದ್ದು ವೀರಶೈವ ಲಿಂಗಾಯತ ಸಮಾಜ ಎಂದರು.

    n 2023 Live Updates: ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ನಾವು ಇದ್ದೇವೆ

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ವೀರಶೈವ - ಲಿಂಗಾಯತ ಸಮಾಜವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಅಧಿಕಾರ ಇದ್ದಾಗ ಏನೂ ಮಾಡಿಲ್ಲ, ಇವಾಗ  ಓಲೈಕೆ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಜೊತೆಗೆ ನಾವು ಇದ್ದೇವೆ. ಈ ಸಮಾಜವನ್ನು ಹಿಂದೆ ಒಡೆಯುವ ಪ್ರಯತ್ನ ಕಾಂಗ್ರೆಸ್ ಮಾಡಿತ್ತು. ವೀರಶೈವ ಲಿಂಗಾಯತ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದೆ. ನಮ್ಮನ್ನು ಬೆಳೆಸಿದ್ದು ವೀರಶೈವ ಲಿಂಗಾಯತ ಸಮಾಜ ಎಂದರು.

  • Karnataka Election 2023 Live Updates: ಬೆಂಗಳೂರಿನಲ್ಲಿ ಮಹಿಳೆಯರಿಗೆ ಪ್ರತೀ ಕ್ಷೇತ್ರದಲ್ಲಿ ಪಿಂಕ್ ಬೂತ್ 

    COMMERCIAL BREAK
    SCROLL TO CONTINUE READING

    ಬೆಂಗಳೂರು ನಗರದಲ್ಲಿ ಎಲ್ಲಾ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮ ಸಂವಿಧಾನ ನೀಡಿರುವಂತಹ ಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಲ್ಲೂ ಮತದಾನ ಮಾಡಲು ಪ್ರೇರೇಪಿಸೋಣ ಎಂದು ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.  ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚುವಂತೆ ಮಾಡುವ ಉದ್ದೇಶದಿಂದ ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಪುರಭವನ(ಟೌನ್‌ಹಾಲ್)ದಲ್ಲಿ ಹಮ್ಮಿಕೊಂಡಿದ್ದ ಪಿಂಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದಲ್ಲಿ ಎಲ್ಲಾ ಮಹಿಳೆಯರು ಮತಗಟ್ಟೆಗಳಿಗೆ ಬಂದು ತಪ್ಪದೆ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಹೇಳಿದರು. 

  • Karnataka Election 2023 Live Updates: ವಿನಯ್‌ ಕುಲಕರ್ಣಿ ಪರ ಸಂತೋಷ್‌ ಲಾಡ್‌ ಪ್ರಚಾರ

    COMMERCIAL BREAK
    SCROLL TO CONTINUE READING

    ವಿನಯ್‌ ಕುಲಕರ್ಣಿ ಪರ ಮಾಜಿ ಸಚಿವ ಸಂತೋಷ್‌ ಲಾಡ್‌ ಪ್ರಚಾರ. ವಿನಯ್ ವಿದ್ಯಾರ್ಥಿ ನಾಯಕ, ಅನ್ಯಾಯ ಜನರಿಗೆ ಅರ್ಥವಾಗಿದೆ. ವಿನಯ್‌ ಕುಲಕರ್ಣಿ ಗೆಲ್ಲಿಸಬೇಕೆಂದು ಸಂತೋಷ್‌ ಲಾಡ್‌ ಮನವಿ. ಅಮ್ಮಿನಬಾವಿಯಲ್ಲಿ ಮಾಜಿ ಸಚಿವ ಲಾಡ್‌ ರೋಡ್‌ ಶೋ.

  • Karnataka Election 2023 Live Updates: ಬಿಜೆಪಿ ಮತ್ತೊಂದು ವಿಕೆಟ್ ಪತನ

    COMMERCIAL BREAK
    SCROLL TO CONTINUE READING

    ಬಳ್ಳಾರಿಯ 18ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ KRPP ಸೇರ್ಪಡೆ. ಬಿಜೆಪಿಯ ಪಾಲಿಕೆ ಸದಸ್ಯರನ್ನು KRPPಗೆ ಸೆಳೆಯುವಲ್ಲಿ ಯಶಸ್ವಿ. ಬಿಜೆಪಿ ಮತ್ತೊಂದು ವಿಕೆಟ್ ಪತನ.. ಬಿಜೆಪಿ ಶಾಸಕರಿಗೆ ಶಾಕ್.

