ಹುಬ್ಬಳ್ಳಿ : ಎಂಇಎಸ್ ಕಿಡಿಗೇಡಿಗಳ ಸಂಘಟನೆ. ನಾವು ಅವರನ್ನು ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣೆ ವೇಳೆ ಎಮ್‌ಇಎಸ್‌ನವರು ಜನರ ಮನಸ್ಸ‌ನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ. ಬೆಳಗಾವಿ ಜನರಿಗೆ ಇದೆಲ್ಲಾ ಗೊತ್ತಿದೆ. ಇದಕ್ಕೆ  ಜನರೇ ಉತ್ತರ ಕೊಡುತ್ತಾರೆ ಎಂದರು.  ಜನ ತೀರ್ಮಾನ ತೆಗೆದುಕೊಂಡು ಎಮ್‌ಇಎಸ್‌ಅನ್ನು ಐದು ವರ್ಷ ಮನೆಗೆ ಕಳುಹಿಸುತ್ತಾರೆ ಎಂದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜಧಾನಿಯಲ್ಲಿ ಮೋದಿ ರೋಡ್ ಶೋ - 65ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಭಾರಿ ಪೆಟ್ಟು


ನಮ್ಮ ಪ್ರಧಾನಿ ಕಾಂಗ್ರೆಸ್‌ನ ಪ್ರಧಾನಿಗಳಂತೆ ಇರಬೇಕಿಲ್ಲ. ನಮ್ಮ ಪ್ರಧಾನಿ ಕಾಂಗ್ರೆಸ್‌ನ ಪ್ರಧಾ‌ನಮಂತ್ರಿಗಳ ರೀತಿ  ಇರಬೇಕೆಂದಿಲ್ಲ. ಅವರಿಗೆ, ಜನರ ಬಳಿ ಹೋಗಬಾರದು,  ಜನರ ಭಾವನೆ ತಿಳಿಯಬಾರದು ಹಾಗೂ ದಿಲ್ಲಿಯಲ್ಲಿರಬೇಕು. ಹಳ್ಳಿಗೆ ಹೋದರೆ  ಅವರು ಪ್ರಧಾನಿ ಅಲ್ಲಾ ಅನ್ನೋದು ಹಳೆಯ ಕಾಂಗ್ರೆಸ್‌ನ‌ ವಿಚಾರಧಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅದೇ ವಿಚಾರಧಾರೆಗೆ ಹೊಂದಿಕೊಂಡಿದ್ದಾರೆ ಎಂದರಲ್ಲದೇ  ಅದರಿಂದ ಹೊರಗೆ ಬರಲು ಅವರಿಗೂ ಸಾಧ್ಯವಿಲ್ಲ ಎಂದರು.


ವಿಭಿನ್ನ ಪ್ರಧಾನಿಯಿದ್ದರೆ ಕಾಂಗ್ರೆಸ್ ಗೆ ಕಷ್ಟ. ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತೆ. ರಾಜ್ಯದ ಜನರು ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು   ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ  ಅತೀ ಹೆಚ್ಚು ಆತ್ಮಹತ್ಯೆಗಳಾಗಿದ್ದವು. ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಆವಾಗ ರಾಜ್ಯಕ್ಕೆ ಬಂದಿದ್ದರೆ? ಎಂದು ಪ್ರಶ್ನಿಸಿದರು. 


ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ! ನಾಳೆ ಈ ಎಲ್ಲಾ ರಸ್ತೆಗಳು ಬಂದ್ !


ಬಿಜೆಪಿ ಹೆದರಿದೆ ಎನ್ನುವುದು ಹಾಸ್ಯಾಸ್ಪದ. ಎಲ್ಲಿಯವರೆಗೆ ಕಾಂಗ್ರೆಸ್‌ನವರು ಪಿಎಫ್‌ಐ,  ಎಸ್‌ಡಿಪಿಐ ನ್ನು  ಸಂತೋಷಪಡಿಸುವ ಪ್ರಯತ್ನದಲ್ಲಿ ಇರುತ್ತಾರೊ, ಅಲ್ಲಿಯವರೆಗೆ ಭಜರಂಗದಳದ ವಿಚಾರ ಜನರ ಮಧ್ಯೆ ಇರುತ್ತದೆ. ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಹೆದರಿದೆ ಎನ್ನುವುದು ಹಾಸ್ಯಾಸ್ಪದ ಎಂದರು. ಬಿ.ಎಲ್.ಸಂತೋಷ ಲಿಂಗಾಯತ ಮತಗಳು ಅಗತ್ಯವಿಲ್ಲ ಎಂಬ  ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಈ ವಿಚಾರ  ಈಗ ಬೇಡ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.