Karnataka Assembly Elections 2023: ವರುಣಾ ವಿಧಾನಸಭಾ ಕ್ಷೇತ್ರ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸತತವಾಗಿ ಸುತ್ತಾಡುತ್ತಿರುವ ಸಚಿವ ವಿ.ಸೋಮಣ್ಣ ಲೋ ಬಿಪಿಯಿಂದ ಬಳಲಿದ ಘಟನೆ ಇಂದು ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಪ್ರಚಾರದ ವೇಳೆ ನಡೆದಿದೆ.


COMMERCIAL BREAK
SCROLL TO CONTINUE READING

ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ಸಚಿವ ವಿ. ಸೋಮಣ್ಣ ಅವರನ್ನು ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಹೈ ಕಮಾಂಡ್ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಶತಾಯಗತಾಯ ಉಳಿಸಿಕೊಳ್ಳಲೇ ಬೇಕು ಎಂದು ಹೋರಾಡುತ್ತಿರುವ ಸಚಿವ ವಿ. ಸೋಮಣ್ಣ, ಬಿರು ಬಿಸಿಲನಲ್ಲಿ ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಲೆ ಸುತ್ತಿ ಕಾರಿನಲ್ಲೇ 20 ನಿಮಿಷ ಕುಳಿತು ಸುಧಾರಿಸಿಕೊಂಡಿದ್ದಾರೆ‌. ಬಳಿಕ, ವೈದ್ಯರು ಚಿಕಿತ್ಸೆ ಕೊಟ್ಟ ಬಳಿಕ  ಮತ್ತೇ ಸೋಮಣ್ಣ ಪ್ರಚಾರ ಆರಂಭಿಸಿದ್ದಾರೆ.


ಇದನ್ನೂ ಓದಿ- "ಲಿಂಗಾಯತರ ವಿಷಯದಲ್ಲಿ ಬಿಜೆಪಿ ಅವರು ಗಾಬರಿಗೊಂಡಿದ್ದಾರೆ"


ನಾನು ಆರಾಮವಾಗಿದ್ದೇನೆ, ಸ್ವಲ್ಪ ಲೊ‌ ಬಿಪಿ ಇತ್ತು ಅಷ್ಟೇ, ಹೈ ಬಿಪಿಯಲ್ಲ, ನನ್ನಿಂದ ಬೇರೆಯವರಿಗೆ ಹೈಬಿಪಿ, ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ರಕ್ತದೊತ್ತಡ 70 ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. 
ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ಸೋಮಣ್ಣ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ- ನಮ್ಮ ಸರ್ಕಾರದ ಯೋಜನೆಗಳನ್ನೇ ಕಾಂಗ್ರೆಸ್ ಕಾಪಿ ಮಾಡಿದೆ – ಸಿಎಂ ಬೊಮ್ಮಾಯಿ


ಆಡಿಯೋ ವೈರಲ್ ಕೇಸ್: 
ಈ ಸಂದರ್ಭದಲ್ಲಿ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ವಿ. ಸೋಮಣ್ಣ,  ಇದೆಲ್ಲಾ ವ್ಯವಸ್ಥಿತ ಪಿತೂರಿ, ಚುನಾವಣೆ ಆಯೋಗ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಚುನಾವಣೆ ಬಂದಾಗ ಇಂತಹದ್ದೆಲ್ಲಾ ಮಾಡುತ್ತಾರೆ, ಇದಕ್ಕೂ ನಂಗೂ ಸಂಬಂಧವಿಲ್ಲ, ತನಿಖೆ ಎದುರಿಸಲು ಸಿದ್ದವಾಗಿದ್ದೇನೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗ್ತಾನೆ ಇರುತ್ತೆ, ಪ್ರಭಾವಿಗಳ ಮೇಲೆ ಇಂತಹದ್ದೆಲ್ಲಾ ಇದ್ದಿದ್ದೆ ಎಂದು ಆಡಿಯೋ ಪ್ರಕರಣ ಬಗ್ಗೆ  ಸ್ಪಷ್ಟನೆ ಕೊಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.