  • Karnataka Election 2023 Live Updates: ದರ್ಶನ್‌ ಪರ ಸಿದ್ದರಾಮಯ್ಯ ಪ್ರಚಾರ

    COMMERCIAL BREAK
    SCROLL TO CONTINUE READING

    ಗುಂಡ್ಲುಪೇಟೆಯಲ್ಲಿ ಟಗರು ಹವಾ. ಕೈ ಕಲಿಗಳು ಖುಷ್‌. ಧೃವನಾರಾಯಣ್‌ ಪುತ್ರ ದರ್ಶನ್‌ ಪರವಾಗಿ ಸಿದ್ದರಾಮಯ್ಯ ಪ್ರಚಾರ. ಗುಂಡ್ಲುಪೇಟೆಯಲ್ಲಿ ಮತಯಾಚನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.

  • Karnataka Election 2023 Live Updates: ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ

    COMMERCIAL BREAK
    SCROLL TO CONTINUE READING

    ಕೈ ಕಲಿಗಳ ಪರ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ. ಬಹಿರಂಗ ಸಮಾವೇಶಕ್ಕೆ ಸಂಜೆ 6ಕ್ಕೆ ತೆರೆ ಹಿನ್ನೆಲೆ ಇಂದು ಪ್ರಿಯಾಂಕಾ ಗಾಂಧಿ ರೋಡ್‌ ಶೋ. ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ. 
     

  • Karnataka Election 2023 Live Updates: ಮಂಡ್ಯದಲ್ಲಿ ಅಶ್ವತ್ಥ ನಾರಾಯಣ ಪ್ರಚಾರ

    COMMERCIAL BREAK
    SCROLL TO CONTINUE READING

    ಮಂಡ್ಯದಲ್ಲಿ ಬಿಜೆಪಿ ಪಕ್ಷದಿಂದ ವಿಶಿಷ್ಟ ಪ್ರಚಾರ. ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್ ಘೋಷಣೆ ಯೊಂದಿಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ. ಸಚಿವ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಭಜರಂಗಿ ಮುಖವಾಡ ಧರಸಿ ಮತಯಾಚನೆ. ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಪ್ರಚಾರ. ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದ ಅಶ್ವತ್ಥ ನಾರಾಯಣ. 

  • Karnataka Election 2023 Live Updates: ಈ ಬಾರಿ ಚುನಾವಣೆಯನ್ನು ನಾವ್ಯಾರು ಮಾಡುತ್ತಿಲ್ಲ 

    COMMERCIAL BREAK
    SCROLL TO CONTINUE READING

    ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡುವೆ ನಡೆದಿದೆ. ಈ ಬಾರಿ ಚುನಾವಣೆಯನ್ನು ನಾವ್ಯಾರು ಮಾಡುತ್ತಿಲ್ಲ.‌ ಜನರೇ ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಇದೆ. ವಿಶೇಷವಾಗಿ ತಾಯಂದಿರ ಉತ್ಸಾಹ, ಬೆಂಬಲ ನೋಡಿದರೆ ಯಾವುದೋ ಜನ್ಮದ ಪುಣ್ಯ ಅಂದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

  • Karnataka Election 2023 Live Updates: ಯತ್ನಾಳ ನೇತೃತ್ವದಲ್ಲಿ ಬೃಹತ್ ರ್‍ಯಾಲಿ 
     
    ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬೃಹತ್ ರ್‍ಯಾಲಿಗೆ ಚಾಲನೆ. ರ್‍ಯಾಲಿಗೆ ಚಾಲನೆ ನೀಡಿದ ಶಾಸಕ ಯತ್ನಾಳ. ವಿಜಯಪುರ ನಗರದ ಗೋದಾವರಿ ರಸ್ತೆಯಿಂದ ಸಿದ್ಧೇಶ್ವರ ದೇವಸ್ಥಾನದ ವರೆಗೂ ರ್‍ಯಾಲಿ. ರ್‍ಯಾಲಿಯಲ್ಲಿ ಜೈ ಶ್ರೀರಾಮ ಘೋಷಣೆ. ಸಾವಿರಾರು ಕಾರ್ಯಕರ್ತರು, ಸ್ಥಳೀಯರು ಭಾಗಿ.

  • Karnataka Election 2023 Live Updates: ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ 

    COMMERCIAL BREAK
    SCROLL TO CONTINUE READING

    ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಿನ್ನೆ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದಿದ್ದು, ಬಳಿಕ BMTC ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅನೇಕರು ರಾಹುಲ್‌ ಜೊತೆ ಸೆಲ್ಫಿ ತೆಗೆದುಕೊಂಡರು. 


     

  • Karnataka Election 2023 Live Updates: ನಮ್ಮನ್ನು ಪ್ರಶ್ನಿಸಲು ನೈತಿಕತೆ ಇಲ್ಲ
     
    ಬಿಜೆಪಿ ವಿರುದ್ಧ ಯಾವುದೇ ಪ್ರಕರಣ ಇಲ್ಲ, ಸಾಕ್ಷಿಯೂ ಇಲ್ಲ. ಭ್ರಷ್ಟಾಚಾರ ಆರೋಪದ ದಾಖಲೆ‌ ಕೊಡಿ ಎಂದು ಚುನಾವಣಾ ಆಯೋಗವನ್ನು ಕೇಳಿದ್ದು ಅವರಿಗೆ ಕೊಡಲು ಆಗಿಲ್ಲ ಎಂದರು.  ಇಷ್ಟೆಲ್ಲಾ ಮಾತನಾಡುವ ಎಲ್ಲಾ ಕಾಂಗ್ರೆಸ್‌ನವರ ಮೇಲೆ ಭ್ರಷ್ಟಾಚಾರ ಪ್ರಕರಣಗಳಿದ್ದು,  ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ? ಎಂದು ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. 

  • Karnataka Election 2023 Live Updates: ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡ ಪರ ಕುಮಾರಸ್ವಾಮಿ ಮತಯಾಚನೆ

    COMMERCIAL BREAK
    SCROLL TO CONTINUE READING

    ಚಿಕ್ಕಬಳ್ಳಾಪುರದಲ್ಲಿ ಹಾರಾಡಿದ ಹಸಿರು ಶಾಲು, ಟವೆಲ್. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೋಡ್ ಶೋ. ಜೆಡಿಎಸ್‌ ಅಭ್ಯರ್ಥಿ ಬಚ್ಚೇಗೌಡ ಪರ ಕುಮಾರಸ್ವಾಮಿ ಮತಯಾಚನೆ. 

  • Karnataka Election 2023 Live Updates: ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹೈಡ್ರಾಮ 

    COMMERCIAL BREAK
    SCROLL TO CONTINUE READING

    ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ದಿನೇ ದಿನೇ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಮೋದಿ ಕರೆಸಿ ಶಕ್ತಿ ಪ್ರದರ್ಶನ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಮಾಜಿ ಸಿಎಂ ಹೆಚ್ ಡಿಕೆ ಸಮುಖದಲ್ಲಿ ಶಕ್ತಿ ಪ್ರದರ್ಶಿಸಿದೆ. ಎದುರಾಳಿಗೆ ಚುನಾವಣಾ ಅಖಾಡದಲ್ಲಿ ನಾನಾ.. ನೀನಾ.. ಅಂತಾ ಟಕ್ಕರ್ ಕೊಟ್ಟಿದೆ. ರೋಡ್ ಶೋ ವೇಳೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕೆರಳಿ ದಾಟಕ್ಕೆ ಇಳಿದು ಹೈಡ್ರಾಮ ನಡೆಸಿದರು.  

  • Karnataka Election 2023 Live Updates: ರಾಜ್ಯದಲ್ಲಿ 3 ದಿನ ಸಿಗೋದಿಲ್ಲ ಎಣ್ಣೆ 

    COMMERCIAL BREAK
    SCROLL TO CONTINUE READING

    ರಾಜ್ಯದಲ್ಲಿ ಇಂದು ಸಂಜೆ 5 ಗಂಟೆಯಿಂದ 3 ದಿನ ಸಿಗೋದಿಲ್ಲ ಎಣ್ಣೆ. ಇಂದು ಸಂಜೆ 5 ಗಂಟೆಯಿಂದ ಮೇ10 ರ ಮಧ್ಯರಾತ್ರಿಯವರೆಗೂ ಬಾರ್‌ಗಳು ಬಂದ್. ಮತ ಏಣಿಕೆ ದಿನ ಬೆಳ್ಳಗೆ 6 ರಿಂದ ಮಧ್ಯರಾತ್ರಿ 12 ರವರೆಗೂ ಎಣ್ಣೆ ಅಂಗಡಿ ತೆರೆಯುವಂತಿಲ್ಲ. 

  • Karnataka Election 2023 Live Updates: ಶಶಿಕಲಾ ಜೊಲ್ಲೆಯಿಂದ ಕೊನೆಯ ಹಂತದ ಶಕ್ತಿ ಪ್ರದರ್ಶನ

    COMMERCIAL BREAK
    SCROLL TO CONTINUE READING

    ಶಶಿಕಲಾ ಜೊಲ್ಲೆಯಿಂದ ಕೊನೆಯ ಹಂತದ ಶಕ್ತಿ ಪ್ರದರ್ಶನ. ನಿಪ್ಪಾಣಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಶಕ್ತಿ ಪ್ರದರ್ಶನ. ಮಹಾರಾಷ್ಟ್ರದ DCM ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಸಭೆ. ಬಿಜೆಪಿ ಸಭೆಯಲ್ಲಿ ಮಹಾರಾಷ್ಟ್ರ ಕೊಲ್ಲಾಪುರ, ಸಾಂಗಲಿ ಜಿಲ್ಲೆಯ. ಶಾಸಕರು, ಸಂಸದರು ಸಚಿವರುಗಳು ಸೇರಿದಂತೆ ಇತರರು ಭಾಗಿ. ಜಿಲ್ಲೆಯ ಸಂಸದರಾದ ಅಣ್ಣಾಸಾಬ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಭಾಗಿ. ನಾಳೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ ಹಿನ್ನಲೆ ಇಂದೆ ಕೊನೆಯ ಶಕ್ತಿ ಪ್ರದರ್ಶನ ನಡೆಸಿದ ಶಶಿಕಲಾ ಜೊಲ್ಲೆ

  • Karnataka Election 2023 Live Updates: ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ

    COMMERCIAL BREAK
    SCROLL TO CONTINUE READING

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್. ಮೇ 10 ರಂದು ವಿಧಾನಸಭಾ ಚುನಾವಣೆ ಹಿನ್ನೆಲೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ. ಸಂಜೆ 6 ಗಂಟೆ ಬಳಿಕ ಮನೆಮನೆಗೆ ತೆರಳಿ ಮತಯಾಚನೆಗೆ ಮಾತ್ರ ಅವಕಾಶ. ಇಂದು ಸಂಜೆ ಬಳಿಕ ಡೋರ್ ಟು ಡೋರ್ ಕ್ಯಾಂಪೇನ್‌ಗೆ ಮಾತ್ರ ಅವಕಾಶ. ಇಂದು ಸಂಜೆ 6 ಗಂಟೆ ಬಳಿಕ ಸಭೆ, ಸಮಾರಂಭ, ರ್‍ಯಾಲಿ ಉತ್ಸವಗಳಿಗೆ ಬ್ರೇಕ್. ಅಭ್ಯರ್ಥಿ ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಇಂದು ಸಂಜೆಯ ಬಳಿಕ ಧ್ವನಿವರ್ಧಕಗಳ ಬಳಕೆಗೆ ಬ್ರೇಕ್. ಅಭ್ಯರ್ಥಿ ಸೇರಿದಂತೆ 6 ಜನಕ್ಕೆ ಮಾತ್ರ ಇಂದಿನಿಂದ ಡೋರ್ ಟು ಡೋರ್ ಕ್ಯಾಪೇನ್‌ಗೆ ಅವಕಾಶ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link